ಭಾರತದಲ್ಲಿನ ಅತ್ಯಂತ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಅಮೆಜಾನ್ ಇಂದಿನಿಂದ ಅಂದರೆ ಸೆಪ್ಟೆಂಬರ್ 19, 2023 ರಿಂದ ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಪಾವತಿಗಳು ಅಥವಾ ಕ್ಯಾಶ್‌ಲೋಡ್‌ಗಳಿಗಾಗಿ 2000 ರೂಪಾಯಿ ನೋಟುಗಳನ್ನು ಸ್ವೀಕರಿಸಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟನ್ನು ಮೇ ತಿಂಗಳಿನಲ್ಲಿ ಚಲಾವಣೆಯಿಂದ ವಾಪಾಸ್ ಪಡೆದುಕೊಂಡಿದೆ.
ಸೆಪ್ಟೆಂಬರ್ 19, 2023 ರಿಂದ, ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಆರ್ಡರ್‌ಗಳು ಅಥವಾ ಕ್ಯಾಶ್‌ಲೋಡ್‌ಗಳಿಗಾಗಿ ನಾವು 2000 ರೂಪಾಯಿ ಕರೆನ್ಸಿ ನೋಟುಗಳನ್ನು ಸ್ವೀಕರಿಸುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 19, 2023 ರಂದು 2000 ರೂಪಾಯಿ ನೋಟುಗಳನ್ನು ವಾಪಾಸ್ ಪಡೆದಿದೆ. ಇದಾದ ಬಳಿಕ ಅಮೆಜಾನ್ 2,000 ರೂಪಾಯಿ ನೋಟುಗಳನ್ನು ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಪಾವತಿಗಳು ಮತ್ತು ನಗದು ಲೋಡ್‌ಗಳಿಗಾಗಿ ಗ್ರಾಹಕರಿಂದ ಪಡೆದುಕೊಳ್ಳುತ್ತಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ ತಿಂಗಳಿನಲ್ಲಿ 2000 ರೂಪಾಯಿ ನೋಟನ್ನು ಚಲಾವಣೆಯಿಂದ ವಾಪಾಸ್ ಪಡೆದಿದೆ. ಬ್ಯಾಂಕುಗಳಲ್ಲಿ ನಾವು 2000 ರೂಪಾಯಿ ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ನಾವು ಮನೆಯಲ್ಲೇ ಕುಳಿತು 2000 ರೂಪಾಯಿ ನೋಟನ್ನು ಬದಲಾವಣೆ ಮಾಡುವ ಆಯ್ಕೆಯನ್ನು ಅಮೆಜಾನ್ ನಮಗೆ ನೀಡಿತ್ತು.
"ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಪಾವತಿಗಳು ಮತ್ತು ಕ್ಯಾಶ್‌ಲೋಡ್‌ಗಳಿಗಾಗಿ 2000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಾವು ಸೆಪ್ಟೆಂಬರ್ 19 ರಿಂದ ನಿಲ್ಲಿಸುತ್ತೇವೆ," ಎಂದು ಅಮೆಜಾನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಈ ಹಿಂದೆಯೇ ಹೇಳಿದೆ. ಅದರಂತೆ ಇಂದು (ಸೆಪ್ಟೆಂಬರ್ 19) ಈ ಅವಕಾಶ ಕೊನೆಯಾಗಲಿದೆ.
ಆರ್‌ಬಿಐ ತನ್ನ ಮಾರ್ಗಸೂಚಿಗಳಲ್ಲಿ 2000 ರೂಪಾಯಿ ಮೌಲ್ಯದ ನೋಟುಗಳನ್ನು ಡೆಪಾಸಿಟ್ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸುಮಾರು ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ. 2000 ರೂಪಾಯಿ ಮುಖಬೆಲೆಯ ಬ್ಯಾಂಕ್‌ನೋಟುಗಳನ್ನು ಸೆಪ್ಟೆಂಬರ್ 30, 2023 ರೊಳಗೆ ಬದಲಾಯಿಸಬೇಕು ಅಥವಾ ಡೆಪಾಸಿಟ್ ಮಾಡಬೇಕು ಎಂದು ಆರ್‌ಬಿಐ ಹೇಳಿದೆ. ಈ ದಿನಾಂಕವು ಕೂಡಾ ಸಮೀಪಿಸುತ್ತಿದೆ.
ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟುಗಳಲ್ಲಿ ಶೇಕಡ 50 ರಷ್ಟು ನೋಟುಗಳನ್ನು ವಾಪಾಸ್ ಪಡೆಯುವ ಬಗ್ಗೆ ಘೋಷಣೆ ಮಾಡಿದ 20 ದಿನಗಳಲ್ಲಿ ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ. ಜೂನ್ 30 ರವರೆಗೆ 2.72 ಟ್ರಿಲಿಯನ್ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳನ್ನು ವಾಪಾಸ್ ನೀಡಲಾಗಿದೆ.


Click it and Unblock the Notifications