ಭಾರತೀಯ ಅಂಚೆ ಇಲಾಖೆಯು ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿವೆ. ಅಂಚೆ ಕಚೇರಿಗಳ ಮೂಲಕ ಸಣ್ಣ ಉಳಿತಾಯ ಖಾತೆಯನ್ನು ಪ್ರಾರಂಭಿಸಬಹುದು. ಈ ಉಳಿತಾಯ ಯೋಜನೆಗಳಡಿ ಗ್ರಾಹಕರು ತಮ್ಮ ಠೇವಣಿಗಳಿಗೆ ಉತ್ತಮ ರಿಟರ್ನ್ಸ್ ಪಡೆಯುವ ಜತೆಗೆ ತೆರಿಗೆಯನ್ನು ಕೂಡ ಉಳಿಸಬಹುದಾಗಿದೆ. ತೆರಿಗೆದಾರರು ಇದರಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದರೆ ವಿನಾಯತಿಯಡಿ ತೆರಿಗೆಯನ್ನು ಕೂಡ ಉಳಿಸಬಹುದು.
ಈ ಅಂಚೆ ಕಚೇರಿ ಉಳಿತಾಯ ಕ್ರಮವು ನಿಮಗೆ ಹೆಚ್ಚಿನ ತೆರಿಗೆಯನ್ನು ಉಳಿಸಲು ನೆರವಾಗುವ ಜತೆಗೆ ಶೇಕಡ 7ರಷ್ಟು ರಿಟರ್ನ್ ನೀಡುತ್ತದೆ. ಅಲ್ಲದೆ ಉಳಿತಾಯ ಯೋಜನೆ ಕೂಡ 5 ವರ್ಷದಲ್ಲಿ ಮೆಚ್ಯೂರಿಟಿಯಾಗುತ್ತದೆ. ಈ ಯೋಜನೆಯು ವಿವಿಧ ಅವಧಿಯ ಆಯ್ಕೆಗಳೊಂದಿಗಿನ ಅಂಚೆ ಕಚೇರಿ ಅವಧಿ ಠೇವಣಿಯಾಗಿದೆ.

ಅವಧಿ ಠೇವಣಿಗಳಿಗೆ ಬಡ್ಡಿ ದರ
ಅವಧಿಗೆ ಅನುಗುಣವಾಗಿ ಅವಧಿ ಠೇವಣಿಯು ಶೇಕಡ 6.6ರಿಂದ ಶೇಕಡ 7ರವರೆಗೆ ಬಡ್ಡಿ ದರವನ್ನು ನೀಡುತ್ತದೆ. ಒಂದು ವರ್ಷದ ಅವಧಿ ಠೇವಣಿಗೆ ಅಂಚೆ ಕಚೇರಿಯು ಶೇಕಡ 6.6ರಷ್ಟು ಬಡ್ಡಿ ನೀಡುತ್ತದೆ. ಎರಡು ಹಾಗೂ ಮೂರು ವರ್ಷಗಳ ಅವಧಿ ಠೇವಣಿಗೆ ಶೇಕಡ 6.8 ಮತ್ತು ಶೇಕಡ 6.9ರಷ್ಟು ಬಡ್ಡಿ ಒದಗಿಸುತ್ತದೆ. ಐದು ವರ್ಷಗಳ ಅವಧಿ ಠೇವಣಿಗೂ ಶೇಕಡ 7ರಷ್ಟು ಬಡ್ಡಿಯನ್ನು ಗಳಿಸಬಹುದು.
ಯಾವ ಸಮಯದಲ್ಲಿ ತೆರಿಗೆ ಉಳಿಸಬಹುದು?
ಅವಧಿ ಠೇವಣಿಗಳ ವಿಷಯಕ್ಕೆ ಬಂದಾಗ, ಅವು 1, 2, 3 ಹಾಗೂ 5 ವರ್ಷಗಳಿಗೆ ಲಭ್ಯವಿದೆ. ಈ ಅಂಚೆ ಕಚೇರಿ ಅವಧಿ ಠೇವಣಿಗಳಿಗೆ ಹಲವು ರೀತಿಯ ಬಡ್ಡಿ ದರವನ್ನು ಒದಗಿಸಲಾಗುತ್ತಿದೆ. ಐದು ವರ್ಷಗಳ ಅವಧಿ ಠೇವಣಿಗಳ ಮೇಲೆ ತೆರಿಗೆ ಉಳಿತಾಯದ ಅನುಕೂಲ ಲಭ್ಯವಿದೆ. 1961ರ ಆದಾಯ ತೆರಿಗೆ ಕಾಯ್ದೆ 80C ಸೆಕ್ಷನ್‌ನಡಿ ಈ ತೆರಿಗೆ ವಿನಾಯಿತಿ ದೊರೆಯುತ್ತದೆ.
ಎಷ್ಟು ತೆರಿಗೆ ಉಳಿಸಬಹುದು?
1961ರ ಆದಾಯ ತೆರಿಗೆ ಸೆಕ್ಷನ್ 80C 1.5 ಲಕ್ಷ ರೂಪಾಯಿವರೆಗೆ ತೆರಿಗೆ ಉಳಿತಾಯಕ್ಕೆ ಅವಕಾಶ ನೀಡುತ್ತದೆ. ಇದು ಸರ್ಕಾರದ ಹಲವಾರು ಕಾರ್ಯಕ್ರಮಗಳಿಂದ ಒದಗಿಸುವ ಅತ್ಯುತ್ತಮ ತೆರಿಗೆ ಉಳಿಸುವ ಪರ್ಯಾಯವಾಗಿದೆ. ಐದು ವರ್ಷಗಳ ಅವಧಿಗೆ ಮಾಡಿದ ಹೂಡಿಕೆಗಳು ಮಾತ್ರ ಈ ತೆರಿಗೆ ಉಳಿತಾಯಕ್ಕೆ ಅರ್ಹತೆಯನ್ನು ಪಡೆಯುತ್ತದೆ ಎಂಬುದು ಗಮನಾರ್ಹ.


Click it and Unblock the Notifications