ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಎರಡು ಹಂತದ ಸವರನ್ ಗೋಲ್ಡ್ ಬಾಂಡ್‌ಗಳನ್ನು (ಎಸ್‌ಜಿಬಿ) ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಹಣಕಾಸು ವರ್ಷ 2023-24ರ ಸಿರೀಸ್ I ರ ಚಂದಾದಾರಿಕೆಯು ಜೂನ್ 19-23, 2023ರಲ್ಲಿ ನಡೆಯಲಿದೆ. ಕೇಂದ್ರ ಸರ್ಕಾರವು ಈ ಮೊದಲ ಸಿರೀಸ್‌ನ ಸವರನ್ ಗೋಲ್ಡ್ ಬಾಂಡ್‌ನ ಪ್ರತಿ ಗ್ರಾಂಗೆ 5,926 ರೂಪಾಯಿ ನಿಗದಿಪಡಿಸಿದೆ.
ನಾಲ್ಕನೇ ತ್ರೈಮಾಸಿಕದ ಗರಿಷ್ಠ ಮೊತ್ತ ಇದಾಗಿದೆ. ಹಣಕಾಸು ವರ್ಷದ 2024ರಲ್ಲಿ ಎರಡು ಸಿರೀಸ್‌ನ ಗೋಲ್ಡ್ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ತಿಂಗಳಿನಲ್ಲೇ ಮೊದಲ ಸಿರೀಸ್‌ನ ಗೋಲ್ಡ್ ಬಾಂಡ್ ಆರಂಭವಾಗಲಿದೆ. ಇನ್ನು ಸವರನ್ ಗೋಲ್ಡ್ ಬಾಂಡ್‌ನ ಸಿರೀಸ್ IIರ ಚಂದಾದಾರಿಕೆಯು ಸೆಪ್ಟೆಂಬರ್ 11-15, 2023ರಲ್ಲಿ ನಡೆಯಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿಕೆಯಲ್ಲಿ ತಿಳಿಸಿದೆ.

ಮೊದಲ ಸಿರೀಸ್‌ನ ಬಗ್ಗೆ ವಿವರ
"ಜೂನ್ 14, 2023 ರ ಭಾರತ ಸರ್ಕಾರದ ಅಧಿಸೂಚನೆ ಸಂಖ್ಯೆ.4(6)-B(W&M)/2023 ರ ಪ್ರಕಾರ, ಜೂನ್ 19-23 ರ ಅವಧಿಯಲ್ಲಿ 2023-24 (ಸರಣಿ I) ಅನ್ನು ಚಂದಾದಾರಿಕೆಗಾಗಿ ತೆರೆಯಲಾಗುತ್ತದೆ. ಇದರ ಸೆಟೆಲ್‌ಮೆಂಟ್ ದಿನಾಂಕ ಜೂನ್ 27, 2023 ಆಗಿದೆ. ಚಂದಾದಾರಿಕೆಯ ಅವಧಿಯಲ್ಲಿ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಂಗೆ 5,926 ರೂಪಾಯಿ ಆಗಿರುತ್ತದೆ ಎಂದು ಜೂನ್ 16, 2023 ರಂದು ಆರ್‌ಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದೆ," ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರವು ಹಣಕಾಸು ವರ್ಷ 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 5,611 ರೂಪಾಯಿ, ಹಣಕಾಸು ವರ್ಷ 2023ರ ಮೂರನೇ ತ್ರೈಮಾಸಿಕದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 5,409 ರೂಪಾಯಿ, ಹಣಕಾಸು ವರ್ಷ 2023ರ ಎರಡನೇ ತ್ರೈಮಾಸಿಕದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯು 5,091 ರೂಪಾಯಿ ಮತ್ತು ಹಣಕಾಸು ವರ್ಷ 2023ರ ಮೊದಲ ತ್ರೈಮಾಸಿಕದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 5,041 ರೂಪಾಯಿ ಎಂದು ಘೋಷಣೆ ಮಾಡಿದೆ.
ಚಿನ್ನದ ಮೇಲೆ ಹೂಡಿಕೆ ಮಾಡುವ ವಿಚಾರಕ್ಕೆ ಬಂದಾಗ ನಮ್ಮಲ್ಲಿರುವ ಅತೀ ಉತ್ತಮವಾದ ಹೂಡಿಕೆ ಆಯ್ಕೆಗಳಲ್ಲಿ ಸವರನ್ ಗೋಲ್ಡ್ ಬಾಂಡ್‌ಗಳು ಕೂಡಾ ಒಂದಾಗಿದೆ. ಈ ಹೂಡಿಕೆ ಮೂಲಕ ನಾವು ವಾರ್ಷಿಕವಾಗಿ ಶೇಕಡ 2.5ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ಇದು ತೆರಿಗೆ ವಿನಾಯಿತಿಯನ್ನು ನೀಡುವ ಯೋಜನೆಯಾಗಿದೆ. ಇನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ಮತ್ತು ಡಿಜಿಟಲ್ ವಿಧಾನಗಳೊಂದಿಗೆ ಪಾವತಿಸುವ ಹೂಡಿಕೆದಾರರಿಗೆ, 50 ರೂಪಾಯಿಯಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ.
ಎಸ್‌ಜಿಬಿ (ಸಿರೀಸ್ I) ಹೂಡಿಕೆ ಮಾಡಬಹುದೇ?
"ಹೂಡಿಕೆ ವಿಚಾರಕ್ಕೆ ಬಂದಾಗ ಎಂದಿಗೂ ಕೂಡಾ ಚಿನ್ನದ ಮೇಲೆ ಹೂಡಿಕೆ ಮಾಡುವುದು ಅತೀ ಉತ್ತಮವಾದ ಆಯ್ಕೆಯಾಗಿರುತ್ತದೆ. ನಮ್ಮ ಹೂಡಿಕೆ ಪೋರ್ಟ್‌ಪೋಲಿಯೋದಲ್ಲಿ ಯುಎಸ್ ಡಾಲರ್ ಆಸ್ತಿಯನ್ನು ನಾವು ಹೊಂದಬೇಕಾದರೆ ಚಿನ್ನವು ಉತ್ತಮ ಮಾರ್ಗವಾಗಿದೆ. ಓವರ್‌ಸೀಸ್ ಫಂಡ್, ಗೋಲ್ಡ್ ಮೈನಿಂಗ್ ಕಂಪನಿಗಳು ಚಂಚಲತೆಯನ್ನು ಹೊಂದಿರುವ ಕಾರಣದಿಂದಾಗಿ ಗೋಲ್ಡ್ ಉತ್ತಮ ಮಾರ್ಗವಾಗಿದೆ," ಎಂದು ತಿಳಿಸಿದ್ದಾರೆ.
"ಸವರನ್ ಗೋಲ್ಡ್ ಅತ್ಯುತ್ತಮ ಮಾರ್ಗವಾಗಿದೆ. ಭಾರತೀಯ ಹೂಡಿಕೆದಾರರಿಗೆ, ಒಟ್ಟಾರೆಯಾಗಿ ಹೂಡಿಕೆ ಕ್ಯಾಪಿಟಲ್‌ಗೆ ಚಿನ್ನವು ಪರಿಣಾಮಕಾರಿ ಆಯ್ಕೆಯಾಗಿದೆ. ಅದರಂತೆ, ಹೂಡಿಕೆದಾರರು ತಮ್ಮ ಒಟ್ಟಾರೆ ಕ್ಯಾಪಿಟಲ್‌ನ ಶೇಕಡ 5-15ರಷ್ಟು ಚಿನ್ನದಲ್ಲಿ ಹೂಡಿಕೆ ಮಾಡಬಹುದಾಗಿದೆ," ಎಂದು ಐಸಿಐಸಿಐ ಡೈರೆಕ್ಟ್ ರಿಸರ್ಚ್‌ನ, ರಿಸರ್ಚ್ ಅನಾಲಿಕ್ಟ್ ಆದ ಸಚಿನ್ ಜೈನ್ ತಿಳಿಸಿದ್ದಾರೆ.
"ಆದರೆ ಎಂದಿಗೂ ಕೂಡಾ ಭವಿಷ್ಯದ ರಿಟರ್ನ್ ಬಗ್ಗೆ ನಾವು ನೋಡಿದಾಗ ನಮಗೆ ಸವರನ್ ಗೋಲ್ಡ್ ಬಾಂಡ್ ಉತ್ತಮ ಆಯ್ಕೆಯಾಗಿದೆ. ಯಾವುದೇ ಹೂಡಿಕೆಯಿಂದ ನಮಗೆ ಉತ್ತಮ ರಿಟರ್ನ್ ಲಭ್ಯವಾಗುವುದಾದರೆ ನಾವು ಹೂಡಿಕೆ ಮಾಡಲು ತಡ ಮಾಡುವುದು ಸರಿಯಲ್ಲ. ಜಾಗತಿಕ ಹಣದುಬ್ಬರವು ಇನ್ನೂ ಕೂಡಾ ಅಧಿಕವಾಗಿಯೇ ಇರುವಾಗ ಚಿನ್ನದ ಮೇಲೆ ಹೂಡಿಕೆ ಮಾಡಬಹುದು," ಎಂದು ಸಲಹೆ ನೀಡಿದ್ದಾರೆ.
"ಇತ್ತೀಚಿನ ಕೇಂದ್ರ ಬಜೆಟ್ ಬಳಿಕ ಚಿನ್ನದ ಮೇಲೆ ಹೂಡಿಕೆ ಮಾಡುವುದು ಅತೀ ಆಕರ್ಷಕ ಆಯ್ಕೆ ಏನಲ್ಲ. ಚಿನ್ನದ ಇಟಿಎಫ್‌ಗಳು/ಗೋಲ್ಡ್ ಫಂಡ್‌ಗಳು ದೀರ್ಘಾವಧಿಯ ಲಾಭಗಳ ತೆರಿಗೆ ಪ್ರಯೋಜನಗಳು ಹೊಂದಿರುವುದಿಲ್ಲ. ಏಪ್ರಿಲ್ 1, 2023ರಿಂದ ಕನಿಷ್ಠ ತೆರಿಗೆ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಅದರ ಪ್ರಕಾರ ಎಸ್‌ಜಿಬಿಗಳಲ್ಲಿ ಮಾಡಲಾಗುವ ಹೂಡಿಕೆಯು ಇತರೆ ಹೂಡಿಕೆಗಳಿಗೆ ಹೋಲಿಕೆ ಮಾಡಿದಾಗ ಹೆಚ್ಚು ಆಕರ್ಷಕವಾಗಿದೆ," ಎಂದು ಕೂಡಾ ಸಚಿನ್ ಜೈನ್ ಹೇಳುತ್ತಾರೆ.
ಗಮನಿಸಿ:
ಎಂಆರ್‌ಎಫ್ ಸ್ಟಾಕ್ ಖರೀದಿ ಅಥವಾ ಮಾರಾಟದ ಸಲಹೆಯನ್ನು ತಜ್ಞರುಗಳು ನೀಡಿದ್ದು, ಅದನ್ನು ನಾವಿಲ್ಲಿ ಪ್ರಕಟ ಮಾಡಿದ್ದೇವೆ. ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜೀಸ್ ಆಗಲಿ ಅಥವಾ ಲೇಖಕರು ತಮ್ಮ ಅಭಿಪ್ರಾಯವನ್ನು ಇಲ್ಲಿ ಪ್ರಕಟಿಸಿಲ್ಲ. ಈ ಲೇಖನದ ಆಧಾರದಲ್ಲಿ ಹೂಡಿಕೆದಾರರು ಯಾವುದೇ ನಿರ್ಧಾರವನ್ನು ಕೈಗೊಂಡರೆ ಅದರಿಂದಾಗುವ ನಷ್ಟಕ್ಕೆ ಗುಡ್‌ರಿಟರ್ನ್ಸ್ ಆಗಲಿ ಅಥವಾ ಲೇಖಕರಾಗಲಿ ಜವಾಬ್ದಾರರಲ್ಲ. ತಜ್ಞರ ಸಲಹೆಯನ್ನು ಪಡೆದು ಹೂಡಿಕೆ ಮಾಡುವುದು ಉತ್ತಮ ಆಯ್ಕೆ.


Click it and Unblock the Notifications