Exchange Rs 2000 Notes: ಬ್ಯಾಂಕ್‌ಗಳು 2000 ರೂ. ನೋಟು ವಿನಿಮಯವನ್ನು ನಿರಾಕರಿಸಿದರೆ ಏನು ಮಾಡಬೇಕು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟಿನ ಬಗ್ಗೆ ಇತ್ತೀಚೆಗೆ ಪ್ರಮುಖವಾದ ನಿರ್ಧಾರವನ್ನು ಘೋಷಣೆ ಮಾಡಿದೆ. ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯುವುದಾಗಿ ಆರ್‌ಬಿಐ ತಿಳಿಸಿದೆ.

ಈ ನೋಟುಗಳನ್ನು ಇನ್ನು ಮುಂದೆ ನೀಡದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಆದರೂ ಕೂಡಾ ಸೆಪ್ಟೆಂಬರ್ 30 ರವರೆಗೆ 2000 ರೂಪಾಯಿಯ ನೋಟುಗಳು ಮಾನ್ಯವಾಗಿರುತ್ತವೆ. ಆದ್ದರಿಂದ, 2000 ರೂಪಾಯಿ ನೋಟು ಹೊಂದಿರುವವರು ನಿಗದಿತ ಗಡುವಿಗೂ ಮುನ್ನ ಅದನ್ನು ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡಬೇಕು ಅಥವಾ ಬ್ಯಾಂಕ್‌ಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಆರ್‌ಬಿಐ ತಿಳಿಸಿದೆ.

ಬ್ಯಾಂಕ್‌ಗಳು 2000 ರೂ. ನೋಟು ಪಡೆಯಲು ನಿರಾಕರಿಸಿದರೆ?

ಆದರೆ ಬ್ಯಾಂಕ್‌ಗಳು ನಿಗದಿತ ಅವಧಿಯಲ್ಲಿಯೂ 2000 ರೂಪಾಯಿ ನೋಟನ್ನು ಜಮೆ ಮಾಡಲು ಬಿಡದಿದ್ದರೆ ಅಥವಾ ನೋಟನ್ನು ಬದಲಾವಣೆ ಮಾಡಲು ಅವಕಾಶ ನೀಡಿದಿದ್ದರೆ ನೀವು ಏನು ಮಾಡುವುದು ಎಂದು ತಿಳಿಯಿರಿ, ಮುಂದೆ ಓದಿ...

2000 ರೂಪಾಯಿಯ ನೋಟದನ್ನು ಬೇರೆ ನೋಟುಗಳಿಗೆ ಬದಲಾವಣೆ ಮಾಡುವ ವಿಚಾರದಲ್ಲಿ ಯಾವುದೇ ನಿರ್ಬಂಧಗಳು ಇಲ್ಲ. ಸಾಮಾನ್ಯವಾಗಿ ನೋಟನ್ನು ಜಮೆ ಮಾಡುವಂತೆಯೇ ಮಾಡಬಹುದು ಎಂದು ಈಗಾಗಲೇ ಆರ್‌ಬಿಐ ತಿಳಿಸಿದೆ. ಆದರೆ ಶೀಘ್ರವೇ 2000 ರೂಪಾಯಿ ನೋಟು ಬದಲಾವಣೆ ಸಂಬಂಧಿಸಿದ ಪ್ರಕ್ರಿಯೆಯ ಮಾರ್ಗಸೂಚಿಯನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದೆ.

ಜನರು 2023ರ ಮೇ 23ರಿಂದ 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡಲು ಅವಕಾಶವಿದೆ. 2000 ರೂಪಾಯಿ ನೋಟು ನೀಡಿ ಬೇರೆ ನೋಟು ಪಡೆಯಬಹುದು ಅಥವಾ ನೋಟನ್ನು ನಿಮ್ಮ ಖಾತೆಗೆ ಜಮೆ ಮಾಡಬಹುದು ಎಂದು ತಿಳಿಸಿದೆ. ಇನ್ನು ದೇಶದಲ್ಲಿರುವ ಆರ್‌ಬಿಐನ 19 ಸ್ಥಳೀಯ ಕಚೇರಿಗಳಲ್ಲೂ 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಆದರೆ ನೀವು ಬದಲಾವಣೆ ಮಾಡಿಕೊಳ್ಳಬಹುದಾದ 2000 ರೂಪಾಯಿಯ ನೋಟುಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಿತಿಯನ್ನು ವಿಧಿಸಿದೆ. ನೀವು ಒಂದು ಬಾರಿಗೆ 20 ಸಾವಿರ ರೂಪಾಯಿ ಒಟ್ಟು ಮೌಲ್ಯವನ್ನು ಹೊಂದಿರುವ 2000 ರೂಪಾಯಿ ನೋಟುಗಳನ್ನು ಮಾತ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಅಂದರೆ 10 ನೋಟುಗಳ ಬದಲಾವಣೆ ಮಾಡಲು ಮಾತ್ರ ಅವಕಾಶವಿದೆ.

