ನಾವು ಹೂಡಿಕೆಯ ವಿಚಾರಕ್ಕೆ ಬಂದಾಗ ನಮ್ಮ ಮುಂದೆ ಬರುವ ಆಯ್ಕೆ ಹಲವಾರು ಇದೆ. ನಾವು ಸ್ಟಾಕ್ ಮಾರುಕಟ್ಟೆ, ಮ್ಯೂಚುವಲ್ ಫಂಡ್, ಬ್ಯಾಂಕುಗಳ ಯೋಜನೆಗಳನ್ನು ಹೊಂದಿದ್ದೇವೆ. ಆದರೆ ನಾವು ಮಾಡಿದ ಹೂಡಿಕೆ ಸುರಕ್ಷಿತವಾಗಿರಬೇಕು, ಉತ್ತಮ ರಿಟರ್ನ್ ಕೂಡಾ ಲಭ್ಯವಾಗಬೇಕಾದರೆ ಎಲ್‌ಐಸಿ, ಅಂಚೆ ಕಚೇರಿ ಹೂಡಿಕೆ ನಮ್ಮ ಉತ್ತಮ ಆಯ್ಕೆಯಾಗಿದೆ.
ಎಲ್‌ಐಸಿ ತನ್ನ ಲಕ್ಷಗಟ್ಟಲೆ ಗ್ರಾಹಕರಿಗಾಗಿ ಕಾಲಕಾಲಕ್ಕೆ ಅನೇಕ ಯೋಜನೆಗಳು ಮತ್ತು ಪಾಲಿಸಿಗಳನ್ನು ತರುತ್ತಲೇ ಇರುತ್ತದೆ. ಈ ನಡುವೆ ಎಲ್‌ಐಸಿ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಜೀವನ್ ತರುಣ್ ಪಾಲಿಸಿಯನ್ನು ಜಾರಿಗೆ ತಂದಿದೆ. ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಸುಭದ್ರಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆ ವಿಶೇಷತೆ, ಪ್ರಯೋಜನ ವಿವರ ಇಲ್ಲಿದೆ.. ಮುಂದೆ ಓದಿ...

ಜೀವನ್ ತರುಣ್ ಪಾಲಿಸಿ ಎಂದರೇನು?
ಜೀವನ್ ತರುಣ್ ಪಾಲಿಸಿಯು ನಾನ್‌ಲಿಂಕ್ಡ್, ಪಾರ್ಟಿಸಿಪೇಟಿಂಗ್, ವೈಯಕ್ತಿಕ, ಜೀವ ವಿಮೆ ಉಳಿತಾಯ ಯೋಜನೆಯಾಗಿದೆ. ಎಲ್ಐಸಿಯ ಈ ಯೋಜನೆಯು 0 ಯಿಂದ 12 ವರ್ಷವರೆಗಿನ ಮಕ್ಕಳಿಗಾಗಿ ಇದೆ. ಮಕ್ಕಳ ಶಿಕ್ಷಣ, ವಿವಾಹ ಎಲ್ಲಾ ವೆಚ್ಚಗಳಿಗಾಗಿ ಪೋಷಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಪಾಲಿಸಿಯ ಅರ್ಹತೆ
ಈ ಪಾಲಿಸಿಯನ್ನು ಖರೀದಿ ಮಾಡಲು ಮಗುವಿನ ವಯಸ್ಸು ಕನಿಷ್ಠ 90 ದಿನಗಳು ಮತ್ತು ಗರಿಷ್ಠ 12 ವರ್ಷಗಳು ಆಗಿರಬೇಕು. ಈ ಪಾಲಿಸಿಯಲ್ಲಿ ನಿಮ್ಮ ಮಕ್ಕಳಿಗೆ 20 ವರ್ಷ ತುಂಬುವವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಮಗುವಿಗೆ 25 ವರ್ಷ ತುಂಬಿದ ನಂತರ ನೀವು ಪಾಲಿಸಿಯ ಲಾಭವನ್ನು ಪಡೆಯಬಹುದು.
ಜೀವನ್ ತರುಣ್ ಪಾಲಿಸಿಯನ್ನು ಕನಿಷ್ಠ 75,000 ರೂಪಾಯಿವರೆಗಿನ ವಿಮಾ ಮೊತ್ತದಲ್ಲಿ ಖರೀದಿ ಮಾಡಬಹುದು. ಇದರ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಈ ಪಾಲಿಸಿಯನ್ನು ಮಗುವಿನ ಹೆಸರಿನಲ್ಲಿ ಮಾತ್ರ ತೆಗೆದುಕೊಳ್ಳಬಹುದು. ಇದರಲ್ಲಿ ಲಭ್ಯವಾಗುವ ಮೊತ್ತವನ್ನು ಮಗುವಿಗೆ ಮಾತ್ರ ನೀಡಲಾಗುತ್ತದೆ.
25 ವರ್ಷಗಳಲ್ಲಿ ಲಕ್ಷ ರೂಪಾಯಿ ಲಭ್ಯ
ನಿಮ್ಮ ಮಗುವಿಗೆ 20 ವರ್ಷ ತುಂಬುವವರೆಗೆ ನೀವು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದರಲ್ಲಿ ನೀವು ಮೂರು ತಿಂಗಳು, ಆರು ತಿಂಗಳು ಮತ್ತು ವಾರ್ಷಿಕವಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪ್ರೀಮಿಯಂ ಪಾವತಿಸಬಹುದು. ನೀವು ಜೀವನ್ ತರುಣ್ ಪಾಲಿಸಿಯಲ್ಲಿ ಪ್ರತಿದಿನ 150 ರೂಪಾಯಿ ಹೂಡಿಕೆ ಮಾಡಿದರೆ ವಾರ್ಷಿಕ ಪ್ರೀಮಿಯಂ 54000 ರೂಪಾಯಿ ಆಗಿರುತ್ತದೆ.
ಅಂದರೆ 8 ವರ್ಷಗಳಲ್ಲಿ ನಿಮ್ಮ ಹೂಡಿಕೆ 4,32000 ರೂಪಾಯಿ ಆಗುತ್ತದೆ. ಇದರೊಂದಿಗೆ ಹೂಡಿಕೆಯ ಮೇಲೆ 2,47,000 ರೂಪಾಯಿ ಬೋನಸ್ ಕೂಡ ಸಿಗಲಿದೆ. ಈ ಪಾಲಿಸಿಯ ವಿಮಾ ಮೊತ್ತ 5 ಲಕ್ಷ ರೂಪಾಯಿ ಆಗಿದೆ. ಅದರ ನಂತರ ನೀವು ಲಾಯಲ್ಟಿ ಬೋನಸ್ ಆಗಿ 97,000 ರೂಪಾಯಿ ಪಡೆಯುತ್ತೀರಿ. ಈ ರೀತಿಯಾಗಿ ನೀವು ಈ ಪಾಲಿಸಿಯ ಅಡಿಯಲ್ಲಿ 8,44,550 ರೂಪಾಯಿ ಪಡೆಯಬಹುದು.


Click it and Unblock the Notifications