ಹೂಡಿಕೆ ವಿಚಾರಕ್ಕೆ ಬಂದಾಗ ಎಂದಿಗೂ ಕೂಡಾ ಸರ್ಕಾರದ ಯೋಜನೆಗಳು ಸುರಕ್ಷಿತವಾಗಿದೆ. ಇಂತಹ ಸುರಕ್ಷಿತ ಯೋಜನೆಗಳಲ್ಲಿ ಪಿಪಿಎಫ್ ಕೂಡಾ ಒಂದಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯೂ ಭಾರತದಲ್ಲಿ ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಅದು ಸಮಾಜದ ಎಲ್ಲಾ ವರ್ಗದ ಅಗತ್ಯಗಳನ್ನು ಪೂರೈಸುತ್ತದೆ. ತ್ರೈಮಾಸಿಕ ಆಧಾರದ ಮೇಲೆ ಶೇಕಡ 7.1 ಬಡ್ಡಿದರ ಮತ್ತು ಆದಾಯ ತೆರಿಗೆ 80ಸಿ ಅಡಿಯಲ್ಲಿ, 1.5 ಲಕ್ಷ ರೂ.ವರೆಗೆ ಟ್ಯಾಕ್ಸ್ ಬೆನಿಫಿಟ್ ನೀಡುತ್ತದೆ.
ಹೂಡಿಕೆದಾರರು 15 ವರ್ಷಗಳವರೆಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಮೆಚ್ಯೂರಿಟಿ ಬಳಿಕ ಪಿಪಿಎಫ್ ಖಾತೆದಾರರಿಗೆ ಮೂರು ಅಯ್ಕೆಗಳಿವೆ. ಒಂದನೇ ಆಯ್ಕೆ ಸಂಪೂರ್ಣ ಮೊತ್ತ ಹಿಂಪಡೆಯುವುದಾಗಿದೆ. ತಮ್ಮ ಪಿಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಸಂಪೂರ್ಣ ಹಣವನ್ನು, ಮೆಚ್ಯೂರಿಟಿ ಅವಧಿಯ ಬಳಿಕ ಬ್ಯಾಂಕ್ ಅಥವಾ ಅಂಚೆಕಚೇರಿಯಲ್ಲಿ ಅರ್ಜಿ ತುಂಬುವ ಮೂಲಕ ಖಾತೆದಾರರು ಹಿಂಪಡೆಯಬಹುದು.

ಎರಡನೇ ಆಯ್ಕೆಯಲ್ಲಿ ಹೊಸ ಪಿಪಿಎಫ್ ಹೂಡಿಕೆಯಂತೆ ನಿಮ್ಮ ಹೂಡಿಕೆ 5 ವರ್ಷಗಳವರೆಗೆ ವಿಸ್ತರಿಸಬಹುದುದಾಗಿದೆ. ಒಂದು ವೇಳೆ ಖಾತೆದಾರರು ತಮ್ಮ ಹೂಡಿಕೆಯನ್ನು ಮುಂದುವರಿಸಿಲು ಇಚ್ಚಿಸಿದರೆ ಮತ್ತು ಹೆಚ್ಚಿನ ರಿಟರ್ನ್ಸ್ ಬಯಸಿದರೆ, ಅವರು ಫಾರಂ ಭರ್ತಿ ಮಾಡುವ ಮೂಲಕ ಮತ್ತೆ 5 ವರ್ಷಗಳವರೆಗೆ ಹೂಡಿಕೆ ವಿಸ್ತರಣೆ ಮಾಡಬಹುದು.
ಮೂರನೇ ಆಯ್ಕೆಯಲ್ಲಿ ಅಸ್ತಿತ್ವದಲ್ಲಿರುವ ಹೂಡಿಕೆಯನ್ನು ಮುಂದುವರಿಸಬಹುದಾಗಿದೆ. ಯಾವುದೇ ಹೊಸ ಹೂಡಿಕೆ ಮಾಡಲು ಬಯಸದೆ ಮತ್ತು ಖಾತೆದಾರರು ಈಗಾಗಲೇ ಅಸ್ತಿತ್ವದಲ್ಲಿರುವ ಹೂಡಿಕೆ ಮುಂದುವರಿಸಲು ಬಯಸಿದರೆ ಅದಕ್ಕೂ ಅವಕಾಶ ಇದೆ. ಯಾವುದೇ ಹೆಚ್ಚುವರಿ ಹೂಡಿಕೆ ಮಾಡದೆ ತಮ್ಮ ಖಾತೆಯನ್ನು 5 ವರ್ಷಗಳ ವಿಸ್ತರಣೆ ಮಾಡಬಹುದು. ಇದರೊಂದಿಗೆ ಠೇವಣಿ ಮೇಲೆ ಬಡ್ಡಿ ಗಳಿಕೆಯೂ ಮುಂದುವರಿಯುತ್ತದೆ.
ಈಗಾಗಲೇ ತಿಳಿಸಿರುವ ಮೂರು ಮೆಚ್ಯೂರಿಟಿ ಆಯ್ಕೆಗಳ ಜೊತೆಗೆ ಖಾತೆದಾರರು, ಮೆಚ್ಯೂರಿಟಿ ಅವಧಿ ಮುಕ್ತಾಯದ ನಂತರ ಯಾವುದೇ ತೆರಿಗೆ ಇಲ್ಲದೆ ನಿಶ್ಚಿಂತರಾಗಿ ತಮ್ಮ ಹಣ ಹಿಂಪಡೆಯಬಹುದು. ಹೀಗಾಗಿ ಪಿಪಿಎಫ್ ಯೋಜನೆಯು ವೃತಿಪರ ಅಥವಾ ಇಲ್ಲದೇ ಇರಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಆಕರ್ಷಕ ಹೂಡಿಕೆಯ ಆಯ್ಕೆಯಾಗಿದೆ. ಜನಪ್ರಿಯತೆ ಗಳಿಸಿರುವ ಈ ಯೋಜನೆ ಮುಖಾಂತರ ಜನರು ತಮ್ಮ ಆರ್ಥಿಕ ಗುರಿಗಳನ್ನು ಪೂರೈಸಲು ಈ ಯೋಜನೆಯಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ.


Click it and Unblock the Notifications