ಹೂಡಿಕೆ ಬಗ್ಗೆ ನಾವು ಯೋಚನೆ ಮಾಡುವಾಗ ಪ್ರಸ್ತುತ ನಮ್ಮ ಮುಂದೆ ಬರುವ ಆಯ್ಕೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಕೂಡಾ ಒಂದಾಗಿದೆ. ಪಿಪಿಎಫ್ ಸರ್ಕಾರದ ಯೋಜನೆಗಳಲ್ಲಿ ಒಂದಾಗಿದೆ. ಹಾಗೆಯೇ ಈ ಯೋಜನೆಯು ಆಕರ್ಷಕ ಬಡ್ಡಿದರವನ್ನು ಹೊಂದಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಉತ್ತಮ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಇದು ದೀರ್ಘಾವಧಿಯ ಯೋಜನೆ ಆಗಿದೆ.
ಇಷ್ಟು ಮಾತ್ರವಲ್ಲದೆ ಪಿಪಿಎಫ್ ಬಡ್ಡಿದರ ಹಾಗೂ ರಿಫಂಡ್ ಮೊತ್ತವು ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಹೊಂದಿದೆ. ಆದರೆ ಈ ಯೋಜನೆಯಲ್ಲಿ ನೀವು ಮೆಚ್ಯೂರಿಟಿಗೂ ಮುನ್ನ ಪೂರ್ಣ ಮೊತ್ತವನ್ನು ವಿತ್‌ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಈ ಯೋಜನೆಯಲ್ಲಿ 15 ವರ್ಷಗಳು ಲಾಕಿನ್ ಅವಧಿಯಾಗಿದ್ದು, ಅದಕ್ಕೂ ಮುನ್ನ ಹೂಡಿಕೆಯನ್ನು ಸಂಪೂರ್ಣವಾಗಿ ವಿತ್‌ಡ್ರಾ ಮಾಡುವಂತಿಲ್ಲ.

ಪಿಪಿಎಫ್ ಖಾತೆಯು 'ಇಇಇ' ವರ್ಗದ ಅಡಿಯಲ್ಲಿ ಬರುತ್ತದೆ. ಈ ಹೂಡಿಕೆಯು ಒಂದು ಹಣಕಾಸು ವರ್ಷದಲ್ಲಿ 1.50 ಲಕ್ಷದವರೆಗಿನ ಡೆಪಾಸಿಟ್ ಮೇಲೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಡೆಪಾಸಿಟ್‌ನಿಂದ ಪಡೆದ ಪಿಪಿಎಫ್ ಬಡ್ಡಿಗೂ ಕೂಡಾ ಆದಾಯ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುತ್ತದೆ. ಇದಲ್ಲದೆ, ಏಪ್ರಿಲ್‌ನಿಂದ ಜೂನ್ 2023 ರವರೆಗಿನ ತ್ರೈಮಾಸಿಕದಲ್ಲಿ ಪಿಪಿಎಫ್ ಬಡ್ಡಿದರವನ್ನು ಶೇಕಡ 7.10ರಷ್ಟು ನಿಗದಿಪಡಿಸಲಾಗಿದೆ.
ಪಿಪಿಎಫ್ ಖಾತೆ: ಮೆಚ್ಯೂರಿಟಿ ದಿನಾಂಕ
ಪಿಪಿಎಫ್ ಖಾತೆಗಳು 15 ವರ್ಷಗಳ ಮೆಚ್ಯೂರಿಟಿವ ಅವಧಿಯನ್ನು ಹೊಂದಿದೆ. ಹೂಡಿಕೆದಾರರು ತಮ್ಮ ಖಾತೆಗಳನ್ನು ಐದು ವರ್ಷಗಳಿಗೊಮ್ಮೆ ಅನಿರ್ದಿಷ್ಟವಾಗಿ ವಿಸ್ತರಿಸಬಹುದು. ಪಿಪಿಎಫ್ ಖಾತೆಯನ್ನು ಮೆಚ್ಯೂರಿಟಿಯ ನಂತರ ವಿಸ್ತರಿಸುವ ಅತ್ಯಂತ ಗಮನಾರ್ಹ ಪ್ರಯೋಜನವೆಂದರೆ, ಐದು ವರ್ಷಗಳ ವಿಸ್ತರಣೆಯು ಪೂರ್ಣಗೊಳ್ಳುವ ಮೊದಲು ಹಣಕಾಸಿನ ತುರ್ತುಸ್ಥಿತಿ ಇದ್ದರೆ, ಪಿಪಿಎಫ್‌ನ ಮೊತ್ತದ ಶೇಕಡ 60ರಷ್ಟು ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತದೆ ಎಂಬುವುದಾಗಿದೆ.
ಪಿಪಿಎಫ್‌ನಲ್ಲಿ 3 ವಿತ್‌ಡ್ರಾ ಆಯ್ಕೆಗಳು
1. ಪಿಪಿಎಫ್ ಬ್ಯಾಲೆನ್ಸ್ ವಿತ್‌ಡ್ರಾ
2. ಹೂಡಿಕೆ ಮಾಡದೆಯೇ ಪಿಪಿಎಫ್ ಖಾತೆಯ ವಿಸ್ತರಣೆ ಮಾಡುವುದು
3. ಹೂಡಿಕೆ ಮಾಡಿ ಪಿಪಿಎಫ್ ಖಾತೆಯನ್ನು ವಿಸ್ತರಣೆ ಮಾಡುವುದು
ಆದರೆ ನೀವು ಮೆಚ್ಯೂರಿಟಿ ಬಳಿಕ ಹೂಡಿಕೆ ಮಾಡಬಹುದೇ, ಮಾಡಬಾರದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ, ಈ ಪ್ರಶ್ನೆಗೆ ತಜ್ಞರು ಏನು ಹೇಳುತ್ತಾರೆ ನೋಡಿ, ಮುಂದೆ ಓದಿ...
ಮೆಚ್ಯೂರಿಟಿ ಬಳಿಕ ಪಿಪಿಎಫ್ ಖಾತೆ ವಿಸ್ತರಿಸುವುದೇ, ಕ್ಲೋಸ್ ಮಾಡುವುದೇ?
ಶೇಕಡ 100 ರಷ್ಟು ರಿಸ್ಕ್ ಮುಕ್ತವಾಗಿರುವುದರಿಂದ ಮೆಚ್ಯೂರಿಟಿಯ ನಂತರ ಪಿಪಿಎಫ್ ನಲ್ಲಿ ಹೂಡಿಕೆಯನ್ನು ಮುಂದುವರಿಸುವುದರಿಂದ ಯಾವುದೇ ಹಾನಿ ಇಲ್ಲ ಎನ್ನುತ್ತಾರೆ ತಜ್ಞರು. ಪಿಪಿಎಫ್ ಖಾತೆದಾರರು 15 ವರ್ಷಗಳ ಮೆಚ್ಯೂರಿಟಿಯ ನಂತರ ಖಾತೆಯನ್ನು 5 ವರ್ಷಗಳ ಅವಧಿಗಳಂತೆ ಒಟ್ಟು ಎಷ್ಟು ಬಾರಿ ಬೇಕಾದರೂ ವಿಸ್ತರಣೆ ಮಾಡುತ್ತಾ ಸಾಗಬಹುದಾಗಿದೆ.
"ಅದಕ್ಕಾಗಿ ಪಿಪಿಎಫ್ ಖಾತೆ ಹೊಂದಿರುವವರು ತಮ್ಮ ಬ್ಯಾಂಕ್‌ನಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಫಾರ್ಮ್ ಎಚ್ ಅನ್ನು ಸಬ್‌ಮಿಟ್ ಮಾಡಬಹುದಾಗಿದೆ. ಆದರೆ ಹೆಚ್ಚಿನ ಮೊತ್ತದ ಅಗತ್ಯವಿಲ್ಲದಿದ್ದಾಗ ವಿಸ್ತರಣೆಯ ಪ್ರಸ್ತಾಪವನ್ನು ಬಳಸಬಹುದು," ಎಂದು ಒಪ್ಟಿಮಾ ಮನಿ ಮ್ಯಾನೆಜರ್ಸ್‌ನ ಎಂಡಿ, ಸಿಇಒ ಪಂಕಜ್ ಮತ್‌ಪಾಲ್ ತಿಳಿಸಿದ್ದಾರೆ.
"ಪಿಪಿಎಫ್ ತೆರಿಗೆ ವಿನಾಯಿತಿಯನ್ನು ಹೊಂದಿರುವ ಕಾರಣದಿಂದಾಗಿ ನಾವು ಎಂದಿಗೂ ಕೂಡಾ ಪಿಪಿಎಫ್ ವಿತ್‌ಡ್ರಾ ಮಾಡುವ ಹೂಡಿಕೆಯನ್ನು ಕೊನೆಯದಾಗಿರಿಸಿಕೊಳ್ಳಬೇಕಾಗುತ್ತದೆ. ಪಿಪಿಎಫ್ ಹೂಡಿಕೆಯು ಫಿಕ್ಸಿಡ್ ಡೆಪಾಸಿಟ್‌ಗಿಂತ ಅಧಿಕ ರಿಟರ್ನ್ ಅನ್ನು ನೀಡಲು ಸಾಧ್ಯವಾಗುವ ಕಾರಣದಿಂದಾಗಿ ನಾವು ಪಿಪಿಎಫ್ ಹೂಡಿಕೆ ಮುಂದುವರಿಸುವುದು ಉತ್ತಮ ಆಯ್ಕೆಯಾಗಿರುತ್ತದೆ. ಹಾಗೆಯೆ ಇದು ಶೇಕಡ 100ರಷ್ಟು ಅಪಾಯಮುಕ್ತವಾಗಿದೆ," ಎಂದು ಕೂಡಾ ಒಪ್ಟಿಮಾ ಮನಿ ಮ್ಯಾನೆಜರ್ಸ್‌ನ ಎಂಡಿ, ಸಿಇಒ ಪಂಕಜ್ ಮತ್‌ಪಾಲ್ ಹೇಳಿದ್ದಾರೆ.
ಪಿಪಿಎಫ್ ಖಾತೆದಾರರು ತಮ್ಮ ಪಿಪಿಎಫ್ ಖಾತೆಯ ಅವಧಿಯನ್ನು ಮೆಚ್ಯೂರಿಟಿ ಬಳಿಕ ವಿಸ್ತರಿಸಬೇಕು ಎಂದು ಸೆಬಿ ನೋಂದಾಯಿತ ತಜ್ಞರು ಸಲಹೆ ನೀಡಿದ್ದಾರೆ. ಇದು ಬ್ಯಾಂಕ್‌ನ ಫಿಕ್ಸಿಡ್ ಡೆಪಾಸಿಟ್ ಮತ್ತು ಇತರೆ ಕಡಿಮೆ ಅಪಾಯಕಾರಿ ಹೂಡಿಕೆಗಳಿಗಿಂತ ಅಧಿಕ ಆದಾಯವನ್ನು ನೀಡುತ್ತದೆ.


Click it and Unblock the Notifications