ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾರ್ಗಸೂಚಿಗಳು ಜುಲೈ 1, 2022 ರಿಂದ ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಅನ್ವಯವಾಗಲಿದೆ.
ಇನ್ನು ಇದರೊಂದಿಗೆ ಹೊಸ ಮಾರ್ಗಸೂಚಿಗಳನ್ನು ಅನುಸರಿಸದ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಆರ್‌ಬಿಐ ದಂಡವನ್ನು ಘೋಷಿಸಿದೆ. ಯಾವುದೇ ಬ್ಯಾಂಕ್ ಗ್ರಾಹಕರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಅವರ ಒಪ್ಪಿಗೆಯಿಲ್ಲದೆ ನೀಡಿದರೆ ಅಥವಾ ಅಪ್‌ಗ್ರೇಡ್ ಮಾಡಿದರೆ, ಆರ್‌ಬಿಐ ದಂಡವನ್ನು ವಿಧಿಸುತ್ತದೆ.
ನಿಯಮದ ಪ್ರಕಾರ ಬ್ಯಾಂಕ್‌ಗಳು 100 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ವ್ಯವಹಾರವನ್ನು ಕೈಗೊಳ್ಳಲು ಆರ್‌ಬಿಐ ಅನುಮತಿ ನೀಡಿದೆ. ಬ್ಯಾಂಕುಗಳು ವ್ಯವಹಾರವನ್ನು ತಾವೇ ಅಥವಾ ಇತರ ಕಾರ್ಡ್-ವಿತರಿಸುವ ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳ ಪಾಲುದಾರಿಕೆಯಲ್ಲಿ ಕೈಗೊಳ್ಳಬಹುದು.

ಇನ್ನು ಪ್ರಮುಖವಾಗಿ ಆರ್‌ಬಿಐ ನಿಯಂತ್ರಕದಿಂದ ಅನುಮೋದನೆ ಪಡೆದ ನಂತರ ಕ್ರೆಡಿಟ್ ಕಾರ್ಡ್ ವ್ಯವಹಾರಗಳನ್ನು ನಡೆಸಲು ನಿಷ್ಠ 100 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿರುವ ನಗರ ಕೋಆಪರೇಟಿವ್ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.
ರೂ 1000 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ತಮ್ಮ ಪ್ರಾಯೋಜಕ ಬ್ಯಾಂಕ್ ಅಥವಾ ಇತರ ಬ್ಯಾಂಕ್‌ಗಳ ಸಹಯೋಗದೊಂದಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲು ಅನುಮತಿ ಇದೆ. ಆರ್‌ಬಿಐ ಬಿಡುಗಡೆ ಮಾಡಿರುವ ನಿರ್ದೇಶನದ ಪ್ರಕಾರ, "ಎನ್‌ಬಿಎಫ್‌ಸಿಗಳು ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಚಾರ್ಜ್ ಕಾರ್ಡ್‌ಗಳು ಅಥವಾ ಅಂತಹುದೇ ಕಾರ್ಡ್‌ಗಳನ್ನು ನೀಡುವುದಿಲ್ಲ.
ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಮುಖ್ಯ ಮಾರ್ಗಸೂಚಿ
* ಉಚಿತವಾಗಿ ನೀಡಲಾದ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಯಾವುದೇ ಗುಪ್ತ ಶುಲ್ಕಗಳಿಲ್ಲ
* ಕಾರ್ಡ್ ವಿತರಕರು (ಬ್ಯಾಂಕ್) ಈಗ ಕಳೆದುಹೋದ ಕ್ರೆಡಿಟ್ ಕಾರ್ಡ್‌ಗಳು ಅಥವಾ ಕ್ರೆಡಿಟ್ ಕಾರ್ಡ್ ವಂಚನೆಗಳಿಂದ ಉಂಟಾಗುವ ನಷ್ಟಗಳಿಗೆ ವಿಮಾ ರಕ್ಷಣೆಯನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ಈ ವಿಮಾ ರಕ್ಷಣೆಯನ್ನು ಹೊಂದಲು ಕ್ರೆಡಿಟ್ ಕಾರ್ಡ್‌ದಾರರ ಅನುಮತಿ ಪಡೆಯುವುದು ಮುಖ್ಯ
* ನೀಡಿದ ದಿನಾಂಕದಿಂದ 30 ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸದಿದ್ದರೆ, ಅದನ್ನು ಸಕ್ರಿಯಗೊಳಿಸಲು ಬಳಕೆದಾರರು ಒಟಿಪಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದು ಕಾರ್ಡ್‌ನ ವಾರಸುದಾರರೇ ಕಾರ್ಡ್ ಅನ್ನು ಬಳಕೆ ಮಾಡುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮವಾಗಿದೆ.
* ಕಾರ್ಡ್ ಅನ್ನು ಸಕ್ರಿಯಗೊಳಿಸುವ ಮೊದಲು ಕಾರ್ಡ್ ಹೊಂದಿರುವವರ ಸಾಲದ ಮಾಹಿತಿಯನ್ನು ಸಿಬಿಲ್, ಸಿಆರ್‌ಐಎಫ್ ಮೊದಲಾದ ಕ್ರೆಡಿಟ್ ಬ್ಯೂರೋಗಳಿಂದ ಪಡೆಯಬಹುದು
* ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಸಮಾನ ಮಾಸಿಕ ಕಂತುಗಳಾಗಿ (ಇಎಂಐ) ಪರಿವರ್ತಿಸುವ ವಿಚಾರದಲ್ಲಿ ಪಾರದರ್ಶಕತೆ ಅತ್ಯಗತ್ಯವಾಗಿದೆ. ಅಸಲು, ಬಡ್ಡಿ, ರಿಯಾಯಿತಿ ಮತ್ತು ಶುಲ್ಕಗಳು ಯಾವುದಾದರೂ ಇದ್ದರೆ ಅದನ್ನು ಸ್ಪಷ್ಟವಾಗಿ ನಮೂದಿಸಬೇಕು
* ಇಎಂಐ ಮೇಲಿನ ಬಡ್ಡಿಯನ್ನು ನೋ ಕಾಸ್ಟ್ ಅಥವಾ ಜಿರೋ ಇಂಟ್ರೆಸ್ಟ್ ಇಎಂಐ ನೆಪದಲ್ಲಿ ಮರೆಮಾಡುವಂತಿಲ್ಲ

* ಕ್ರೆಡಿಟ್ ಕಾರ್ಡ್ ಅರ್ಜಿಯನ್ನು ತಿರಸ್ಕರಿಸಿದರೆ ಬ್ಯಾಂಕ್ ಅದರ ಕಾರಣವನ್ನು ಲಿಖಿತವಾಗಿ ನೀಡಬೇಕು
* ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡುವುದನ್ನು ಏಳು ಕೆಲಸದ ದಿನದಲ್ಲಿ ಮುಗಿಸಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ ಪ್ರತಿ ವಿಳಂಬದ ದಿನಕ್ಕೆ ಐನ್ನೂರು ರೂಪಾಯಿ ದಂಡವನ್ನು ಪಾವತಿ ಮಾಡಬೇಕು
* ಕ್ರೆಡಿಟ್ ಕಾರ್ಡ್ ಅನ್ನು ಒಂದು ವರ್ಷದವರೆಗೆ ಬಳಕೆ ಮಾಡದಿದ್ದರೆ ಮೂವತ್ತು ದಿನಗಳ ನೋಟಿಸ್ ನೀಡಿ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬೇಕು
* ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಶುಲ್ಕಗಳಲ್ಲಿನ ಯಾವುದೇ ಬದಲಾವಣೆಗಳನ್ನು ಅವುಗಳನ್ನು ಜಾರಿಗೆ ತರುವ ಮೂವತ್ತು ದಿನಕ್ಕೂ ಮುನ್ನ ಗ್ರಾಹಕರಿಗೆ ತಿಳಿಸಿರಬೇಕು
ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಮುಖ್ಯ ನಿಯಮ
* ಉಳಿತಾಯ ಬ್ಯಾಂಕ್ ಖಾತೆ ಅಥವಾ ಕರೆಂಟ್ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರಿಗೆ ಮಾತ್ರ ಡೆಬಿಟ್ ಕಾರ್ಡ್‌ಗಳನ್ನು ನೀಡಬೇಕು
* ನಗದು ಕ್ರೆಡಿಟ್ ಅಥವಾ ಸಾಲದ ಖಾತೆದಾರರಿಗೆ ಯಾವುದೇ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ. ಇದಲ್ಲದೆ, ಅವರು ಬ್ಯಾಂಕ್ ಒದಗಿಸಿದ ಯಾವುದೇ ಇತರ ಸೌಲಭ್ಯಗಳನ್ನು ಪಡೆಯಲು ಡೆಬಿಟ್ ಕಾರ್ಡ್ ಹೊಂದಿರುವ ಲಿಂಕ್ ಮಾಡಬಾರದು.
* ಡೆಬಿಟ್ ಕಾರ್ಡ್‌ಗಳನ್ನು ನಿಗದಿತ ವಾಣಿಜ್ಯ ಬ್ಯಾಂಕುಗಳು ನೀಡಬೇಕು


Click it and Unblock the Notifications