ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಎರಡು ಹಂತದ ಸವರನ್ ಗೋಲ್ಡ್ ಬಾಂಡ್‌ಗಳನ್ನು (ಎಸ್‌ಜಿಬಿ) ಆರ್‌ಬಿಐ ಈ ಹಿಂದೆ ಘೋಷಣೆ ಮಾಡಿದೆ. ಹಣಕಾಸು ವರ್ಷ 2023-24ರ ಸಿರೀಸ್ I ರ ಚಂದಾದಾರಿಕೆಯು ಜೂನ್ 19-23, 2023ರಲ್ಲಿ ನಡೆಯಲಿದೆ. ಇನ್ನು ಸವರನ್ ಗೋಲ್ಡ್ ಬಾಂಡ್‌ನ ಸಿರೀಸ್ IIರ ಚಂದಾದಾರಿಕೆಯು ಸೆಪ್ಟೆಂಬರ್ 11-15, 2023ರಲ್ಲಿ ನಡೆಯಲಿದೆ. ಅಂದರೆ ಇಂದಿನಿಂದ (ಜೂನ್ 19) ಮೊದಲ ಸರಣಿಯ ಸವರನ್ ಗೋಲ್ಡ್ ಬಾಂಡ್ ಚಂದಾದಾರಿಕೆ ಆರಂಭವಾಗಲಿದೆ.
ಚಂದಾದಾರಿಕೆಯ ಅವಧಿಯಲ್ಲಿ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಂಗೆ 5,926 ರೂಪಾಯಿ ಆಗಿರುತ್ತದೆ ಎಂದು ಜೂನ್ 16, 2023 ರಂದು ಆರ್‌ಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದೆ. ಇನ್ನು ಡಿಜಿಟಲ್ ಇಂಡಿಯಾ ಭಾಗವಾಗಿ ಆನ್‌ಲೈನ್, ಡಿಜಿಟಲ್ ವಹಿವಾಟನ್ನು ಉತ್ತೇಜನ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಹಯೋಗದಲ್ಲಿ ಆನ್‌ಲೈನ್, ಡಿಜಿಟಲ್ ಆಗಿ ಎಸ್‌ಜಿಬಿ ಚಂದಾದಾರಿಕೆ ಮಾಡುವವರಿಗೆ ಸುಮಾರು 50 ರೂಪಾಯಿ ವಿನಾಯಿತಿಯನ್ನು ನೀಡಲಿದೆ. ಅಂದರೆ ಪ್ರತಿ ಗ್ರಾಂಗೆ 5,876 ರೂಪಾಯಿ ಆಗಿರುತ್ತದೆ.

ನೀವು ಯಾಕೆ ಹೂಡಿಕೆ ಮಾಡಬೇಕು?
1. ಸವರನ್ ಗೋಲ್ಡ್ ಬಾಂಡ್ ಉತ್ತಮವಾದ ದೀರ್ಘಾವಧಿಯ ಹೂಡಿಕೆ ವಿಧಾನವಾಗಿದೆ. ಇದು 8 ವರ್ಷಗಳ ಅವಧಿಯನ್ನು ಹೊಂದಿದೆ.
2. ಪ್ಯೂರಿಟಿ ಬಗ್ಗೆ ಯಾವುದೇ ಆತಂಕ ನಮಗೆ ಸವರನ್ ಗೋಲ್ಡ್ ಬಾಂಡ್ ಖರೀದಿ ವೇಳೆ ಇಲ್ಲ.
3. ಡಿಫಾಲ್ಟ್ ಆಗುವ ಯಾವುದೇ ಭಯವಿಲ್ಲ. ಯಾಕೆಂದರೆ ಇದು ಉತ್ತಮ ಗ್ಯಾರಂಟಿ ಹೊಂದಿರುವ ಸರ್ಕಾರದ ಯೋಜನೆಯಾಗಿದೆ.
4. 8 ವರ್ಷಗಳ ಕಾಲ ನಾವು ಈ ಯೋಜನೆಯಲ್ಲಿ ಮುಂದುವರಿದರೆ, ತೆರಿಗೆ ವಿನಾಯಿತಿಯೂ ಕೂಡಾ ಲಭ್ಯವಾಗುತ್ತದೆ.
5. ಎಕ್ಸ್‌ಚೇಂಜ್ ಮಾರುಕಟ್ಟೆಗಳಲ್ಲಿ ಇದನ್ನು ನಾವು ಬದಲಾವಣೆ ಮಾಡಿಕೊಳ್ಳಬಹುದು. ಇದು ನಿಜವಾದ ಗೋಲ್ಡ್‌ನಂತೆ ಅಲ್ಲ.
6. ಹೂಡಿಕೆದಾರರು ತಾವು ಮಾಡಿದ ಹೂಡಿಕೆಗೆ ಶೇಕಡ 2.5ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದನ್ನುಅರ್ಧ ವಾರ್ಷಿಕವಾಗಿ ಪಾವತಿಸಲಾಗುತ್ತದೆ.
7. ಸಾಲವನ್ನು ಪಡೆಯಲು ಮೇಲಾಧಾರವಾಗಿ ಈ ಸವರನ್ ಗೋಲ್ಡ್ ಬಾಂಡ್ ಅನ್ನು ಬಳಕೆ ಮಾಡಬಹುದಾಗಿದೆ.
8. ರಿಟೇಲ್ ಹೂಡಿಕೆದಾರರು ಆನ್‌ಲೈನ್ ಮೂಲಕ ಸವರನ್ ಗೋಲ್ಡ್ ಬಾಂಡ್‌ಗೆ ಹೂಡಿಕೆ ಮಾಡಿದರೆ ರಿಯಾಯಿತಿಯನ್ನು ಪಡೆಯಲು ಸಾಧ್ಯವಿದೆ.
ಎಸ್‌ಜಿಬಿ ಖರೀದಿ ಮಾಡುವುದು ಎಲ್ಲಿ?
* ನಿಗದಿತ ವಾಣಿಜ್ಯ ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು, ಪೇಮೆಂಟ್ ಬ್ಯಾಂಕ್‌ಗಳು, ಸ್ಥಳೀಯ ಗ್ರಾಮೀಣ ಬ್ಯಾಂಕುಗಳನ್ನು ಹೊರತುಪಡಿಸಿ.
* ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್
* ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (ಸೆಬಿ)
* ಸಿಸಿಐಎಲ್ (ಕ್ಲಿಯರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್)
* ನಿಗದಿತ ಅಂಚೆ ಕಚೇರಿ
* ನೇರವಾಗಿ ಅಥವಾ ಪರೋಕ್ಷವಾಗಿ ಗುರುತಿಸಲಾಗುವ ಸ್ಟಾಕ್ ಎಕ್ಸ್‌ಚೇಂಜ್
ಸವರನ್ ಗೋಲ್ಡ್ ಬಾಂಡ್: ಅವಧಿ ತಿಳಿಯಿರಿ
ಸವರನ್ ಗೋಲ್ಡ್ ಬಾಂಡ್ ಮೆಚ್ಯೂರಿಟಿ ಅವಧಿಯು ಎಂಟು ವರ್ಷಗಳು ಆಗಿದೆ. ಆದರೆ ನಾವು ಐದು, ಆರು, ಏಳನೇ ವರ್ಷದಲ್ಲಿ ಯೋಜನೆಯಿಂದ ನಿರ್ಗಮನ ಹೊಂದಬಹುದು. ಬಡ್ಡಿದರ ಪಾವತಿ ಮಾಡುವ ದಿನದಂದೇ ಯೋಜನೆ ಚಂದಾದಾರಿಕೆ ವಿತ್‌ಡ್ರಾ ಮಾಡಿಕೊಳ್ಳಬೇಕಾಗುತ್ತದೆ. ಸವರನ್ ಗೋಲ್ಡ್ ಬಾಂಡ್ ಹೂಡಿಕೆ ಮಾಡಿದಾಗ ಶೇಕಡ 2.5ರಷ್ಟು ಇರುತ್ತದೆ, ಇದು ಸ್ಥಿರ ಬಡ್ಡಿದರ ಆಗಿರುತ್ತದೆ.
ಯಾರು ಹೂಡಿಕೆ ಮಾಡಬಹುದು?
ಸವರನ್ ಗೋಲ್ಡ್ ಬಾಂಡ್ ಅನ್ನು ಭಾರತದಲ್ಲಿ ನೆಲೆಸಿರುವ ನಾಗರಿಕರು, ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್), ಟ್ರಸ್ಟ್, ವಿಶ್ವವಿದ್ಯಾನಿಲಯ, ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ಗಳು ಚಂದಾದಾರಿಕೆ ಮಾಡಿಕೊಳ್ಳಬಹುದಾಗಿದೆ. ಅಪ್ರಾಪ್ತರ ಪರವಾಗಿ ವಯಸ್ಕರು ಕೂಡಾ ಸವರನ್ ಗೋಲ್ಡ್ ಬಾಂಡ್ ಅನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications