ಅಂಚೆ ಕಚೇರಿ: ಉದ್ಯೋಗ ಮಾಡುವ ಜನರಲ್ಲಿ ತಾವು ಪಡೆಯುವ ಸಂಬಳದಲ್ಲಿ ಒಂದು ಭಾಗವನ್ನು ಉಳಿತಾಯ ಮಾಡುವುದು ಸಾಮಾನ್ಯ ಅಭ್ಯಾಸವಾಗಿದೆ. ಹಣ ಉಳಿತಾಯ ಮಾಡುವಲ್ಲಿ ಮೊದಲ ಹಂತವೇ ಉಳಿತಾಯ ಖಾತೆಯನ್ನು ತೆರೆಯುವುದು. ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ಆನ್‌ಲೈನ್ ಅಥವಾ ಆಫ್‌ಲೈನ್, ಅಂಚೆ ಕಚೇರಿಗಳು ಅಥವಾ ಯಾವುದೇ ಬ್ಯಾಂಕ್‌ನಲ್ಲಿ ತೆರೆಯಬಹುದು.
ಗ್ರಾಹಕರಿಗೆ ತಮ್ಮ ಉಳಿತಾಯ ಖಾತೆಯಲ್ಲಿನ ಬ್ಯಾಲೆನ್ಸ್ ಮೊತ್ತವನ್ನು ತಿಳಿದುಕೊಳ್ಳಲು ಅಂಚೆ ಇಲಾಖೆಯು ನಾನಾ ರೀತಿಯ ಆಯ್ಕೆಗಳನ್ನು ನೀಡಿದೆ. ಇದು ಆನ್‌ಲೈನ್ ಹಾಗೂ ಆಫ್‌ಲೈನ್ ವ್ಯವಸ್ಥೆಯನ್ನು ಹೊಂದಿದೆ. ಎಸ್‌ಎಂಎಸ್ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್‌ಕಾಲ್ ಮಾಡುವ ಮೂಲಕ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಬಹಳ ಸುಲಭವಾಗಿ ತಿಳಿದುಕೊಳ್ಳಬಹುದು.

ಗ್ರಾಹಕರು "balance" ಎಂದು ಟೈಪ್ ಮಾಡಿ 7738062873 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಬೇಕು. ಕೆಲವೇ ನಿಮಿಷಗಳಲ್ಲಿ ತಮ್ಮ ಬ್ಯಾಲೆನ್ಸ್ ವಿವರಗಳನ್ನು ಒಳಗೊಂಡಿರುವ ಸಂದೇಶ ಗ್ರಾಹಕರ ಮೊಬೈಲ್‌ಗೆ ಬರುತ್ತದೆ. ಅದೇರೀತಿ, 8424054994 ಸಂಖ್ಯೆಗೆ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್‌ಕಾಲ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಎಸ್‌ಎಂಎಸ್ ರೂಪದಲ್ಲಿ ಉಳಿತಾಯ ಖಾತೆ ಬ್ಯಾಲೆನ್ಸ್ ವಿವರಗಳನ್ನು ಅಂಚೆ ಕಚೇರಿ ರವಾನಿಸುತ್ತದೆ.
IPPB ಮೊಬೈಲ್ ಆಪ್ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ತಿಳಿದುಕೊಳ್ಳಲು ಮತ್ತೊಂದು ವ್ಯವಸ್ಥೆಯಾಗಿದೆ. ಇವುಗಳ ಜತೆಗೆ ಗ್ರಾಹಕರು ಇ-ಪಾಸ್‌ಬುಕ್ ಸೌಲಭ್ಯ ಅಥವಾ ಇಂಟ್ರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್(IVRS) ಮೂಲಕವೂ ತಮ್ಮ ಅಕೌಂಟ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. ಗ್ರಾಹಕರು IVRS ಮೂಲಕ ಬ್ಯಾಲೆನ್ಸ್ ತಿಳಿದುಕೊಳ್ಳಲು 155299 ಸಂಖ್ಯೆಗೆ ನೋಂದಾಯಿತ ಮೊಬೈಲ್‌ನಿಂದ ಕರೆ ಮಾಡಿ ಅಲ್ಲಿ ನೀಡುವ ಸೂಚನೆಯನ್ನು ಫಾಲೋ ಮಾಡಬೇಕು.
ನೆಟ್ ಬ್ಯಾಂಕಿಂಗ್ ಮತ್ತೊಂದು ಅನುಕೂಲಕರ ಪೋಸ್ಟ್ ಆಫೀಸ್ ಉಳಿತಾಯ ಖಾತೆ ಬ್ಯಾಲೆನ್ಸ್ ತಿಳಿದುಕೊಳ್ಳುವ ಮಾರ್ಗವಾಗಿದೆ. ಗ್ರಾಹಕರು ಅಂಚೆ ಕಚೇರಿಯ ಅಧಿಕೃತ ವೆಬ್‌ಸೈಟ್ ಮೂಲಕ ಖಾತೆಗೆ ಲಾಗಿನ್ ಆಗಿ ಬ್ಯಾಲೆನ್ಸ್ ಮಾಹಿತಿ ತಿಳಿದುಕೊಳ್ಳಬಹುದು.
ಕೊನೆಯದಾಗಿ ಗ್ರಾಹಕರು ಪೋಸ್ಟ್ ಆಫೀಸ್‌ನಲ್ಲಿ ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿ ಅಕೌಂಟ್ ಬ್ಯಾಲೆನ್ಸ್ ತಿಳಿಯಬಹುದು. ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರಲಿದ್ದು, ಅದನ್ನು ಎಂಟರ್ ಮಾಡುವ ಮೂಲಕ ಮೆಸೇಜ್ ರೂಪದಲ್ಲಿ ಖಾತೆಯಲ್ಲಿರುವ ಉಳಿತಾಯ ಹಣದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.


Click it and Unblock the Notifications