ಅಧಿಕ ರಿಟರ್ನ್, ಸರ್ಕಾರದ ಗ್ಯಾರಂಟಿ ನೀಡುವ ಎಫ್‌ಡಿ: ಬಡ್ಡಿದರ ಪರಿಶೀಲಿಸಿ

ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಹೆಚ್ಚಿನ ಆದಾಯವನ್ನು ಮಾತ್ರವಲ್ಲದೆ ಹೆಚ್ಚಿನ ಸುರಕ್ಷತೆಯನ್ನೂ ನೀಡುತ್ತದೆ. ಹಾಗಾಗಿ ಹಲವಾರು ಮಂದಿ ಹೂಡಿಕೆಯ ವಿಚಾರ ಬಂದಾಗ ಪೋಸ್ಟ್ ಆಫೀಸ್‌ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇಂಡಿಯಾ ಪೋಸ್ಟ್ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು 1 ವರ್ಷದಿಂದ 5 ವರ್ಷಗಳವರೆಗಿನ ಅವಧಿಗೆ ಶೇಕಡ 5.50ರಿಂದ ಶೇಕಡ 6.70ರವರೆಗೆ ಆಕರ್ಷಕ ಬಡ್ಡಿದರವನ್ನು ಅಂಚೆ ಕಚೇರಿಯು ನೀಡುತ್ತದೆ. ಸಾಮಾನ್ಯ ಜನರು ತೆರಿಗೆ ಉಳಿತಾಯ ಸ್ಥಿರ ಠೇವಣಿ ಮೇಲೆ ಶೇಕಡ 6.70 ಬಡ್ಡಿದರವನ್ನು ಪಡೆಯಲು ಸಾಧ್ಯವಿದೆ.

ಹೂಡಿಕೆದಾರರಿಗೆ ಬಂಡವಾಳ ರಕ್ಷಣೆಯನ್ನು ನೀಡುವುದರಿಂದ ಈ ಎಫ್‌ಡಿಗಳು ಹೂಡಿಕೆದಾರರಿಗೆ ಹೆಚ್ಚಿನ ಸುರಕ್ಷಿತ ಆಗಿದೆ. ಈ ಎಫ್‌ಡಿಗಳು ಕೇಂದ್ರ ಹಣಕಾಸು ಸಚಿವಾಲಯದ ಮೂಲಕ ಸಾರ್ವಭೌಮ ಖಾತರಿಯಿಂದ ಬೆಂಬಲಿತವಾಗಿದೆ. ಹಾಗಾದರೆ ಈ ಎಫ್‌ಡಿಗಳು ಹೇಗೆ ಕಾರ್ಯನಿರ್ವಹಿಸುತ್ತದೆ, ಇಂಡಿಯಾ ಪೋಸ್ಟ್‌ ಎಫ್‌ಡಿಯ ಪ್ರಯೋಜನವೇನು, ಬಡ್ಡಿದರ ಎಷ್ಟಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ..

 ಪೋಸ್ಟ್ ಆಫೀಸ್ ಎಫ್‌ಡಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಪೋಸ್ಟ್ ಆಫೀಸ್ ಎಫ್‌ಡಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಭಾರತ ಅಂಚೆಯ ನಿಶ್ಚಿತ ಠೇವಣಿ ಯೋಜನೆಗಳನ್ನು ರಾಷ್ಟ್ರೀಯ ಉಳಿತಾಯ ಸಂಸ್ಥೆಯು ನಿರ್ವಹಿಸುತ್ತದೆ. ಇದು ಆರ್ಥಿಕ ವ್ಯವಹಾರಗಳ ಇಲಾಖೆ, ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪೋಸ್ಟ್ ಆಫೀಸ್ ಫಿಕ್ಸಿಡ್ ಡೆಪಾಸಿಟ್‌ಗಳನ್ನು ರಾಷ್ಟ್ರೀಯ ಉಳಿತಾಯ ಸಮಯದ ಠೇವಣಿ ಎಂದೂ ಕರೆಯಲಾಗುತ್ತದೆ. ಹೂಡಿಕೆದಾರರು ಹತ್ತಿರದ ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಹೂಡಿಕೆದಾರರು ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಈ ಎಫ್‌ಡಿಗಳಲ್ಲಿ ಹೂಡಿಕೆ ಮಾಡಿದಾಗ ಸರ್ಕಾರದ ಗ್ಯಾರಂಟಿಯನ್ನು ಪಡೆಯುತ್ತಾರೆ. ತ್ರೈಮಾಸಿಕ ಆಧಾರದ ಮೇಲೆ ಹೂಡಿಕೆದಾರರು ಈ ಎಫ್‌ಡಿಯಲ್ಲಿ ಬಡ್ಡಿದರಗಳನ್ನು ಸ್ವೀಕರಿಸುತ್ತಾರೆ. ಇಂಡಿಯಾ ಪೋಸ್ಟ್‌ನ ವೆಬ್‌ಸೈಟ್ ಪ್ರಕಾರ, ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿ ಪ್ರಾರಂಭಿಸುವುದು ಕಷ್ಟದ ಕೆಲಸವಲ್ಲ. ಪೋಸ್ಟ್ ಆಫೀಸ್‌ನ ವೆಬ್‌ಸೈಟ್‌ನಲ್ಲಿ ನೀವು ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು.

 ಇಂಡಿಯಾ ಪೋಸ್ಟ್ ಎಫ್‌ಡಿ ಪ್ರಯೋಜನಗಳೇನು?

ಇಂಡಿಯಾ ಪೋಸ್ಟ್ ಎಫ್‌ಡಿ ಪ್ರಯೋಜನಗಳೇನು?

ಈ ಎಫ್‌ಡಿಗಳು ಸರ್ಕಾರದಿಂದ ಖಾತರಿಪಡಿಸಲ್ಪಡುವ ಎಫ್‌ಡಿಗಳು ಆಗಿದೆ. ಹೆಚ್ಚಿನ ಬಡ್ಡಿದರಗಳು ಹೊಂದಿರುವ ಎಫ್‌ಡಿಗಳು ಉತ್ತಮ ಆದಾಯವನ್ನು ನೀಡುತ್ತವೆ. ಹೂಡಿಕೆದಾರರ ಹಣಕ್ಕೆ ಹೆಚ್ಚಿನ ಸುರಕ್ಷತೆ ಸಿಗುತ್ತದೆ. ನೀವು ಈ ಎಫ್‌ಡಿಗಳನ್ನು ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ಪ್ರಾರಂಭಿಸಬಹುದು. ನಾಗರಿಕರು 1 ಕ್ಕಿಂತ ಹೆಚ್ಚು ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು. ನೀವು 5 ವರ್ಷಗಳ ಅವಧಿಗೆ ಎಫ್‌ಡಿಯನ್ನು ಆರಂಭ ಮಾಡಿದರೆ, ನೀವು ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಐಟಿಆರ್‌ ಅನ್ನು ನೀವು ಸಲ್ಲಿಸಿದಾಗ ನೀವು ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಈ ಎಫ್‌ಡಿಗಳನ್ನು ಒಂದು ಅಂಚೆ ಕಛೇರಿಯಿಂದ ಇನ್ನೊಂದಕ್ಕೆ ನಿಮ್ಮ ಸಮೀಪದಲ್ಲಿರುವಂತೆ ವರ್ಗಾಯಿಸಬಹುದು. ನಾಗರಿಕರು ತಮ್ಮ ಎಫ್‌ಡಿಗಳನ್ನು ನಗದು ಪಾವತಿ ಮಾಡುವ ಮೂಲಕ ಅಥವಾ ಚೆಕ್ ಅನ್ನು ಠೇವಣಿ ಮಾಡುವ ಮೂಲಕ ಪ್ರಾರಂಭಿಸಬಹುದು. ಎಫ್‌ಡಿ ಪ್ರಾರಂಭಿಸಲು ಕನಿಷ್ಠ 1000 ರೂಪಾಯಿ ಆಗಿದೆ.

 ಬಡ್ಡಿದರಗಳು ಯಾವ ರೀತಿ ಇದೆ?

ಬಡ್ಡಿದರಗಳು ಯಾವ ರೀತಿ ಇದೆ?

ನೀವು ಆಯ್ಕೆ ಮಾಡುವ ಅವಧಿಯನ್ನು ಅವಲಂಬಿಸಿ ಬಡ್ಡಿ ದರಗಳು ಶೇಕಡ 5.50ರಿಂದ ಶೇಕಡ 6.70ರವರೆಗೆ ಬದಲಾವಣೆಯಾಗುತ್ತದೆ. ಹೂಡಿಕೆದಾರರು 7 ದಿನ-1 ವರ್ಷದ ಅವಧಿಗೆ ಎಫ್‌ಡಿಗಳಿಗೆ ಶೇಕಡ 5.50 ಬಡ್ಡಿಯನ್ನು ಗಳಿಸಲು ಸಾಧ್ಯವಾಗಲಿದೆ. 1 ದಿನ- ಎರಡು ವರ್ಷಗಳ ಅವಧಿಯ ಎಫ್‌ಡಿಗಳಿಗೆ ಅದೇ ಬಡ್ಡಿದರವು ಲಭ್ಯವಾಗಲಿದೆ. 3 ವರ್ಷಗಳು-5 ವರ್ಷಗಳ ಅವಧಿಯ ಎಫ್‌ಡಿಗಳಲ್ಲಿ ಬಡ್ಡಿದರ ಅಧಿಕವಾಗಿದೆ. ಬಡ್ಡಿ ಪಾವತಿ ವಾರ್ಷಿಕವಾಗಿರುತ್ತದೆ. ಬಡ್ಡಿಯನ್ನು ತ್ರೈಮಾಸಿಕವಾಗಿ ಹೂಡಿಕೆ ಮಾಡಲಾಗುತ್ತದೆ. 6 ತಿಂಗಳ ನಂತರ ಅಕಾಲಿಕ ಹಿಂಪಡೆಯುವಿಕೆಗೆ ಅವಕಾಶವಿದೆ.

 ಬಡ್ಡಿದರ ಪಟ್ಟಿ ಇಲ್ಲಿದೆ

ಬಡ್ಡಿದರ ಪಟ್ಟಿ ಇಲ್ಲಿದೆ

ಒಂದು ವರ್ಷದ ಅವಧಿ: ಶೇಕಡ 5.50 ಬಡ್ಡಿದರ (ವಾರ್ಷಿಕ)
ಎರಡು ವರ್ಷದ ಅವಧಿ: ಶೇಕಡ 5.50 ಬಡ್ಡಿದರ (ವಾರ್ಷಿಕ)
ಮೂರು ವರ್ಷದ ಅವಧಿ: ಶೇಕಡ 5.50 ಬಡ್ಡಿದರ (ವಾರ್ಷಿಕ)
ಐದು ವರ್ಷದ ಅವಧಿ: ಶೇಕಡ 5.70 ಬಡ್ಡಿದರ (ವಾರ್ಷಿಕ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+