ರಾಸಾಯನಿಕ ವಲಯದಿಂದ ಸ್ಮಾಲ್ ಕ್ಯಾಪ್ ಸ್ಟಾಕ್ ಆದ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಕ್ಟೋಬರ್ 24, 2023 ರೊಳಗೆ ಮಾರ್ಚ್ 31 ಕ್ಕೆ ಕೊನೆಗೊಂಡ ಹಣಕಾಸು ವರ್ಷದ ಡಿವಿಡೆಂಟ್ ಪಾವತಿಸಲಿದೆ. ಪ್ರತಿ ಒಂದು ರೂಪಾಯಿಯ ಈಕ್ವಿಟಿ ಷೇರಿಗೆ ಒಂದು ರೂಪಾಯಿಯಂತೆ ಅಂತಿಮ ಡಿವಿಡೆಂಟ್ ನೀಡುತ್ತದೆ. ಅಂದರೆ ಶೇಕಡ 100 ರಷ್ಟು ಡಿವಿಡೆಂಟ್ ಪಾವತಿಸುತ್ತದೆ.
ಹಿಂದಿನ ಡಿದೇವ್ ಪ್ಲಾಸ್ಟಿಕ್ಸ್ ಷೇರುಗಳು ಸೆಪ್ಟೆಂಬರ್ 18, 2023 ರಂದು ಎಕ್ಸ್-ಡಿವಿಡೆಂಡ್ ಅನ್ನು ಟ್ರೇಡ್ ಮಾಡಿದೆ. ಕಂಪನಿಯು ಈ ವರ್ಷದ ಆರಂಭದಲ್ಲಿ 1:10 ರ ಅನುಪಾತದಲ್ಲಿ ಬೋನಸ್ ಷೇರನ್ನು ಘೋಷಿಸಿದೆ. ಎಕ್ಸ್-ಬೋನಸ್ ದಿನಾಂಕವು ಜೂನ್ 30, 2023 ಆಗಿತ್ತು. ಡಿದೇವ್ ಪ್ಲಾಸ್ಟಿಕ್ಸ್ ಸ್ಟಾಕ್ ಕಳೆದ 6 ತಿಂಗಳ ಅವಧಿಯಲ್ಲಿ ಶೇಕಡ 177 ರಷ್ಟು ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಶೇಕಡ 208 ರಷ್ಟು ಆದಾಯವನ್ನು ನೀಡಿದೆ.

ಅಕ್ಟೋಬರ್ 24 ರೊಳಗೆ ಡಿವಿಡೆಂಡ್ ಪಾವತಿಸಲಿದೆ ಡಿಡೆವ್ ಪ್ಲಾಸ್ಟಿಕ್ಸ್
ಸೆಪ್ಟೆಂಬರ್ 25, 2023 ರಂದು ನೀಡಲಾದ ಬಿಎಸ್‌ಇ ಫೈಲಿಂಗ್‌ನ ಪ್ರಕಾರ, "ಪ್ರತಿಯೊಬ್ಬರೂ ಸಂಪೂರ್ಣವಾಗಿ ಪಾವತಿಸಿದ ಈಕ್ವಿಟಿ ಷೇರು ಒಂದು ರೂಪಾಯಿಗೆ, ಅಂತಿಮ ಲಾಭಾಂಶದ ಘೋಷಣೆಯನ್ನು ಮಾಡಲಾಗುತ್ತದೆ. ಮಾರ್ಚ್ 31, 2023 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಈಕ್ವಿಟಿ ಷೇರಿಗೆ 30 ದಿನಗಳ ಒಳಗೆ ಅಂದರೆ 24.10.2023 ರೊಳಗೆ ಶೇಕಡ 100 ರಷ್ಟು ಡಿವಿಡೆಂಟ್ ಪಾವತಿಸಲಾಗುತ್ತದೆ."
ಕಂಪನಿಯು ಸೆಪ್ಟೆಂಬರ್ 21, 2022 ರಿಂದ 2 ಡಿವಿಡೆಂಟ್ಸ್‌ಗಳನ್ನು ಘೋಷಣೆ ಮಾಡಿದೆ. ಪ್ರಸ್ತುತ ಷೇರಿನ ಬೆಲೆ 204.05 ರೂಪಾಯಿ ಆಗಿದ್ದು, ಟ್ರೆಂಡ್‌ಲೈನ್ ಪ್ರಕಾರ ಶೇಕಡ 0.49 ರಷ್ಟು ಲಾಭಾಂಶ ನೀಡುತ್ತದೆ.
ಡಿದೇವ್ ಪ್ಲಾಸ್ಟಿಕ್ಸ್ ಸ್ಟಾಕ್ ಔಟ್‌ಲುಕ್ ಮತ್ತು ವರ್ಷಗಳಲ್ಲಿ ರಿಟರ್ನ್
ಡಿದೇವ್ ಪ್ಲಾಸ್ಟಿಕ್ಸ್ ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ ಇಂದು ಬೆಳಿಗ್ಗೆ 11:53 ಕ್ಕೆ ಬಿಎಸ್‌ಇಯಲ್ಲಿ ಶೇಕಡ 0.12 ರಷ್ಟು ಏರಿಕೆಯೊಂದಿಗೆ, ಪ್ರತಿ ಷೇರಿಗೆ 204.05 ರೂಪಾಯಿ ಆಗಿದೆ. ಷೇರಿನ 52 ವಾರಗಳ ಗರಿಷ್ಠ ಬೆಲೆಯು ಪ್ರತಿ ಷೇರಿಗೆ 244 ರೂಪಾಯಿ ಆಗಿದೆ. 52 ವಾರದ ಕನಿಷ್ಠ ಬೆಲೆಯು 60.54 ರೂಪಾಯಿ ಆಗಿದೆ. ಇದರ ಮಾರುಕಟ್ಟೆ ಬಂಡವಾಳ 2,111.44 ಕೋಟಿ ರೂಪಾಯಿ ಆಗಿದೆ.
ಕಳೆದ 1 ತಿಂಗಳಲ್ಲಿ ಡಿದೇವ್ ಪ್ಲಾಸ್ಟಿಕ್ಸ್ ಷೇರುಗಳು ಶೇಕಡ 5 ರಷ್ಟು ಜಿಗಿದಿದೆ. ಈ ದಿನಕ್ಕೆ ಸರಿಯಾಗಿ ಒಂದು ವರ್ಷದಲ್ಲಿ ಶೇಕಡ 73 ರಷ್ಟು ಗಳಿಸಿದೆ. ಕಳೆದ ಒಂದು ವರ್ಷದಲ್ಲಿ ಶೇಕಡ 208 ರಷ್ಟು ಏರಿಕೆಯಾಗಿದೆ.
ಡಿದೇವ್ ಪ್ಲಾಸ್ಟಿಕ್ಸ್ ಹಣಕಾಸು
ಜೂನ್ 30, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ನಿವ್ವಳ ಲಾಭವನ್ನು 638.10 ಕೋಟಿ ರೂಪಾಯಿ ಎಂದು ಘೋಷಿಸಿದೆ. ಜೂನ್ 2022 ರಲ್ಲಿದ್ದ ನಿವ್ವಳ ಲಾಭ 537.13 ಕೋಟಿ ರೂಪಾಯಿಗೆ ಹೋಲಿಸಿದರೆ, ಈ ವರ್ಷ ಶೇಕಡ 18.8 ರಷ್ಟು ಹೆಚ್ಚಳವಾಗಿದೆ.
ಜೂನ್ 2023 ರಲ್ಲಿ ತನ್ನ ತ್ರೈಮಾಸಿಕ ನಿವ್ವಳ ಲಾಭವನ್ನು 37.81 ಕೋಟಿ ರೂಪಾಯಿ ಎಂದು ಘೋಷಿಸಿದೆ. ಜೂನ್ 2022 ರಲ್ಲಿ 14.32 ಕೋಟಿ ರೂಪಾಯಿ ಆಗಿದೆ. ಇದಕ್ಕೆ ಹೋಲಿಕೆ ಮಾಡಿದಾಗ ಶೇಕಡ 164.04 ರಷ್ಟು ಏರಿಕೆಯಾಗಿದೆ. ಕಂಪನಿ ಇಬಿಐಟಿಡಿಎ ಜೂನ್ 2023 ರಲ್ಲಿ ಶೇಕಡ 96 ರಷ್ಟು ಏರಿಕೆಯಾಗಿದ್ದು, ಜೂನ್ 2022 ರಲ್ಲಿ 31.30 ಕೋಟಿ ರೂಪಾಯಿಯಿಂದ 61.35 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಡಿದೇವ್ ಪ್ಲಾಸ್ಟಿಕ್ಸ್ ಕುರಿತು ತಿಳಿಯಿರಿ
ಕಂಪನಿಯು ಕೈಗಾರಿಕಾ ಬಳಕೆಗಾಗಿ ಪ್ಲಾಸ್ಟಿಕ್ ಕಂಪಾಂಡ್‌ಗಳನ್ನು ತಯಾರಿಸುತ್ತದೆ. ಪಿವಿಸಿ ಕಂಪೌಂಡ್, ಪಿಇ ಕಂಪೌಂಡ್, ಮಾಸ್ಟರ್‌ಬ್ಯಾಚ್‌ಗಳು, ಪಾದರಕ್ಷೆಗಳ ಕಂಪೌಂಡ್, ಪೆರಾಕ್ಸೈಡ್ ಕಂಪೌಂಡ್, ಪೈಪ್ ಕಂಪೌಂಡ್, ಆಟೋಮೊಬೈಲ್‌ಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಿಗಾಗಿ ಪ್ರಸಿದ್ಧವಾಗಿದೆ.
ಗಮನಿಸಿ: ಸ್ಟಾಕ್ ಕೇವಲ ಡಿವಿಡೆಂಟ್ ಅನ್ನು ಹೈಲೈಟ್ ಮಾಡುತ್ತದೆ. ನೀವು ಈ ಸ್ಟಾಕ್ ಅನ್ನು ಖರೀದಿಸಲು, ಮಾರಾಟ ಮಾಡಲು ಅಥವಾ ಹೋಲ್ಡ್ ಮಾಡಲು ಶಿಫಾರಸು ಮಾಡುವುದಿಲ್ಲ. ನಾವು ಈ ಸ್ಟಾಕ್‌ನ ವಿಶ್ಲೇಷಣೆಯನ್ನು ಮಾಡಿಲ್ಲ. ಸ್ಟಾಕ್ ಬಗ್ಗೆ ಯಾವುದೇ ಅಭಿಪ್ರಾಯವನ್ನು ನಿಮಗೆ ತಿಳಿಸಿಲ್ಲ. ಈ ಲೇಖನದ ಆಧಾರದಲ್ಲಿ ಯಾವುದೇ ಹೂಡಿಕೆ ಮಾಡಿದರೆ ಅದಕ್ಕೆ ಲೇಖಕರಾಗಲಿ ಅಥವಾ ಗ್ರೇನಿಯಮ್ ಸಂಸ್ಥೆಯಾಗಲಿ ಹೊಣೆಯಲ್ಲ. ದಯವಿಟ್ಟು ವೃತ್ತಿಪರ ಸಲಹೆಗಾರರನ್ನು ಸಂಪರ್ಕಿಸಿ.


Click it and Unblock the Notifications