ಅಂಚೆ ಕಚೇರಿ: 50,000 ರೂಪಾಯಿ ಠೇವಣಿ ಮಾಡಿ, 3,300 ರೂ. ಪಿಂಚಣಿ ಪಡೆಯಿರಿ

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ಠೇವಣಿ ಬಡ್ಡಿದರಗಳು ತುಂಬಾನೆ ಇಳಿಕೆಯಾಗತೊಡಗಿದೆ. ಹೀಗಾಗಿ ಜನರು ಕಡಿಮೆ ಹಣದಲ್ಲಿ ಹೆಚ್ಚಿನ ಲಾಭ ಪಡೆಯಲು ಬಯಸಿದ್ದಲ್ಲಿ, ಅಂಚೆ ಕಚೇರಿ ಯೋಜನೆಗಳಲ್ಲಿನ ಹೂಡಿಕೆಗಳು ಭದ್ರತೆ ಮತ್ತು ಹೆಚ್ಚಿನ ಆದಾಯವನ್ನು ನೀಡುವಲ್ಲಿ ಯಶಸ್ವಿಯಾಗಿವೆ.

ಹೌದು ನೀವು ಕಡಿಮೆ ಹಣವನ್ನು ಠೇವಣಿ ಮಾಡುವ ಮೂಲಕ ಪಿಂಚಣಿ ಪಡೆಯಲು ಬಯಸಿದ್ದರೆ, ಇಲ್ಲಿದೆ ನಿಮಗೆ ಉತ್ತಮ ಸುದ್ದಿ. ಹೂಡಿಕೆದಾರರಿಗೆ ವಿವಿಧ ಆಯ್ಕೆಗಳನ್ನು ನೀಡಲು ಅಂಚೆ ಕಚೇರಿ ಉತ್ತಮ ಯೋಜನೆಗಳನ್ನು ಹೊಂದಿದೆ.

ನಾವು ಹೇಳುತ್ತಿರುವ ಈ ಯೋಜನೆಯಲ್ಲಿ ನೀವು ಒಂದೇ ಬಾರಿ ಹೂಡಿಕೆ ಮಾಡಬೇಕು, ಇದರಲ್ಲಿ ನೀವು ಸ್ಥಿರ ಆದಾಯವನ್ನು ಪಡೆಯುತ್ತಲೇ ಇರುತ್ತೀರಿ. ಅಂತಹ ಅನೇಕ ಹೂಡಿಕೆ ಯೋಜನೆಗಳಿವೆ, ಇದರಲ್ಲಿ ನೀವು ಹಣವನ್ನು ಒಮ್ಮೆ ಏಕಕಾಲದಲ್ಲಿ ಹೂಡಿಕೆ ಮಾಡಬೇಕಾಗಿದೆ.

ಪೋಸ್ಟ್‌ ಆಫೀಸ್ ಪಿಂಚಣಿ ಯೋಜನೆ

ಪೋಸ್ಟ್‌ ಆಫೀಸ್ ಪಿಂಚಣಿ ಯೋಜನೆ

ಅಂಚೆ ಕಚೇರಿಯಲ್ಲಿ ಮಾಸಿಕ, ವಾರ್ಷಿಕ ಆದಾಯ ಯೋಜನೆಗಳನ್ನು (MIS) ಹೊಂದಿದೆ. ಇಲ್ಲಿ ನೀವು ನಿಮ್ಮ ಸಾಮರ್ಥ್ಯಗೆ ಅನುಗುಣವಾಗಿ ಹೂಡಿಕೆ ಮಾಡಿದರೆ ನಿಯಮಿತ ಪಿಂಚಣಿ ಪಡೆಯುತ್ತೀರಿ. ಹೂಡಿಕೆದಾರರು ಈ ಯೋಜನೆಗಳ ಮೂಲಕ ಮೆಚ್ಯೂರಿಟಿ ಪ್ರಯೋಜನಗಳನ್ನು ಪಡೆಯುತ್ತಾರೆ.

ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ ಎಂದರೇನು?

ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ ಎಂದರೇನು?

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಖಾತೆಯಲ್ಲಿ (MIS), ಹೂಡಿಕೆದಾರರು ತಮ್ಮ ಹಣವನ್ನು 1000 ಅಥವಾ 100 ರ ಗುಣಕಗಳಲ್ಲಿ ಠೇವಣಿ ಮಾಡಬಹುದು. ಆದಾಗ್ಯೂ, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಕನಿಷ್ಠ ಹೂಡಿಕೆ ರೂ 4.5 ಲಕ್ಷ ರೂಪಾಯಿ ಆಗಿದ್ದು, ಈ ಯೋಜನೆಯ ಅಡಿಯಲ್ಲಿ ಕನಿಷ್ಠ ಹೂಡಿಕೆ 1000 ರೂ. ಆಗುತ್ತದೆ.

ಇನ್ನು ಈ ಯೋಜನೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಮೂವರು ಹೂಡಿಕೆದಾರರು ಜಂಟಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಡಿ ಜಂಟಿ ಖಾತೆಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತ 9 ಲಕ್ಷ ರೂ. ಆಗಿದೆ.

ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ ನೀಡುವ ಬಡ್ಡಿ ದರ

ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ ನೀಡುವ ಬಡ್ಡಿ ದರ

ಪ್ರಸ್ತುತ, ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ ಶೇ .6.6 ರ ಬಡ್ಡಿದರವನ್ನು ನೀಡುತ್ತಿದೆ. ಪೋಸ್ಟ್ ಆಫೀಸ್ ಯೋಜನೆಯಲ್ಲಿ ಸಂಯುಕ್ತ ಬಡ್ಡಿಯ ಬದಲು ಸರಳ ಬಡ್ಡಿಯನ್ನು ನೀಡುತ್ತಿದೆ ಎಂಬುದನ್ನು ಗಮನಿಸಿ.

3,300 ರೂ. ಪಿಂಚಣಿ ಪಡೆಯುವುದು ಹೇಗೆ?

3,300 ರೂ. ಪಿಂಚಣಿ ಪಡೆಯುವುದು ಹೇಗೆ?

ಎಂಐಎಸ್ ಕ್ಯಾಲ್ಕುಲೇಟರ್ ಪ್ರಕಾರ ಹೂಡಿಕೆದಾರರು ಕೇವಲ 50 ಸಾವಿರ ರೂಪಾಯಿ ಒಮ್ಮೆ ಹೂಡಿಕೆ ಮಾಡುವ ಮೂಲಕ ವಾರ್ಷಿಕ ಪಿಂಚಣಿಯಾಗಿ 3,300 ರೂಪಾಯಿ ಗಳಿಸಬಹುದು. ಹೂಡಿಕೆದಾರರು ಐದು ವರ್ಷಗಳಲ್ಲಿ ಒಟ್ಟು 16,500 ರೂ.ಗಳನ್ನು ಬಡ್ಡಿಯಾಗಿ ಪಡೆಯುತ್ತಾರೆ.

ಇದೇ ರೀತಿಯಲ್ಲಿ 1 ಲಕ್ಷ ರೂಪಾಯಿ ಠೇವಣಿ ಇಟ್ಟರೆ, ಆತನಿಗೆ ಪ್ರತಿ ತಿಂಗಳು 550 ರೂ. ಅಥವಾ ಪ್ರತಿ ವರ್ಷ 6,600 ರೂ. ಪಿಂಚಣಿ ಬರುತ್ತದೆ. ಹೀಗೆ ಐದು ವರ್ಷಗಳಲ್ಲಿ 33,000 ರೂ. ಠೇವಣಿ ಇಡಬಹುದು. ಇನ್ನು ಈ ಯೋಜನೆಯಲ್ಲಿ 4.5 ಲಕ್ಷ ರೂಪಾಯಿಗಳನ್ನು ಠೇವಣಿ ಇರಿಸಿದರೆ, ಹೂಡಿಕೆದಾರರು ಮಾಸಿಕ 2,475 ರೂಪಾಯಿ ಅಥವಾ ವಾರ್ಷಿಕವಾಗಿ 29,700 ರೂ. ಅಥವಾ 1,48,500 ರೂಪಾಯಿ ಅನ್ನು ಬಡ್ಡಿಯಾಗಿ ಪಡೆಯುತ್ತಾರೆ.

ವಾರ್ಷಿಕವಾಗಿ ಪಿಂಚಣಿ ಹಣ ಪಡೆಯುವುದಲ್ಲದೆ, ನೀವು ಪ್ರತಿ ತಿಂಗಳು ಕೂಡ ಹಣ ಗಳಿಸುವ ಅವಕಾಶವಿದೆ. ಅದನ್ನು ತಿಳಿಯಲು ಮುಂದೆ ಓದಿ

ಪ್ರತಿ ತಿಂಗಳು ಹಣಗಳಿಸಲು ಹೇಗೆ ಸಾಧ್ಯ?

ಪ್ರತಿ ತಿಂಗಳು ಹಣಗಳಿಸಲು ಹೇಗೆ ಸಾಧ್ಯ?

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣ, ಅದರ ಮೇಲೆ ಪಡೆದ ಬಡ್ಡಿ ಮೊತ್ತವನ್ನು 12 ಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ನಂತರ ನಿಮಗೆ ಪ್ರತಿ ತಿಂಗಳು ಹಣವನ್ನು ನೀಡಲಾಗುತ್ತದೆ. ಪ್ರಸ್ತುತ, ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ಶೇಕಡಾ 6.6 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ. ಹಾಗಿದ್ದರೆ ನೀವು ಎಷ್ಟು ಮಾಸಿಕ ಆದಾಯವನ್ನು ಪಡೆಯಬಹುದು ಎಂಬುದನ್ನು ಈ ಕೆಳಗೆ ತಿಳಿಯಿರಿ.

ಪ್ರತಿ ತಿಂಗಳು ಎಷ್ಟು ರೂಪಾಯಿಗಳನ್ನು ಪಡೆಯಬಹುದು?

ಪ್ರತಿ ತಿಂಗಳು ಎಷ್ಟು ರೂಪಾಯಿಗಳನ್ನು ಪಡೆಯಬಹುದು?

ನೀವು ಒಂದೇ ಸಮಯದಲ್ಲಿ 4.5 ಲಕ್ಷ ರೂ.ಗಳನ್ನು ಒಟ್ಟಿಗೆ ಹೂಡಿಕೆ ಮಾಡಿದರೆ, ಒಟ್ಟು ಬಡ್ಡಿ ಮೊತ್ತವು ಶೇಕಡಾ 6.6 ರಂತೆ, 29,700 ರೂ. ಪಡೆಯಬಹುದು. 29,700 ರೂಪಾಯಿಗಳನ್ನು ನೀವು ವರ್ಷವಿಡೀ 12 ಕಂತುಗಳಲ್ಲಿ ಪಡೆಯಬಹುದು.

ಆದರೆ, ನೀವು ಕೇವಲ 4.5 ಲಕ್ಷ ರೂ. ಮಾತ್ರ ಹೂಡಿಕೆ ಮಾಡಲೇಬೇಕು ಎಂಬ ಅನಿವಾರ್ಯವಲ್ಲ. ಈ ಯೋಜನೆಯನ್ನು ಕನಿಷ್ಠ 1,000 ರೂಗಳಿಂದ ಪ್ರಾರಂಭಿಸಬಹುದು. ಅದರಂತೆ, ನಿಮಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ.

ಯೋಜನೆಯ ಅವಧಿ

ಯೋಜನೆಯ ಅವಧಿ

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು 5 ವರ್ಷಗಳ ಮುಕ್ತಾಯ ಅವಧಿಯನ್ನು ಹೊಂದಿದೆ. ಆದರೆ ನೀವು ಬಯಸಿದರೆ ಅದನ್ನು ಇನ್ನಷ್ಟು ವಿಸ್ತರಿಸಬಹುದು. ಕನಿಷ್ಠ 1000 ರೂ ನಂತರ ನೀವು 100 ರೂ. ಗುಣಾಕಾರದಲ್ಲಿ ಹೂಡಿಕೆ ಮಾಡಬಹುದು. ಯೋಜನೆ ಅವಧಿ ಮುಕ್ತಾಯಗೊಂಡಾಗ ನೀವು ಹೂಡಿಕೆ ಮಾಡಿದ ಎಲ್ಲಾ ಹಣವನ್ನು ಮರಳಿ ಪಡೆಯುತ್ತೀರಿ. ನಿಮ್ಮ ಹಣವನ್ನು ಯೋಜನೆಯಲ್ಲಿ ಹೂಡಿಕೆ ಮಾಡುವವರೆಗೆ, ನೀವು ಬಡ್ಡಿ ಆದಾಯವನ್ನು ಮುಂದುವರಿಸುತ್ತೀರಿ.

ವಯಸ್ಸಿನ ಮಿತಿ ಎಷ್ಟು?

ವಯಸ್ಸಿನ ಮಿತಿ ಎಷ್ಟು?

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು ಆಗಿರಬೇಕು. ಆದರೆ ನೀವು ಯಾವುದೇ ಮಗುವಿಗೆ ಈ ಖಾತೆಯನ್ನು ತೆರೆಯಬಹುದು, ಇದರಲ್ಲಿ ಪೋಷಕರ ಹೆಸರಿನಲ್ಲಿ ಖಾತೆಯನ್ನು ತೆರೆಯಲಾಗುತ್ತದೆ. ಆದರೆ ಒಮ್ಮೆ ಮಗು ವಯಸ್ಕನಾಗಿದ್ದರೆ, ಆ ಖಾತೆಯನ್ನು ಅವನಿಗೆ ಹಸ್ತಾಂತರಿಸಲಾಗುತ್ತದೆ.

ಗಮನಿಸಬೇಕಾದ ಪ್ರಮುಖ ಅಂಶಗಳು

ಗಮನಿಸಬೇಕಾದ ಪ್ರಮುಖ ಅಂಶಗಳು

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯು ಹಲವಾರು ಪ್ರಯೋಜನಗಳನ್ನು ಹೊಂದಿದ್ದರೆ, ಎರಡು ಅನಾನುಕೂಲಗಳೂ ಇವೆ. ಈ ಯೋಜನೆಯಡಿ, ಖಾತೆಯನ್ನು ಮುಚ್ಚಲು ಅರ್ಜಿಯನ್ನು ಅಂಚೆ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಆದರೆ ನೀವು ಖಾತೆಯನ್ನು ತೆರೆದ 3 ರಿಂದ 5 ವರ್ಷಗಳ ನಡುವೆ ಖಾತೆಯನ್ನು ಮುಚ್ಚಿದರೆ, ನಂತರ 1% ಹಣವನ್ನು ಕಡಿತಗೊಳಿಸಲಾಗುತ್ತದೆ. ನೀವು 1 ರಿಂದ 3 ವರ್ಷಗಳಲ್ಲಿ ಖಾತೆಯನ್ನು ಮುಚ್ಚಿದರೆ, 2% ಹಣವನ್ನು ಕಡಿತಗೊಳಿಸಲಾಗುತ್ತದೆ. ಪೂರ್ಣ ವರ್ಷದ ಮೊದಲು ನೀವು ಖಾತೆಯನ್ನು ಮುಚ್ಚಲು ಸಾಧ್ಯವಿಲ್ಲ. ನೀವು ಪಡೆಯುವ ಬಡ್ಡಿಗೆ ತೆರಿಗೆ ರಿಯಾಯಿತಿ ಸಿಗುವುದಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+