ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಾಲ್ಕನೇ (IV) ಸೀರೀಸ್‌ನ ಸವರನ್ ಗೋಲ್ಡ್ ಬಾಂಡ್ ಯೋಜನೆ 2022-23 ಚಂದಾದಾರಿಕೆಯನ್ನು ಮಾರ್ಚ್ 6ರಂದು (ಸೋಮವಾರ) ಆರಂಭಿಸಿದೆ. ಮಾರ್ಚ್ 10ರ 2023ರಂದು (ಇಂದು) ಸವರನ್ ಗೋಲ್ಡ್ ಬಾಂಡ್ ಯೋಜನೆಯ ಕೊನೆಯ ದಿನಾಂಕವಾಗಿದೆ. ಸವರನ್ ಗೋಲ್ಡ್ ಬಾಂಡ್ ಚಿನ್ನದ ಖರೀದಿಗೆ ಆರ್‌ಬಿಐ ಮೂಲ ದರವಾಗಿ ಪ್ರತಿ ಗ್ರಾಮ್‌ಗೆ 5,611 ರೂಪಾಯಿ ನಿಗದಿಪಡಿಸಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಾವತಿಸಿದರೆ ಪ್ರತಿ ಗ್ರಾಮ್‌ಗೆ 50 ರೂಪಾಯಿ ರಿಯಾಯಿತಿ ಲಭ್ಯವಾಗಲಿದೆ. ಡಿಸೆಂಬರ್ 2022ರಂದು ಜಾರಿ ಮಾಡಿದ ಯೋಜನೆಯಲ್ಲಿ ಆರ್‌ಬಿಐ ಪ್ರತಿ ಗ್ರಾಮ್‌ಗೆ 5,409 ರೂಪಾಯಿ ನಿಗದಿ ಮಾಡಿತ್ತು. ಅದಕ್ಕೂ ಮುಂಚಿನ ಸಂಚಿಕೆಯಲ್ಲಿ 5,197 ರೂಪಾಯಿ ನಿಗದಿಪಡಿಸಲಾಗಿತ್ತು. ಈ ಹಣಕಾಸು ವರ್ಷದ ಕೊನೆಯ ಬಾಂಡ್ ಇದಾಗಿರಲಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ಗೋಲ್ಡ್ ಬಾಂಡ್ ಬಗ್ಗೆ ಮಾಹಿತಿ
ಓರ್ವ ವ್ಯಕ್ತಿ ಕನಿಷ್ಠವಾಗಿ 1 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡುವ, ಗರಿಷ್ಠವಾಗಿ 4 ಕೆಜಿ ಚಿನ್ನದ ಮೇಲೆ ಹೂಡಿಕೆ ಮಾಡುವ ಅವಕಾಶವಿದೆ. ಹಿಂದೂ ಅವಿಭಜಿತ ಕುಟುಂಬವಾದಲ್ಲಿ 4 ಕೆಜಿ, ಟ್ರಸ್ಟ್ ಆದಲ್ಲಿ 20 ಕೆಜಿ ಚಿನ್ನಕ್ಕೆ ಹೂಡಿಕೆ ಮಾಡಬಹುದು. ಬ್ಯಾಂಕ್, ಸ್ಟಾಕ್ ಹೋಲ್ಡಿಂಗ್ಸ್ ಕಾಪೋರೇಷನ್, ಪೋಸ್ಟ್ ಆಫೀಸ್‌ನಿಂದ ಈ ಬಾಂಡ್ ಖರೀದಿಸಬಹುದು. 8 ವರ್ಷಗಳ ಮೆಚ್ಯೂರಿಟಿ ಅವಧಿಯಿದೆ.
5ನೇ ವರ್ಷದ ಬಳಿಕ ಎಕ್ಸಿಟ್ ಆಯ್ಕೆಯಿದೆ. ಲಾಕಿನ್ ಅವಧಿ 5 ವರ್ಷಕ್ಕಿಂತ ಮುನ್ನ ಬಾಂಡ್ ಹಿಂಪಡೆಯಬೇಕಾದರೆ ಸ್ಟಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಫಾರಿನ್ ಎಕ್ಸ್‌ಚೇಂಜ್ ಮಾನೆಜ್‌ಮೆಂಟ್ ಆಕ್ಟ್ (ಎಫ್‌ಇಎಂಎ) ಪ್ರಕಾರವಾಗಿ ಭಾರತದ ಯಾವುದೇ ಪ್ರಜೆಗಳು ಸವರನ್ ಗೋಲ್ಡ್ ಬಾಂಡ್ (ಎಸ್‌ಜಿಬಿ) ಮೇಲೆ ಹೂಡಿಕೆ ಮಾಡುವ ಅವಕಾಶ ಹೊಂದಿದ್ದಾರೆ. ಅಪ್ರಾಪ್ತರ ಪರವಾಗಿ ಅವರ ಪೋಷಕರು ಕೂಡಾ ಬಾಂಡ್‌ಗೆ ಹೂಡಿಕೆ ಮಾಡಬಹುದಾಗಿದೆ.
ಸವರನ್ ಗೋಲ್ಡ್ ಬಾಂಡ್ ಅನ್ನು ನೀವು ಸಾಲಕ್ಕೆ ಮೇಲಾಧಾರವನ್ನಾಗಿಸಬಹುದು. ಆರ್‌ಬಿಐ ನಿರ್ಧಾರ ಮಾಡಿದಂತೆ ಇತರೆ ಚಿನ್ನದ ಸಾಲದಂತೆ ಸಾಲದ ಮೌಲ್ಯವಿರಲಿದೆ. ಸರ್ಕಾರವು 2015ರ ನವೆಂಬರ್‌ನಲ್ಲಿ ಸವರನ್ ಗೋಲ್ಡ್ ಬಾಂಡ್ ಆರಂಭಿಸಲಾಗಿದೆ. ಆರ್‌ಬಿಐ ಅಡಿಯಲ್ಲಿ ಚಂದಾದಾರಿಕೆ ಇರಲಿದೆ. ಸವರನ್ ಗೋಲ್ಡ್ ಬಾಂಡ್ ಹೂಡಿಕೆ ಮಾಡಬೇಕಾದರೆ, ಕೆಲವು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇತರೆ ಯೋಜನೆಗಳಲ್ಲಿ ಕೂಡಾ ಅಗತ್ಯವಾದ ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್, ಟಿಎಎಸ್/ಪಾಸ್‌ಪೋರ್ಟ್, ವೋಟರ್ ಐಡಿ ಹೊಂದಿರಬೇಕಾಗುತ್ತದೆ.
ಫಿಸಿಕಲ್ ಚಿನ್ನದಂತೆ ಚಿನ್ನದ ಬಾಂಡ್ ಸುರಕ್ಷತೆಯ ಚಿಂತೆ ಇಲ್ಲ. ಸವರನ್ ಗೋಲ್ಡ್ ಬಾಂಡ್ ಸುರಕ್ಷತೆಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಅದು ಸುರಕ್ಷಿತವಾಗಿರುತ್ತದೆ. ಹಾಗೆಯೇ ಯಾವುದೇ ಜಿಎಸ್‌ಟಿ, ಮೇಕಿಂಗ್ ಶುಲ್ಕಗಳು ಇಲ್ಲ. ಚಿನ್ನದ ಕಾಯಿನ್, ಬಾರ್, ಆಭರಣಗಳಾದರೆ ಜಿಎಸ್‌ಟಿ, ಮೇಕಿಂಗ್ ಚಾರ್ಜ್ ಇರಲಿದೆ. ಡಿಜಿಟಲ್ ಚಿನ್ನ ಖರೀದಿ ಮಾಡುವಾಗಲೂ ನೀವು ಶೇಕಡ 3ರಷ್ಟು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಸವರನ್ ಗೋಲ್ಡ್ ಬಾಂಡ್‌ನಲ್ಲಿ ಮೇಕಿಂಗ್ ಚಾರ್ಜ್ ತಲೆಬಿಸಿಯಿಲ್ಲ.


Click it and Unblock the Notifications