ಈ ಒಂದು ಸ್ಮಾಲ್ ಕ್ಯಾಪ್ ಸ್ಟಾಕ್ ಕಳೆದ 3 ವರ್ಷಗಳಲ್ಲಿ ಶೇಕಡ 686 ಕ್ಕಿಂತ ಹೆಚ್ಚಿನ ಲಾಭವನ್ನು ನೀಡಿದೆ. ಈ ಹೈಟೆಕ್ ಪೈಪ್ಸ್ ಸಂಸ್ಥೆಯು ಸೆಪ್ಟೆಂಬರ್ ತ್ರೈಮಾಸಿಕದ ವರದಿಯನ್ನು ಪ್ರಕಟಿಸಿದ್ದು ಈ ವರದಿ ಪ್ರಕಾರ ನಿವ್ವಳ ಲಾಭವು ಡಬಲ್ ಆಗಿದೆ.
ಹೈಟೆಕ್ ಪೈಪ್ಸ್ ಕಳೆದ ವರ್ಷ ಎರಡನೇ ತ್ರೈಮಾಸಿಕದಲ್ಲಿ 4.36 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಪಡೆದಿತ್ತು. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯ ನಿವ್ವಳ ಲಾಭವು 10.53 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಒಂದು ವರ್ಷದ ಅವಧಿಯಲ್ಲಿ ನಿವ್ವಳ ಲಾಭ ದುಪ್ಪಟ್ಟಾಗಿದೆ ಎಂದು ಅಕ್ಟೋಬರ್ 28ರಂದು ಸಂಸ್ಥೆ ಮಾಹಿತಿ ನೀಡಿದೆ.

ಇನ್ನು ನಿವ್ವಳ ಲಾಭ ಮಾತ್ರವಲ್ಲ, ಒಟ್ಟು ಆದಾಯವು ಕೂಡಾ ಏರಿಕೆಯಾಗಿದೆ ಎಂದು ಸಂಸ್ಥೆಯು ರೆಗ್ಯೂಲೇಟರಿ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ. ಹೈಟೆಕ್ ಪೈಪ್ಸ್ ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 599.40 ಕೋಟಿ ರೂಪಾಯಿ ಒಟ್ಟು ಆದಾಯವನ್ನು ಘೋಷಣೆ ಮಾಡಿತ್ತು. ಆದರೆ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ಆದಾಯ 746.73 ಕೋಟಿ ರೂಪಾಯಿಗೆ ಏರಿದೆ ಎಂದು ಹೇಳಿದೆ.
ಒಟ್ಟಾರೆ ಮಾರುಕಟ್ಟೆ ಪಾಲು ಹೆಚ್ಚಿಸಲು ಸಜ್ಜು
ಹೈಟೆಕ್ ಪೈಪ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಬನ್ಸಾಲ್ ಮಾತನಾಡಿ, "ನಾವು ಮೌಲ್ಯವರ್ಧಿತ ಉತ್ಪನ್ನಗಳನ್ನು ಹೆಚ್ಚಿಸುವ ಕಾರ್ಯವನ್ನು ಮುಂದುವರಿಸುತ್ತೇವೆ. ಸ್ಟೀಲ್ ಪೈಪಿಂಗ್‌ನಲ್ಲಿ ಕಂಪನಿಯ ಒಟ್ಟಾರೆ ಮಾರುಕಟ್ಟೆ ಪಾಲನ್ನು ಹೆಚ್ಚಿಸುತ್ತೇವೆ," ಎಂದು ತಿಳಿಸಿದರು.
ಉತ್ಪನ್ನಗಳ ಬೇಡಿಕೆ ಜಿಗಿತ
"ಉಕ್ಕಿನ ಟ್ಯೂಬ್‌ಗಳು/ ಸ್ಟ್ರಕ್ಚರಲ್ ಸ್ಟೀಲ್ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಇದರಿಂದಾಗಿ ಅದರ ಒಟ್ಟು ಮಾರಾಟದ ಪ್ರಮಾಣವು ಹಣಕಾಸು ವರ್ಷ 2023ರ ಎರಡನೇ ತ್ರೈಮಾಸಿಕದಲ್ಲಿ 0.85 ಲಕ್ಷ ಟನ್‌ಗಳಿಗೆ ಹೋಲಿಸಿದರೆ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇಕಡ 17.45 ರಷ್ಟು ಜಿಗಿತ ಕಂಡು, 1 ಲಕ್ಷ ಟನ್‌ಗಳಿಗೆ ಏರಿದೆ," ಎಂದು ಹೈಟೆಕ್ ಪೈಪ್ಸ್ ಹೇಳಿದೆ.
ಅಕ್ಟೋಬರ್ 27, 2023 ರಂತೆ ಇಂಟ್ರಾಡೇಯಲ್ಲಿ ಸ್ಟಾಕ್ ಶೇಕಡ 4.39ರಷ್ಟು ಏರಿಕೆಯಾಗಿ 99.74ಕ್ಕೆ ತಲುಪಿದೆ. ಷೇರಿನ 52 ವಾರಗಳ ಗರಿಷ್ಠ ಬೆಲೆಯು ಪ್ರತಿ ಷೇರಿಗೆ 105.00 ರೂಪಾಯಿ ಆಗಿದೆ. 52 ವಾರಗಳ ಕನಿಷ್ಠ ಬೆಲೆಯು ಪ್ರತಿ ಷೇರಿಗೆ 58.50 ರೂಪಾಯಿ ಆಗಿದೆ. ಮಾರುಕಟ್ಟೆ ಬಂಡವಾಳ 1304.71 ಕೋಟಿ ರೂಪಾಯಿ ಆಗಿದೆ.
ಲಾಭ ಎಷ್ಟಿದೆ ನೋಡಿ
ಹೈಟೆಕ್ ಪೈಪ್ಸ್ ಸ್ಟಾಕ್ ಕಳೆದ 3 ತಿಂಗಳ ಅವಧಿಯಲ್ಲಿ ಶೇಕಡ 27 ರಷ್ಟು ಲಾಭವನ್ನು ಪಡೆದಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಶೇಕಡ 29 ರಷ್ಟು ಲಾಭವನ್ನು ಗಳಿಸಿದೆ. ಹಾಗೆಯೇ ಶೇಕಡ 54 ರಷ್ಟು ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ ಶೇಕಡ 686 ರಷ್ಟು ಲಾಭವನ್ನು ಈ ಸ್ಟಾಕ್ ನೀಡಿದೆ. ಕಳೆದ 5 ವರ್ಷಗಳಲ್ಲಿ, ಹೈಟೆಕ್ ಪೈಪ್ಸ್ ಷೇರುಗಳು ಶೇಕಡ 324 ರಷ್ಟು ಏರಿಕೆಯಾಗಿದೆ. ಹೈಟೆಕ್ ಪೈಪ್ಸ್ ಮೆಟಲ್ 1985 ರಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಇಲ್ಲಿ ಗಮನಿಸಿ: ಈ ಮೇಲಿನ ಲೇಖನದಲ್ಲಿ ಸ್ಟಾಕ್‌ನ ಏರಿಳಿತ ಲೆಕ್ಕಾಚಾರವನ್ನು ಮಾತ್ರ ನೀಡಲಾಗಿದೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications