ಸುಕನ್ಯಾ ಸಮೃದ್ಧಿ ಯೋಜನೆ 2023 ರ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ನಿಮ್ಮ ಹೆಣ್ಣು ಮಗುವಿಗೆ ನೀವು ನೀಡಬಹುದಾದ ಅತ್ಯುತ್ತಮ ಕೊಡುಗೆಯಾಗಿದೆ. ಪ್ರತಿ ವರ್ಷ ಅಕ್ಟೋಬರ್ 11 ಅನ್ನು ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಆಚರಿಸಲಾಗುತ್ತದೆ. ಇದು ಹೆಣ್ಣುಮಕ್ಕಳ ಶಿಕ್ಷಣದ ಮಹತ್ವ, ಹಕ್ಕುಗಳು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ವಿಶ್ವಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, 2023 ರ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಥೀಮ್ "ಬಾಲಕಿಯರ ಹಕ್ಕಿಗಾಗಿ ಹೂಡಿಕೆ ಮಾಡಿ: ನಮ್ಮ ನಾಯಕತ್ವ, ನಮ್ಮ ಯೋಗಕ್ಷೇಮ" ಆಗಿದೆ. ಈ ಸಂದರ್ಭದಲ್ಲಿ ನೀವು ಮಾಡಬಹುದಾದ ಹೂಡಿಕೆ ಆಯ್ಕೆಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಖಾತೆಯು ಹೆಣ್ಣು ಮಕ್ಕಳಿರುವ ಪೋಷಕರಿಗೆ ಭಾರತದಲ್ಲಿ ಜನಪ್ರಿಯ ಉಳಿತಾಯ ಸಾಧನವಾಗಿದೆ. ಇದು ಮುಖ್ಯವಾಗಿ ಸರ್ಕಾರ ಖಾತ್ರಿ ನೀಡುವ, ತೆರಿಗೆ ಮುಕ್ತ ಆದಾಯವನ್ನು ನೀಡುವ ಯೋಜನೆಯಾಗಿದೆ. ಇದು ಭಾರತದಲ್ಲಿ ಹೆಣ್ಣು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಮಾಸಿಕ ಅಥವಾ ವಾರ್ಷಿಕವಾಗಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ
ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಪ್ರಸ್ತುತ ಶೇಕಡ 8 ರ ಬಡ್ಡಿದರವನ್ನು ನೀಡುತ್ತದೆ. ಆದರೂ ಈ ಎಸ್‌ಎಸ್‌ವೈ ಬಡ್ಡಿ ದರವು ತ್ರೈಮಾಸಿಕ ಆಧಾರದ ಮೇಲೆ ಬದಲಾಗಬಹುದು.
ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಧನಸಹಾಯ
ಪೋಷಕರು ತಮ್ಮ ಹೆಣ್ಣು ಮಗುವಿನ ಜನನದ ನಂತರ ತಕ್ಷಣವೇ ಎಸ್‌ಎಸ್‌ವೈ ಖಾತೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, 15 ವರ್ಷಗಳವರೆಗೆ ಕೊಡುಗೆ ನೀಡಬೇಕಾಗುತ್ತದೆ. ಹೆಣ್ಣು ಮಗುವಿಗೆ 14 ವರ್ಷ ವಯಸ್ಸಾಗುವವರೆಗೆ ಮಾತ್ರ ಎಸ್‌ಎಸ್‌ವೈ ಖಾತೆಯಲ್ಲಿ ಡೆಪಾಸಿಟ್ ಮಾಡಬಹುದು.
ಎಸ್‌ಎಸ್‌ವೈ ಮೊತ್ತವನ್ನು ಹೂಡಿಕೆದಾರರು ವಿವಾಹ ಅಥವಾ ಉನ್ನತ ಶಿಕ್ಷಣಕ್ಕಾಗಿ ಭಾಗಶಃವಾಗಿ ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ. ನೀವು ವಿತ್‌ಡ್ರಾ ಮಾಡಲು ಬಯಸುವ ವರ್ಷಕ್ಕಿಂತ ಹಿಂದಿನ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯಲ್ಲಿದ್ದ ಮೊತ್ತದ ಸುಮಾರು ಶೇಕಡ 50 ರಷ್ಟು ನೀವು ವಿತ್‌ಡ್ರಾ ಮಾಡಬಹುದಾಗಿದೆ.
ವೈಯಕ್ತಿಕ ಹಣಕಾಸು ತಜ್ಞರು ತಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಮಾಡಲು ಬಯಸುವ ಪೋಷಕರಿಗೆ ಎಸ್‌ಎಸ್‌ವೈ ಸೂಕ್ತವಾಗಿದೆ ಎಂದು ಹೇಳುತ್ತಾರೆ. ಈ ಹೂಡಿಕೆಯನ್ನು ವಿತ್‌ಡ್ರಾ ಮಾಡಬಹುದಾದ ಸಮಯವು ಹೆಣ್ಣು ಮಗುವಿನ ಪದವಿ ಅಥವಾ ಉನ್ನತ ಶಿಕ್ಷಣದ ಸಮಯಕ್ಕೆ ಪಡೆಯಬಹುದಾದ ಕಾರಣ ಇದು ಉತ್ತಮವಾದ ಹೂಡಿಕೆ ಆಯ್ಕೆಯಾಗಿದೆ.
ಆದರೆ ನಿಮ್ಮ ಮಗಳು 4-5 ವರ್ಷಕ್ಕಿಂತ ಮೇಲ್ಪಟ್ಟಿರುವಾಗ ನೀವು ಈ ಯೋಜನೆಯನ್ನು ಖರೀದಿಸಿದರೆ, ಎಸ್‌ಎಸ್‌ವೈಯಿಂದ ಹೆಣ್ಣು ಮಗುವಿನ ಉನ್ನತ ಶಿಕ್ಷಣಕ್ಕೆ ಧನಸಹಾಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಸುಕನ್ಯಾ ಸಮೃದ್ಧಿ ಯೋಜನೆ ಕ್ಯಾಲ್ಕುಲೇಟರ್
ಒಬ್ಬ ವ್ಯಕ್ತಿಯು ವಾರ್ಷಿಕವಾಗಿ 1.5 ಲಕ್ಷ ರೂಪಾಯಿ ಅಥವಾ ಮಾಸಿಕವಾಗಿ 12,500 ರೂಪಾಯಿಯನ್ನು 12 ಕಂತುಗಳಲ್ಲಿ ಎಸ್‌ಎಸ್‌ವೈ ಖಾತೆಯಲ್ಲಿ ಹದಿನೈದು ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಶೇಕಡ 8 ರಷ್ಟು ಬಡ್ಡಿದರವಾಗಿದ್ದರೆ, ಹೂಡಿಕೆದಾರರು ಹೆಣ್ಣು ಮಗುವಿಗೆ 21 ವರ್ಷವಾದಾಗ ವಿತ್‌ಡ್ರಾ ಮಾಡಲು ನಿರ್ಧರಿಸಿದರೆ, ಮೆಚ್ಯೂರಿಟಿ ಮೊತ್ತವು ಸುಮಾರು 63,79,634 ರೂಪಾಯಿ ಆಗಿರುತ್ತದೆ.
ಎಸ್‌ಎಸ್‌ವೈ ತೆರಿಗೆ ನಿಯಮಗಳು
ಎಸ್‌ಎಸ್‌ವೈನಲ್ಲಿ ಮಾಡಿದ ಡೆಪಾಸಿಟ್‌ಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ಕಡಿತವನ್ನು ಪಡೆಯಲು ಅರ್ಹವಾಗಿರುತ್ತದೆ. ಖಾತೆಯ ಮೂಲಕ ಗಳಿಸಿದ ಬಡ್ಡಿಯ ಮೊತ್ತ, ಹಾಗೆಯೇ ಮೆಚ್ಯೂರಿಟಿ ಮೊತ್ತ ಕೂಡ ತೆರಿಗೆ ಮುಕ್ತವಾಗಿರುತ್ತದೆ.


Click it and Unblock the Notifications