ಸ್ಥಿರತೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಹಾಗೂ ಸ್ವಾವಲಂಬಿಯಾಗುವುದು ಇಂದು ಮಹಿಳೆಯರಿಗೆ ಬಹಳ ಅವಶ್ಯಕವಾಗಿದೆ. ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯ ದಿನವಾಗಿದೆ. ಈ ದಿನದಂದು ಜಗತ್ತಿನೆಲ್ಲೆಡೆ ಸಾಧನೆ ಮಾಡಿದ, ಮಹತ್ವದ ಕೆಲಸ ಮಾಡಿದ ಮಹಿಳಾ ಸಾಧಕರನ್ನು ಗುರುತಿಸಲಾಗುತ್ತದೆ. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಮತ್ತು ಆರ್ಥಿಕವಾಗಿ ಸಬಲರನ್ನಾಗಿಸುವುದು ವಿಶ್ವ ಮಹಿಳಾ ದಿನಾಚರಣೆಯ ಉದ್ಧೇಶವಾಗಿದೆ.
ದೀರ್ಘಾವಧಿಯ ಪ್ರಯೋಜನವನ್ನು ನೀಡುವ ಹಲವಾರು ಯೋಜನೆಗಳು ಹೆಣ್ಣುಮಕ್ಕಳಿಗಾಗಿಯೇ ಇವೆ. ಅವುಗಳಲ್ಲಿ ಸುಕನ್ಯಾ ಸಮೃದ್ದಿ ಯೋಜನೆಯು ಒಂದಾಗಿದೆ. ಸುಕನ್ಯಾ ಸಮೃದ್ದಿ ಯೋಜನೆ ಎಂದರೇನು ಎಂದು ನಾವು ತಿಳಿಯೋಣ. ಸುಕನ್ಯಾ ಸಮೃದ್ದಿ ಯೋಜನೆ (SSY)ಯನ್ನು 2015ರಲ್ಲಿ ಪ್ರಾರಂಭಿಸಲಾಯಿತು. ಇದು ಬೇಟಿ ಬಚಾವೋ, ಬೇಟಿ ಪಡವೋಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ ಉಳಿತಾಯ ಯೋಜನೆಯಾಗಿದೆ.

ಈ ಯೋಜನೆಯ ಸಹಾಯದಿಂದ ಪೋಷಕರು ತಮ್ಮ ಹೆಣ್ಣು ಮಗುವಿಗೆ ಅಧಿಕೃತವಾಗಿರುವ ವಾಣಿಜ್ಯ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲೂ ಉಳಿತಾಯ ಖಾತೆ ತೆರೆಯಬಹುದು. ಸುಕನ್ಯಾ ಸಮೃದ್ದಿ ಯೋಜನೆಯು ಶೇಕಡ 7.6ರಷ್ಟು ಬಡ್ಡಿದರ ಹೊಂದಿದೆ. ಅಲ್ಲದೆ ನಿಮ್ಮ ಹೂಡಿಕೆ ಮತ್ತು ಅವಧಿಯನ್ನು ಆಧರಿಸಿ ಎಷ್ಟು ಆದಾಯ ಪಡೆಯಬಹುದು ಎಂದು ಲೆಕ್ಕಾಚಾರ ಹಾಕಲು ಸುಕನ್ಯಾ ಸಮೃದ್ದಿ ಯೋಜನೆ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.
ಸುಕನ್ಯಾ ಸಮೃದ್ದಿ ಯೋಜನೆ ಬೇಕಾದ ಅರ್ಹತೆ:
ಹೆಣ್ಣು ಮಗು/ಬಾಲಕಿ ಭಾರತೀಯ ಪ್ರಜೆಯಾಗಿರಬೇಕು.
ವಯೋಮಿತಿಯ ಹತ್ತು ವರ್ಷಕ್ಕಿಂತ ಹೆಚ್ಚಿರಬಾರದು.
ಒಂದು ಕುಟುಂಬದ ಎರಡು ಹೆಣ್ಣು ಮಕ್ಕಳು ಮಾತ್ರ ಪಡೆಯಲು ಅರ್ಹರಾಗಿರುತ್ತಾರೆ.
ಸುಕನ್ಯಾ ಸಮೃದ್ದಿ ಯೋಜನೆ ಕ್ಯಾಲ್ಕುಲೇಟರ್ :
ಸುಕನ್ಯಾ ಸಮೃದ್ದಿ ಯೋಜನೆ ಅರ್ಹತೆ ಪಡೆದ ನಂತರ ಹೆಣ್ಣು ಮಗುವಿನ ವಯಸ್ಸು ಮತ್ತು ಅವಶ್ಯವಿರುವ ಹೂಡಿಕೆಯ ಮೊತ್ತವನ್ನು ಕ್ಯಾಲ್ಕುಲೇಟರ್ ನಲ್ಲಿ ನಮೂದಿಸಬೇಕು. ಯೋಜನೆಯಲ್ಲಿ ಹೂಡಿಕೆಯ ಕನಿಷ್ಟ ಮೊತ್ತ 250 ರೂ. ಆಗಿದ್ದು ಗರಿಷ್ಟ ಮೊತ್ತ 1.5 ಲಕ್ಷ ರೂ. ಆಗಿದೆ. ಉದಾಹರಣೆಗೆ ನೀವು ಮಾಸಿಕವಾಗಿ ಹೂಡಿಕೆ 8,333 ರೂ. (ಅಂದಾಜು)ಗಳು 7.6% ಬಡ್ಡಿದರದೊಂದಿಗೆ ಹೂಡಿಕೆ ಮಾಡಿ 10 ವರ್ಷಗಳವರೆಗೆ ಮುಂದುವರಿದರೆ ಅದು 1,00,000 ರೂ. ಆಗಿರುತ್ತದೆ. ಕೊನೆಗೆ ನೀವು ಬಡ್ಡಿಯೊಂದಿಗೆ 15,29,458 ರೂ.ಗಳನ್ನು ಪಡೆಯುತ್ತೀರಿ.


Click it and Unblock the Notifications