ಭಾರತೀಯ ರೈಲ್ವೆಯು ಹಲವಾರು ಕಾರಣಗಳಿಂದಾಗಿ ರೈಲುಗಳನ್ನು ರದ್ದು ಮಾಡುತ್ತಾ ಇರುತ್ತದೆ. ಅದರಲ್ಲಿ ಮುಖ್ಯವಾಗಿ ಕಾಮಗಾರಿ ಕಾರಣವಾಗಿರುತ್ತದೆ. ಈಗ ಕರ್ನಾಟಕ ರಾಜ್ಯದಲ್ಲಿಯೂ ಕೆಲವೆಡೆ ರೈಲು ರದ್ದು ಮಾಡಲಾಗಿದೆ.
ಪ್ಲಾಟ್‌ಫಾರ್ಮ್ 2 ಮತ್ತು 3 ರ ಅಗಲೀಕರಣ ಮತ್ತು ರಸ್ತೆ ಸಂಖ್ಯೆ 4 ರ ಟಿಆರ್‌ಡಿ ಮತ್ತು ಪಿ.ವೇ ಕಾಮಗಾರಿಗಾಗಿ ಬೆಂಗಳೂರು ಕಂಟೋನ್ಮೆಂಟ್ ಯಾರ್ಡ್‌ನಲ್ಲಿ ರಸ್ತೆ ಸಂಖ್ಯೆ 4, 5 ಮತ್ತು 6 ರ ಅಮಾನತನ್ನು ನವೆಂಬರ್ 29 ರವರೆಗೆ ವಿಸ್ತರಿಸಲಾಗಿದೆ. ಈ ಕಾರಣ ನೈಋತ್ಯ ರೈಲ್ವೆ ಕೆಲವು ರೈಲುಗಳನ್ನು ರದ್ದುಗೊಳಿಸಿದೆ.

ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಗೆ ಸಂಪರ್ಕ ಕಲ್ಪಿಸುವ ಕಾಲು ಮೇಲ್ಸೇತುವೆ ಸಂಖ್ಯೆ 3 ನಿರ್ಮಾಣಕ್ಕಾಗಿ ರಸ್ತೆ ಸಂಖ್ಯೆ 4 ಮತ್ತು 5 ಅನ್ನು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ರದ್ದು ಮಾಡಲಾಗುತ್ತದೆ. ಯಾವೆಲ್ಲ ರೈಲುಗಳು ರದ್ದು?, ಈ ಕೆಳಗಿದೆ ಮಾಹಿತಿ ಮುಂದೆ ಓದಿ..
ರದ್ದಾದ ರೈಲುಗಳ ವಿವರ
* ರೈಲು ಸಂಖ್ಯೆ 06531/06532 ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್ ನವೆಂಬರ್ 29 ರವರೆಗೆ ಎರಡೂ ಕಡೆಯಿಂದ ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 06533/06534 ದೇವನಹಳ್ಳಿ-ಯಲಹಂಕ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಲ್ಟ್ ಮೆಮು ಸ್ಪೆಷಲ್ ಅನ್ನು ನವೆಂಬರ್ 29 ರವರೆಗೆ ಎರಡೂ ಕಡೆಯಿಂದ ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 06535/06536 ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ ಮೆಮು ಸ್ಪೆಷಲ್ ಅನ್ನು ನವೆಂಬರ್ 29 ರವರೆಗೆ ಎರಡೂ ಕಡೆಯಿಂದ ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 06537/06538 ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ ಮೆಮು ಸ್ಪೆಷಲ್ ಅನ್ನು ನವೆಂಬರ್ 29 ರವರೆಗೆ ಎರಡೂ ಕಡೆಯಿಂದ ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 06539/06540 ದೇವನಹಳ್ಳಿ-ಯಲಹಂಕ-ದೇವನಹಳ್ಳಿ ಮೆಮು ಸ್ಪೆಷಲ್ ಅನ್ನು ನವೆಂಬರ್ 29 ರವರೆಗೆ ಎರಡೂ ಕಡೆಯಿಂದ ರದ್ದುಗೊಳಿಸಲಾಗಿದೆ.
ಯಾವೆಲ್ಲ ರೈಲುಗಳು ಭಾಗಶಃ ರದ್ದು?
ನವೆಂಬರ್ 24 ಮತ್ತು 25 ರಂದು ಮಂಗಳೂರು ಭಾಗದಲ್ಲಿ ಕೆಲವು ರೈಲುಗಳನ್ನು ರದ್ದು ಮಾಡಲಾಗಿದೆ. ನೈಋತ್ಯ ರೈಲ್ವೆಯು ಕನ್ಯಾಕುಮಾರಿ ಯಾರ್ಡ್ ಅನ್ನು ಮರುನಿರ್ಮಾಣ ಮಾಡಲು ಕೆಲವು ರೈಲುಗಳನ್ನು ಭಾಗಶಃ ರದ್ದತಿಗೆ ಸೂಚನೆ ನೀಡಿದೆ.
ರೈಲು ಸಂಖ್ಯೆ 16526 ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿನಿಂದ ನವೆಂಬರ್ 25 ರಿಂದ ಡಿಸೆಂಬರ್ 1 ರವರೆಗೆ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಡಿಸೆಂಬರ್ 3 ರಂದು ನಾಗರಕೋಯಿಲ್ ಮತ್ತು ಕನ್ಯಾಕುಮಾರಿ ನಡುವೆ ಭಾಗಶಃ ರದ್ದಾಗಲಿದೆ. ಅದರಂತೆ, ಈ ರೈಲು ಕನ್ಯಾಕುಮಾರಿಯಲ್ಲಿ ಬದಲಾಗಿ ನಾಗರಕೋಯಿಲ್‌ನಲ್ಲಿ ಅಲ್ಪಾವಧಿಗೆ ಕೊನೆಯಾಗುತ್ತದೆ.
ರೈಲು ಸಂಖ್ಯೆ 16526 ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಡಿಸೆಂಬರ್ 2 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಪ್ರಯಾಣವನ್ನು ಪ್ರಾರಂಭಿಸುತ್ತದೆ. ತಿರುವನಂತಪುರಂ ಸೆಂಟ್ರಲ್ ಮತ್ತು ಕನ್ಯಾಕುಮಾರಿ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಅದರಂತೆ, ಈ ರೈಲು ಕನ್ಯಾಕುಮಾರಿಯಲ್ಲಿ ಬದಲಾಗಿ ತಿರುವನಂತಪುರಂ ಸೆಂಟ್ರಲ್‌ನಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ.
ರೈಲು ಸಂಖ್ಯೆ 16525 ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಕನ್ಯಾಕುಮಾರಿ ಮತ್ತು ತಿರುವನಂತಪುರಂ ಸೆಂಟ್ರಲ್ ನಡುವೆ ಡಿಸೆಂಬರ್ 4 ರಂದು ಭಾಗಶಃ ರದ್ದುಗೊಳ್ಳುತ್ತದೆ. ಅದರಂತೆ, ಈ ರೈಲು ಕನ್ಯಾಕುಮಾರಿಯಿಂದ ಬದಲಾಗಿ ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡಲಿದೆ.


Click it and Unblock the Notifications