'ಡಿಜಿಟಲ್ ಇಂಡಿಯಾ' ದೇಶದಲ್ಲಿ ಸರ್ಕಾರದ ಅತೀ ಪ್ರಮುಖವಾದ ಅಭಿಮಾನವಾಗಿದೆ. ಡಿಜಿಟಲ್ ಇಂಡಿಯಾಕ್ಕಾಗಿ ಸರ್ಕಾರ ಅಧಿಕ ಗಮನಹರಿಸುತ್ತಿದೆ. ಭಾರತದಲ್ಲಿ ಆನ್‌ಲೈನ್ ವಹಿವಾಟು ಜನಪ್ರಿಯತೆ ಗಳಿಸಿದೆ. ಜನರು ಅಧಿಕವಾಗಿ ಹಣ ವರ್ಗಾವಣೆಗಾಗಿ ಈಗ ಆನ್‌ಲೈನ್ ವಿಧಾನವನ್ನೇ ಪಾಲಿಸುತ್ತಾರೆ.
ಜನರು ಈಗ ತ್ವರಿತವಾಗಿ ಮೊತ್ತವನ್ನು ಒಂದು ಬ್ಯಾಂಕ್‌ನಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು. ಆದರೆ ಇದಕ್ಕೂ ಹಿಂದೆ ಜನರು ಹಣ ವರ್ಗಾವಣೆ ಮಾಡಲು ಬ್ಯಾಂಕ್‌ನಲ್ಲಿ ಸಾಲುಗಟ್ಟಿ ನಿಲ್ಲಬೇಕಾಗಿತ್ತು. ದೇಶದಲ್ಲಿ ಸಾಕಷ್ಟು ಹಣ ವರ್ಗಾವಣೆ ಚಾನೆಲ್‌ಗಳಿವೆ. ಅವುಗಳಲ್ಲಿ ಐಎಂಪಿಎಸ್ ಒಂದಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಐಎಂಪಿಎಸ್ ಎಂದರೇನು?
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎಸ್‌ಪಿಸಿಐ) ಐಎಂಪಿಎಸ್ ಎಂದು ಕರೆಯಲ್ಪಡುವ ಶೀಘ್ರ ಹಣ ವರ್ಗಾವಣೆ ಸೇವೆಯನ್ನು ನೀಡುತ್ತದೆ. ಐಎಂಪಿಎಸ್ ಎಂದರೆ ತಕ್ಷಣ ಪಾವತಿ ಸೇವೆ (Immediate Payment Service) ಆಗಿದೆ.
ಯುಪಿಐ ಪಿನ್ ಎಂದರೇನು? PIN ಮರೆತರೆ ಏನು ಮಾಡಬೇಕು?
ಇದು ಪಾವತಿ ಚಾನಲ್ ಆಗಿದ್ದು, ಗ್ರಾಹಕರು ತಮ್ಮ ಉಳಿತಾಯ ಖಾತೆಗಳಿಂದ ಹಣವನ್ನು ಪಾವತಿ ಮಾಡಲು, ಹಣವನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ, ಸೇವೆಯು ಅಂತರ-ಬ್ಯಾಂಕ್ ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ದಿನದ 24 ಗಂಟೆಗಳು, ವರ್ಷದ 365 ದಿನಗಳ ಕಾಲ ಐಎಂಪಿಎಸ್ ವರ್ಗಾವಣೆ ಮಾಡಬಹುದಾಗಿದೆ.
ಐಎಂಪಿಎಸ್: ಬ್ಯಾಂಕ್ ರಜಾದಿನಗಳಲ್ಲಿ ಸೇವೆ ಇರುತ್ತದೆಯೇ?
ಸಾರ್ವಜನಿಕ ಮತ್ತು ಬೇರೆ ಯಾವುದೇ ಬ್ಯಾಂಕ್ ರಜೆಗಳು ಇರಲಿ, ಬ್ಯಾಂಕ್ ಮುಚ್ಚಿದ್ದರೂ ಕೂಡಾ ಯುಪಿಐ ವಹಿವಾಟಿನಂತೆಯೇ ಐಎಂಪಿಎಸ್ ವಹಿವಾಟು ಯಾವಾಗಲೂ ತೆರೆದಿರುತ್ತದೆ. ಬ್ಯಾಂಕ್ ರಜಾದಿನಗಳಲ್ಲಿಯೂ ಸಹ, ನೀವು ಕಳುಹಿಸುವ ಹಣವು ವರ್ಗಾವಣೆಯಾಗಲಿದೆ.
ಐಎಂಪಿಎಸ್: ವರ್ಗಾವಣೆ ಶುಲ್ಕ
ಐಎಂಪಿಎಸ್ ಶುಲ್ಕಗಳು ಈ ತಂತ್ರವನ್ನು ಬಳಸಿಕೊಂಡು ನೀವು ವರ್ಗಾವಣೆ ಮಾಡುತ್ತಿರುವ ಹಣದ ಪ್ರಮಾಣವನ್ನು ಅವಲಂಬಿಸಿರುತ್ತದೆ. ಮೊತ್ತವು 2.5 ರೂಪಾಯಿಯಿಂದ 25 ರೂಪಾಯಿವರೆಗೆ ಬದಲಾವಣೆಯಾಗುತ್ತದೆ. ಈ ಶುಲ್ಕಗಳು 10,000 ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೆ ಮೊತ್ತದ ಮೇಲೆ ಅನ್ವಯವಾಗುತ್ತದೆ.
ಐಎಂಪಿಎಸ್: ಅರ್ಹತಾ ಮಾನದಂಡ
ಈ ಸೌಲಭ್ಯದಿಂದ ನೀವು ಪ್ರಯೋಜನವನ್ನು ಪಡೆಯಲು ಬಯಸಿದರೆ, ನೀವು ಸಕ್ರಿಯ ಮೊಬೈಲ್ ಬ್ಯಾಂಕಿಂಗ್‌ನೊಂದಿಗೆ ಉಳಿತಾಯ ಖಾತೆಯನ್ನು ಹೊಂದಿರಬೇಕು.


Click it and Unblock the Notifications