For Quick Alerts
ALLOW NOTIFICATIONS  
For Daily Alerts

ಪಿಪಿಎಫ್‌: ಅನುಕೂಲ ತಿಳಿದಿದ್ದೀರಿ, ಆದರೆ ಇದರಿಂದ ಆಗುವ ಅನಾನುಕೂಲವೇನು?

|

ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ದೀರ್ಘಾವಧಿಯಲ್ಲಿ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ ಎಂಬುದು ಬಹುತೇಕರಿಗೆ ತಿಳಿದಿದೆ. ಆದಾಯ ತೆರಿಗೆ ಉಳಿತಾಯಕ್ಕೆ ಹಾಗೂ ನಿಗದಿತ ಬಡ್ಡಿದರವನ್ನು ಪಡೆಯಲು ಈ ಹೂಡಿಕೆ ನೆಚ್ಚಿನ ಆಯ್ಕೆಯಾಗಿದೆ. ಜೊತೆಗೆ ಹಣವು ಸುರಕ್ಷಿತವಾಗಿರುತ್ತದೆ ಎಂಬುದು ಹೂಡಿಕೆದಾರರ ಅಭಿಪ್ರಾಯ.

ಪಿಪಿಎಫ್‌ ವಿನಾಯತಿ ವರ್ಗದ ಅಡಿಯಲ್ಲಿ ಬರುತ್ತದೆ. ದರರ್ಥ ನೀವು ಪಿಪಿಎಫ್, ವಾರ್ಷಿಕ ಬಡ್ಡಿ ಮತ್ತು ಮುಕ್ತಾಯದಲ್ಲಿ ಹೂಡಿಕೆ ಮಾಡುವ ಹಣವನ್ನು ತೆರಿಗೆಯಿಂದ ಮುಕ್ತಗೊಳಿಸಲಾಗುತ್ತದೆ. ಆದರೆ ಈ ಅನುಕೂಲಗಳ ಹೊರತಾಗಿಯೂ, ಪಿಪಿಎಫ್ ಎಲ್ಲರಿಗೂ ಉತ್ತಮ ಹೂಡಿಕೆ ಆಯ್ಕೆಯಾಗಿಲ್ಲ, ಏಕೆಂದರೆ ಅದು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವುದರ ಅನಾನುಕೂಲತೆಗಳ ಬಗ್ಗೆಯೂ ನೀವು ತಿಳಿದಿರಬೇಕು.

ಸೀಮಿತ ಬಡ್ಡಿದರ ಹಾಗೂ ಇತ್ತೀಗೆ ಬಡ್ಡಿದರ ಇಳಿಕೆ

ಸೀಮಿತ ಬಡ್ಡಿದರ ಹಾಗೂ ಇತ್ತೀಗೆ ಬಡ್ಡಿದರ ಇಳಿಕೆ

ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರ ಪಿಪಿಎಫ್‌ನ ಬಡ್ಡಿದರವನ್ನು ಕಡಿಮೆ ಮಾಡಿದೆ. ಎಫ್‌ಡಿಗೆ ಹೋಲಿಸಿದರೆ ಇದು ಆಕರ್ಷಕ ಲಾಭ ಎಂದು ನೀವು ಕಂಡುಕೊಳ್ಳಬಹುದು, ಆದರೆ ತಜ್ಞರು ಹೇಳುವಂತೆ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಿಪಿಎಫ್ ಮೇಲಿನ ಬಡ್ಡಿದರವು ವಿಶೇಷವಲ್ಲ. ಒಂದು ಸಮಯದಲ್ಲಿ ಪಿಪಿಎಫ್ ಶೇಕಡಾ 12 ರಷ್ಟು ಆದಾಯವನ್ನು ನೀಡುತ್ತಿತ್ತು. ಆದರೆ ಈಗ ಅದು ಸಾಧ್ಯವಿಲ್ಲದಿರುವುದರಿಂದ ನೀವು ಹೆಚ್ಚಿನ ಲಾಭವನ್ನು ಬಯಸಿದರೆ, ಮ್ಯೂಚುವಲ್ ಫಂಡ್‌ನಂತಹ ಬೇರೆ ಯಾವುದಾದರೂ ಆಯ್ಕೆಯನ್ನು ನೋಡಬೇಕು.

ದ್ರವ್ಯತೆ ಸಮಸ್ಯೆ ಇದೆ

ದ್ರವ್ಯತೆ ಸಮಸ್ಯೆ ಇದೆ

ಪಿಪಿಎಫ್ ಖಾತೆಯಲ್ಲಿ ದ್ರವ್ಯತೆಯ ಸಮಸ್ಯೆ ಇದೆ. ಈ ಆಯ್ಕೆಯಲ್ಲಿ ನಿಮ್ಮ ಹೂಡಿಕೆ ಖಾತೆಯು 15 ವರ್ಷಗಳ ನಂತರ ಪಕ್ವವಾಗುತ್ತದೆ. ಕೆಲವು ವರ್ಷಗಳ ನಂತರ ನೀವು ಭಾಗಶಃ ಹಿಂಪಡೆಯುವಿಕೆಯನ್ನು ಮಾಡಬಹುದಾದರೂ, ಪಿಪಿಎಫ್‌ನಲ್ಲಿ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಂತಹ ದ್ರವ್ಯತೆಯ ಸೌಲಭ್ಯವನ್ನು ನೀವು ಪಡೆಯುವುದಿಲ್ಲ.

ಅಂಚೆ ಕಚೇರಿ ಉಳಿತಾಯ ಯೋಜನೆಗಳು: ಎಷ್ಟು ತಿಂಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ?ಅಂಚೆ ಕಚೇರಿ ಉಳಿತಾಯ ಯೋಜನೆಗಳು: ಎಷ್ಟು ತಿಂಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ?

ಸಾಕಷ್ಟು ಹೂಡಿಕೆ ಮಾಡಲು ಸಾಧ್ಯವಿಲ್ಲ!

ಸಾಕಷ್ಟು ಹೂಡಿಕೆ ಮಾಡಲು ಸಾಧ್ಯವಿಲ್ಲ!

ದೀರ್ಘಕಾಲದವರೆಗೆ ದೊಡ್ಡ ಹೂಡಿಕೆ ಮಾಡಲು ಬಯಸುವವರಿಗೆ ಪಿಪಿಎಫ್ ಸೂಕ್ತವಲ್ಲ. ಏಕೆಂದರೆ ನೀವು ಆರ್ಥಿಕ ವರ್ಷದಲ್ಲಿ ಪಿಪಿಎಫ್‌ನಲ್ಲಿ ಗರಿಷ್ಠ 1.5 ಲಕ್ಷ ರೂ. ಮಾತ್ರ ಹೂಡಿಕೆ ಮಾಡಬಹುದು. ಆದರೆ ಹೆಚ್ಚಿನ ಆದಾಯದೊಂದಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡುವ ಇಎಲ್‌ಎಸ್‌ಎಸ್‌ನಲ್ಲಿ, ಗರಿಷ್ಠ ಹೂಡಿಕೆ ಮಿತಿಯಿಲ್ಲ. ಆದರೆ ಅಲ್ಲಿಯೂ ಸಹ ನೀವು 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ಪ್ರಯೋಜನವನ್ನು ಪಡೆಯುತ್ತೀರಿ.

7 ದಿನಗಳಿಗೆ ಎಫ್‌ಡಿ ಯೋಜನೆ: ಆಕರ್ಷಕ ಬಡ್ಡಿ ದರ ಇಲ್ಲಿದೆ7 ದಿನಗಳಿಗೆ ಎಫ್‌ಡಿ ಯೋಜನೆ: ಆಕರ್ಷಕ ಬಡ್ಡಿ ದರ ಇಲ್ಲಿದೆ

ಇಪಿಎಫ್ ಮತ್ತು ಪಿಪಿಎಫ್

ಇಪಿಎಫ್ ಮತ್ತು ಪಿಪಿಎಫ್

ನೀವು ಇಪಿಎಫ್‌ಒ ಸದಸ್ಯರಾಗಿದ್ದರೆ ಮತ್ತು ಅಲ್ಲಿ ನಿರಂತರವಾಗಿ ಹಣವನ್ನು ಠೇವಣಿ ಮಾಡುತ್ತಿದ್ದರೆ, ಪಿಪಿಎಫ್‌ನಿಂದ ತೆರಿಗೆ ಪ್ರಯೋಜನಗಳು ಸೀಮಿತವಾಗಿರುತ್ತದೆ. ಎರಡನೆಯದಾಗಿ, ನೀವು ವಿಪಿಎಫ್ ಸಹಾಯವನ್ನು ತೆಗೆದುಕೊಳ್ಳುವ ಮೂಲಕ ಇಪಿಎಫ್‌ನಲ್ಲಿ ಹೆಚ್ಚು ಹೂಡಿಕೆ ಮಾಡಬಹುದು. ವಿಪಿಎಫ್ ಮೇಲಿನ ಬಡ್ಡಿದರವು ಇಪಿಎಫ್‌ನಂತೆಯೇ ಇರುತ್ತದೆ ಮತ್ತು ಪ್ರಸ್ತುತ ಪಿಪಿಎಫ್‌ಗೆ ಹೋಲಿಸಿದರೆ ಇಪಿಎಫ್ ಮೇಲಿನ ಬಡ್ಡಿದರ ಹೆಚ್ಚಾಗಿದೆ. ಆದ್ದರಿಂದ ಪಿಪಿಎಫ್ ಇಪಿಎಫ್ ಸದಸ್ಯರಿಗೆ ಪ್ರಯೋಜನಕಾರಿಯಲ್ಲ.

ಜಂಟಿ ಖಾತೆ ತೆರೆಯಲು ಸಾಧ್ಯವಿಲ್ಲ

ಜಂಟಿ ಖಾತೆ ತೆರೆಯಲು ಸಾಧ್ಯವಿಲ್ಲ

ಎಫ್‌ಡಿಗಳು ಮತ್ತು ಮ್ಯೂಚುವಲ್ ಫಂಡ್‌ಗಳಂತಲ್ಲದೆ, ಪಿಪಿಎಫ್‌ನಲ್ಲಿ ಜಂಟಿ ಖಾತೆಯನ್ನು ತೆರೆಯಲಾಗುವುದಿಲ್ಲ. ಹೀಗಾಗಿ ಇದು ಉತ್ತಮ ಉಳಿತಾಯ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುವುದಿಲ್ಲ. ಆದಾಗ್ಯೂ, ಒಬ್ಬರು ಮೈನರ್ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. 1968 ರಲ್ಲಿ ರಾಷ್ಟ್ರೀಯ ಉಳಿತಾಯ ಸಂಸ್ಥೆ ಪ್ರಾರಂಭಿಸಿದ ಪಿಪಿಎಫ್ ಯೋಜನೆ, ಸಣ್ಣ ಉಳಿತಾಯವನ್ನು ಆಕರ್ಷಕ ಹೂಡಿಕೆ ಆಯ್ಕೆಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

English summary

PPF: Five Reasons Why PPF May Not Be a Suitable Investment For All

Here the details of why Public provident fund (PPF) may not be a suitable investment for all
Story first published: Friday, July 9, 2021, 14:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X