RBI guidelines: ಒಂದು ಬಾರಿಗೆ ಬ್ಯಾಂಕ್‌ನಲ್ಲಿ ಎಷ್ಟು ನಾಣ್ಯ ಡೆಪಾಸಿಟ್ ಮಾಡಬಹುದು?

ಇದು ಡಿಜಿಟಲ್ ಯುಗವಾಗಿದೆ. ಪ್ರಸ್ತುತ ಜನರು ಹೆಚ್ಚಾಗಿ ನಗದು ರಹಿತ ವಹಿವಾಟನ್ನು ನಡೆಸುತ್ತಾರೆ. ಅದರಲ್ಲೂ ಮುಖ್ಯವಾಗಿ ನಾಣ್ಯಗಳನ್ನು ವಹಿವಾಟಿನಲ್ಲಿ ಬಳಕೆ ಮಾಡುವ ಪ್ರಮಾಣವು ಅತೀ ಕಡಿಮೆಯಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ಯುಪಿಐ ಆಗಿದೆ. ಜನರು ಯುಪಿಐ ಮೂಲಕ ಅಥವಾ ಆನ್‌ಲೈನ್ ಮೂಲಕ ಚಿಲ್ಲರೆ ವಹಿವಾಟು ಕೂಡಾ ನಡೆಸುತ್ತಾರೆ.

ಯುಪಿಐಯಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳ ಆರಂಭದ ಬಳಿಕ ಜನರು ಈಗ ಸಣ್ಣ ಮೊತ್ತದ ಎಲೆಕ್ಟ್ರಾನಿಕ್ ವರ್ಗಾವಣೆಗಳಿಗೆ ಅನುಕೂಲವಾಗಿದೆ. ಆದರೂ ಕೂಡಾ ನಾಣ್ಯಗಳನ್ನು ಬಳಕೆಯನ್ನು ಇನ್ನೂ ಮಾಡಲಾಗುತ್ತಿದೆ. ನೀವು ಬ್ಯಾಂಕ್‌ನಲ್ಲಿಯೂ ನಾಣ್ಯ ಡೆಪಾಸಿಟ್ ಮಾಡಬಹುದಾಗಿದೆ.

 ಒಂದು ಬಾರಿಗೆ ಬ್ಯಾಂಕ್‌ನಲ್ಲಿ ಎಷ್ಟು ನಾಣ್ಯ ಡೆಪಾಸಿಟ್ ಮಾಡಬಹುದು?

ಈ ಲೇಖನದಲ್ಲಿ, ಬ್ಯಾಂಕ್‌ಗಳಲ್ಲಿ ನಾಣ್ಯಗಳನ್ನು ಠೇವಣಿ ಇಡುವ ನಿಯಮದ ಬಗ್ಗೆ ವಿವರಣೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಅಥವಾ ಆರ್‌ಬಿಐನ ನಾಣ್ಯ ಡೆಪಾಸಿಟ್‌ನ ನಿಯಮವನ್ನು ನೀವು ತಿಳಿಯಿರಿ, ಮುಂದೆ ಓದಿ....

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯು ಒಂದು, ಎರಡು, ಐದು, ಹತ್ತು ಮತ್ತು ಇಪ್ಪತ್ತು ರೂಪಾಯಿ ಸೇರಿದಂತೆ ವಿವಿಧ ಮುಖಬೆಲೆಯ ನಾಣ್ಯಗಳನ್ನು ಪರಿಚಯ ಮಾಡಿದೆ. ಈ ನಾಣ್ಯಗಳನ್ನು ಆರಂಭದಲ್ಲಿ ಸಣ್ಣ ಮೊತ್ತದ ವಹಿವಾಟುಗಳಿಗೆ ಬಳಕೆ ಮಾಡಲಾಗುತ್ತಿತ್ತು.

ಆದರೆ ಡಿಜಿಟಲ್ ಪಾವತಿ ವ್ಯವಸ್ಥೆ ಆರಂಭವಾದ ಬಳಿಕ, ಆನ್‌ಲೈನ್ ಬಳಕೆ ಹೆಚ್ಚಾದಂತೆ ನಾಣ್ಯಗಳ ಬಳಕೆಯು ಕಡಿಮೆಯಾಗಿದೆ. ಆದರೆ ಇದು ಚಲಾವಣೆಯಲ್ಲಿರುವ ನಾಣ್ಯಗಳ ಕೊರತೆಗೆ ಕಾರಣವಾಗಿದೆ. ಇಂದು, ಡಿಜಿಟಲ್ ವಹಿವಾಟುಗಳನ್ನು ನಡೆಸಲು ಎಲ್ಲಿ ಸಾಧ್ಯವಿಲ್ಲವೋ, ಅಲ್ಲಿ ಮಾತ್ರ ನಾಣ್ಯಗಳನ್ನು ಬಳಕೆ ಮಾಡಲಾಗುತ್ತದೆ.

ಭಾರತದಲ್ಲಿ ನಾಣ್ಯಗಳ ವಿತರಣೆ ಮತ್ತು ನಿಯಂತ್ರಣವನ್ನು ಆರ್‌ಬಿಐ ಮಾಡುತ್ತದೆ. ನಾಣ್ಯಗಳ ಕಾಯಿದೆ 2011 ಟಂಕಿಸಬೇಕಾದ ನಾಣ್ಯಗಳ ಪ್ರಮಾಣ, ವಿನ್ಯಾಸ ಮತ್ತು ಮುಖಬೆಲೆಯನ್ನು ನಿರ್ಧರಿಸುವ ಅಧಿಕಾರವನ್ನು ಆರ್‌ಬಿಐಗೆ ನೀಡುತ್ತದೆ. ಈ ಕಾಯಿದೆಯು ದೇಶಾದ್ಯಂತ ನಾಣ್ಯಗಳ ತಯಾರಿಕೆ, ವಿತರಣೆ ಮತ್ತು ಬಳಕೆಯನ್ನು ನಿಯಂತ್ರಿಸುವ ಮಾರ್ಗಸೂಚಿಗಳನ್ನು ನೀಡುತ್ತದೆ.

ನಾಣ್ಯ ಮುದ್ರಣದ ಮೇಲೆ ಪ್ರಭಾವ ಬೀರುವ ಅಂಶಗಳು

ಪ್ರತಿ ವರ್ಷ, ಸರ್ಕಾರವು ಆರ್‌ಬಿಐ ಜೊತೆ ಸಮಾಲೋಚಿಸಿ, ಮುದ್ರಿಸಬೇಕಾದ ನಾಣ್ಯಗಳ ಪ್ರಮಾಣವನ್ನು ನಿರ್ಧರಿಸುತ್ತದೆ. ಆರ್ಥಿಕ ಬೇಡಿಕೆ, ಬಳಕೆಯ ಮಾದರಿಗಳು ಮತ್ತು ನಾಣ್ಯಗಳ ಸಮರ್ಪಕ ಪೂರೈಕೆಯನ್ನು ನಿರ್ವಹಿಸುವ ಅಗತ್ಯತೆಯಂತಹ ಅಂಶಗಳನ್ನು ಈ ಪ್ರಕ್ರಿಯೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೆ, ಸಾಂಸ್ಕೃತಿಕ, ಐತಿಹಾಸಿಕ ಮಹತ್ವ ಅಥವಾ ರಾಷ್ಟ್ರೀಯ ಚಿಹ್ನೆಗಳನ್ನು ಪ್ರತಿಬಿಂಬಿಸುವ ಚಲಾವಣೆಯಲ್ಲಿರುವ ನಾಣ್ಯಗಳ ವಿನ್ಯಾಸವನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ.

ನಾಣ್ಯಗಳನ್ನು ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡಲು ಅವು ಮಾನ್ಯವಾದ ಕರೆನ್ಸಿಯಾಗಿರಬೇಕು. ಇದರರ್ಥ ಅವರು ಆರ್‌ಬಿಐ ಸೂಚಿಸಿದ ವಿನ್ಯಾಸ, ತೂಕ ಮತ್ತು ಇತರ ವಿಶೇಷಣಗಳಿಗೆ ಬಡ್ಡಿವಾಗಿರಬೇಕಾಗುತ್ತದೆ.

ಇದರರ್ಥ ಅವರು ಆರ್‌ಬಿಐ ಸೂಚಿಸಿದ ವಿನ್ಯಾಸ, ತೂಕ ಮತ್ತು ಇತರ ವಿಶೇಷಣಗಳಿಗೆ ಬದ್ಧವಾಗಿರಬೇಕು.ಇನ್ನು ಡೆಪಾಸಿಟ್ ಮಾಡುವ ನಾಣ್ಯಗಳ ಸಿಂಧುತ್ವವನ್ನು ಪರಿಶೀಲಿಸುವ ಜವಾಬ್ದಾರಿ ಬ್ಯಾಂಕ್‌ಗಳ ಮೇಲಿದೆ. ನಕಲಿ ಅಥವಾ ಹಾನಿಗೊಳಗಾದ ನಾಣ್ಯಗಳನ್ನು ಸ್ವೀಕರಿಸಲಾಗುವುದಿಲ್ಲ. ಯಾಕೆಂದರೆ ಅದು ಕಾನೂನು ಟೆಂಡರ್‌ಗೆ ಒಳಗಾಗುವುದಿಲ್ಲ.

ಒಂದು ಬಾರಿಗೆ ಎಷ್ಟು ನಾಣ್ಯ ಡೆಪಾಸಿಟ್ ಮಾಡಬಹುದು?

ಎರಡು ಸಾವಿರ ರೂಪಾಯಿ ನೋಟುಗಳ ಡೆಪಾಸಿಟ್ ಸುತ್ತಲಿನ ನಿಯಮಗಳಂತೆ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಬಹುದಾದ ನಾಣ್ಯಗಳ ಸಂಖ್ಯೆಯ ಮೇಲೆ ಯಾವುದೇ ನಿರ್ದಿಷ್ಟ ಮಿತಿಗಳನ್ನು ವಿಧಿಸಲಾಗಿಲ್ಲ. ಒಂದೇ ಬಾರಿಗೆ ಡೆಪಾಸಿಟ್ ಇಡಬಹುದಾದ ನಾಣ್ಯಗಳ ಪ್ರಮಾಣಕ್ಕೆ ಆರ್‌ಬಿಐ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದ್ದರಿಂದ ನೀವು ಎಷ್ಟು ಮೊತ್ತದ ನಾಣ್ಯಗಳನ್ನಾದರೂ ಡೆಪಾಸಿಟ್ ಮಾಡಬಹುದಾಗಿದೆ.

ಆರ್‌ಬಿಐ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಭಾರತದ ಎಲ್ಲಾ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಂದ ನಾಣ್ಯವನ್ನು ಪಡೆಯಬೇಕಾಗುತ್ತದೆ. ನಾಣ್ಯವನ್ನು ಡೆಪಾಸಿಟ್ ಮಾಡುವ ಸಂದರ್ಭದಲ್ಲಿ ಯಾವುದೇ ಬ್ಯಾಂಕ್‌ನಲ್ಲಿ ಗ್ರಾಹಕರಿಂದ ನಾಣ್ಯವನ್ನು ಪಡೆಯಲು ಸಿಬ್ಬಂದಿಗಳು ನಿರಾಕರಿಸುವಂತಿಲ್ಲ. ನಿಮ್ಮಲ್ಲಿ ಒಂದು ನಾಣ್ಯವಿರಲಿ ಅಥವಾ ಅಧಿಕ ಪ್ರಮಾಣದಲ್ಲಿ ನಾಣ್ಯಗಳು ಇರಲಿ. ಆದರೆ ಬ್ಯಾಂಕ್ ಅದನ್ನು ಡೆಪಾಸಿಟ್ ಮಾಡುವ ವಿಚಾರದಲ್ಲಿ ನಿರಾಕರಿಸುವಂತಿಲ್ಲ.

ಸರಿಯಾದ ಕಾರಣಗಳಿಲ್ಲದೆ ಬ್ಯಾಂಕ್ ನಾಣ್ಯ ಡೆಪಾಸಿಟ್ ಅನ್ನು ತಿರಸ್ಕಾರ ಮಾಡಿದರೆ ಜನರು ಆರ್‌ಬಿಐ ಪೋರ್ಟಲ್ ಮೂಲಕ ದೂರು ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಆರ್‌ಬಿಐ ಗ್ರಾಹಕರ ಕುಂದುಕೊರತೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಹಾಗೆಯೇ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಬ್ಯಾಂಕ್‌ಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+