ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟಿನ ಬಗ್ಗೆ ಮೇ 19ರಂದು ಪ್ರಮುಖವಾದ ನಿರ್ಧಾರವನ್ನು ಘೋಷಣೆ ಮಾಡಿದೆ. ಅದರ ಪ್ರಕ್ರಿಯೆ ಇಂದಿನಿಂದ (ಮೇ 23) ಆರಂಭವಾಗಲಿದೆ. ಇಂದಿನಿಂದ ದೇಶದಾದ್ಯಂತ ಎಲ್ಲ ಬ್ಯಾಂಕ್‌ಗಳಲ್ಲಿ ನೀವು 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಿಸಿಕೊಳ್ಳಬಹುದಾಗಿದೆ.
ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯುವುದಾಗಿ ಆರ್‌ಬಿಐ ಮೇ 19ರಂದು ತಿಳಿಸಿದೆ. ಆದರೆ ಈ ಬ್ಯಾಂಕ್ ನೋಟುಗಳ ಕಾನೂನುಬದ್ಧವಾಗಿ ಮುಂದುವರಿಯಲಿದೆ ಎಂದು ಕೂಡಾ ಇದೇ ವೇಳೆ ಹೇಳಿದೆ. ಬ್ಯಾಂಕುಗಳಿಗೆ ಈ ನೋಟು ಬದಲಾವಣೆ ಪ್ರಕ್ರಿಯೆಯ ಸಿದ್ಧತೆಗಾಗಿ ಒಟ್ಟು 4 ದಿನಗಳ ಸಮಯವಕಾಶ ಲಭ್ಯವಾಗಿತ್ತು.

ನಿಮ್ಮಲ್ಲೂ 2000 ರೂಪಾಯಿಯ ನೋಟು ಇದ್ದರೆ ನೀವು ಬ್ಯಾಂಕ್‌ಗೆ ಹೋಗಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಅಥವಾ ನಿಮ್ಮ ಖಾತೆಗೆ ಡೆಪಾಸಿಟ್ ಮಾಡಿಕೊಳ್ಳಬಹುದಾಗಿದೆ. ನೀವು ಬ್ಯಾಂಕ್‌ಗೆ ಹೋಗುವುದಕ್ಕೂ ಮುನ್ನ ಈ 10 ಅಂಶಗಳನ್ನು ತಿಳಿದಿರಬೇಕಾಗುತ್ತದೆ. ಮುಂದೆ ಓದಿ...
1. ಕೂಡಲೇ ಬ್ಯಾಂಕ್‌ಗೆ ಹೋಗಬೇಡಿ. ಯಾಕೆಂದರೆ ನೀವು ಯಾವುದೇ ಆತಂಕ ಪಡುವಂತಹ ಗಂಭೀರ ಸ್ಥಿತಿ ಉಂಟಾಗಿಲ್ಲ. ಆರ್‌ಬಿಐ ನೋಟು ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಸಮಯವಕಾಶವನ್ನು ನೀಡಿದ್ದು ನೀವು ಒಂದು ಬಾರಿ 2000 ರೂಪಾಯಿಯ 10 ನೋಟುಗಳಂತೆ ಒಟ್ಟು 20 ಸಾವಿರ ರೂಪಾಯಿ ಜಮೆ ಅಥವಾ ಬದಲಾವಣೆ ಮಾಡಿಕೊಳ್ಳಬಹುದು.
ಇನ್ನು ಈ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ. "ಈ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ. ನಾವು ಒಟ್ಟಾಗಿ ಎಷ್ಟು ನೋಟುಗಳು ವಾಪಾಸ್ ಲಭ್ಯವಾಗುತ್ತದೆ ಎಂದು ನೋಡುತ್ತೇವೆ. ಸೆಪ್ಟೆಂಬರ್ 30ರ ನಂತದ ಏನಾಗುತ್ತದೆ ಎಂಬ ಬಗ್ಗೆ ಈಗಲೇ ನಾವು ಊಹೆ ಮಾಡಲು ಸಾಧ್ಯವಿಲ್ಲ," ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
2. ಡೆಪಾಸಿಟ್ ಮಾಡುವ ಒಟ್ಟು ಮೊತ್ತಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಒಂದು ಬಾರಿ 2000 ರೂಪಾಯಿಯ 10 ನೋಟುಗಳನ್ನು ಮಾತ್ರ ಬದಲಾವಣೆ ಮಾಡಲು ಅವಕಾಶವಿದೆ. ಒಟ್ಟಾಗಿ ಎಷ್ಟು ಡೆಪಾಸಿಟ್ ಮಾಡಬಹುದು ಎಂಬ ಗರಿಷ್ಠ ಮಿತಿಯನ್ನು ಆರ್‌ಬಿಐ ನೀಡಿಲ್ಲ. ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡುವುದಾದರೆ ಕೆವೈಸಿ ಮಾಡಿಸಿಕೊಳ್ಳಬೇಕಾಗುತ್ತದೆ.
3. ಒಂದು ಖಾತೆಗೆ 50 ಸಾವಿರ ರೂಪಾಯಿಗಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗೆ ಯಾವುದೇ ದಾಖಲೆಗಳು ಬೇಕಾಗಿಲ್ಲ. "ನಾವು ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ನೀವು 50 ಸಾವಿರ ರೂಪಾಯಿಗಿಂತ ಅಧಿಕ ನಗದನ್ನು ಡೆಪಾಸಿಟ್ ಮಾಡುವುದಾದರೆ ಆದಾಯ ತೆರಿಗೆ ನಿಯಮ ಅನ್ವಯ ಮಾಡಲಾಗುತ್ತದೆ ಎಂಬುವುದು ನಿಮಗೆ ತಿಳಿದಿರಲಿ. ಅಧಿಕ ಮೊತ್ತ ಡೆಪಾಸಿಟ್ ಮಾಡುವಾಗ ನೀವು ಪ್ಯಾನ್ ಕಾರ್ಡ್ ಸಲ್ಲಿಸಬೇಕಾಗುತ್ತದೆ," ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.
4. 10 ನೋಟುಗಳನ್ನು ಜಮೆ ಮಾಡಲು requisition slip ಬೇಕಾಗಿಲ್ಲ. ಜನರು 20000 ರೂಪಾಯಿಯವರೆಗಿನ 2000 ರೂಪಾಯಿ ನೋಟುಗಳನ್ನು ಒಂದು ಬಾರಿ ಯಾವುದೇ ದಾಖಲೆಗಳನ್ನು ಸಲ್ಲಿಸದೆ ಜಮೆ ಮಾಡಬಹುದು ಎಂದು ಈಗಾಗಲೇ ಎಸ್‌ಬಿಐ ತಿಳಿಸಿದೆ.
5. ನೋಟು ಬದಲಾವಣೆ ಪ್ರಕ್ರಿಯೆ ಸರಳವಾಗಿ ನಡೆಯಲು ಎಲ್ಲ ಕ್ರಮವನ್ನು ಆರ್‌ಬಿಐ ಕೈಗೊಂಡಿದೆ. ಬಿಸಿಲು ಹೆಚ್ಚಾಗಿ ಇರುವ ಕಾರಣದಿಂದಾಗಿ ನೋಟು ಬದಲಾವಣೆಗೆ ಬರುವವರಿಗೆ ನಿಲ್ಲಲು, ಕೂರಲು ವ್ಯವಸ್ಥೆ ಮಾಡುವಂತೆ ಬ್ಯಾಂಕುಗಳಿಗೆ ಈಗಾಗಲೇ ಆರ್‌ಬಿಐ ತಿಳಿಸಿದೆ. ಸರತಿ ಸಾಲಿನಲ್ಲಿ ನಿಲ್ಲುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಮಾಡಲು ಆರ್‌ಬಿಐ ಹೇಳಿದೆ. ಸಾಮಾನ್ಯವಾಗಿ ನಗದು ಡೆಪಾಸಿಟ್, ನೋಟು ಬದಲಾವಣೆ ನಡೆಯುವಂತೆಯೇ ಈ ಪ್ರಕ್ರಿಯೆ ನಡೆಸಲು ಬ್ಯಾಂಕುಗಳಿಗೆ ತಿಳಿಸಲಾಗಿದೆ.
6. 2000 ರೂಪಾಯಿ ನೋಟು ಚಲಾವಣೆಯಿಂದ ಹಿಂಪಡೆಯಲಾಗುತ್ತಿದೆ. ಒಟ್ಟು ನಗದಿನಲ್ಲಿ ಕೇವಲ ಶೇಕಡ 10.8ರಷ್ಟು ಮಾತ್ರ ಈ ನೋಟುಗಳಿದೆ. ಆದ್ದರಿಂದ ಇದು ಆರ್ಥಿಕತೆಯ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡುವುದಿಲ್ಲ. ಸೆಪ್ಟೆಂಬರ್ 30ರ ಒಳಗಾಗಿ ಬಹುತೇಕ 2000 ರೂಪಾಯಿ ನೋಟುಗಳು ಬ್ಯಾಂಕ್‌ಗೆ ಜನರು ನೀಡುವ ನಿರೀಕ್ಷೆಯಿದೆ.
7. ವಿವಿಧ ಮುಖಬೆಲೆಯ ಸಾಕಷ್ಟು ನೋಟುಗಳು ಬ್ಯಾಂಕ್‌ಗಳಲ್ಲಿ ಲಭ್ಯವಿವೆ. ಆರ್‌ಬಿಐನಲ್ಲಿ ಮಾತ್ರವಲ್ಲದೆ ಬ್ಯಾಂಕ್‌ಗಳಲ್ಲೂ ಕೂಡಾ ಸಾಕಷ್ಟು ಪ್ರಮಾಣದ ಮುದ್ರಿತ ನೋಟುಗಳು ಲಭ್ಯವಿವೆ. ಸಾಕಷ್ಟು ಸ್ಟಾಕ್‌ಗಳು ಇದೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಆರ್‌ಬಿಐ ಬಳಿಯೂ ಬೇರೆ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿದೆ ಎಂದು ಆರ್‌ಬಿಐ ಹೇಳಿದೆ.
8. ಇನ್ನು ವಿದೇಶದಲ್ಲಿರುವವರಿಗೆ ಮತ್ತು ಸುದೀರ್ಘ ವಿದೇಶ ಪ್ರವಾಸದಲ್ಲಿ ಇರುವವರಿಗೆ ಕೊಂಚ ವಿನಾಯಿತಿ ನೀಡಲಾಗುತ್ತದೆ. ಜನರು ಎದುರಿಸಬಹುದಾದ ತೊಂದರೆಗಳ ಬಗ್ಗೆ ಸೂಕ್ಷ್ಮವಾಗಿರುತ್ತೇವೆ ಎಂದು ಆರ್‌ಬಿಐ ತಿಳಿಸಿದೆ. "ಜನರ ತೊಂದರೆಗಳನ್ನು ಪರಿಹರಿಸಲು ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಲು ನಮ್ಮ ಪ್ರಯತ್ನ ಇದಾಗಿದೆ. ಈಗ ನೋಟುಗಳನ್ನು ವಾಪಾಸ್ ನೀಡದಿದ್ದರೂ ಕಾನೂನುಬದ್ಧ ಕಾರಣಗಳು ಹೊಂದಿರುವವರಿಗೆ ಸೆಪ್ಟೆಂಬರ್ 30ರ ಬಳಿಕವೂ ಅವಕಾಶ ನೀಡಲಾಗುತ್ತದೆ," ಎಂದು ಆರ್‌ಬಿಐ ತಿಳಿಸಿದೆ.
9. ಆರ್‌ಬಿಐ 2019ರಲ್ಲೇ 2000 ರೂಪಾಯಿ ನೋಟು ಮುದ್ರಣವನ್ನು ನಿಲ್ಲಿಸಿದೆ. ಅದರ ಬಳಿಕ ಯಾವುದೇ 2000 ರೂಪಾಯಿ ನೋಟುಗಳನ್ನು ಮುದ್ರಣ ಮಾಡಲಾಗಿಲ್ಲ.
10. ಕ್ಲೀನ್ ನೋಟ್ ಪಾಲಿಸಿ: ಈ 2000 ರೂಪಾಯಿ ನೋಟು ವಿತ್‌ಡ್ರಾ ಮಾಡುವುದು ಆರ್‌ಬಿಐನ ಕ್ಲೀನ್ ನೋಟ್ ಪಾಲಿಸಿ ಭಾಗವಾಗಿದೆ ಎಂದು ಈಗಾಗಲೆ ಆರ್‌ಬಿಐ ತಿಳಿಸಿದೆ.
More From GoodReturns

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications