ಆರ್ಥಿಕ ಅನಿಶ್ಚಿತತೆಗಳು ಹೆಚ್ಚಿರುವಾಗ ಅಪಾಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಟಾಕ್ ಮಾರುಕಟ್ಟೆಯ ಹೂಡಿಕೆದಾರರು ತಮ್ಮ ಹೂಡಿಕೆ ಮೊತ್ತವನ್ನು ಬೇರೆ ಬೇರೆ ಸ್ಟಾಕ್‌ಗಳ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಆದರೆ ನಮ್ಮಲ್ಲಿ ಹೆಚ್ಚಿನವರ ಮುಂದೆ ಬರುವ ಒಂದು ಪ್ರಮುಖ ಪ್ರಶ್ನೆಯೆಂದರೆ, ಯಾವ ಸ್ಟಾಕ್‌ಗಳು ನಮಗೆ ದೀರ್ಘ ಕಾಲದವರೆಗೆ ಹೆಚ್ಚಿನ ಆದಾಯವನ್ನು ನೀಡಬಲ್ಲವು ಎಂಬುವುದಾಗಿದೆ.
ಈ ಲೇಖನದಲ್ಲಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಆಕರ್ಷಕ ಆದಾಯವನ್ನು ನೀಡಿದ ಮೂರು ರೈಲ್ವೆ ಸ್ಟಾಕ್‌ಗಳ ಕುರಿತು ನಾವು ವಿವರಣೆ ನೀಡಿದ್ದೇವೆ. ಈ ಸ್ಟಾಕ್‌ಗಳನ್ನು ಆಯ್ಕೆಮಾಡುವಾಗ ನಾವು ಕಳೆದ ಒಂದು ವರ್ಷದಲ್ಲಿ ಸ್ಟಾಕ್‌ನ ಕಾರ್ಯಕ್ಷಮತೆ, ಹಣಕಾಸು ಮತ್ತು ವರ್ಷದಿಂದ ಈ ದಿನಾಂಕದವರೆಗಿನ ರಿಟರ್ನ್ ಅನ್ನು ಮಾನದಂಡವಾಗಿ ಪರಿಗಣಿಸಿದ್ದೇವೆ.

ಈ ಮೂರು ಪ್ರಮುಖ ಸ್ಟಾಕ್‌ಗಳ ಪಟ್ಟಿಯಲ್ಲಿ ನಾವು ಮೂರು ರೈಲ್ವೆ ಸ್ಟಾಕ್‌ಗಳನ್ನು ಸೇರಿಸಬಹುದು. ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್), ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಎಫ್‌ಸಿ) ಮತ್ತು ಇರ್ಕಾನ್ ಇಂಟರ್‌ನ್ಯಾಷನಲ್ (ಐಆರ್‌ಸಿಒಎನ್) ಈ ಮೂರು ಸ್ಟಾಕ್‌ಗಳು ಆಗಿದೆ.
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್):
ಮಂಗಳವಾರ, ರೈಲ್ ವಿಕಾಸ್ ನಿಗಮ್ ಲಿಮಿಟೆಡ್‌ನ ಷೇರಿನ ಬೆಲೆ ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಪ್ರತಿ ಷೇರಿಗೆ ಶೇಕಡ 1.17 ರಷ್ಟು ಹೆಚ್ಚಾಗಿ 168.65 ರೂಪಾಯಿ ಆಗಿದೆ. ಆರ್‌ವಿಎನ್‌ಎಲ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಸುಮಾರು ಶೇಕಡ 401 ರಷ್ಟು ಗಳಿಸಿದೆ. ಆದರೆ ಸ್ಟಾಕ್ ಈ ವರ್ಷದ ಆರಂಭದಿಂದ ಈ ದಿನದವರೆಗೆ ಶೇಕಡ 146 ರಷ್ಟು ಹೆಚ್ಚಾಗಿದೆ. ರೈಲ್ ವಿಕಾಸ್ ನಿಗಮ್ ಅಂದಾಜು ಮಾರುಕಟ್ಟೆ ಮೌಲ್ಯ 35,143.01 ಕೋಟಿ ರೂಪಾಯಿ ಆಗಿದೆ.
ಹಣಕಾಸು ವರ್ಷದ 2024ರಲ್ಲಿ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡ 15 ರಷ್ಟು ಜಿಗಿತ ದಾಖಲಿಸಿದೆ. ಈ ಹಿಂದಿನ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ 297.6 ಕೋಟಿ ರೂಪಾಯಿಯಷ್ಟಿದ್ದ ನಿವ್ವಳ ಲಾಭವು, ಸುಮಾರು 343 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಾರ್ಯಾಚರಣೆಯ ಆದಾಯವು ಹಣಕಾಸು ವರ್ಷ 2023ರ ಮೊದಲ ತ್ರೈಮಾಸಿಕದಲ್ಲಿ 5,571.5 ಕೋಟಿ ರೂಪಾಯಿ ಆಗಿದ್ದು, ಅದು ಶೇಕಡ 20 ರಷ್ಟು ಜಿಗಿದು 4,640.7 ಕೋಟಿ ರೂಪಾಯಿ ಆಗಿದೆ.
ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಎಫ್‌ಸಿ)
ಐಆರ್‌ಎಫ್‌ಸಿ ಷೇರುಗಳು ಇಂದು ಮಧ್ಯಾಹ್ನ 2:02 ಕ್ಕೆ ಶೇಕಡ 0.86 ರಷ್ಟು ಇಳಿಕೆಯಾಗಿ, ಪ್ರತಿ ಷೇರಿಗೆ 75.30 ರೂಪಾಯಿ ಆಗಿದೆ. ಕಳೆದ ಒಂದು ವರ್ಷದಲ್ಲಿ ಐಆರ್‌ಎಫ್‌ಸಿ ಷೇರುಗಳು ಸುಮಾರು ಶೇಕಡ 256 ರಷ್ಟು ಆದಾಯವನ್ನು ಗಳಿಸಿದೆ. ಇನ್ನು ಸ್ಟಾಕ್ ಈ ವರ್ಷದ ಆರಂಭದಿಂದ ಈ ದಿನದವರೆಗೆ ಶೇಕಡ 128ರಷ್ಟು ಹೆಚ್ಚಾಗಿದೆ.
ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ, ಕಂಪನಿಯ ಒಟ್ಟು ಆದಾಯವು ಶೇಕಡ 18.7 ರಷ್ಟು ಏರಿಕೆಯಾಗಿದೆ. ಹಣಕಾಸು ವರ್ಷ 2023ರ ಮೊದಲ ತ್ರೈಮಾಸಿಕದಲ್ಲಿ 5,627.4 ಕೋಟಿ ರೂಪಾಯಿ ಆಗಿದ್ದ ಆದಾಯವು ನಂತರದ ವರ್ಷದಲ್ಲಿ 6,679.2 ಕೋಟಿ ರೂಪಾಯಿ ಆಗಿದೆ.
ಇರ್ಕಾನ್ ಇಂಟರ್‌ನ್ಯಾಷನಲ್ (ಐಆರ್‌ಸಿಒಎನ್)
ಬುಧವಾರದ ಇಂಟ್ರಾಡೇ ವಹಿವಾಟಿನಲ್ಲಿ ಇರ್ಕಾನ್ ಇಂಟರ್‌ನ್ಯಾಶನಲ್ ಷೇರುಗಳು ಶೇಕಡ 1.03 ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ 142.55 ರೂಪಾಯಿ ಆಗಿದೆ. ಕಳೆದ ಒಂದು ವರ್ಷದಲ್ಲಿ ಇರ್ಕಾನ್ ಇಂಟರ್‌ನ್ಯಾಷನಲ್ ಷೇರು ಬೆಲೆ ಶೇಕಡ 259 ರಷ್ಟು ಗಳಿಸಿದೆ. ಸ್ಟಾಕ್ ಈ ವರ್ಷದ ಆರಂಭದಿಂದ ಈ ದಿನಾಂಕದವರೆಗೆ ಶೇಕಡ 139 ರಷ್ಟು ಹೆಚ್ಚಾಗಿದೆ.
ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ನಿವ್ವಳ ಲಾಭವು ಶೇಕಡ 29.6 ರಷ್ಟು ಏರಿಕೆಯಾಗಿ 187 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 144.6 ಕೋಟಿ ರೂಪಾಯಿಗಳಿಗೆ ತಲುಪಿದೆ. ಸರ್ಕಾರಿ ಸ್ವಾಮ್ಯದ ಎಂಜಿನಿಯರಿಂಗ್ ಮತ್ತು ನಿರ್ಮಾಣ ಕಂಪನಿಯ ಆದಾಯವು ಶೇಕಡ 35.7 ರಷ್ಟು ಏರಿಕೆಯಾಗಿ, 2,712.2 ಕೋಟಿ ರೂಪಾಯಿಗೆ ತಲುಪಿದೆ. ಈ ಹಿಂದಿನ ವರ್ಷದಲ್ಲಿ ಈ ಆದಾಯವು 2,001.9 ಕೋಟಿ ರೂಪಾಯಿ ಆಗಿದೆ.
(ಲೇಖನವು ಕೇವಲ ಗುಡ್‌ರಿಟರ್ನ್ಸ್ ಇಂಗ್ಲೀಷ್‌ನ ಬರಹಗಾರರ ವೈಯಕ್ತಿಕ ಅಭಿಪ್ರಾಯವನ್ನು ಆಧರಿಸಿದೆ. ಇದನ್ನು ಹೂಡಿಕೆ ಸಲಹೆಯಾಗಿ ಪರಿಗಣಿಸಬಾರದು ಎಂದು ವಿನಂತಿ. ಯಾವುದೇ ಷೇರು ಮಾರುಕಟ್ಟೆ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರು ತಮ್ಮದೇ ಆದ ಸಂಶೋಧನೆಯನ್ನು ಮಾಡಬೇಕು)
More From GoodReturns

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Stock Market Crash: ಯುದ್ಧದ ಎಫೆಕ್ಟ್, ಷೇರು ಮಾರುಕಟ್ಟೆ ಕುಸಿತ; ಒಂದೇ ದಿನದಲ್ಲಿ 9 ಲಕ್ಷ ಕೋಟಿ ನಷ್ಟ!

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications