ಮೇ ತಿಂಗಳಿನಲ್ಲಿ ರೆಪೋ ದರ ಏರಿಕೆ ಮಾಡಲಾಗಿದೆ. ಇದರಿಂದಾಗಿ ಜನರಿಗೆ ಸಾಲದ ಇಎಂಐ ಹೊರೆ ಈಗಾಗಲೇ ಹೆಚ್ಚಾಗಿದೆ. ಈಗ ಮತ್ತೆ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ಜನರ ಇಎಂಐ ಹೊರೆಯು ಮತ್ತಷ್ಟು ಅಧಿಕವಾಗಲಿದೆ. ಹಾಗೆಯೇ ರೆಪೋ ದರ ಏರಿಕೆಯಿಂದಾಗಿ ಹಲವಾರು ಪರಿಣಾಮಗಳು ಉಂಟಾಗಲಿದೆ.
ದೇಶದಲ್ಲಿ ಹಣದುಬ್ಬರ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈಗಾಗಲೇ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡ ಆರರಿಂದ ಕೆಳಕ್ಕೆ ಇಳಿಯುವ ಸಾಧ್ಯತೆ ಇದೆ. ಆದ್ದರಿಂದಾಗಿ ರೆಪೋ ದರ ಏರಿಕೆ ಅನಿವಾರ್ಯ ಎಂದಿದ್ದಾರೆ. ಆದರೆ ರೆಪೋ ದರ ಏರಿಕೆಯಿಂದಾಗಿ ಜನರ ಹಣಕಾಸಿನ ಮೇಲೆ ಹಲವಾರು ಪ್ರಭಾವ ಬೀರಲಿದೆ.
ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿದೆ. ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಹಾಗಾದರೆ ಈ ರೆಪೋ ದರ ಏರಿಕೆಯಿಂದಾಗಿ ಜನರ ಮೇಲೆ ಏನೆಲ್ಲಾ ಪ್ರಭಾವ ಬೀರಲಿದೆ ಎಂದು ತಿಳಿಯಲು ಮುಂದೆ ಓದಿ...
ಇಎಂಐ ಮೇಲೆ ಏನು ಪ್ರಭಾವ?
ಕಳೆದ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಹಲವಾರು ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಸಾಮಾನ್ಯವಾಗಿ ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿದರೆ ಅದರ ಪರಿಣಾಮ ಬ್ಯಾಂಕಿನ ಬಡ್ಡಿದರದ ಮೇಲೆ ಬೀರುತ್ತದೆ. ಆರ್‌ಬಿಐ ಸಾಲದ ದರವನ್ನು ಏರಿಕೆ ಮಾಡಿದ ಕಾರಣದಿಂದಾಗಿ ಬ್ಯಾಂಕ್‌ಗಳು ರೆಪೋ ದರ ಆಧಾರಿತ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಜನರ ಇಎಂಐ ಹೊರೆಯು ಅಧಿಕವಾಗಿದೆ. ಈಗ ಮತ್ತೆ ರೆಪೋ ದರ ಏರಿಕೆ ಆಗಿರುವ ಕಾರಣದಿಂದಾಗಿ ಮತ್ತೆ ಇಎಂಐ ಹೊರೆಯು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಆರ್‌ಬಿಐ ರೆಪೋ ದರ ಮತ್ತೆ ಏರಿಕೆ ಮಾಡುವ ಸುಳಿವು ಲಭ್ಯವಾಗುತ್ತಿದ್ದಂತೆ ಎಚ್‌ಡಿಎಫ್‌ಸಿ, ಕೆನರಾ ಬ್ಯಾಂಕ್ ಸೇರಿ ಹಲವು ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಎರಡನೇ ಬಾರಿಗೆ ಹೆಚ್ಚಳ ಮಾಡಿದೆ.
ಎಫ್‌ಡಿ ಹೂಡಿಕೆದಾರರಿಗೆ ಲಾಭ!
ಆರ್‌ಬಿಐ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದಂತೆ ನಿಶ್ಚಿತ ಠೇವಣಿ ಅಥವಾ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡಲಿದೆ. ಇದರಿಂದಾಗಿ ಹೂಡಿಕೆದಾರರಿಗೆ ಸಹಾಯವಾಗಲಿದೆ. ಇನ್ನು ಈ ಹಿಂದೆ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಹಲವಾರು ಬ್ಯಾಂಕುಗಳು ಎಫ್‌ಡಿ ದರವನ್ನು ಹೆಚ್ಚಿಸಿದೆ. ಈಗ ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಹೊಸದಾಗಿ ಸಾಲ ಪಡೆಯುವುದಾದರೆ?
ಪ್ರಸ್ತುತ ದೇಶದಲ್ಲಿ ಗೃಹ ಸಾಲ ಪಡೆಯುವವರ ಸಂಖ್ಯೆ ಅಧಿಕವಾಗಿದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತದೆ. ಆದರೆ ಈ ಹಣದುಬ್ಬರದ ನಡುವೆ ಆರ್‌ಬಿಐನ ಕ್ರಮದಿಂದಾಗಿ ಸಾಲದ ಬಡ್ಡಿದರವು ಹೆಚ್ಚಾಗಲಿದೆ. ಜನರು ಈ ವೇಳೆ ಸಾಲ ಪಾವತಿ ನಿರ್ವಹಣೆ ಮಾಡಬೇಕಾದರೆ ಸಾಲದ ಅವಧಿಯನ್ನು ಹೆಚ್ಚು ಮಾಡಿಕೊಂಡು ಇಎಂಐ ಪಾವತಿ ಮಾಡುವುದು ಉತ್ತಮ. ಈ ಬೆಲೆ ಏರಿಕೆ ನಡುವೆ ಇಎಂಐ ಹೆಚ್ಚಳವು ನಿಮಗೆ ಹೊರೆಯಾಗಬಹುದು.
ಈಗಾಗಲೇ ಸಾಲ ಪಡೆದಿದ್ದರೆ ಏನು ಕಥೆ?
ಇನ್ನು ನೀವು ಎರಡನೇ ಬಾರಿಗೆ ರೆಪೋ ದರ ಏರಿಕೆಗೂ ಮುನ್ನವೇ ಸಾಲವನ್ನು ಪಡೆದಿದ್ದಾರೆ, ಅಥವಾ ಹಲವು ತಿಂಗಳುಗಳ ಹಿಂದೆ ಸಾಲವನ್ನು ಪಡೆದಿದ್ದಾರೆ ಮುಂದೆ ಇಎಂಐ ಕಥೆ ಏನು ಎಂಬ ಪ್ರಶ್ನೆ ಮೂಡಬಹುದು. ಆದರೆ ಹಲವು ತಿಂಗಳುಗಳ ಹಿಂದೆ ಸಾಲವನ್ನು ಪಡೆದವರಿಗೆ ಈ ನೂತನ ಬಡ್ಡಿದರವು ಸಾಮಾನ್ಯವಾಗಿ ಯಾವುದೇ ಪ್ರಭಾವವನ್ನು ಉಂಟು ಮಾಡುವುದಿಲ್ಲ. ಆದರೆ ಪ್ರಮುಖವಾಗಿ ಗೃಹ ಸಾಲ, ಕಾರು ಖರೀದಿಗಾಗಿ ಸಾಲ ಪಡೆದವರ ಸಾಲದ ಮೇಲಿನ ಬಡ್ಡಿದರದ ಮೇಲೆ ಪರಿಣಾಮ ಬೀರಲಿದೆ. ನೀವು ಪಡೆದಿರುವ ಸಾಲವು ರೆಪೋ ಆಧಾರಿತವಾಗಿದ್ದರೆ, ಸಾಲದ ಬಡ್ಡಿದರವು ಹೆಚ್ಚಾಗಲಿದೆ. ಈ ಹಿಂದೆಯೇ ಹಲವಾರು ಬ್ಯಾಂಕ್‌ಗಳು ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ. ಈಗ ಮತ್ತೆ ಬಡ್ಡಿದರ ಹೆಚ್ಚಳ ಸಾಧ್ಯತೆ ಇದೆ.
More From GoodReturns

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications