ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ VS ಸಣ್ಣ ಹಣಕಾಸು ಬ್ಯಾಂಕ್ ಎಫ್‌ಡಿ ಯೋಜನೆ: ರಿಸರ್ವ್ ಬ್ಯಾಂಕ್ ನ ರೆಪೋ ರೇಟ್ ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹಲವು ಬ್ಯಾಂಕ್ ಗಳು ತಮ್ಮ ನಿಶ್ಚಿತ ಠೇವಣಿಯ (ಎಫ್‌ಡಿ) ಬಡ್ಡಿ ದರವನ್ನು ಹೆಚ್ಚಿಸಿದೆ. ದೊಡ್ಡ ಬ್ಯಾಂಕ್ ಗಳಿಗಿಂತ, ಸಣ್ಣ ಪೈನಾನ್ಸ್ ಬ್ಯಾಂಕ್ ಮತ್ತು ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ಯೋಜನೆಗಳಿಗೆ ಹೆಚ್ಚಿನ ಬಡ್ಡಿ ದರ ನೀಡುತ್ತದೆ.
ಹೀಗಾಗಿ ನೀವು ಯಾವುದಾದರೂ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ನಿಮಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಅನುಕೂಲವಾದ ಬಡ್ದಿದರ ಮತ್ತು ಸುರಕ್ಷತೆ ಬಗ್ಗೆ ವಿವರ ಇಲ್ಲಿದೆ. ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ಯೋಜನೆಯೂ ಸುರಕ್ಷಿತ ಯೋಜನೆಯ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿ ಹೂಡಿದ ಹಣಕ್ಕೆ ಸರ್ಕಾರವೇ ಖಾತ್ರಿ ನೀಡುತ್ತದೆ. 5 ವರ್ಷಗಳ ಅವಧಿಗೆ ಇದರಲ್ಲಿ ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರಿಕರು 7% ಬಡ್ಡಿ ದರವನ್ನು ಪಡೆಯುತ್ತಾರೆ.

ಇನ್ನು ಯೂನಿಟಿ ಸ್ಮಾಲ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 1001 ದಿನಗಳಿಗೆ ಎಫ್‌ಡಿ ಮೇಲೆ 9% ಮತ್ತು ಹಿರಿಯ ನಾಗರಿಕರಿಗೆ 9.5% ಬಡ್ಡಿ ನೀಡುತ್ತದೆ. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಎರಡರಿಂದ ಮೂರು ವರ್ಷಗಳ ಎಫ್‌ಡಿ ಮೇಲೆ ಕ್ರಮವಾಗಿ 5.1% ಮತ್ತು8.51% ಬಡ್ಡಿ ದ ನೀಡುತ್ತದೆ. ಇನ್ನು ಸೂರ್ಯೋದಯ ಬ್ಯಾಂಕ್ 999 ದಿನಗಳ ಎಫ್‌ಡಿಗಾಗಿ ಸಾಮಾನ್ಯ ನಾಗರಿಕರಿಗೆ 8.51% ಮತ್ತು ಹಿರಿಯ ನಾಗರಿಕರಿಗೆ 8.76% ದಷ್ಟು ಬಡ್ಡಿ ದರವನ್ನು ನೀಡುತ್ತದೆ.
ಹೂಡಿಕೆ ಮಾಡುವಾಗ ನೀವು ನೆನಪಿನಲ್ಲಿಡಬೇಕಾದ ಮತ್ತೊಂದು ಅಂಶ ಎಂದರೆ, ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಮ್ಮ 5 ಲಕ್ಷದವರೆಗಿನ ಹೂಡಿಕೆ ಮೊತ್ತಕ್ಕೆ ಮಾತ್ರ ವಿಮೆ ನೀಡುತ್ತದೆ. ಆದ್ದರಿಂದ ನೀವು ಎಫ್.ಡಿಯಲ್ಲಿ ದೊಡ್ಡ ಮೊತ್ತ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ಯೋಜನೆಯೂ ಸುರಕ್ಷಿತ ಮತ್ತು ಉತ್ತಮ ಆಯ್ಕೆಯಾಗಿದೆ.
ಬಡ್ಡಿದರ ಲೆಕ್ಕಚಾರದಲ್ಲಿ ನೋಡುವುದಾದರೆ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ಯೋಜನೆಗಿಂತ ಉತ್ತಮ ಬಡ್ಡಿದರವನ್ನು ನೀಡುತ್ತದೆ. ಆದರೆ ಹೂಡಿಕೆಯ ಸುರಕ್ಷತೆಯ ವಿಚಾರಕ್ಕೆ ಬಂದರೆ ಪೋಸ್ಟ್ ಆಫೀಸ್ ಯೋಜನೆಯೂ ಸರ್ಕಾರದ ಬೆಂಬಲವನ್ನು ಹೊಂದಿರುವುದರಿಂದ ಇದು ಸುರಕ್ಷಿತ ಹೂಡಿಕೆಯಾಗಿದೆ. ಹೆಚ್ಚಿನ ಆದಾಯ ಅಥವಾ ಸುರಕ್ಷಿತ ಹೂಡಿಕೆ ಇವೆರಡರ ನಡುವಿನ ಆಯ್ಕೆಯೂ ಅಂತಿಮವಾಗಿ ಹೂಡಿಕೆದಾರರ ಆದ್ಯತೆಗೆ ತಕ್ಕಂತೆ ಬದಲಾಗುತ್ತದೆ.


Click it and Unblock the Notifications