ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ವಾಪಾಸ್ ಪಡೆದಿದೆ. ಆದರೆ 2000 ರೂಪಾಯಿ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ ಎಂದು ಹೇಳಿದೆ. ಈ ನಡುವೆ ಪೆಟ್ರೋಲ್ ಪಂಪ್‌ಗಳಲ್ಲಿ 2000 ರೂಪಾಯಿ ನೋಟುಗಳದ್ದೇ ದರ್ಬಾರು ಕಂಡು ಬರುತ್ತಿದೆ.
ಹೌದು, ಪೆಟ್ರೋಲ್ ಪಂಪ್‌ಗಳಲ್ಲಿ 2000 ರೂಪಾಯಿ ನೋಟನ್ನು ನೀಡಿ ಪೆಟ್ರೋಲ್ ಹಾಕಿಸಿಕೊಳ್ಳುವವರ ಪ್ರಮಾಣವು ಈಗ ಹೆಚ್ಚಳವಾಗಿದೆ. ಅಷ್ಟು ಮಾತ್ರವಲ್ಲದೆ ಒಟ್ಟಾರೆಯಾಗಿ ದೈನಂದಿನವಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ನಗದು ಬಳಕೆ ಪ್ರಮಾಣವು ಸುಮಾರು ಶೇಕಡ 90ರಷ್ಟು ಏರಿಕೆಯಾಗಿದೆ. ಈ ಹಿಂದೆ ಆನ್‌ಲೈನ್ ವಹಿವಾಟು ನಡೆಸುತ್ತಿದ್ದವರೂ ಕೂಡಾ ಈಗ ನಗದು ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಅಧಿಕ ವಿವರ...

2000 ನೋಟು ಬದಲಾವಣೆಗಾಗಿ ಪೆಟ್ರೋಲ್ ಪಂಪ್ ಬಳಕೆ
2000 ರೂಪಾಯಿಯ ನೋಟನ್ನು ಕಳೆದ ಶುಕ್ರವಾರ ಆರ್‌ಬಿಐ ವಾಪಾಸ್ ಪಡೆದಾಗ ಜನರು ಹೆಚ್ಚಾಗಿ ನಗದನ್ನು ಪೆಟ್ರೋಲ್ ಪಂಪ್‌ಗಳಲ್ಲಿ ಬಳಕೆ ಮಾಡುತ್ತಿರಲಿಲ್ಲ. ಆದರೆ ನಗದು ಬಳಕೆ ಪ್ರಮಾಣ ನೋಟು ಚಲಾವಣೆಯಿಂದ ಹಿಂಪಡೆದ ಬಳಿಕ ಹೆಚ್ಚಳವಾಗಿದೆ. ಈಗ ಜನರು 100 ಅಥವಾ 200 ರೂಪಾಯಿಯ ಪೆಟ್ರೋಲ್ ಖರೀದಿಗೂ 2000 ರೂಪಾಯಿ ನೋಟನ್ನು ನೀಡುತ್ತಿದ್ದಾರೆ ಎಂದು ಪೆಟ್ರೋಲ್ ಪಂಪ್ ಡೀಲರ್‌ಗಳು ಹೇಳುತ್ತಿದ್ದಾರೆ.
ವಹಿವಾಟುಗಳು ಸರಿಯಾದ ರೀತಿಯಲ್ಲಿ ನಡೆಯಬೇಕಾದರೆ ಆರ್‌ಬಿಐನ ಸಹಾಯ ಮುಖ್ಯವಾಗಿದೆ. ಬ್ಯಾಂಕ್‌ಗಳು ಅಧಿಕ ಪ್ರಮಾಣದಲ್ಲಿ ನೋಟುಗಳ ಬದಲಾವಣೆ ಮಾಡುವಂತೆ ಸೂಚನೆ ನೀಡಿಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಆರ್‌ಬಿಐ) ಪೆಟ್ರೋಲ್ ಪಂಪ್ ಮಾಲೀಕರು ಮನವಿ ಮಾಡಿದ್ದಾರೆ.
"100- 200 ರೂಪಾಯಿಯ ಪೆಟ್ರೋಲ್, ಡಿಸೇಲ್ ಖರೀದಿಗೂ ಕೂಡಾ 2000 ರೂಪಾಯಿಯ ನೋಟುಗಳನ್ನು ಗ್ರಾಹಕರು ನೀಡುತ್ತಿದ್ದಾರೆ. ಈ ಮೂಲಕ ನೋಟು ಬದಲಾವಣೆ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಚಿಲ್ಲರೆಯ ಅಭಾವ ಉಂಟಾಗಿದೆ," ಎಂದು ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ ಅಜಯ್ ಬನ್ಸಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಹಕರಲ್ಲಿ ಕಾರ್ಡ್ ಬಳಸಲು ಮತ್ತು ಆನ್‌ಲೈನ್ ಪಾವತಿಯನ್ನು ಬಳಕೆ ಮಾಡಲು ನಾವು ಮನವಿ ಮಾಡುತ್ತಿದ್ದೇವೆ ಎಂದು ಪೆಟ್ರೋಲ್ ಪಂಪ್ ಡೀಲರ್‌ಗಳು ಹೇಳಿದ್ದಾರೆ. "2000 ರೂಪಾಯಿ ನೋಟು ಹಿಂಪಡೆಯುವುದಕ್ಕೂ ಮುನ್ನ ನಮ್ಮಲ್ಲಿ ದೈನಂದಿನವಾಗಿ ಶೇಕಡ 10ರಷ್ಟು ನಗದು ಮಾತ್ರ ವಹಿವಾಟಿನಲ್ಲಿ ಬಳಕೆ ಮಾಡಲಾಗುತ್ತಿತ್ತು. ಆದರೆ ನೋಟು ಚಲಾವಣೆಯಿಂದ ಹಿಂಪಡೆದ ಬಳಿಕ ಶೇಕಡ 90ರಷ್ಟು ನಗದು ಬಳಕೆ ಮಾಡಲಾಗುತ್ತಿದೆ," ಎಂದು ಹೇಳಿದ್ದಾರೆ.
ಈ ಹಿಂದೆ 2016ರಲ್ಲಿ 500 ಹಾಗೂ 1000 ರೂಪಾಯಿಯ ನೋಟುಗಳನ್ನು ಅಪನಗದೀಕರಣ ಮಾಡಿದಾಗ ಅತೀ ಹೆಚ್ಚು ತೊಂದರೆಗೆ ಒಳಗಾಗಿದ್ದು ಪೆಟ್ರೋಲ್ ಪಂಪ್‌ಗಳು ಆಗಿದೆ. ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ಆದಾಯ ತೆರಿಗೆ ನೋಟಿಸ್ ಬಂದಿದೆ. ಯಾವುದೇ ತಪ್ಪು ಇಲ್ಲದೆಯೇ ನೋಟಿಸ್ ಬಂದಿದೆ. ಈಗಲೂ ಕೂಡಾ ಪೆಟ್ರೋಲ್ ಪಂಪ್‌ಗಳು ಅಪಾಯದಲ್ಲಿದೆ. ತೊಂದರೆಯನ್ನು ಅನುಭವಿಸುತ್ತಿದೆ ಎಂದು ಅಜಯ್ ಬನ್ಸಾಲ್ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
"ದೈನಂದಿನವಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಶೇಕಡ 40ರಷ್ಟು ಡಿಜಿಟಲ್ ಪಾವತಿ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಅದು ಶೇಕಡ 10ಕ್ಕೆ ಇಳಿಕೆಯಾಗಿದೆ. ನಗದು ಪ್ರಮಾಣವು ಹೆಚ್ಚಳವಾಗಿದೆ," ಎಂದು ಪುನರುಚ್ಛರಿಸಿದ್ದಾರೆ. 2000 ರೂಪಾಯಿಯ ನೋಟುಗಳು ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯ ಸುಮಾರು ಶೇಕಡ 10.8ರಷ್ಟು ಅಥವಾ 3.6 ಲಕ್ಷ ಕೋಟಿ ರೂಪಾಯಿ ಇದೆ. ಅದನ್ನು ಸೆಪ್ಟೆಂಬರ್ 30, 2023 ರವರೆಗೆ ಬದಲಾವಣೆ ಮಾಡುವ ಅವಕಾಶವಿದೆ.
More From GoodReturns

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications