ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಆಶ್ವರ್ಯಕರ ಹೆಜ್ಜೆಯನ್ನು ತೆಗೆದುಕೊಂಡಿದೆ. ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಲು ಶುಕ್ರವಾರ ಆರ್‌ಬಿಐ ನಿರ್ಧಾರ ಮಾಡಿದೆ. ಆದರೆ ಈ ಬ್ಯಾಂಕ್ ನೋಟುಗಳ ಕಾನೂನುಬದ್ಧ ಟೆಂಡರ್ ಮುಂದುವರಿಯಲಿದೆ.
ಇನ್ನು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಬ್ಯಾಂಕುಗಳು 2000 ರೂಪಾಯಿಯ ನೋಟನ್ನು ಗ್ರಾಹಕರಿಗೆ ನೀಡಬಾರದು ಎಂದು ಸೂಚನೆ ನೀಡಿದೆ. ಇನ್ನು 2000 ರೂಪಾಯಿ ನೋಟನ್ನು ಬ್ಯಾಂಕುಗಳಿಗೆ ಅಥವಾ ಆರ್‌ಬಿಐನ ಕೇಂದ್ರಗಳಿಗೆ ವಾಪಾಸ್ ನೀಡುವಂತೆ ಕೇಂದ್ರ ಬ್ಯಾಂಕ್ ತಿಳಿಸಿದೆ. 2000 ರೂಪಾಯಿ ನೋಟನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬಹುದು ಅಥವಾ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದು.

ಸಾಮಾನ್ಯ ಜನರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ 2000 ರೂಪಾಯಿ ನೋಟನ್ನು ವಾಪಾಸ್ ನೀಡಲು ಒಟ್ಟು ನಾಲ್ಕು ತಿಂಗಳುಗಳ ಸಮಯವಕಾಶವನ್ನು ನೀಡಿದೆ. ಅಂದರೆ ಜನರು 2000 ರೂಪಾಯಿಯ ನೋಟನ್ನು ಸೆಪ್ಟೆಂಬರ್ 30, 2023ರವರೆಗೆ ಬದಲಾವಣೆ ಮಾಡುವ ಅವಕಾಶವಿದೆ. ಇನ್ನು ಹಲವಾರು ವರ್ಷಗಳಿಂದ 2000 ರೂಪಾಯಿ ನೋಟನ್ನು ಆರ್‌ಬಿಐ ಪ್ರಕಟಿಸುತ್ತಿಲ್ಲ ಎಂಬುವುದು ಗಮನಾರ್ಹ.
2000 ರೂಪಾಯಿ ನೋಟುಗಳನ್ನು ಮೊದಲು ನವೆಂಬರ್ 8, 2016 ರಂದು ಪರಿಚಯಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ 500 ರೂಪಾಯಿ ಮತ್ತು 1000 ರೂಪಾಯಿ ನೋಟನ್ನು ಅಮಾನ್ಯೀಕರಣ ಮಾಡಿದ ಬಳಿಕ 2000 ರೂಪಾಯಿ ಮತ್ತು 500 ರೂಪಾಯಿ ನೋಟನ್ನು ಜಾರಿ ಮಾಡಲಾಗಿದೆ. ಆದರೆ ಜಾರಿ ಮಾಡಿದ 7 ವರ್ಷದಲ್ಲೇ ಈಗ ಈ ನೋಟನ್ನು ಹಿಂಪಡೆಯಲಾಗುತ್ತಿದೆ.
ಸಾಮಾನ್ಯ ಜನರ ಮೇಲೆ ಇದರ ಪ್ರಭಾವವೇನು?
ಸೆಪ್ಟೆಂಬರ್ 30, 2023ಕ್ಕೂ ಮುನ್ನವೇ 2000 ರೂಪಾಯಿಯ ನೋಟನ್ನು ಬದಲಾಯಿಸಿಕೊಳ್ಳಲು ಆರ್‌ಬಿಐ ಜನರಿಗೆ ಅವಕಾಶ ನೀಡಿದೆ. ಹಾಗೆಯೇ ಇದಕ್ಕೆ 4 ತಿಂಗಳ ಅವಕಾಶವನ್ನು ಕೂಡಾ ನೀಡಲಾಗಿದೆ. ಇನ್ನು ಈ 2000 ರೂಪಾಯಿ ನೋಟನ್ನು ಆರ್‌ಬಿಐ ಹಿಂಪಡೆಯುವ ನಿರ್ಧಾರವು ಸಾಮಾನ್ಯ ಜನರ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅದಕ್ಕೆ ಮುಖ್ಯ ಕಾರಣ ಹಣವನ್ನು ವಿನಿಮಯ ಮಾಡಿಕೊಳ್ಳಲು ಸಾಕಷ್ಟು ಸಮಯವಕಾಶ ನೀಡಲಾಗಿರುವುದು ಆಗಿದೆ.
ಕೃಷ್ಣಮೂರ್ತಿ ಸುಬ್ರಮಣಿಯನ್ (ಮಾಜಿ ಮುಖ್ಯ ಆರ್ಥಿಕ ಸಲಹೆಗಾರ) ಆರ್‌ಬಿಐ 2000 ರೂಪಾಯಿ ನೋಟು ಚಲಾವಣೆ ರದ್ದುಗೊಳಿಸಿದ ಬಗ್ಗೆ ಮಾತನಾಡಿದ್ದಾರೆ. ಈ ಕ್ರಮವು ಸಮಾಜದ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
"2000 ರೂಪಾಯಿಯ ನೋಟಿನ ಬಳಕೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಪ್ರಸ್ತುತ ನಡೆಸಲಾಗುತ್ತಿಲ್ಲ. ಶೇಕಡ 10ರಷ್ಟು ಮಾತ್ರ ವಹಿವಾಟನ್ನು 2000 ರೂಪಾಯಿ ನೋಟಿನ ಮೂಲಕ ಮಾಡಲಾಗುತ್ತಿದೆ. ಸಾಮಾನ್ಯ ಜನರು ಹೆಚ್ಚಾಗಿ ಡಿಜಿಟಲ್ ವಹಿವಾಟನ್ನು ನಡೆಸುತ್ತಿದ್ದಾರೆ," ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ತಿಳಿಸಿದ್ದಾರೆ. ಇದಕ್ಕೆ ಒಂದು ನಿದರ್ಶನವನ್ನು ಕೂಡಾ ವಿವರಿಸಿದ್ದಾರೆ.
"ನಾನು ಚಹಾ ಅಂಗಡಿಯವರ ಬಳಿ ಮಾತನಾಡಿದಾಗ ಪ್ರಸ್ತುತ ಹೆಚ್ಚಿನ ಜನರು ಆನ್‌ಲೈನ್ ವಹಿವಾಟನ್ನು ನಡೆಸುತ್ತಾರೆ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆ ನಗದು ವಹಿವಾಟು ನಡೆಸುತ್ತಿದ್ದಾಗ, ಚಹಾ ಮಾಡಿಕೊಡಲು 2-3 ನಿಮಿಷ, ಚಿಲ್ಲರೆ ಮೊತ್ತ ನೀಡಲು 2-3 ನಿಮಿಷ ತಗುಲುತ್ತಿತ್ತು ಎಂದಿದ್ದಾರೆ. ಆದರೆ ಈಗ ಚಿಲ್ಲರೆಯ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ," ಎಂದು ಹೇಳಿದ್ದಾರೆ.
"ಇನ್ನು ಚಹಾಕ್ಕೆ ಬೇಕಾದ ಹಾಲನ್ನು ನೀಡಲು ಬರುವಾತ ಮುಂಜಾನೆ ಹಾಲು ನೀಡಿ ಹೋದರೆ ಸಂಜೆಯ ವೇಳೆಗೆ ಹಣ ಪಡೆಯಲು ಬರುತ್ತಿದ್ದ. ಆದರೆ ಈಗ ಡಿಜಿಟಲ್ ಆಯ್ಕೆ ಇರುವಾಗ ಹಣವನ್ನು ಆನ್‌ಲೈನ್ ಮೂಲಕವೇ ಕಳುಹಿಸಬಹುದಾಗಿದೆ. ಒಟ್ಟಿನಲ್ಲಿ ದೇಶದಲ್ಲಿ ಪ್ರಸ್ತುತ 2000 ರೂಪಾಯಿ ನೋಟಿನ ಬಳಕೆಯಾಗುತ್ತಿಲ್ಲ ಮತ್ತು ಹೆಚ್ಚಾಗಿ ಜನರು ಡಿಜಿಟಲ್ ವಹಿವಾಟನ್ನು ನಡೆಸುತ್ತಿದ್ದಾರೆ. ಆದ್ದರಿಂದಾಗಿ ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಉಂಟಾಗುವುದು ಎಂಬುವುದು ನನಗೆ ಅನಿಸುತ್ತಿಲ್ಲ," ಎಂದು ಕೃಷ್ಣಮೂರ್ತಿ ಸುಬ್ರಮಣಿಯನ್ ಸ್ಪಷ್ಟಪಡಿಸಿದ್ದಾರೆ.
2000 ರೂಪಾಯಿ ನೋಟು ಬದಲಾವಣೆ ಎಲ್ಲಿ, ಹೇಗೆ ಮಾಡುವುದು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 19, 2023ರಂದು ಹೊರಡಿಸಿದ ಸುತ್ತೋಲೆಯಲ್ಲಿ, "ಸೆಪ್ಟೆಂಬರ್ 30, 2023ರವರೆಗೆ ಸಾರ್ವಜನಿಕರು 2000 ರೂಪಾಯಿ ನೋಟನ್ನು ಜಮೆ ಮಾಡಲು ಅಥವಾ ಬದಲಾವಣೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ," ಎಂದು ಉಲ್ಲೇಖಿಸಲಾಗಿದೆ.
"ಎಲ್ಲಾ ಬ್ಯಾಂಕ್‌ಗಳಲ್ಲಿ ಇರುವ ನಮ್ಮ ಖಾತೆಗಳಿಗೆ ನಾವು 2000 ರೂಪಾಯಿಯ ಬ್ಯಾಂಕ್ ನೋಟುಗಳನ್ನು ಜಮೆ ಮಾಡಬಹುದಾಗಿದೆ. ನಾವು ಸಾಮಾನ್ಯ ರೀತಿಯಲ್ಲಿಯೇ ಅಂದರೆ ಯಾವುದೇ ನಿರ್ಬಂಧಗಳಿಲ್ಲದೆ, ನಾವು ಯಾವಾಗಲೂ ಹೇಗೆ ನಗದನ್ನು ನಮ್ಮ ಖಾತೆಗೆ ಜಮೆ ಮಾಡುತ್ತೇವೆಯೋ ಹಾಗೆಯೆ ಜಮೆ ಮಾಡಬಹುದಾಗಿದೆ," ಎಂದು ಆರ್‌ಬಿಐ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications