For Quick Alerts
ALLOW NOTIFICATIONS  
For Daily Alerts

SGB ಗೋಲ್ಡ್ 2020- 21 ಸಿರೀಸ್ X ಸಬ್ ಸ್ಕ್ರಿಪ್ಷನ್ ಆರಂಭ

|

ಸವರನ್ ಗೋಲ್ಡ್ ಬಾಂಡ್ ಅಥವಾ SGB 2020- 21 ಕಂತಿನ ಸಬ್ ಸ್ಕ್ರಿಪ್ಷನ್ ಸೋಮವಾರದಂದು ಆರಂಭವಾಗಿದೆ. ಪ್ರತಿ ಗ್ರಾಮ್ ಗೆ ರು. 5104 ನಿಗದಿ ಆಗಿದೆ. ಇನ್ನು ಆನ್ ಲೈನ್ ಮೂಲಕ ಪಾವತಿ ಮಾಡಿದಲ್ಲಿ ಪ್ರತಿ ಗ್ರಾಮ್ ಗೆ 50 ರುಪಾಯಿ ರಿಯಾಯಿತಿ ದೊರೆಯುತ್ತದೆ. ಕಳೆದ ಆಗಸ್ಟ್ ನಲ್ಲಿ ತಲುಪಿದ್ದ ಗರಿಷ್ಠ ಮಟ್ಟದಿಂದ ಚಿನ್ನದ ದರ 10% ಕಡಿಮೆ ಆಗಿದೆ.

ಇನ್ನು ಕಳೆದ ಹತ್ತು ಟ್ರೇಡಿಂಗ್ ಸೆಷನ್ ನಲ್ಲಿ ಭಾರತೀಯ ಈಕ್ವಿಟಿ ದಾಖಲೆ ಎತ್ತರಕ್ಕೆ ಏರಿದೆ. ಡಾಲರ್ ಮೌಲ್ಯದಲ್ಲಿ ದುರ್ಬಲತೆ ಸೇರಿದಂತೆ ಇತರ ಅಂಶಗಳ ಪ್ರಭಾವದಿಂದ ಚಿನ್ನದ ದರದಲ್ಲಿ ಏರಿಕೆ ಕಾಣುವ ಮುಂಚಿತವಾಗಿ ಇನ್ನಷ್ಟು ಇಳಿಕೆ ಆಗಬಹುದು ಎಂಬ ನಿರೀಕ್ಷೆ ಇದೆ.

ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?

ಎರಡು ದಿನದಲ್ಲಿ 10 ಗ್ರಾಮ್ ಗೆ 2300 ರುಪಾಯಿಗೂ ಹೆಚ್ಚು ಇಳಿಕೆ ಕಂಡ ಮೇಲೆ ಸ್ವಲ್ಪ ಮಟ್ಟಿಗೆ ಏರಿಕೆಯನ್ನು ದಾಖಲಿಸಿ, ರು. 49,300ಕ್ಕೆ ಸ್ಥಿರವಾಗಿದೆ. ಸದ್ಯಕ್ಕೆ ಚಿನ್ನ ಮತ್ತು ಭಾರತೀಯ ಈಕ್ವಿಟಿಯನ್ನು ಹೋಲಿಸಿದಲ್ಲಿ ಸದ್ಯಕ್ಕೆ 1:1 ಪ್ರಮಾಣದಲ್ಲಿ ದರ ಇದೆ. ಭಾರತೀಯ ಈಕ್ವಿಟಿಯಲ್ಲಿ ಇನ್ನಷ್ಟು ಚಲನೆ ಮುಂದುವರಿದಲ್ಲಿ ಚಿನ್ನದ ಮೇಲೆ ಒತ್ತಡ ಹೆಚ್ಚಾಗಬಹುದು.

SGB ಗೋಲ್ಡ್ 2020- 21 ಸಿರೀಸ್ X ಸಬ್ ಸ್ಕ್ರಿಪ್ಷನ್ ಆರಂಭ

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶ ಅಂದರೆ, ಕೋವಿಡ್ 19. ಜನವರಿ 16ನೇ ತಾರೀಕಿನಂದು ಕೋವಿಡ್ 19 ಲಸಿಕೆ ಹಾಕಲು ಆರಂಭವಾದಲ್ಲಿ ಕೊರೊನಾ ಆರ್ಥಿಕ ಬಿಕ್ಕಟ್ಟಿನಿಂದ ಆರಂಭಿಕ ಚೇತರಿಕೆ ಭರವಸೆಯನ್ನು ಬಲಪಡಿಸುತ್ತದೆ.

2021ರಲ್ಲೂ ಚಿನ್ನದ ದರ ಮೇಲೇರುವ ಬಗ್ಗೆ ಭರವಸೆ ಇದೆ. ಆದರೆ 2020ರಲ್ಲಿ ನೀಡಿದಂತೆ 20% ರಿಟರ್ನ್ ಸಿಗಬಹುದು ಎಂಬ ನಂಬಿಕೆ ಇಲ್ಲ. ಚಿನ್ನದ ಮೇಲೆ ಹಣ ಹೂಡುವ ಮುನ್ನ ಇನ್ನಷ್ಟು ಇಳಿಕೆ ಆಗುವುದಕ್ಕೆ ಕಾಯುವುದು ಉತ್ತಮ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಸವರನ್ ಗೋಲ್ಡ್ ಬಾಂಡ್ ನಿಂದ 2.5% ಬಡ್ಡಿ ದೊರೆಯುತ್ತದೆ. ಮೆಚ್ಯೂರಿಟಿ ತನಕ ಇದ್ದಲ್ಲಿ ಕ್ಯಾಪಿಟಲ್ ಗೇಯ್ನ್ಸ್ ನಿಂದ ವಿನಾಯಿತಿ ಕೂಡ ಸಿಗುತ್ತದೆ. ಸಣ್ಣ ಪ್ರಮಾಣದ ಹೂಡಿಕೆಗೆ ಸವರನ್ ಗೋಲ್ಡ್ ಬಾಂಡ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು.

English summary

SGB Gold Series X Subscription Starts From January 11, 2021 At Rs 5104 Per Gram

On Monday, January 11, 2021 SGB gold series X subscription started at Rs 5104 per gram.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X