For Quick Alerts
ALLOW NOTIFICATIONS  
For Daily Alerts

ದಿನಕ್ಕೆ 100 ರೂಪಾಯಿ ಹೂಡಿಕೆ ಮಾಡಿ ನಿವೃತ್ತಿ ವೇಳೆ 25 ಲಕ್ಷ ಪಡೆಯುವುದು ಹೇಗೆ?

|

ನಾವು ಹೂಡಿಕೆಯ ವಿಚಾರಕ್ಕೆ ಬಂದಾಗ ನಮ್ಮ ಭವಿಷ್ಯವನ್ನು ಹೆಚ್ಚು ಸುರಕ್ಷಿತವಾಗಿಸುವ ಹೂಡಿಕೆಗೆ ಅಧಿಕ ಗಮನ ನೀಡುತ್ತೇವೆ. ನಾವು ಹೂಡಿಕೆಯನ್ನು ಹೆಚ್ಚಳ ಮಾಡಿ, ರಿಟರ್ನ್ ಅನ್ನು ಸುರಕ್ಷಿತವಾಗಿಸುವ ಹೂಡಿಕೆಯತ್ತ ಹೆಚ್ಚು ವಾಲುತ್ತೇವೆ. ನಾವು ಆಯ್ಕೆ ಮಾಡಿಕೊಳ್ಳಬಹುದಾದ ಸುರಕ್ಷಿತ ಹೂಡಿಕೆಯಲ್ಲಿ ಹಲವಾರು ಆಯ್ಕೆಗಳು ಇದೆ. ಆದರೆ ಇದರಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಅನ್ನು ಉತ್ತಮ ಆಯ್ಕೆ ಎಂದು ಪರಿಗಣನೆ ಮಾಡಲಾಗಿದೆ.

 

ಕಡಿಮೆ ಬಡ್ಡಿದರದ ಹೊರತಾಗಿಯೂ ಪಿಪಿಎಫ್ ನಮಗೆ ಹಲವಾರು ಪ್ರಯೋಜನವನ್ನು ಒದಗಿಸುತ್ತದೆ. ನೀವು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ನೀವು ಹಣವನ್ನು ಉಳಿತಾಯ ಕೂಡಾ ಮಾಡಬಹುದು, ಹಾಗೆಯೇ ತೆರಿಗೆಯನ್ನು ಕೂಡಾ ಉಳಿತಾಯ ಮಾಡಬಹುದು. ಯಾಕೆಂದರೆ ಇದು ತೆರಿಗೆ ವಿನಾಯಿತಿ ನೀಡುವ ಯೋಜನೆಯಾಗಿದೆ. ಉದ್ಯೋಗಿಗಳು ಹಾಗೂ ಉದ್ಯೋಗದಾತರು ಇಬ್ಬರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಈ ಯೋಜನೆಯಲ್ಲಿ ನಾವು ಹೂಡಿಕೆ ಮಾಡುವ ಹಣದ ಸುರಕ್ಷತೆ ಹಾಗೂ ರಿಟರ್ನ್‌ಗೆ ಸರ್ಕಾರವೇ ರಕ್ಷಣಾ ಕವಚದಂತೆ. ಈ ಯೋಜನೆಯು ಸರ್ಕಾರವು ಜಾರಿ ಮಾಡಿರುವ ಯೋಜನೆಯಾದ ಕಾರಣ ಸುರಕ್ಷತೆಗೆ ಸರ್ಕಾರವೇ ಹೊಣೆಯಾಗಿದೆ. ಪಿಪಿಎಫ್‌ ಪ್ರಸ್ತುತ ಶೇಕಡ 7.1ರಷ್ಟು ಬಡ್ಡಿದರವನ್ನು ನೀಡುತ್ತದೆ. ಮೆಚ್ಯೂರಿಟಿ ಮೊತ್ತ ಹಾಗೂ ಬಡ್ಡಿದರ ಎರಡೂ ಕೂಡಾ ತೆರಿಗೆ ವಿನಾಯಿತಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ನಾವು 100 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ರೂಪಾಯಿಯನ್ನು ರಿಟರ್ನ್ ಪಡೆಯುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ...

 ಈಕ್ವಿಟಿ ಮ್ಯೂಚುವಲ್ ಫಂಡ್

ಈಕ್ವಿಟಿ ಮ್ಯೂಚುವಲ್ ಫಂಡ್

ಸಮೀಕ್ಷೆಯ ಪ್ರಕಾರ ನಿವೃತ್ತಿ ಸಂದರ್ಭದಲ್ಲಿ ನಾವು ಅಧಿಕ ರಿಟರ್ನ್ ಅನ್ನು ಪಡೆಯಬೇಕಾದರೆ ಈಕ್ವಿಟಿ ಮ್ಯೂಚುವಲ್ ಫಂಡ್ ಮೊದಲ ಆಯ್ಕೆಯಾಗಿದೆ. ಆ ಬಳಿಕದ ಆಯ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಹಾಗೂ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಆಗಿದೆ. ದೀರ್ಘಾವಧಿಯ ಹೂಡಿಕೆಯಾದರೆ ಪಿಪಿಎಫ್ ನಮಗೆ ಉತ್ತಮ ರಿಟರ್ನ್ ಅನ್ನು ನೀಡುತ್ತದೆ. ನೀವು ನಿವೃತ್ತಿಗಾಗಿ ಹಣ ಉಳಿತಾಯ ಮಾಡುವುದಾದರೆ ನೀವು ಈಗಲೇ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭ ಮಾಡಿ. ಈಗಲೇ ಹೂಡಿಕೆ ಮಾಡಿದರೆ ನಿಮ್ಮ ನಿವೃತ್ತಿ ಮೊತ್ತ ಅಧಿಕವಾಗಲಿದೆ.

 ಹೂಡಿಕೆ ಲೆಕ್ಕಾಚಾರ ಹೇಗೆ ನೋಡಿ

ಹೂಡಿಕೆ ಲೆಕ್ಕಾಚಾರ ಹೇಗೆ ನೋಡಿ

ನೀವು ಪ್ರತಿ ದಿನ ನೂರು ರೂಪಾಯಿಯಂತೆ ಒಂದು ವರ್ಷ ಹೂಡಿಕೆ ಮಾಡಿದರೆ ವರ್ಷಕ್ಕೆ 36500 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ನೀವು ಸುಮಾರು 15 ವರ್ಷಗಳ ಕಾಲ ಹೀಗೆಯೇ ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆ 9.89 ಲಕ್ಷ ರೂಪಾಯಿ ಒಟ್ಟು ಲಭ್ಯವಾಗಲಿದೆ. ಬಡ್ಡಿದರ 7.1 ಕೂಡಾ ಜಮೆಯಾಗಲಿದೆ. ನೀವು 15 ವರ್ಷಗಳ ಕಾಲ ಒಟ್ಟಾಗಿ 547500 ರೂಪಾಯಿ ಜಮೆ ಮಾಡಿದಂತೆ ಆಗಲಿದೆ.

 25 ಲಕ್ಷ ರೂಪಾಯಿ ಪಡೆಯುವುದು ಹೇಗೆ?
 

25 ಲಕ್ಷ ರೂಪಾಯಿ ಪಡೆಯುವುದು ಹೇಗೆ?

ಪಿಪಿಎಫ್‌ನ ಮೆಚ್ಯೂರಿಟಿ ಅವಧಿ 15 ವರ್ಷಗಳು ಆಗಿದೆ. ಅದರ ಬಳಿಕ ನೀವು ಐದು ವರ್ಷಗಳಿಗೆ ವಿಸ್ತರಣೆ ಮಾಡಿಕೊಳ್ಳುವ ಆಯ್ಕೆ ಲಭ್ಯವಾಗಲಿದೆ. ಆ ಐದು ವರ್ಷ ಮುಗಿದ ಬಳಿಕ ಮತ್ತೆ ಐದು ವರ್ಷ ವಿಸ್ತರಣೆ ಮಾಡಿಕೊಳ್ಳಬಹುದು. ನೀವು ಪ್ರತಿ ದಿನ ನೂರು ರೂಪಾಯಿ ಹೂಡಿಕೆ ಮಾಡಿದರೆ 25 ವರ್ಷಗಳ ಕಾಲ ಹೂಡಿಕೆ ಮಾಡಿ 25 ಲಕ್ಷ ರೂಪಾಯಿ ರಿಟರ್ನ್ ಪಡೆಯಲು ಸಾಧ್ಯವಾಗಲಿದೆ. 25 ವರ್ಷಗಳ ಹೂಡಿಕೆ ಮಾಡಿದರೆ 25,08,284 ರೂಪಾಯಿ ಪಡೆಯಲು ಸಾಧ್ಯವಾಗಲಿದೆ. ಈ 25 ಲಕ್ಷ ರೂಪಾಯಿಯಲ್ಲಿ ಒಟ್ಟು 912500 ರೂಪಾಯಿ ಮಾತ್ರ ನೀವು ಮಾಡಿದ ಹೂಡಿಕೆ ಆಗುತ್ತದೆ. ಉಳಿದೆಲ್ಲವೂ ಬಡ್ಡಿ ರೂಪದಲ್ಲಿ ನಿಮಗೆ ಲಭ್ಯವಾಗಲಿದೆ.

English summary

PPF: Invest Rupees 100 Per Day and Get Rupees 25 Lakh During Retirement

Public Provident Fund: Invest Rupees 100 Per Day and Get Rupees 25 Lakh During Retirement. Here's Details about investment plan. read on.
Story first published: Wednesday, September 14, 2022, 16:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X