ಸವರನ್ ಗೋಲ್ಡ್ ಬಾಂಡ್‌ಗಳ ಎರಡನೇ ಕಂತಿನ (ಎಸ್‌ಜಿಬಿ 2023-24 ಸರಣಿ II) ಇಂದು ಸೋಮವಾರ (ಸೆಪ್ಟೆಂಬರ್ 11) ಸಾರ್ವಜನಿಕ ಚಂದಾದಾರಿಕೆಗಾಗಿ ತೆರೆಯಲಿದೆ. ಸರ್ಕಾರದ ಪರವಾಗಿ ಆರ್‌ಬಿಐ ನೀಡುವ ಚಿನ್ನದ ಬಾಂಡ್‌ಗಳು ಶುಕ್ರವಾರ (ಸೆಪ್ಟೆಂಬರ್ 15) ವರೆಗೆ ಚಂದಾದಾರಿಕೆಗೆ ಮುಕ್ತವಾಗಿರುತ್ತವೆ. ಈ ಬಾಂಡ್‌ಗಳ ವಿತರಣೆಯ ಬೆಲೆ ಪ್ರತಿ ಗ್ರಾಂಗೆ 5,923 ರೂಪಾಯಿ ಆಗಿದೆ. ಆದರೆ ಆನ್‌ಲೈನ್ ಪಾವತಿ ಮಾಡುವುದಾದರೆ ಪ್ರತಿ ಗಾಂಗೆ 50 ರೂಪಾಯಿ ರಿಯಾಯಿತಿ ಇರುತ್ತದೆ.
ಸವರನ್ ಗೋಲ್ಡ್ ಬಾಂಡ್‌ಗಳು ಗ್ರಾಂ ಚಿನ್ನದ ಲೆಕ್ಕಾಚಾರದಲ್ಲಿ ಗುರುತಿಸಲಾದ ಸರ್ಕಾರಿ ಭದ್ರತೆಯ ಬಾಂಡ್‌ಗಳಾಗಿದೆ. ಭೌತಿಕ ಚಿನ್ನದ ಬದಲಾಗಿ ಇದು ಬಾಂಡ್ ರೂಪದಲ್ಲಿರುವ ಚಿನ್ನವಾಗಿದೆ. ಹೂಡಿಕೆದಾರರು ಹೂಡಿಕೆ ಮಾಡಿ, ಬಾಂಡ್‌ಗಳನ್ನು ಮೆಚ್ಯೂರಿಟಿ ಸಂದರ್ಭದಲ್ಲಿ ವಿತ್‌ಡ್ರಾ ಮಾಡಿಕೊಳ್ಳಬಹುದು. ಎಸ್‌ಜಿಬಿಯನ್ನು ಸರ್ಕಾರದ ಪರವಾಗಿ ಆರ್‌ಬಿಐ ನೀಡುತ್ತದೆ. ಇದರ ಅರ್ಹತೆ ಇಲ್ಲಿದೆ ಮುಂದೆ ಓದಿ...

ಪ್ರಮುಖ ಸವರನ್ ಗೋಲ್ಡ್ ಬಾಂಡ್ ವಿವರಗಳು
1. ಅರ್ಹತೆ: ಸವರನ್ ಗೋಲ್ಡ್ ಬಾಂಡ್ ಯೋಜನೆಯನ್ನು ಸಾಮಾನ್ಯ ಜನರು, ಎಚ್‌ಯುಎಲ್‌ಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳಿಗೆ ಮಾರಾಟ ಮಾಡಬಹುದಾಗಿದೆ.
2. ಹೂಡಿಕೆ ಮಿತಿ: ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮಿತಿ ಒಂದು ಗ್ರಾಂ ಆಗಿದೆ. ಆದರೆ ಚಂದಾದಾರಿಕೆಯ ಗರಿಷ್ಠ ಮಿತಿಯು ವ್ಯಕ್ತಿಗೆ 4 ಕೆಜಿ, ಎಚ್‌ಯುಎಫ್‌ಗೆ 4 ಕೆಜಿ ಮತ್ತು ಟ್ರಸ್ಟ್‌ಗಳಿಗೆ 20 ಕೆಜಿ ಗೋಲ್ಡ್ ಬಾಂಡ್ ಖರೀದಿ ಅವಕಾಶವಿದೆ.
3. ರೆಡೆಂಶನ್ ಬೆಲೆ: ಸವರನ್ ಗೋಲ್ಡ್ ಬಾಂಡ್ ಯೋಜನೆಯಡಿಯಲ್ಲಿ ರೆಡೆಂಶನ್ ಬೆಲೆಯು ಐಬಿಜೆಎ ಪ್ರಕಟಿಸಿದ ಹಿಂದಿನ ಮೂರು ಕೆಲಸದ ದಿನಗಳ 999 ಶುದ್ಧತೆಯ ಚಿನ್ನದ ಅಂತಿಮ ಬೆಲೆಯ ಸರಳ ಸರಾಸರಿಯನ್ನು ಆಧರಿಸಿ ಭಾರತೀಯ ರೂಪಾಯಿಗಳಲ್ಲಿರುತ್ತದೆ.
4. ಹೇಗೆ ಅರ್ಜಿ ಸಲ್ಲಿಸುವುದು?: ಸವರನ್ ಗೋಲ್ಡ್ ಬಾಂಡ್ ಯೋಜನೆ 2023-24 ಸಿರೀಸ್ II ಅನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ಎನ್‌ಎಸ್‌ಇ ಮತ್ತು ಬಿಎಸ್‌ಇ ಮೂಲಕ ಮಾರಾಟ ಮಾಡಲಾಗುತ್ತದೆ.
5. ಸವರನ್ ಗೋಲ್ಡ್ ಬಾಂಡ್ ಬೆಲೆ: ಆರ್‌ಬಿಐ ಪ್ರತಿ 10 ಗ್ರಾಂಗೆ 5,923 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ.
6. ಸವರನ್ ಗೋಲ್ಡ್ ಬಾಂಡ್ ದಿನಾಂಕ: ಆರ್‌ಬಿಐ ಸವರನ್ ಗೋಲ್ಡ್ ಬಾಂಡ್ 2023 ರ ಎರಡನೇ ಭಾಗವು 11 ನೇ ಸೆಪ್ಟೆಂಬರ್ 2023 ರಂದು ಚಂದಾದಾರಿಕೆಗೆ ತೆರೆದುಕೊಳ್ಳುತ್ತದೆ. ಸೆಪ್ಟೆಂಬರ್ 15, 2023 ರವರೆಗೆ ಬಿಡ್ಡಿಂಗ್‌ಗೆ ತೆರೆದಿರುತ್ತದೆ ಎಂದು ಘೋಷಿಸಿದೆ. ಇದರರ್ಥ, ಸವರನ್ ಗೋಲ್ಡ್ ಬಾಂಡ್ ಯೋಜನೆ 2023-24 ಸಿರೀಸ್ II ಮುಂದಿನ ವಾರ ಸೋಮವಾರದಿಂದ ಶುಕ್ರವಾರದವರೆಗೆ ಲಭ್ಯವಿರುತ್ತದೆ.
7. ಸವರನ್ ಗೋಲ್ಡ್ ಬಾಂಡ್ ರಿಯಾಯಿತಿ: ಆನ್‌ಲೈನ್ ಅರ್ಜಿದಾರರಿಗೆ ಸೆಪ್ಟೆಂಬರ್ 2023 ರ ಸವರನ್ ಗೋಲ್ಡ್ ಬಾಂಡ್‌ನ ಹೊಸ ಸಿರೀಸ್‌ಗೆ 10 ಗ್ರಾಂಗೆ 50 ರೂಪಾಯಿ ರಿಯಾಯಿತಿಯನ್ನು ಆರ್‌ಬಿಐ ಘೋಷಿಸಿದೆ.
8. ಅವಧಿ: ಸವರನ್ ಗೋಲ್ಡ್ ಬಾಂಡ್ ಯೋಜನೆಯ ಅವಧಿಯು ಎಂಟು ವರ್ಷಗಳ ಅವಧಿಗೆ ಇರುತ್ತದೆ. 5 ನೇ ವರ್ಷದ ನಂತರ ಅಕಾಲಿಕವಾಗಿ ವಿತ್‌ಡ್ರಾ ಮಾಡುವ ಆಯ್ಕೆಯಿದ್ದು, ಬಡ್ಡಿಯನ್ನು ಪಾವತಿಸಬೇಕಾದ ದಿನಾಂಕದಂದು ವಿತ್‌ಡ್ರಾ ಮಾಡಬಹುದು.
9. ಸವರನ್ ಗೋಲ್ಡ್ ಬಾಂಡ್ ಬಡ್ಡಿದರ: ಹೂಡಿಕೆದಾರರಿಗೆ ವಾರ್ಷಿಕವಾಗಿ ಶೇಕಡ 2.50 ರಷ್ಟು ಬಡ್ಡಿದರವನ್ನು ಪಾವತಿಸಲಾಗುತ್ತದೆ.
10. ಸವರನ್ ಗೋಲ್ಡ್ ಬಾಂಡ್ ಅನ್ನು ನೀವು ಸಾಲ ಪಡೆಯಲು ಅಡಮಾನವಾಗಿ ಬಳಕೆ ಮಾಡಬಹುದಾಗಿದೆ.


Click it and Unblock the Notifications