ಬ್ಯಾಂಕ್‌ಗಳಲ್ಲಿ 2000 ರೂಪಾಯಿ ನೋಟು ಪಡೆಯಲು ನಿರಾಕರಿಸಿದರೆ?

ಪ್ರಸ್ತುತ ಆರ್‌ಬಿಐ ಬ್ಯಾಂಕ್‌ಗಳಲ್ಲಿ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಿದೆ. ಆದರೆ ಬ್ಯಾಂಕ್‌ಗಳಲ್ಲಿ ನಗದನ್ನು ಜಮೆ ಮಾಡಲು ಅಥವಾ ನಗದನ್ನು ವಿನಿಮಯ ಮಾಡಲು ಅವಕಾಶ ನೀಡದಿದ್ದರೆ ಏನು ಮಾಡುವುದು?. ಬ್ಯಾಂಕ್ ಶಾಖೆ ಅಥವಾ ಇತರ ಯಾವುದೇ ಘಟಕವು 2000 ರೂಪಾಯಿ ನೋಟನ್ನು ಬದಲಾವಣೆ ಮಾಡಲು ನಿರಾಕರಿಸಿದರೆ, ಅವರಿಗೆ ಸಹಾಯ ಲಭ್ಯವಾಗಲಿದೆ.

ಯಾವುದಾದರೂ ಬ್ಯಾಂಕ್‌ಗಳಲ್ಲಿ ಅಥವಾ ಬ್ರ್ಯಾಂಚ್‌ಗಳಲ್ಲಿ 2000 ರೂಪಾಯಿ ನೋಟನ್ನು ಬದಲಾವಣೆ ಮಾಡಲು ಅಥವಾ ಪಡೆಯಲು ನಿರಾಕರಿಸಿದರೆ ನೀವು ಆ ಬ್ರ್ಯಾಂಚ್ ವಿರುದ್ಧ ನೀವು ದೂರು ದಾಖಲು ಮಾಡಬಹುದಾಗಿದೆ. ನೀವು ಸೆಪ್ಟೆಂಬರ್ 30, 2023ಕ್ಕೂ ಮುನ್ನವೇ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

30 ದಿನಗಳೊಳಗೆ ಬ್ಯಾಂಕ್ ಪ್ರತಿಕ್ರಿಯಿಸದಿದ್ದಲ್ಲಿ ಅಥವಾ ಬ್ಯಾಂಕಿನ ಉತ್ತರದಿಂದ ದೂರುದಾರರು ಅತೃಪ್ತರಾಗಿದ್ದರೆ, ದೂರುದಾರರು ಆರ್‌ಬಿಐ ಪೋರ್ಟಲ್ cms.rbi.org.in ನಲ್ಲಿ ದೂರು ದಾಖಲಿಸಬಹುದಾಗಿದೆ.

2000 ರೂಪಾಯಿ ನೋಟು ಮೊದಲು ಜಾರಿ ಮಾಡಿದ್ದು ಯಾವಾಗ?

2000 ರೂಪಾಯಿ ನೋಟುಗಳನ್ನು ಮೊದಲು ನವೆಂಬರ್ 8, 2016 ರಂದು ಪರಿಚಯಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ 500 ರೂಪಾಯಿ ಮತ್ತು 1000 ರೂಪಾಯಿ ನೋಟನ್ನು ಅಮಾನ್ಯೀಕರಣ ಮಾಡಿದ ಬಳಿಕ 2000 ರೂಪಾಯಿ ಮತ್ತು 500 ರೂಪಾಯಿ ನೋಟನ್ನು ಜಾರಿ ಮಾಡಲಾಗಿದೆ. ಆದರೆ ಜಾರಿ ಮಾಡಿದ 7 ವರ್ಷದಲ್ಲೇ ಈಗ ಈ ನೋಟನ್ನು ಹಿಂಪಡೆಯಲಾಗುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+