ಪ್ರಾವಿಡೆಂಟ್ ಫಂಡ್ ವ್ಯವಸ್ಥೆ ಇಲ್ಲದವರು, ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಪಿಪಿಎಫ್ ತಮ್ಮ ಉಳಿತಾಯದ ಮೊತ್ತವನ್ನು ಹೂಡಿಕೆ ಮಾಡಿದ ಹೂಡಿಕೆದಾರರು ಪಿಪಿಎಫ್ ಬಡ್ಡಿದರವನ್ನು ಬದಲಾವಣೆ ಮಾಡಲಾಗುತ್ತಾ ಎಂದು ಕಾತುರದಿಂದ ಕಾಯುತ್ತಿದ್ದಾರೆ.
ವರದಿ ಪ್ರಕಾರ ಹಣಕಾಸು ಸಚಿವಾಲಯವು ಈ ತಿಂಗಳ ಅಂತ್ಯದ ವೇಳೆಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳ ತ್ರೈಮಾಸಿಕ ಪರಿಶೀಲನಾ ಸಭೆಯನ್ನು ನಡೆಸಲು ಸಜ್ಜಾಗಿದೆ. ಈ ಸಭೆಯಲ್ಲಿ ಬಡ್ಡಿದರದ ಬಗ್ಗೆ ಚರ್ಚಿಸಿ ಅದರಂತೆ ಪ್ರಕಟಣೆಯಲ್ಲಿ ಮಾಹಿತಿ ನೀಡುವ ನಿರೀಕ್ಷೆಯಿದೆ.

ಏಪ್ರಿಲ್ 2020 ರಿಂದ ಪಿಪಿಎಫ್ ಬಡ್ಡಿದರ ಸ್ಥಿರ
ಹಲವಾರು ಪಿಪಿಎಫ್ ಖಾತೆದಾರರು ಬಡ್ಡಿದರಗಳಲ್ಲಿ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಆದರೆ ಏಪ್ರಿಲ್ 2020 ರಿಂದ ಪಿಪಿಎಫ್ ಬಡ್ಡಿ ದರವು ಬದಲಾಗದೆ ಸ್ಥಿರವಾಗಿದೆ. ಆದ್ದರಿಂದಾಗಿ ಮುಂಬರುವ ಪರಿಶೀಲನಾ ಸಭೆಯ ಬಗ್ಗೆ ಹೂಡಿಕೆದಾರರು ಕುತೂಹಲದಿಂದ ಕಾಯುತ್ತಿದ್ದಾರೆ.
ಆಕರ್ಷಕ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾದ ಪಿಪಿಎಫ್
ತೆರಿಗೆ-ಮುಕ್ತ ಆದಾಯವನ್ನು ನೀಡುವ ಪಿಪಿಎಫ್ ಎಸ್‌ಸಿಎಸ್‌ಎಸ್ ಮತ್ತು ಎನ್‌ಎಸ್‌ಸಿಯಂತಹ ಇತರ ಸಣ್ಣ ಉಳಿತಾಯ ಯೋಜನೆಗಳಿಂದ ಭಿನ್ನವಾಗಿದೆ. ಇದರಲ್ಲಿ ಆದಾಯ ತೆರಿಗೆ ವಿನಾಯಿತಿ ಇರುವ ಕಾರಣದಿಂದಾಗಿ ಹೂಡಿಕೆದಾರರ ನೆಚ್ಚಿನ ಆಯ್ಕೆ ಇದಾಗಿದೆ. ಯೋಜನೆಯಲ್ಲಿ ಶೇಕಡ 7.1 ರಷ್ಟು ಬಡ್ಡಿದರವನ್ನು ಪಡೆಯಬಹುದು.
ಈ ಬಾರಿ ಪಿಪಿಎಫ್ ಬಡ್ಡಿ ದರ ಬದಲಾಗುತ್ತದೆಯೇ?
