ನಾವು ಎಂದಿಗೂ ಕೂಡ ಹಣವನ್ನು ಉಳಿತಾಯ ಮಾಡುವ ವಿಚಾರಕ್ಕೆ ಬಂದಾಗ ಯಾವ ಹೂಡಿಕೆಯಿಂದ ನಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂದು ನೋಡುತ್ತೇವೆ. ಹಾಗೆಯೇ ನಾವು ಮಾಡುವ ಹೂಡಿಕೆಯಿಂದ ಎಷ್ಟು ಅಧಿಕ ರಿಟರ್ನ್ ಪಡೆಯಲು ಸಾಧ್ಯ ಎಂದು ಕೂಡಾ ನೋಡುತ್ತೇವೆ. ಹಾಗೆ ನೋಡಿದಾಗ ನಮ್ಮ ಆಯ್ಕೆ ಎಂದಿಗೂ ಕೂಡಾ ಸರ್ಕಾರಿ ಯೋಜನೆಗಳು ಆಗಿರುತ್ತದೆ.
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) ಹಣವನ್ನು ಉಳಿಸುವುದು ದೀರ್ಘಾವಧಿಯ ಮತ್ತು ಅಪಾಯ-ಮುಕ್ತ ಹೂಡಿಕೆಯ ಮಾರ್ಗಗಳಲ್ಲಿ ಒಂದಾಗಿದೆ. ಖಾತೆಯನ್ನು ತೆರೆದ ವರ್ಷದ ಅಂತ್ಯದಿಂದ 15 ವರ್ಷಗಳು ಪೂರ್ಣಗೊಂಡ ನಂತರ ಮೆಚ್ಯೂರಿಟಿ ಹೊಂದುತ್ತದೆ. ಪ್ರಸ್ತುತ ಶೇಕಡ 7.1ರಷ್ಟು ಬಡ್ಡಿದರವನ್ನು ಪಿಪಿಎಫ್ ಸದಸ್ಯರಿಗೆ ನೀಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಪಿಪಿಎಫ್ ಖಾತೆಯನ್ನು ತೆರೆಯುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ...

ಎಸ್‌ಬಿಐನಲ್ಲಿ ಪಿಪಿಎಫ್ ಖಾತೆ ತೆರೆಯುವುದು ಹೇಗೆ?
ಹಂತ 1: ನಿಮ್ಮ ಎಸ್‌ಬಿಐ ಖಾತೆಯನ್ನು ತೆರೆಯಿರಿ
ಹಂತ 2: Request and enquiries ಟ್ಯಾಬ್ ಅನ್ನು ಆಯ್ಕೆ ಮಾಡಿ
ಹಂತ 3: new PPF account ಮೇಲೆ ಕ್ಲಿಕ್ ಮಾಡಿ
ಹಂತ 4: ಕೂಡಲೇ ನಿಮ್ಮ new PPF account ಪೇಜ್‌ಗೆ ರಿಡೈರೆಕ್ಟ್ ಆಗಲಿದೆ. ಅಲ್ಲಿ ಪ್ಯಾನ್ ಮಾಹಿತಿ ಕಾಣಲಿದೆ.
ಹಂತ 5: ನೀವು ಎಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಲು ಬಯಸುತ್ತೀರೋ ಆ ಎಸ್‌ಬಿಐ ಬ್ರ್ಯಾಂಚ್‌ನ ಮಾಹಿತಿಯನ್ನು ನಮೂದಿಸಿ.
ಹಂತ 6: ಆಧಾರ್, ನಾಮಿನೇಷನ್ ಸೇರಿದಂತೆ ಇತರೆ ವೈಯಕ್ತಿಕ ಮಾಹಿತಿಯನ್ನು ವೆರಿಫೈ ಮಾಡಿ. ವೆರಿಫಿಕೇಷನ್ ಸಂಪೂರ್ಣವಾದ ಮೇಲೆ proceed ಮೇಲೆ ಕ್ಲಿಕ್ ಮಾಡಿ.
ಹಂತ 7: Your form has been successfully submitted ಎಂದು ಕಾಣಲಿದೆ.
ಹಂತ 8: ರೆಫೆರೆನ್ಸ್ ಸಂಖ್ಯೆ ಯನ್ನು ನಮೂದಿಸಿರುವ ಫಾರ್ಮ್ ಅನ್ನು ನೀವು ಡೌನ್‌ಲೋಡ್ ಮಾಡಬೇಕಾಗುತ್ತದೆ.
ಹಂತ 9: Print PPF Online Application ಅನ್ನು ಆಯ್ಕೆ ಮಾಡಿ ಫಾರ್ಮ್ ಅನ್ನು ಪ್ರಿಂಟ್ ಮಾಡಿ.
ಹಂತ 10: ಫಾರ್ಮ್ ಹಾಗೂ ಫೋಟೋಗ್ರಾಫ್ ಅನ್ನು 30 ದಿನದ ಒಳಗಾಗಿ ಬ್ಯಾಂಕ್‌ನ ಬ್ರ್ಯಾಂಚ್‌ಗೆ ಸಲ್ಲಿಕೆ ಮಾಡಿ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಬಗ್ಗೆ ಮಾಹಿತಿ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಚಂದಾದಾರರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದುವಂತಿಲ್ಲ. ಆದರೆ ಅನೇಕ ಜನರು ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಯನ್ನು ತೆರೆಯುತ್ತಾರೆ.
* ಹಣಕಾಸಿನ ವರ್ಷದಲ್ಲಿ ಕನಿಷ್ಠ ಡೆಪಾಟಿಸ್ 500 ರೂಪಾಯಿ ಆಗಿದೆ, ಗರಿಷ್ಠ ಡೆಪಾಸಿಟ್ 1,50,000 ರೂಪಾಯಿ ಆಗಿದೆ.
* 3ನೇ ಹಣಕಾಸು ವರ್ಷದಿಂದ 6ನೇ ಹಣಕಾಸು ವರ್ಷದವರೆಗೆ ಸಾಲ ಸೌಲಭ್ಯ ಲಭ್ಯವಿದೆ.
* 7ನೇ ಹಣಕಾಸು ವರ್ಷದ ಬಳಿಕ ಪ್ರತಿ ವರ್ಷವು ಹಣ ವಿತ್‌ಡ್ರಾ ಮಾಡುವ ಅವಕಾಶವಿದೆ.
* ಖಾತೆಯನ್ನು ತೆರೆದ ವರ್ಷದ ಅಂತ್ಯದಿಂದ ಹದಿನೈದು ಸಂಪೂರ್ಣ ಆರ್ಥಿಕ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಖಾತೆಯು ಮೆಚ್ಯೂರಿಟಿಯಾಗುತ್ತದೆ.
* ಮೆಚ್ಯೂರಿಟಿ ನಂತರ 5 ವರ್ಷಗಳ ಅವಧಿಗೆ ಖಾತೆಯನ್ನು ವಿಸ್ತರಿಸಬಹುದು.
* ಮೆಚ್ಯೂರಿಟಿ ಬಳಿಕ ಅನಿರ್ದಿಷ್ಟ ಅವಧಿಯವರೆಗೆ ಖಾತೆಯ ಮೊತ್ತವನ್ನು ವಿತ್‌ಡ್ರಾ ಮಾಡದೆ ಹಾಗೆಯೇ ಉಳಿಸಿಕೊಳ್ಳಬಹುದು, ಬಡ್ಡಿದರ ಲಭ್ಯವಾಗುತ್ತದೆ.
* ಬ್ಯಾಂಕ್‌ನ ಯಾವುದೇ ಆದೇಶ ಅಥವಾ ತೀರ್ಪಿಗೆ ಪಿಪಿಎಫ್ ಖಾತೆಯ ಮೊತ್ತವು ಒಳಪಡುವುದಿಲ್ಲ.
* ಐಟಿ ಕಾಯ್ದೆಯ ಸೆಕ್ಷನ್ 80-C ಅಡಿಯಲ್ಲಿ ಡೆಪಾಸಿಟ್ ಕಡಿತಕ್ಕೆ ಅರ್ಹತೆ ಪಡೆಯುತ್ತದೆ.
* ಖಾತೆಯಲ್ಲಿ ಗಳಿಸಿದ ಬಡ್ಡಿಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ -10 ರ ಅಡಿಯಲ್ಲಿ ಆದಾಯ ತೆರಿಗೆಯಿಂದ ಮುಕ್ತವಾಗಿದೆ.


Click it and Unblock the Notifications