ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರದಂದು ಸೆಪ್ಟೆಂಬರ್ 2023 ರ ಸವರನ್ ಗೋಲ್ಡ್ ಬಾಂಡ್ ಸಿರೀಸ್ IIರ ಬೆಲೆಯನ್ನು ಪ್ರತಿ ಗ್ರಾಂಗೆ 5,923 ರೂಪಾಯಿ ಎಂದು ಘೋಷಿಸಿದೆ. ಯೋಜನೆಯ ಮುಂದಿನ ಭಾಗವು ಚಂದಾದಾರರಿಗೆ ಸೆಪ್ಟೆಂಬರ್ 11, 2023 ರಂದು ಅಂದರೆ ಮುಂದಿನ ವಾರ ಸೋಮವಾರದಂದು ಆರಂಭವಾಗುತ್ತದೆ. ಈ ಚಂದಾದಾರಿಕೆಯು ಸೆಪ್ಟೆಂಬರ್ 15, 2023ರವರೆಗೆ ಬಿಡ್ಡಿಂಗ್‌ಗೆ ತೆರೆದಿರುತ್ತದೆ.
ಸವರನ್ ಗೋಲ್ಡ್ ಬಾಂಡ್ ಬೆಲೆ, ದಿನಾಂಕ ಮತ್ತು ಇತರ ವಿವರಗಳಿಗೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆಯನ್ನು ಹೊರಡಿಸಿದ ಆರ್‌ಬಿಐ, "ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2023-24 ಸಿರೀಸ್ II ಸೆಪ್ಟೆಂಬರ್ 11-15, 2023 ರ ಅವಧಿಯಲ್ಲಿ ಚಂದಾದಾರಿಕೆಗೆ ತೆರೆದುಕೊಳ್ಳುತ್ತದೆ. ಸೆಪ್ಟೆಂಬರ್ 06, ಸೆಪ್ಟೆಂಬರ್ 07, ಮತ್ತು ಸೆಪ್ಟೆಂಬರ್ 8ರಂದು ಚಿನ್ನದ ಬೆಲೆಯನ್ನು ಆಧರಿಸಿ [ಇಂಡಿಯಾ ಬುಲ್ಲಿಯನ್ ಆಂಡ್ ಜ್ಯುವೆಲ್ಲರಿ ಅಸೋಸಿಯೇಷನ್ ಲಿಮಿಟೆಡ್ (ಐಬಿಜೆಎ)] ಪ್ರತಿ ಗ್ರಾಂ ಚಿನ್ನದ ಬೆಲೆ 5,923 ರೂಪಾಯಿ ಎಂದು ನಿಗದಿಪಡಿಸಿದೆ," ಎಂದು ತಿಳಿಸಿದೆ.

ಆನ್‌ಲೈನ್ ಅರ್ಜಿದಾರರಿಗೆ ರಿಯಾಯಿತಿ
"ಭಾರತ ಸರ್ಕಾರವು, ರಿಸರ್ವ್ ಬ್ಯಾಂಕ್‌ನೊಂದಿಗೆ ಚರ್ಚಿಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮತ್ತು ಡಿಜಿಟಲ್ ಮೋಡ್ ಮೂಲಕ ಸವರನ್ ಗೋಲ್ಡ್ ಬಾಂಡ್‌ಗೆ ಪಾವತಿ ಮಾಡುವ ಹೂಡಿಕೆದಾರರಿಗೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲು ನಿರ್ಧಿರಿಸಿದೆ. ಅಂತಹ ಹೂಡಿಕೆದಾರರಿಗೆ, ಗೋಲ್ಡ್ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಂ ಚಿನ್ನಕ್ಕೆ 5,873 ರೂಪಾಯಿ ಆಗಿರುತ್ತದೆ," ಎಂದು ಆರ್‌ಬಿಐ ಹೇಳಿದೆ.
ಸವರನ್ ಗೋಲ್ಡ್ ಬಾಂಡ್ ಯೋಜನೆ 2023-24 ಸಿರೀಸ್ II ಅನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಸ್ಟಾಕ್ ಎಕ್ಸ್‌ಚೇಂಜ್‌ಗಳು ಎನ್‌ಎಸ್‌ಇ ಮತ್ತು ಬಿಎಸ್‌ಇ ಮೂಲಕ ಮಾರಾಟ ಮಾಡಲಾಗುತ್ತದೆ.
ಪ್ರಮುಖ ಸವರನ್ ಗೋಲ್ಡ್ ಬಾಂಡ್ ವಿವರಗಳು
1] ಸವರನ್ ಗೋಲ್ಡ್ ಬಾಂಡ್ ಬೆಲೆ: ಆರ್‌ಬಿಐ ಪ್ರತಿ 10 ಗ್ರಾಂಗೆ 5,923 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ.
2] ಸವರನ್ ಗೋಲ್ಡ್ ಬಾಂಡ್ ರಿಯಾಯಿತಿ: ಆನ್‌ಲೈನ್ ಅರ್ಜಿದಾರರಿಗೆ ಸೆಪ್ಟೆಂಬರ್ 2023 ರ ಸವರನ್ ಗೋಲ್ಡ್ ಬಾಂಡ್‌ನ ಹೊಸ ಸಿರೀಸ್‌ಗೆ 10 ಗ್ರಾಂಗೆ 50 ರೂಪಾಯಿ ರಿಯಾಯಿತಿಯನ್ನು ಆರ್‌ಬಿಐ ಘೋಷಿಸಿದೆ.
3] ಸವರನ್ ಗೋಲ್ಡ್ ಬಾಂಡ್ ದಿನಾಂಕ: ಆರ್‌ಬಿಐ ಸವರನ್ ಗೋಲ್ಡ್ ಬಾಂಡ್ 2023 ರ ಎರಡನೇ ಭಾಗವು 11 ನೇ ಸೆಪ್ಟೆಂಬರ್ 2023 ರಂದು ಚಂದಾದಾರಿಕೆಗೆ ತೆರೆದುಕೊಳ್ಳುತ್ತದೆ. ಸೆಪ್ಟೆಂಬರ್ 15, 2023 ರವರೆಗೆ ಬಿಡ್ಡಿಂಗ್‌ಗೆ ತೆರೆದಿರುತ್ತದೆ ಎಂದು ಘೋಷಿಸಿದೆ. ಇದರರ್ಥ, ಸವರನ್ ಗೋಲ್ಡ್ ಬಾಂಡ್ ಯೋಜನೆ 2023-24 ಸಿರೀಸ್ II ಮುಂದಿನ ವಾರ ಸೋಮವಾರದಿಂದ ಶುಕ್ರವಾರದವರೆಗೆ ಲಭ್ಯವಿರುತ್ತದೆ.
4] ಹೇಗೆ ಅರ್ಜಿ ಸಲ್ಲಿಸುವುದು?: ಸವರನ್ ಗೋಲ್ಡ್ ಬಾಂಡ್ ಯೋಜನೆ 2023-24 ಸಿರೀಸ್ II ಅನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ಎನ್‌ಎಸ್‌ಇ ಮತ್ತು ಬಿಎಸ್‌ಇ ಮೂಲಕ ಮಾರಾಟ ಮಾಡಲಾಗುತ್ತದೆ.
5] ಅರ್ಹತೆ: ಸವರನ್ ಗೋಲ್ಡ್ ಬಾಂಡ್ ಯೋಜನೆಯನ್ನು ಸಾಮಾನ್ಯ ಜನರು, ಎಚ್‌ಯುಎಲ್‌ಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳಿಗೆ ಮಾರಾಟ ಮಾಡಲು ನಿರ್ಬಂಧಿಸಲಾಗಿದೆ.
6] ಅವಧಿ: ಸವರನ್ ಗೋಲ್ಡ್ ಬಾಂಡ್ ಯೋಜನೆಯ ಅವಧಿಯು ಎಂಟು ವರ್ಷಗಳ ಅವಧಿಗೆ ಇರುತ್ತದೆ. 5 ನೇ ವರ್ಷದ ನಂತರ ಅಕಾಲಿಕವಾಗಿ ವಿತ್‌ಡ್ರಾ ಮಾಡುವ ಆಯ್ಕೆಯಿದ್ದು, ಬಡ್ಡಿಯನ್ನು ಪಾವತಿಸಬೇಕಾದ ದಿನಾಂಕದಂದು ವಿತ್‌ಡ್ರಾ ಮಾಡಬಹುದು.
7] ಹೂಡಿಕೆ ಮಿತಿ: ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮಿತಿ ಒಂದು ಗ್ರಾಂ ಆಗಿದೆ. ಆದರೆ ಚಂದಾದಾರಿಕೆಯ ಗರಿಷ್ಠ ಮಿತಿಯು ವ್ಯಕ್ತಿಗೆ 4 ಕೆಜಿ, ಎಚ್‌ಯುಎಫ್‌ಗೆ 4 ಕೆಜಿ ಮತ್ತು ಟ್ರಸ್ಟ್‌ಗಳಿಗೆ 20 ಕೆಜಿ ಗೋಲ್ಡ್ ಬಾಂಡ್ ಖರೀದಿ ಅವಕಾಶವಿದೆ.
8] ರೆಡೆಂಶನ್ ಬೆಲೆ: ಸವರನ್ ಗೋಲ್ಡ್ ಬಾಂಡ್ ಯೋಜನೆಯಡಿಯಲ್ಲಿ ರೆಡೆಂಶನ್ ಬೆಲೆಯು ಐಬಿಜೆಎ ಪ್ರಕಟಿಸಿದ ಹಿಂದಿನ ಮೂರು ಕೆಲಸದ ದಿನಗಳ 999 ಶುದ್ಧತೆಯ ಚಿನ್ನದ ಅಂತಿಮ ಬೆಲೆಯ ಸರಳ ಸರಾಸರಿಯನ್ನು ಆಧರಿಸಿ ಭಾರತೀಯ ರೂಪಾಯಿಗಳಲ್ಲಿರುತ್ತದೆ.
9] ಸವರನ್ ಗೋಲ್ಡ್ ಬಾಂಡ್ ಬಡ್ಡಿದರ: ಹೂಡಿಕೆದಾರರಿಗೆ ವಾರ್ಷಿಕವಾಗಿ ಶೇಕಡ 2.50 ರಷ್ಟು ಬಡ್ಡಿದರವನ್ನು ಪಾವತಿಸಲಾಗುತ್ತದೆ.


Click it and Unblock the Notifications