ಟೆಲಿಕಾಂ ವಲಯದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಸ್ಮಾಲ್ ಕ್ಯಾಪ್ ಸ್ಟಾಕ್ ಅವಂಟೆಲ್ ಲಿಮಿಟೆಡ್ ಸೆಪ್ಟೆಂಬರ್ 28 ರಂದು ತನ್ನ ನಿರ್ದೇಶಕರ ಮಂಡಳಿಯ ಸಭೆಯನ್ನು ಘೋಷಣೆ ಮಾಡಿದೆ. ಆಡಿಟ್ ಆದ ಹಣಕಾಸು ಫಲಿತಾಂಶಗಳು, ಬೋನಸ್ ಷೇರುಗಳು ಮೊದಲಾದವುಗಳ ಚರ್ಚೆಗೆ ಅವಂಟೆಲ್ ಲಿಮಿಟೆಡ್ ನಿರ್ದೇಶಕರ ಮಂಡಳಿಯು ಅಕ್ಟೋಬರ್ 9 ರಂದು ಸಭೆ ನಡೆಸಲಿದೆ ಎಂದು ಘೋಷಿಸಿದೆ.
ಅವಂಟೆಲ್ ಲಿಮಿಟೆಡ್ ಷೇರು ಹೂಡಿಕೆದಾರರಿಗೆ ಆರು ತಿಂಗಳ ಅವಧಿಯಲ್ಲಿ ಸುಮಾರು ಶೇಕಡ 218 ರಷ್ಟು ಆದಾಯವನ್ನು ನೀಡಿದೆ. ಕಳೆದ 2 ವರ್ಷಗಳಲ್ಲಿ ಈ ಷೇರು ಶೇಕಡ 420 ರಷ್ಟು ಜಿಗಿತ ಕಂಡಿದೆ. ಅವಂಟೆಲ್ ಲಿಮಿಟೆಡ್ ಸ್ಟಾಕ್ ಈ ಸಮಯಕ್ಕೆ ಶೇಕಡ 2.94 ರಷ್ಟು ಏರಿಕೆಯಾಗಿ, 233.20 ರೂಪಾಯಿ ಆಗಿದೆ. ಇದಕ್ಕೂ ಮೊದಲು ವಹಿವಾಟಿನ ನಡುವೆ ಸ್ಟಾಕ್ ಶೇಕಡ 3.49 ರಷ್ಟು ಜಿಗಿದು 234.45 ರೂಪಾಯಿಗೆ ತಲುಪಿದೆ. ಇಲ್ಲಿದೆ ವಿವರ ಮುಂದೆ ಓದಿ....

ಮುಂದಿನ ತಿಂಗಳು ತ್ರೈಮಾಸಿಕ ವರದಿ, ಬೋನಸ್ ಷೇರು ಘೋಷಣೆ
ಕಂಪನಿಯ ಬಿಎಸ್‌ಇ ಫೈಲಿಂಗ್ ಪ್ರಕಾರ, "ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ನಿಯಮಗಳು, 2015 ರ ನಿಯಮಾವಳಿ 29 ರ ಪ್ರಕಾರ, ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯು ಸೋಮವಾರ, ಅಕ್ಟೋಬರ್ 9, 2023 ರಂದು ನಡೆಯಲಿದೆ," ಎಂದು ತಿಳಿಸಿದೆ.
ಹಾಗೆಯೇ ಈ ಸಭೆ ನಡೆಸಲು ಮುಖ್ಯವಾದ ಎರಡು ಕಾರಣಗಳನ್ನು ಉಲ್ಲೇಖಿಸಿದೆ. "ಮೊದಲನೆಯದಾಗಿ ಸೆಪ್ಟೆಂಬರ್ 30, 2023 ರಂದು ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ಆಡಿಟ್ ಆಗದ ಹಣಕಾಸು ಫಲಿತಾಂಶಗಳನ್ನು ಪರಿಶೀಲಿಸಲು ಮತ್ತು ಅನುಮೋದಿಸಲು ಈ ಸಭೆ ಕರೆಯಲಾಗಿದೆ. ಎರಡನೆಯದಾಗಿ ಬೋನಸ್ ಷೇರುಗಳ ವಿತರಣೆ ಪ್ರಸ್ತಾಪ ಮಾಡಲು ಈ ಸಭೆಯನ್ನು ಕರೆಯಲಾಗಿದೆ," ಎಂದು ಬಿಎಸ್‌ಇ ಫೈಲಿಂಗ್‌ನಲ್ಲಿ ಹೇಳಿದೆ.
ಅವಂಟೆಲ್ ಷೇರುಗಳ ರಿಟರ್ನ್ ಎಷ್ಟಿದೆ?
