ಆರ್‌ಬಿಐ ರೆಪೋ ದರ ಏರಿಸಿದರೆ ನಿಮ್ಮ ಮೇಲೇನು ಪರಿಣಾಮ?

ಆರ್‌ಬಿಐ ರೆಪೋ ದರವನ್ನು ಸತತ ನಾಲ್ಕನೇ ಬಾರಿಗೆ ಹೆಚ್ಚಳ ಮಾಡಿದೆ. ಈಗಾಗಲೇ ಇಎಂಐ ಹೊರೆ ಹೊತ್ತಿರುವ ಜನರ ಜೇಬು ಮತ್ತಷ್ಟು ಸುಡಲಿದೆ. ಸಾಮಾನ್ಯವಾಗಿ ರೆಪೋ ದರ ಏರಿಕೆಯಾದರೆ, ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡುತ್ತದೆ. ಇದರಿಂದಾಗಿ ಇಎಂಐ ಕೂಡಾ ಅಧಿಕವಾಗುತ್ತದೆ.

ಎರಡು ತಿಂಗಳುಗಳಿಂದ ಕೊಂಚ ಇಳಿಕೆಯಾಗಿದ್ದ ರಿಟೇಲ್ ಹಣದುಬ್ಬರವು ಆಗಸ್ಟ್‌ನಲ್ಲಿ ಏರಿಕೆಯಾಗಿದೆ. ಆಹಾರ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಈ ನಡುವೆ ಆಗಸ್ಟ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 7ಕ್ಕೆ ಏರಿಕೆಯಾಗಿದೆ. ಈ ಬೆನ್ನಲ್ಲೇ ಆರ್‌ಬಿಐ ರೆಪೋ ದರ ಏರಿಕೆ ಮಾಡುವ ನಿರೀಕ್ಷೆ ಇತ್ತು. ಹಾಗೆಯೇ ಆರ್‌ಬಿಐ ಏರಿಕೆ ಮಾಡಿದೆ.

ಇನ್ನು ಡಿಸೆಂಬರ್‌ನಲ್ಲಿ 25-35 ಮೂಲಾಂಕ ರೆಪೋ ದರ ಏರಿಕೆ ಮಾಡುವ ನಿರೀಕ್ಷೆ ಇದೆ. ಹಣದುಬ್ಬರವು ಕೂಡಾ ಹೆಚ್ಚಳ ಆಗುತ್ತಲೇ ಹೋಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಯುಎಸ್ ಡಾಲರ್ ಎದುರು ಭಾರತದ ರೂಪಾಯಿ ದರವು ಕೂಡಾ ಇಳಿಕೆಯಾಗಿದೆ. ಆದರೆ ಇಂದು ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯ ಕೊಂಚ ಏರಿದೆ. 14 ಪೈಸೆ ಏರಿಕೆಯಾಗಿ 81.59 ಡಾಲರ್‌ಗೆ ತಲುಪಿದೆ. ಆದರೆ ಆರ್‌ಬಿಐ ರೆಪೋ ದರ ಏರಿಕೆ ಮಾಡಿದರೆ, ಸಾಮಾನ್ಯ ಜನರಿಗೆ ಏನು ಪ್ರಭಾವ ಉಂಟಾಗಲಿದೆ ಎಂಬುವುದು ನಿಮಗೆ ತಿಳಿದಿದೆಯೇ ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಎಫ್‌ಡಿ ಹೂಡಿಕೆದಾರರಿಗೆ ಮಾತ್ರ ಲಾಭ!

ಎಫ್‌ಡಿ ಹೂಡಿಕೆದಾರರಿಗೆ ಮಾತ್ರ ಲಾಭ!

ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದಾಗ ಸಾಮಾನ್ಯವಾಗಿ ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಏರಿಕೆ ಮಾಡುತ್ತದೆ. ಇದರ ಜೊತೆಗೆ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡಲಾಗುತ್ತದೆ. ಮೇ ತಿಂಗಳಿನಿಂದ ಸತತ ನಾಲ್ಕು ಬಾರಿ ಆರ್‌ಬಿಐ ರೆಪೋ ದರ ಹೆಚ್ಚಿಸಿದೆ. ಮೂರು ಬಾರಿ ರೆಪೋ ಏರಿಸಿದ ವೇಳೆ ಬ್ಯಾಂಕುಗಳು ಎಫ್‌ಡಿ ಬಡ್ಡಿದರವನ್ನು ಕೂಡಾ ಏರಿಸಿದೆ. ಇದು ಎಫ್‌ಡಿ ಮಾಡಿಸಿಕೊಂಡವರಿಗೆ ಲಾಭವನ್ನು ನೀಡಿದೆ. ಈಗ ಆರ್‌ಬಿಐ ಮತ್ತೆ ವಿತ್ತಿಯ ದರ ಅಧಿಕ ಮಾಡಿರುವ ಕಾರಣದಿಂದಾಗಿ ಬ್ಯಾಂಕುಗಳು ಮತ್ತೆ ಎಫ್‌ಡಿ ಬಡ್ಡಿದರ ಹೆಚ್ಚಿಸಲಿದೆ.

 ಇಎಂಐ ದರ ಇನ್ನಷ್ಟು ಅಧಿಕ

ಇಎಂಐ ದರ ಇನ್ನಷ್ಟು ಅಧಿಕ

ಮೂರು ಬಾರಿ ಆರ್‌ಬಿಐ ರೆಪೋ ದರ ಹೆಚ್ಚಿಸಿದ ಬೆನ್ನಲ್ಲೇ ಎಲ್ಲ ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಅಧಿಕ ಮಾಡಿದೆ. ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಆದ್ದರಿಂದಾಗಿ ಇದರಲ್ಲಿ ಯಾವುದೇ ಬದಲಾವಣೆ ಉಂಟಾದಾಗ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸಾಲದ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡುತ್ತದೆ. ಈಗ ಸತತ ನಾಲ್ಕನೇ ಬಾರಿಗೆ ಬ್ಯಾಂಕುಗಳ ಸಾಲದ ಬಡ್ಡಿದರವನ್ನು ಅಧಿಕ ಮಾಡುತ್ತದೆ. ಇದರಿಂದಾಗಿ ರೆಪೋ ಆಧಾರಿತ ಬಡ್ಡಿದರವಿರುವ ಸಾಲದ ಇಎಂಐ ಅಧಿಕವಾಗಲಿದೆ. ಈಗಾಗಲೇ ಮೂರು ಇಎಂಐ ಹೊರೆ ಅಧಿಕವಾಗಿ ಸಂಕಟಕ್ಕೆ ಒಳಗಾಗಿರುವ ಜನರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ.

 ಶಿಕ್ಷಣ ವೆಚ್ಚ ಅಧಿಕವಾಗುತ್ತೆ!

ಶಿಕ್ಷಣ ವೆಚ್ಚ ಅಧಿಕವಾಗುತ್ತೆ!

ರೆಪೋ ದರ ಸಾಮಾನ್ಯವಾಗಿ ಹಣದುಬ್ಬರ ಮೇಲೆ ಆಧಾರಿತವಾಗಿರುತ್ತದೆ. ರೂಪಾಯಿ ಮೌಲ್ಯ ಕುಸಿದಾಗ, ಹಣದುಬ್ಬರ ಹೆಚ್ಚಾದಾಗ ಆರ್‌ಬಿಐ ರೆಪೋ ದರವನ್ನು ಅಧಿಕ ಮಾಡುತ್ತದೆ. ಇದರಿಂದಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣದ ವೆಚ್ಚ ಹೆಚ್ಚುತ್ತಿದೆ. ರೆಪೋ ದರ ಏರಿಕೆ ಕಾರಣದಿಂದಾಗಿ ಶಿಕ್ಷಣ ಸಾಲದ ಮೇಲಿನ ಬಡ್ಡಿದರವು ಅಧಿಕವಾಗಲಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣದ ವೆಚ್ಚ ಇನ್ನಷ್ಟು ಹೆಚ್ಚಳವಾಗಲಿದೆ. ಶಿಕ್ಷಣದ ಮೇಲಿನ ಸಾಲದ ಬಡ್ಡಿದರವು ಸಾಲ ನೀಡುವ ಸಂಸ್ಥೆ, ಸಾಲ ಪಡೆಯುವವರ ವಿವರ, ಕೋರ್ಸ್, ಶಿಕ್ಷಣ ಸಂಸ್ಥೆಯನ್ನು ಅವಲಂಭಿಸಿದೆ. ಒಟ್ಟಾರೆಯಾಗಿ, ಆರ್‌ಬಿಐ ರೆಪೊ ದರ ಏರಿಕೆಯ ಪರಿಣಾಮವು ವಿದ್ಯಾರ್ಥಿಗಳ ಮೇಲೆ ಅಧಿಕವಾಗಿದೆ.

 ಸಾಲದ ಲೆಕ್ಕಾಚಾರ ಯಾವ ರೀತಿ ಇದೆ ನೋಡಿ

ಸಾಲದ ಲೆಕ್ಕಾಚಾರ ಯಾವ ರೀತಿ ಇದೆ ನೋಡಿ

ನಾವು 20 ವರ್ಷ ಅವಧಿಗೆ 30 ಲಕ್ಷ ಗೃಹ ಸಾಲವನ್ನು ಪಡೆದಿದ್ದರೆ, ನಮ್ಮ ಗೃಹ ಸಾಲದ ಬಡ್ಡಿದರವು ಶೇಕಡ 7.55ರಿಂದ ಶೇಕಡ 8.05ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ನಿಮ್ಮ ಇಎಂಐ 24,200 ರೂಪಾಯಿಯಿಂದ 25,100 ರೂಪಾಯಿಗೆ ಏರಿಕೆಯಾಗಲಿದೆ. ಅಂದರೆ ಸುಮಾರು 900 ರೂಪಾಯಿ ಇಎಂಐ ಅಧಿಕವಾಗಲಿದೆ. ನೀವು 40 ಲಕ್ಷ ರೂಪಾಯಿ ಗೃಹ ಸಾಲವನ್ನು ಪಡೆದಿದ್ದರೆ, ಅದರ ಇಎಂಐ ಕೂಡಾ ಅಧಿಕವಾಗಲಿದೆ. ನೀವು 20 ವರ್ಷ ಅವಧಿಗೆ 40 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದೀರಿ ಎಂದುಕೊಳ್ಳಿ, ಆಗ ನಿಮ್ಮ ಇಎಂಐ 1,200 ರೂಪಾಯಿ ಏರಿಕೆಯಾಗುವ ಸಾಧ್ಯವಿದೆ. ಇನ್ನು 50 ಲಕ್ಷ ರೂಪಾಯಿ ಗೃಹ ಸಾಲವನ್ನು ಹೊಂದಿದ್ದರೆ ನಿಮ್ಮ ಇಎಂಐನಲ್ಲಿ ರೂಪಾಯಿ 1,500ರಷ್ಟು ಅಧಿಕ ಕಟ್ಟಬೇಕಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+