ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದಂತೆ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡುತ್ತಾ ಸಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಈಗ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಇಳಿಕೆ ಮಾಡುವ ಆಶ್ಚರ್ಯಕರ ನಿರ್ಧಾರವನ್ನು ಕೈಗೊಂಡಿದೆ.
2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಕಡಿತಗೊಳಿಸಿದೆ. ಈ ನೂತನ ಬಡ್ಡಿದರವು ಜೂನ್ 1, 2023ರಿಂದ ಜಾರಿಗೆ ಬರಲಿದೆ. ಒಂದು ವರ್ಷದ ಡೆಪಾಸಿಟ್ ಮೇಲೆ 5 ಮೂಲಾಂಕ ಬಡ್ಡಿದರವನ್ನು ಪಿಎನ್‌ಬಿ ಕಡಿತಗೊಳಿಸಿದೆ. ಇದರಿಂದಾಗಿ ಬಡ್ಡಿದರವು ಶೇಕಡ 6.75ಕ್ಕೆ ತಲುಪಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೂತನ ಬಡ್ಡಿದರ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7 ದಿನದಿಂದ 10 ವರ್ಷಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 3.50ರಿಂದ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಇದೇ ಅವಧಿಯ ಎಫ್‌ಡಿ ಮೇಲೆ ಪಿಎನ್‌ಬಿ ಶೇಕಡ 4ರಿಂದ ಶೇಕಡ 7.75ರಷ್ಟು ಬಡ್ಡಿದರವನ್ನು ನೀಡುತ್ತದೆ.
ಪಿಎನ್‌ಬಿ ಬಡ್ಡಿದರ ಪರಿಶೀಲಿಸಿ
7-14 ದಿನಗಳು: 3.50 ಶೇಕಡ ಬಡ್ಡಿದರ
15-29 ದಿನಗಳು: 3.50 ಶೇಕಡ ಬಡ್ಡಿದರ
30-45 ದಿನಗಳು: 3.50 ಶೇಕಡ ಬಡ್ಡಿದರ
46-90 ದಿನಗಳು: 4.50 ಶೇಕಡ ಬಡ್ಡಿದರ
91-179 ದಿನಗಳು: 4.50 ಶೇಕಡ ಬಡ್ಡಿದರ
180-270 ದಿನಗಳು: 5.50 ಶೇಕಡ ಬಡ್ಡಿದರ
271 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ದಿನಗಳು: 5.80 ಶೇಕಡ ಬಡ್ಡಿದರ
1 ವರ್ಷ: 6.75 ಶೇಕಡ ಬಡ್ಡಿದರ
1 ವರ್ಷಕ್ಕಿಂತ ಮೇಲ್ಪಟ್ಟು 443 ದಿನಗಳು: 6.80 ಶೇಕಡ ಬಡ್ಡಿದರ
444 ದಿನಗಳು: 7.25 ಶೇಕಡ ಬಡ್ಡಿದರ
445-665 ದಿನಗಳು: 6.80 ಶೇಕಡ ಬಡ್ಡಿದರ
666 ದಿನಗಳು: 7.05 ಶೇಕಡ ಬಡ್ಡಿದರ
667 ದಿನದಿಂದ 2 ವರ್ಷದವರೆಗೆ: 6.80 ಶೇಕಡ ಬಡ್ಡಿದರ
2 ವರ್ಷಕ್ಕಿಂತ ಮೇಲ್ಪಟ್ಟು 3 ವರ್ಷದವರೆಗೆ: 7 ಶೇಕಡ ಬಡ್ಡಿದರ
3 ವರ್ಷಕ್ಕಿಂತ ಮೇಲ್ಪಟ್ಟು 5 ವರ್ಷದವರೆಗೆ: 6.50 ಶೇಕಡ ಬಡ್ಡಿದರ
5 ವರ್ಷಕ್ಕಿಂತ ಮೇಲ್ಪಟ್ಟು 10 ವರ್ಷದವರೆಗೆ: 6.50 ಶೇಕಡ ಬಡ್ಡಿದರ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲದ ಬಡ್ಡಿದರ ಪರಿಷ್ಕರಣೆ
ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡಾ ತನ್ನ ಎಂಸಿಎಲ್‌ಆರ್ ಅನ್ನು ಎಲ್ಲ ಅವಧಿಗೆ ಹತ್ತು ಮೂಲಾಂಕ ಹೆಚ್ಚಳಗೊಳಿಸಿದೆ. ಪರಿಷ್ಕರಣೆಯ ಬಳಿಕ ಬ್ಯಾಂಕ್‌ನಲ್ಲಿ ಓವರ್‌ನೈಟ್ ಎಂಸಿಎಲ್‌ಆರ್ ಶೇಕಡ 8ರಿಂದ ಶೇಕಡ 8.10ಕ್ಕೆ ಏರಿಕೆಯಾಗಿದೆ.
ಒಂದು ತಿಂಗಳು, ಮೂರು ತಿಂಗಳು ಮತ್ತು ಆರು ತಿಂಗಳ ಎಂಸಿಎಲ್‌ಆರ್ ಕೂಡಾ 10 ಮೂಲಾಂಕ ಏರಿಕೆ ಮಾಡಲಾಗಿದ್ದು ಕ್ರಮವಾಗಿ ಶೇಕಡ 8.20, ಶೇಕಡ 8.30, ಶೇಕಡ 8.50 ಆಗಿದೆ. ಒಂದು ವರ್ಷ ಹಾಗೂ ಮೂರು ವರ್ಷದ ಎಂಸಿಎಲ್‌ಆರ್ ಕ್ರಮವಾಗಿ ಶೇಕಡ 8.60 ಮತ್ತು ಶೇಕಡ 8.90 ಇದೆ. ಇನ್ನು ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಶೇಕಡ 8.75ರಿಂದ ಶೇಕಡ 9.00ಕ್ಕೆ ಏರಿಕೆಯಾಗಿದೆ.
ಏನಿದು ಎಂಸಿಎಲ್‌ಆರ್?
ಏಪ್ರಿಲ್ 1, 2016ರ ಬಳಿಕ ಎಲ್ಲ ಸಾಲದ ಬಡ್ಡಿದರವು ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್‌ಆರ್ ಆಧಾರಿತವಾಗಿದೆ. ಹಣಕಾಸು ಸಂಸ್ಥೆಗಳು ವಿಧಿಸಬಹುದಾದ ಕನಿಷ್ಠ ಬಡ್ಡಿದರವೇ ಎಂಸಿಎಲ್‌ಆರ್ ಆಗಿದೆ. ಸಾಲಕ್ಕೆ ಎಷ್ಟು ಕನಿಷ್ಠ ಬಡ್ಡಿದರ ಎಂಬುವುದನ್ನು ಎಂಸಿಎಲ್‌ಆರ್ ಪ್ರತಿನಿಧಿಸುತ್ತದೆ.


Click it and Unblock the Notifications