ಹಬ್ಬದ ಸೀಸನ್ ಮತ್ತು ಹಲವಾರು ಕಂಪನಿಗಳು ಎರಡನೇ ತ್ರೈಮಾಸಿಕದ ವರದಿ ಹೊರಬೀಳುತ್ತಿದ್ದಂತೆ ಸ್ಟಾಕ್ ಮಾರುಕಟ್ಟೆಯಲ್ಲಿ ಏರಿಳಿತ ನಿರಂತರವಾಗಿದೆ. ಮಂಗಳವಾರ ನಿಫ್ಟಿ 50 ಸುಮಾರು 79.75 ಪಾಯಿಂಟ್‌ಗಳು ಅಥವಾ ಶೇಕಡ 0.4 ಏರಿಕೆಯಾಗಿ 19,811.50 ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 261.16 ಪಾಯಿಂಟ್ ಅಥವಾ ಶೇಕಡ 0.39 ರಷ್ಟು ಏರಿಕೆಯಾಗಿ 66,428.09 ಕ್ಕೆ ಸ್ಥಿರವಾಗಿದೆ.
ಜೊತೆಗೆ, ಬ್ಯಾಂಕ್ ನಿಫ್ಟಿ 183.60 ಪಾಯಿಂಟ್‌ಗಳು ಅಥವಾ ಶೇಕಡ 0.42 ರಷ್ಟು ಏರಿಕೆಯಾಗಿ 44,409.50 ಕ್ಕೆ ತಲುಪಿದೆ. ಬುಧವಾರ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 100.38 ಪಾಯಿಂಟ್ ಅಥವಾ ಶೇಕಡ 0.15 ರಷ್ಟು ಕುಸಿದು 66,327.71 ಕ್ಕೆ ತಲುಪಿದೆ. ನಿಫ್ಟಿ 22.70 ಪಾಯಿಂಟ್ ಅಥವಾ ಶೇಕಡ 0.11 ರಷ್ಟು ಕುಸಿದು 19,788.80 ಕ್ಕೆ ತಲುಪಿದೆ. ಸುಮಾರು 1543 ಷೇರುಗಳು ಏರಿಕೆಯಾದರೆ, 542 ಷೇರುಗಳು ಕುಸಿದಿದೆ, 112 ಷೇರುಗಳು ಸ್ಥಿರವಾಗಿದೆ.

ಇಂದು ಈ ಸ್ಟಾಕ್‌ಗಳನ್ನು ಖರೀದಿಸಿ
ಎರಡನೇ ತ್ರೈಮಾಸಿಕ ಗಳಿಕೆ, ಭೌಗೋಳಿಕ ರಾಜಕೀಯ ಸನ್ನಿವೇಶಗಳು ವ್ಯಾಪಾರಿಗಳಿಗೆ ಕಳವಳವನ್ನುಂಟುಮಾಡುತ್ತವೆ. ಈ ನಡುವೆ ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅಕ್ಟೋಬರ್ 18, 2023 ರಂದು 2 ಷೇರುಗಳನ್ನು ಖರೀದಿಸಲು ಶಿಫಾರಸು ಮಾಡಿದ್ದಾರೆ.
ಬಜಾಜ್ ಆಟೋ ಷೇರು ಖರೀದಿಸಿ
ಬಜಾಜ್ ಆಟೋ ಷೇರನ್ನು 5141.25 ರೂಪಾಯಿಗೆ ಖರೀದಿಸಿ, ಸ್ಟಾಪ್-ಲಾಸ್ 5020 ಆಗಿರಲಿ, ಟಾರ್ಗೆಟ್ ಪ್ರೈಸ್ 5330 ಆಗಿದೆ ಎಂದು ಸುಮೀತ್ ಬಗಾಡಿಯಾ ತಿಳಿಸಿದ್ದಾರೆ. ಪ್ರಸ್ತುತ ಬಜಾಜ್ ಷೇರು ಬಲವಾಗಿದೆ. ಗಮನಾರ್ಹವಾಗಿ, ಇದು 5020 ನಲ್ಲಿ ದೃಢವಾದ ಬೆಂಬಲ ಮಟ್ಟವನ್ನು ಹೊಂದಿದೆ. ಅಲ್ಪಾವಧಿಯಲ್ಲಿ ಏರಿಕೆಯಾಗಲಿದೆ. ದೈನಂದಿನ ಚಾರ್ಟ್ ಕೂಡಾ ಈ ಷೇರು ಏರಿಕೆ ಸೂಚನೆ ನೀಡುತ್ತದೆ. ಖರೀದಿ ಮಾಡಿದರೆ, ಲಾಭದ ಅವಕಾಶವಿದೆ ಎಂದು ಸುಮೀತ್ ಬಗಾಡಿಯಾ ಹೇಳಿದ್ದಾರೆ.
ಕರೂರ್ ವೈಶ್ಯ ಬ್ಯಾಂಕ್ ಷೇರು ಖರೀದಿಸಿ
ಕರೂರ್ ವೈಶ್ಯ ಬ್ಯಾಂಕ್ ಷೇರನ್ನು 144 ರೂಪಾಯಿಗೆ ಖರೀದಿಸಿ, ಸ್ಟಾಪ್-ಲಾಸ್ 139 ಆಗಿರಲಿ, ಟಾರ್ಗೆಟ್ ಪ್ರೈಸ್ 152 ಆಗಿದೆ ಎಂದು ಸುಮೀತ್ ಬಗಾಡಿಯಾ ತಿಳಿಸಿದ್ದಾರೆ. ಕರೂರ್ ವೈಶ್ಯ ಬ್ಯಾಂಕ್ ಪ್ರಸ್ತುತ 144 ನಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ 138ರಿಂದ ಮೇಲಕ್ಕೆ ಏರಿದೆ. ಎಡಿಎಕ್ಸ್ ಶ್ಲಾಘನೀಯ 28 ನಲ್ಲಿ ನಿಂತಿದೆ. ಆರ್‌ಎಸ್‌ಐ ಪಾಸಿಟ್ ಏರಿಕೆಯಾಗಿದೆ. ಸ್ಟಾಕ್ ನಿರಂತರ ಹೆಚ್ಚಾಗುತ್ತಿದೆ ಎಂದು ಸುಮೀತ್ ಬಗಾಡಿಯಾ ತಿಳಿಸಿದ್ದಾರೆ.
ತಾಂತ್ರಿಕ ಸೂಚಕಗಳನ್ನು ಗಮನಿಸಿದರೆ, ಬೆಲೆಯು ಬದಲಾವಣೆಯಾಗುವ ಸಾಧ್ಯತೆಯಿದೆ. ಅಲ್ಪಾವಧಿಯಲ್ಲಿ ಸುಮಾರು 152 ಮಟ್ಟವನ್ನು ತಲುಪಬಹುದು. 139 ನಲ್ಲಿ ಸ್ಟಾಪ್ ಲಾಸ್ ಅನ್ನು ಗಮನದಲ್ಲಿಟ್ಟುಕೊಳ್ಳಿ. ಹೂಡಿಕೆದಾರರು ತಮ್ಮ ನಿರ್ಧಾರ ಮಾಡುವ ಪ್ರಕ್ರಿಯೆಯಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು. ಯಾವುದೇ ಹೆಚ್ಚಿನ ಬೆಳವಣಿಗೆಗಳಿಗಾಗಿ ಸ್ಟಾಕ್ ಅನ್ನು ನಿಕಟವಾಗಿ ಪರಿಶೀಲನೆ ಮಾಡಬೇಕು, ಗಮನಿಸಬೇಕು ಎಂದು ಸುಮೀತ್ ಬಗಾಡಿಯಾ ಹೇಳಿದ್ದಾರೆ.
ಇಲ್ಲಿ ಗಮನಿಸಿ: ಈ ಮೇಲಿನ ಲೇಖನವು ಮಾರುಕಟ್ಟೆ ತಜ್ಞರ ಸಲಹೆ, ಶಿಫಾರಸಿನ ಆಧಾರದಲ್ಲಿ ಪ್ರಕಟಿಸಲಾಗಿದೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಆಗಲಿ, ಬ್ರೋಕರೇಜ್ ಸಂಸ್ಥೆಯಾಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications