ಪ್ರಭುದಾಸ್ ಲಿಲ್ಲಾಧರ್ ತನ್ನ ಇತ್ತೀಚಿನ ವರದಿಯಲ್ಲಿ ಲಾರ್ಜ್ ಕ್ಯಾಪ್ ರಿಯಲ್ ಎಸ್ಟೇಟ್ ವಲಯದ ಒಬೆರಾಯ್ ರಿಯಾಲ್ಟಿ ಲಿಮಿಟೆಡ್ ಸ್ಟಾಕ್ ಅನ್ನು ಖರೀದಿ ಮಾಡುವಂತೆ ಸಲಹೆ ನೀಡಿದೆ. ಪ್ರತಿ ಷೇರಿಗೆ 1220 ರೂಪಾಯಿ ಟಾರ್ಗೆಟ್ ಬೆಲೆಯೊಂದಿಗೆ ಈ ಸ್ಟಾಕ್ ಖರೀದಿಗೆ ಪಿಎಲ್ ಶಿಫಾರಸು ಮಾಡಿದೆ.
ಇನ್ನು ಪ್ರತಿ ಷೇರಿಗೆ 1100 ರೂಪಾಯಿ ಕನಿಷ್ಠ ಬೆಲೆಯನ್ನು ಇರಿಸಿಕೊಂಡು ಖರೀದಿ ಮಾಡಲು ಪ್ರಭುದಾಸ್ ಲಿಲ್ಲಾಧರ್ ಶಿಫಾರಸು ನೀಡಿದೆ. ಒಬೆರಾಯ್ ರಿಯಾಲ್ಟಿ ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆಯು ಶೇಕಡ 0.15 ರಷ್ಟು ಏರಿಕೆಯಾಗಿ 1,139.35 ರೂಪಾಯಿಗೆ ತಲುಪಿದೆ.

ಇಂಟ್ರಾಡೇಯಲ್ಲಿ ಶೇಕಡ 0.69 ರಷ್ಟು ಜಿಗಿದು 1145.45 ರೂಪಾಯಿಗೆ ತಲುಪಿದೆ. ಒಬೆರಾಯ್ ರಿಯಾಲ್ಟಿ ಷೇರುಗಳು ಕಳೆದ 6 ತಿಂಗಳ ಅವಧಿಯಲ್ಲಿ ಷೇರುದಾರರಿಗೆ ಶೇಕಡ 40ರಷ್ಟು ಲಾಭವನ್ನು ನೀಡಿದೆ. ಕಳೆದ 3 ವರ್ಷಗಳಲ್ಲಿ ಶೇಕಡ 182ರಷ್ಟು ಏರಿಕೆಯಾಗಿದೆ. ಈ ಸ್ಟಾಕ್ ಬಗ್ಗೆ ಇಲ್ಲಿದೆ ಅಧಿಕ ವಿವರ ಮುಂದೆ ಓದಿ...
ಒಬೆರಾಯ್ ರಿಯಾಲ್ಟಿ ಸ್ಟಾಕ್ ರಿಟರ್ನ್
ಲಾರ್ಜ್ ಕ್ಯಾಪ್ ಸ್ಟಾಕ್‌ನ ಪ್ರಸ್ತುತ ಮಾರುಕಟ್ಟೆ ಬೆಲೆ ಬಿಎಸ್‌ಇಯಲ್ಲಿ ಪ್ರತಿ ಷೇರಿಗೆ 1145.45 ರೂಪಾಯಿ ಆಗಿದೆ. ಇದರ 52 ವಾರಗಳ ಗರಿಷ್ಠ ಬೆಲೆ ಪ್ರತಿ ಷೇರಿಗೆ 1206.00 ರೂಪಾಯಿ ಆಗಿದೆ. 52 ವಾರಗಳ ಕನಿಷ್ಠ ಬೆಲೆ ಪ್ರತಿ ಷೇರಿಗೆ 790.05 ರೂಪಾಯಿ ಆಗಿದೆ. ಕಂಪನಿಯು 41,554.28 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಕಳೆದ 1 ವರ್ಷದಲ್ಲಿ ಒಬೆರಾಯ್ ರಿಯಾಲ್ಟಿ ಷೇರುಗಳು ಶೇಕಡ 27 ರಷ್ಟು ಏರಿಕೆಯಾಗಿದೆ. ಕಳೆದ 2 ವರ್ಷಗಳಲ್ಲಿ ಶೇಕಡ 29 ರಷ್ಟು ಗಳಿಸಿದೆ. ಕಳೆದ 3 ವರ್ಷಗಳಲ್ಲಿ ಶೇಕಡ 182 ರಷ್ಟು ಏರಿಕೆಯಾಗಿದೆ. ಕಳೆದ 10 ವರ್ಷಗಳಲ್ಲಿ ಒಬೆರಾಯ್ ರಿಯಾಲ್ಟಿ ಸ್ಟಾಕ್ ಶೇಕಡ 588 ರಷ್ಟು ಜಿಗಿತ ಕಂಡಿದೆ.
ಒಬೆರಾಯ್ ರಿಯಾಲ್ಟಿ ಹಣಕಾಸು
ಈ ಹಿಂದಿನ ತ್ರೈಮಾಸಿಕದಲ್ಲಿ ಕಂಪನಿಯು ಸ್ಥಿರವಾದ ಆದಾಯವನ್ನು ಗಳಿಸಿದೆ. ಆದರೆ ಲಾಭವು ಶೇಕಡ 20 ರಷ್ಟು ಕುಸಿತವಾಗಿ 321.64 ಕೋಟಿ ರೂಪಾಯಿಗೆ ತಲುಪಿದೆ. ಮುಂಬೈ ಮೂಲದ ಲಾರ್ಜ್ ಕ್ಯಾಪ್ ರಿಯಲ್ ಎಸ್ಟೇಟ್ ಕಂಪನಿಯು ಅದಕ್ಕೂ ಹಿಂದಿನ ಅವಧಿಯಲ್ಲಿ 403.08 ಕೋಟಿ ರೂಪಾಯಿ ಎಂದು ಘೋಷಿಸಿತ್ತು. ಬಿಎಸ್‌ಇ ಫೈಲಿಂಗ್‌ನ ಪ್ರಕಾರ, ಒಟ್ಟು ಆದಾಯವು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 933.56 ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ವರ್ಷದಲ್ಲಿ 934.81 ಕೋಟಿ ರೂಪಾಯಿ ಆಗಿದೆ.
ಒಬೆರಾಯ್ ರಿಯಾಲ್ಟಿ ಬಗ್ಗೆ ಮಾಹಿತಿ
ಒಬೆರಾಯ್ ರಿಯಾಲ್ಟಿ ಲಿಮಿಟೆಡ್ ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪನಿಯಾಗಿದೆ. ರಿಯಲ್ ಎಸ್ಟೇಟ್ ವಲಯದಲ್ಲಿ ರಿಯಾಲ್ಟಿ ದಾಖಲೆಯ ಬ್ರ್ಯಾಂಡ್ ಆಗಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವಲ್ಲಿ ಈ ಸಂಸ್ಥೆ ಹೆಸರುವಾಸಿಯಾಗಿದೆ.
ಇಲ್ಲಿ ಗಮನಿಸಿ: ಈ ಸ್ಟಾಕ್ ಅನ್ನು ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲಿಲ್ಲಾಧರ್ ಶಿಫಾರಸು ಮಾಡಿದೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಮತ್ತು ಸಂಬಂಧಿತ ಬ್ರೋಕರೇಜ್ ಹೌಸ್ ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications