For Quick Alerts
ALLOW NOTIFICATIONS  
For Daily Alerts

ಎಟಿಎಂನಲ್ಲಿ ಹಣ ಇಲ್ಲದಿದ್ರೆ ಬ್ಯಾಂಕುಗಳಿಗೆ ದಂಡ ವಿಧಿಸಲಿದೆ RBI

|

ಎಟಿಎಂ ಮುಂದೆ ಸಾಲುಗಟ್ಟಿ ನಿಲ್ಲುವ ಜನರನ್ನೂ ನೀವು ನೋಡಿದ್ದೀರಿ, ಹಾಗೆಯೇ ಎಟಿಎಂ ನಲ್ಲಿ ಹಣವೇ ಇಲ್ಲದೆ ಖಾಲಿ ಇರೋದನ್ನು ಕಂಡಿದ್ದೀರಿ. ಕೆಲವೊಮ್ಮೆ ವಾರದ ಅಂತ್ಯದಲ್ಲಿ ಸಾಲು ಸಾಲು ರಜೆ ಬಂದ್ರೆ ಮುಗಿದೇ ಹೋಯ್ತು, ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡಲು ಒಂದು ಎಟಿಎಂ ನಿಂದ ಮತ್ತೊಂದು ಎಟಿಎಂಗೆ ಸುತ್ತಾಡಬೇಕಾಗುತ್ತದೆ. ಏಕೆಂದರೆ ಬಹುತೇಕ ಎಟಿಎಂನಲ್ಲಿ ಹಣ ಇರೋದಿಲ್ಲ, ಇದ್ರೂ ಜನರ ಕ್ಯೂ ಇರುತ್ತದೆ.

ಬ್ಯಾಂಕ್ ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಟಿಎಂಗಳಲ್ಲಿ ಹಣವನ್ನು ವ್ಯವಸ್ಥಿತವಾಗಿ ಉಳಿಸದ ಬ್ಯಾಂಕುಗಳಿಗೆ ದಂಡ ವಿಧಿಸಲು ಮುಂದಾಗಿದೆ.

ಬ್ಯಾಂಕುಗಳಷ್ಟೇ ಅಲ್ಲದೆ ಎಟಿಎಂ ಆಪರೇಟರ್‌ಗಳಿಗೆ ದಂಡ ವಿಧಿಸುವುದಾಗಿ ಆರ್‌ಬಿಐ ಪ್ರಸ್ತಾಪಿಸಿದೆ. ಎಟಿಎಂಗಳಲ್ಲಿ ಸಮಯಕ್ಕೆ ಸರಿಯಾಗಿ ಹಣ ಇಲ್ಲದೆ ಜನರಿಗೆ ಅನಾನುಕೂಲವಾಗಿರುವುದನ್ನು ಆರ್‌ಬಿಐ ಗಮನಿಸಿದೆ. ಹೀಗಾಗಿ ಎಟಿಎಂಗಳಲ್ಲಿ ನಗದು ಕನಿಷ್ಠ ಅವಧಿಯವರೆಗೆ ಇರಲು ಬ್ಯಾಂಕುಗಳು ಮತ್ತು ಎಟಿಎಂ ಆಪರೇಟರ್‌ಗಳನ್ನು ನಿರ್ದೇಶಿಸಿದೆ.

ಎಟಿಎಂಗಳಲ್ಲಿ 10 ಗಂಟೆಗಳಿಗೂ ಹೆಚ್ಚು ಹಣ ಇಲ್ಲದೆ ವಿತ್‌ಡ್ರಾ ಸಮಸ್ಯೆ ಎದುರಾದರೆ ಬ್ಯಾಂಕುಗಳಿಗೆ ಮತ್ತು ಎಟಿಎಂ ಆಪರೇಟರ್‌ಗಳಿಗೆ ಏಕೆ ದಂಡ ವಿಧಿಸಬಾರದು ಎಂದು ಆರ್‌ಬಿಐ ಪ್ರಸ್ತಾಪಿಸಿದೆ.

"ಬ್ಯಾಂಕುಗಳು ಮತ್ತು ವೈಟ್ ಲೇಬಲ್ ಎಟಿಎಂ ಆಪರೇಟರ್‌ಗಳು (WLAOS) ತಮ್ಮ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳ ಮೂಲಕ ಎಟಿಎಂಗಳಲ್ಲಿನ ಹಣದ ಲಭ್ಯತೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಗದು ವಿತ್‌ಡ್ರಾ ಸಮಸ್ಯೆ ತಪ್ಪಿಸಲು ಸಕಾಲಿಕ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಬೇಕು" ಎಂದು ಆರ್‌ಬಿಐ ಮಂಗಳವಾರ ಹೇಳಿದೆ.

ಒಂದು ವೇಳೆ ಈ ನಿಯಮವನ್ನು ಅನುಸರಿಸಲು ವಿಫಲಗೊಂಡರೆ ಬ್ಯಾಂಕುಗಳು ಮತ್ತು ಎಟಿಎಂ ಆಪರೇಟರ್ಸ್‌ ದಂಡವನ್ನು ಆಕರ್ಷಿಸುತ್ತಾರೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

10,000 ರೂಪಾಯಿ ದಂಡ

10,000 ರೂಪಾಯಿ ದಂಡ

ಒಂದು ತಿಂಗಳಲ್ಲಿ ಹತ್ತು ಗಂಟೆಗಳವರೆಗೆ ಯಾವುದೇ ಎಟಿಎಂನಲ್ಲಿ ನಗದು ವಿತ್‌ಡ್ರಾ ಸಮಸ್ಯೆಯಿದ್ದರೆ ಆಯಾ ಎಟಿಎಂಗೆ ಸಂಬಂಧಿಸಿದ ಬ್ಯಾಂಕ್ ಮತ್ತು ವೈಟ್ ಲೇಬಲ್ ಎಟಿಎಂ ಆಪರೇಟರ್‌ಗಳಿಗೆ 10,000 ರೂಪಾಯಿ ದಂಡ ವಿಧಿಸಲಾಗುವುದು. ಇದು ನಿರ್ದಿಷ್ಟವಾದ WLA ನ ನಗದು ಅವಶ್ಯಕತೆಗಳನ್ನು ಪೂರೈಸುತ್ತದೆ. ಈ ಹೊಸ ನಿಯಮವು ಅಕ್ಟೋಬರ್ 1, 2021ರಿಂದ ಜಾರಿಯಾಗಲಿದೆ.

ಹಲವು ಎಟಿಎಂಗಳಲ್ಲಿ ಹಣ ವಿತ್‌ಡ್ರಾ ಅಲಭ್ಯತೆಯನ್ನು ಪರಿಶೀಲಿಸಿದ ನಂತರ ಆರ್‌ಬಿಐ ಈ ಪರಿಶೀಲನೆ ಮಾಡಲು ಮುಂದಾಗಿದೆ. ಎಟಿಎಂ ಕಾರ್ಯಾಚರಣೆಗಳಲ್ಲಿ ನಗದು ಲಭ್ಯವಿಲ್ಲ ಮತ್ತು ಸಾರ್ವಜನಿಕ ಸದಸ್ಯರಿಗೆ ತಪ್ಪಿಸಬಹುದಾದ ಅನಾನುಕೂಲತೆಯನ್ನು ಉಂಟುಮಾಡುತ್ತವೆ.

 

ಗೂಗಲ್ ಪೇ, ಪೇಟಿಎಂನಿಂದ ಹಣ ವಿತ್‌ಡ್ರಾ ಮಾಡುವುದು ಹೇಗೆ?

ಗೂಗಲ್ ಪೇ, ಪೇಟಿಎಂನಿಂದ ಹಣ ವಿತ್‌ಡ್ರಾ ಮಾಡುವುದು ಹೇಗೆ?

ಕೆಲವೊಮ್ಮೆ ನೀವು ಡೆಬಿಟ್‌ ಕಾರ್ಡ್ ಬಿಟ್ಟು ಬಂದಿದ್ದರೆ ಹಣ ಹಿಂಪಡೆಯಲು ಸಾಧ್ಯವಿಲ್ಲ ಎಂದುಕೊಂಡಿದ್ದರೆ ಅದು ಸುಳ್ಳಾಗಬಹುದು. ಏಕೆಂದರೆ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯುಪಿಐ ಆ್ಪ್ ಮೂಲಕವೇ ಹಣ ವಿತ್‌ಡ್ರಾ ಮಾಡಬಹುದು.

ಎಟಿಎಂಗಳ ತಯಾರಕರಾದ ಎನ್‌ಸಿಆರ್ ಕಾರ್ಪೊರೇಷನ್ ಯುಪಿಐ ಪ್ಲಾಟ್‌ಫಾರ್ಮ್ ಆಧರಿಸಿ ಮೊದಲ ಇಂಟರ್ಪೋರೆಬಲ್ ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ (ಐಸಿಸಿಡಬ್ಲ್ಯೂ) ಹೊಸ ವಿಧಾನವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಯುಪಿಐ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು. ಈ ವಿಶೇಷ ಸೌಲಭ್ಯದೊಂದಿಗೆ ಎಟಿಎಂಗಳನ್ನು ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್‌ಸಿಆರ್ ಕಾರ್ಪೊರೇಶನ್‌ನೊಂದಿಗೆ ಕೈಜೋಡಿಸಿದೆ. ಈ ಸೌಲಭ್ಯದೊಂದಿಗೆ ಬ್ಯಾಂಕ್ ಇದುವರೆಗೆ 1500 ಕ್ಕೂ ಹೆಚ್ಚು ಎಟಿಎಂಗಳನ್ನು ನವೀಕರಿಸಿದೆ.

 

ಯುಪಿಐ ಆ್ಯಪ್ ಮೂಲಕ ಹಣ ಹಿಂಪಡೆಯುವುದು ಹೇಗೆ?

ಯುಪಿಐ ಆ್ಯಪ್ ಮೂಲಕ ಹಣ ಹಿಂಪಡೆಯುವುದು ಹೇಗೆ?

ಐಸಿಸಿಡಬ್ಲ್ಯೂ ವಿಧಾನ ಆಧರಿತ ಎಟಿಎಂಗಳಿಂದ ನೀವು ಕಾರ್ಡ್‌ ಇಲ್ಲದೆ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಅದು ಹೇಗೆ ಎಂಬುದನ್ನು ಈ ಕೆಳಗೆ ತಿಳಿಯಿರಿ

* ಮೊದಲನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಯುಪಿಐ ಅಪ್ಲಿಕೇಶನ್ ತೆರೆಯಿರಿ.
* ನಂತರ ಎಟಿಎಂ ಸ್ಕ್ರೀನ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
* ಈಗ ನಿಮಗೆ ಬೇಕಿರುವ ಹಣವನ್ನು ಮೊಬೈಲ್‌ನಲ್ಲಿ ನಮೂದಿಸಿ.
* ನಂತರ ನಿಮ್ಮ 4 ಅಥವಾ 6 ಅಂಕಿಯ ಯುಪಿಐ ಪಿನ್ ಸಂಖ್ಯೆಯನ್ನು ನಮೂದಿಸಿ
* ಪ್ರೊಸೀಡ್ ಬಟನ್ ಕ್ಲಿಕ್ ಮಾಡುವ ಮೂಲಕ ಈಗ ದೃಢೀಕರಿಸಿ
* ನೀವು ಒಂದು ಸಮಯದಲ್ಲಿ ಗರಿಷ್ಠ 5 ಸಾವಿರ ರೂಪಾಯಿಗಳನ್ನು ಹಿಂಪಡೆಯಬಹುದು

 

ಯುಪಿಐ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಯುಪಿಐ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಏಕೀಕೃತ ಪಾವತಿ ಇಂಟರ್ಫೇಸ್ / ಯುಪಿಐ ನೈಜ ಸಮಯ ಪಾವತಿ ವ್ಯವಸ್ಥೆಯಾಗಿದ್ದು, ಇದು ಮೊಬೈಲ್ ಅಪ್ಲಿಕೇಶನ್ ಮೂಲಕ ಬ್ಯಾಂಕ್ ಖಾತೆಗೆ ತಕ್ಷಣ ಹಣವನ್ನು ವರ್ಗಾಯಿಸಬಹುದು. ಯುಪಿಐ ಮೂಲಕ ನೀವು ಹಲವಾರು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬಹುದು. ಅದೇ ಸಮಯದಲ್ಲಿ, ಯುಪಿಐ ಆ್ಯಪ್ ಮೂಲಕ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು. ಭೀಮ್, ಗೂಗಲ್ ಪೇ, ಅಮೆಜಾನ್ ಪೇ, ಫೋನ್‌ಪೇ, ಇತ್ಯಾದಿಗಳು ಯುಪಿಐ ಅಪ್ಲಿಕೇಶನ್‌ಗಳಾಗಿವೆ. ಇದರಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವ ಮೂಲಕ ನೀವು ಹಣವನ್ನು ವರ್ಗಾಯಿಸಬಹುದು.

English summary

RBI to Impose penalties on banks for non-availability of cash in ATMs from October 1

RBI Has proposed penalties for banks and White Label ATM operators if their ATMs are found to be lying without replenishment for more than ten hours to ensure customers and not inconvenienced.
Story first published: Wednesday, August 11, 2021, 12:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X