ದೇಶದ ಆರ್ಥಿಕ ಸ್ಥಿತಿಯನ್ನು ನೋಡಿದಾಗ ಬಡ್ಡಿದರ ಹೆಚ್ಚಳದ ಬಗ್ಗೆ ಖಚಿತವಾಗಿ ಹೇಳಲಾಗದು ಎಂದು ತಜ್ಞರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಹಲವಾರು ಮಾಧ್ಯಮ ವರದಿ ಮಾಡಿದೆ. ನಡೆಯುತ್ತಿರುವ ಆರ್ಥಿಕ ಪರಿಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ನಂತಹ ಸಣ್ಣ ಉಳಿತಾಯ ಮೊದಲಾದ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಸ್ಥಿರವಾಗಿರಬಹುದು.
ಪಿಪಿಎಫ್‌ನ ಬಡ್ಡಿದರ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಹಣಕಾಸಿನ ಜವಾಬ್ದಾರಿಯನ್ನು ಬೆಂಬಲಿಸಲು ಮತ್ತು ಆರ್ಥಿಕ ಚೇತರಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಪ್ರಸ್ತುತ ದರಗಳನ್ನು ಸ್ಥಿರವಾಗಿರಿಸುವ ನಿರ್ಧಾರವನ್ನು ಮಾಡಬಹುದು ಎಂದು ಕೂಡಾ ಹೇಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
* ಹಣಕಾಸಿನ ವರ್ಷದಲ್ಲಿ ಕನಿಷ್ಠ ಡೆಪಾಟಿಸ್ 500 ರೂಪಾಯಿ ಆಗಿದೆ, ಗರಿಷ್ಠ ಡೆಪಾಸಿಟ್ 1,50,000 ರೂಪಾಯಿ ಆಗಿದೆ.
* 3ನೇ ಹಣಕಾಸು ವರ್ಷದಿಂದ 6ನೇ ಹಣಕಾಸು ವರ್ಷದವರೆಗೆ ಸಾಲ ಸೌಲಭ್ಯ ಲಭ್ಯವಿದೆ.
* 7ನೇ ಹಣಕಾಸು ವರ್ಷದ ಬಳಿಕ ಪ್ರತಿ ವರ್ಷವು ಹಣ ವಿತ್‌ಡ್ರಾ ಮಾಡುವ ಅವಕಾಶವಿದೆ.
* ಖಾತೆಯನ್ನು ತೆರೆದ ವರ್ಷದ ಅಂತ್ಯದಿಂದ ಹದಿನೈದು ಸಂಪೂರ್ಣ ಆರ್ಥಿಕ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಖಾತೆಯು ಮೆಚ್ಯೂರಿಟಿಯಾಗುತ್ತದೆ.
* ಮೆಚ್ಯೂರಿಟಿ ನಂತರ 5 ವರ್ಷಗಳ ಅವಧಿಗೆ ಖಾತೆಯನ್ನು ವಿಸ್ತರಿಸಬಹುದು.
* ಮೆಚ್ಯೂರಿಟಿ ಬಳಿಕ ಅನಿರ್ದಿಷ್ಟ ಅವಧಿಯವರೆಗೆ ಖಾತೆಯ ಮೊತ್ತವನ್ನು ವಿತ್‌ಡ್ರಾ ಮಾಡದೆ ಹಾಗೆಯೇ ಉಳಿಸಿಕೊಳ್ಳಬಹುದು, ಬಡ್ಡಿದರ ಲಭ್ಯವಾಗುತ್ತದೆ.
* ಬ್ಯಾಂಕ್‌ನ ಯಾವುದೇ ಆದೇಶ ಅಥವಾ ತೀರ್ಪಿಗೆ ಪಿಪಿಎಫ್ ಖಾತೆಯ ಮೊತ್ತವು ಒಳಪಡುವುದಿಲ್ಲ.
* ಐಟಿ ಕಾಯ್ದೆಯ ಸೆಕ್ಷನ್ 80-C ಅಡಿಯಲ್ಲಿ ಡೆಪಾಸಿಟ್ ಕಡಿತಕ್ಕೆ ಅರ್ಹತೆ ಪಡೆಯುತ್ತದೆ.
* ಖಾತೆಯಲ್ಲಿ ಗಳಿಸಿದ ಬಡ್ಡಿಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ -10 ರ ಅಡಿಯಲ್ಲಿ ಆದಾಯ ತೆರಿಗೆಯಿಂದ ಮುಕ್ತವಾಗಿದೆ.


Click it and Unblock the Notifications