ಅವಂಟೆಲ್ ಷೇರುಗಳ ಪ್ರಸ್ತುತ ಮಾರುಕಟ್ಟೆ ಬೆಲೆ ಬಿಎಸ್‌ಇಯಲ್ಲಿ 234.45 ರೂಪಾಯಿ ಆಗಿದೆ. ಈ ಸ್ಟಾಕ್‌ನ 52 ವಾರಗಳ ಗರಿಷ್ಠ ಬೆಲೆಯು ಪ್ರತಿ ಷೇರಿಗೆ 273.70 ರೂಪಾಯಿ ಆಗಿದೆ. 52 ವಾರಗಳ ಕನಿಷ್ಠ ಬೆಲೆಯು ಪ್ರತಿ ಷೇರಿಗೆ 56.70 ರೂಪಾಯಿ ಆಗಿದೆ. ಕಂಪನಿಯು 1901.15 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಅವಂಟೆಲ್ ಲಿಮಿಟೆಡ್ ಷೇರುಗಳು ಈ ವರ್ಷದ ಆರಂಭದಿಂದ ಈವರೆಗೆ ಶೇಕಡ 205 ರಷ್ಟು ಜಿಗಿತ ಕಂಡಿದೆ. ಕಳೆದ 1 ವರ್ಷದಲ್ಲಿ ಶೇಕಡ 309 ರಷ್ಟು ಗಳಿಕೆ ಕಂಡಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಶೇಕಡ 470 ರಷ್ಟು ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ ಶೇಕಡ 1037 ರಷ್ಟು ಲಾಭವನ್ನು ನೀಡಿದೆ. ಕಳೆದ 5 ವರ್ಷಗಳಲ್ಲಿ, ಅವಂಟೆಲ್ ಷೇರು ಸುಮಾರು ಶೇಕಡ 1729.82 ರಷ್ಟು ಲಾಭವನ್ನು ಹೂಡಿಕೆದಾರರಿಗೆ ನೀಡಿದೆ.
ಅವಂಟೆಲ್ ಲಿಮಿಟೆಡ್ ತ್ರೈಮಾಸಿಕ ವರದಿ
ಜೂನ್ 30, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ನಿವ್ವಳ ಮಾರಾಟವನ್ನು 68.95 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದೆ. ಜೂನ್ 2022ರ ವರದಿಗೆ ಹೋಲಿಕೆ ಮಾಡಿದಾಗ ಜೂನ್ 30, 2023ರ ತ್ರೈಮಾಸಿಕದಲ್ಲಿ ನಿವ್ವಳ ಮಾರಾಟವು ಸುಮಾರು ಶೇಕಡ 155.47 ರಷ್ಟು ಏರಿಕೆಯಾಗಿದೆ. ಒಂದು ವರ್ಷದ ಇದೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 26.99 ಕೋಟಿ ರೂಪಾಯಿ ಆಗಿದೆ.
ತ್ರೈಮಾಸಿಕ ನಿವ್ವಳ ಲಾಭವು ಜೂನ್ 2023 ರಲ್ಲಿ 8.01 ಕೋಟಿ ರೂಪಾಯಿ ಆಗಿದೆ. ಜೂನ್ 2022ಕ್ಕೆ ಹೋಲಿಕೆ ಮಾಡಿದಾಗ, ಇದು ಸುಮಾರು ಶೇಕಡ 82.84 ರಷ್ಟು ಹೆಚ್ಚಾಗಿದೆ. ಈ ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 4.38 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಘೋಷಣೆ ಮಾಡಲಾಗಿದೆ. ಇಬಿಐಟಿಡಿಎ ಜೂನ್ 2022 ರಲ್ಲಿ 7.48 ಕೋಟಿ ರೂಪಾಯಿ ಆಗಿದ್ದು, ಜೂನ್ 2023 ರಲ್ಲಿ ಶೇಕಡ 93.32 ರಷ್ಟು ಜಿಗಿದು 14.46 ಕೋಟಿ ರೂಪಾಯಿ ಆಗಿದೆ.
ಅವಂಟೆಲ್ ಲಿಮಿಟೆಡ್ ಕುರಿತು ಮಾಹಿತಿ
"ಅವಂಟೆಲ್ ಹಡಗುಗಳು/ ಜಲಾಂತರ್ಗಾಮಿಗಳು/ ವಿಮಾನಗಳು/ ಹೆಲಿಕಾಪ್ಟರ್‌ಗಳು ಸೇರಿದಂತೆ ರಕ್ಷಣಾ ವೇದಿಕೆಗಳಿಗೆ ಎಂಐಎಲ್ ಮಾನದಂಡಗಳನ್ನು ಅನುಸರಿಸುವ ಉತ್ಪನ್ನಗಳ ಸೇವೆಯನ್ನು ನೀಡುತ್ತದೆ," ಎಂದು ಅಧಿಕೃತ ವೆಬ್‌ಸೈಟ್ ತಿಳಿಸಿದೆ.
ಇಲ್ಲಿ ಗಮನಿಸಿ: ಸ್ಟಾಕ್ ಕೇವಲ ಬೋನಸ್ ಷೇರು, Q2 ಫಲಿತಾಂಶವನ್ನು ಮಾತ್ರ ಹೈಲೈಟ್ ಮಾಡುತ್ತಿದೆ. ನಾವು ಈ ಸ್ಟಾಕ್ ಅನ್ನು ಖರೀದಿಸಲು, ಮಾರಾಟ ಮಾಡಲು ಅಥವಾ ಹೋಲ್ಡ್ ಮಾಡಲು ಶಿಫಾರಸು ಮಾಡುವುದಿಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications