ಮುಂಬೈ ಮತ್ತು ದೆಹಲಿಯ ಮೆಟ್ರೋ ನಗರಗಳಲ್ಲಿ ಟೆಲಿಕಾಂ ಸೇವೆ ನೀಡುವ ಸರ್ಕಾರಿ ಬೆಂಬಲಿತ 37 ವರ್ಷ ಹಳೆಯ ಟೆಲಿಕಾಂ ಸೇವಾ ಸಂಸ್ಥೆಯ ಸ್ಟಾಕ್ ಆದ ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್‌ಎಲ್) ಷೇರು ಭಾರೀ ರಿಟರ್ನ್ ಅನ್ನು ನೀಡುತ್ತಿದೆ. ಸೋಮವಾರ ಷೇರಿನ ಬೆಲೆ ಹೊಸ 52 ವಾರದ ಗರಿಷ್ಠ ಮಟ್ಟವನ್ನು ತಲುಪಿದ ಬಳಿದ ಸ್ಟಾಕ್ ಹೊಸ ದಾಖಲೆ ಬರೆದಿದೆ.
ಬೃಹತ್ ಷೇರುಗಳು ಬಿಎಸ್‌ಇಯಲ್ಲಿ ಎಕ್ಸ್‌ಚೇಂಜ್ ಆಗಿದೆ. ಆದರೆ ಎಂಟಿಎನ್‌ಎಲ್ ಷೇರುಗಳು ಸತತ ಮೂರು ದಿನಗಳವರೆಗೆ ಏರಿಕೆಯನ್ನು ಕಾಣುತ್ತಾ ಬಂದಿದೆ. ಬಿಎಸ್‌ಇಯಲ್ಲಿ ಸ್ಟಾಕ್ ಸುಮಾರು ಶೇಕಡ 28 ರಷ್ಟು ಏರಿಕೆಯನ್ನು ದಾಖಲು ಮಾಡಿದೆ. ಎಂಟಿಎನ್‌ಎಲ್ ಷೇರುಗಳು ಆರು ತಿಂಗಳಲ್ಲಿ ಹೂಡಿಕೆಯನ್ನು ಡಬಲ್ ಮಾಡಿದೆ. ಈ ಸ್ಟಾಕ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಎಂಟಿಎನ್‌ಎಲ್ ಸ್ಟಾಕ್ ಬಗ್ಗೆ ವಿವರ
ಆರಂಭಿಕ ವಹಿವಾಟಿನಲ್ಲಿ, ಬಿಎಸ್‌ಇನಲ್ಲಿ ಎಂಟಿಎನ್‌ಎಲ್ ಷೇರುಗಳು 52 ವಾರಗಳ ಹೊಸ ಗರಿಷ್ಠ ಮಟ್ಟ 33.53 ರೂಪಾಯಿಗೆ ತಲುಪಿದೆ. ಈ ಸುದ್ದಿಯನ್ನು ಬರೆಯುವ ಸಂದರ್ಭದಲ್ಲಿ ಸ್ಟಾಕ್ ಸುಮಾರು ಶೇಕಡ 0.47 ರಷ್ಟು ಇಳಿಕೆಯಾಗಿ 31.90 ರೂಪಾಯಿಗೆ ತಲುಪಿದೆ. ಆದರೆ ಆರಂಭಿಕ ವಹಿವಾಟಿನಲ್ಲಿ ಶೇಕಡ 11.04 ರಷ್ಟು ಏರಿಕೆಯಾಗಿ 32.70 ರೂಪಾಯಿ ಆಗಿದೆ.
ಎಂಟಿಎನ್‌ಎಲ್ 9.15 ಗಂಟೆಗೆ 118,572 ಷೇರುಗಳು, 9.16 ಕ್ಕೆ 152,227 ಷೇರುಗಳು, 9.19 ಕ್ಕೆ 137,565 ಷೇರುಗಳು, 9.22 ಗಂಟೆಗೆ 126,593 ಸ್ಟಾಕ್‌ಗಳು, 9.34 ಗಂಟೆಗೆ 224,449 ಷೇರುಗಳು, 9.46 ಗಂಟೆಗೆ 139,212 ಸ್ಟಾಕ್‌ಗಳು ಡೀಲ್ ಆಗಿದೆ. ಆರಂಭಿಕ ವಹಿವಾಟಿನಲ್ಲಿ ಸ್ಟಾಕ್ 9:15 ರಿಂದ 11 ರವರೆಗೆ ಭಾರೀ ಡೀಲ್ ನಡೆಸಿದೆ.
ಬೆಳಿಗ್ಗೆ 11.39ಕ್ಕೆ ಸ್ಟಾಕ್ 8,54,275 ಈಕ್ವಿಟಿ ಷೇರುಗಳ ಮಾರಾಟದ ವಿರುದ್ಧ 53,24,548 ಈಕ್ವಿಟಿ ಷೇರುಗಳ ಖರೀದಿಯಾಗಿದೆ. ಖರೀದಿದಾರರು ಮತ್ತು ಮಾರಾಟಗಾರರ ಹೆಸರುಗಳು ಪ್ರಸ್ತುತ ತಿಳಿದಿಲ್ಲ. ಕಳೆದ ವಾರ, ಸೆಪ್ಟೆಂಬರ್ 22 ರಂದು, ಎಂಟಿಎನ್‌ಎಲ್ ಷೇರುಗಳು ಸುಮಾರು ಶೇಕಡ 9 ರಷ್ಟು ಏರಿದರೆ, ಸೆಪ್ಟೆಂಬರ್ 21 ರಂದು ಶೇಕಡ 3.3 ರಷ್ಟು ಏರಿಕೆಯಾಗಿದೆ. ಹೀಗೆ ಎಂಟಿಎನ್‌ಎಲ್ ಷೇರುಗಳು ಮೂರು ದಿನಗಳಲ್ಲಿ ಶೇಕಡ 28.2 ರಷ್ಟು ಏರಿಕೆಯಾಗಿದೆ.
ಸೆಪ್ಟೆಂಬರ್ ಮುಗಿಯಲು ಇನ್ನು ಒಂದು ವಾರಕ್ಕಿಂತ ಕಡಿಮೆ ಸಮಯವಿದೆ. ಪ್ರಸಕ್ತ ತಿಂಗಳಿನಲ್ಲಿ ಇದುವರೆಗೆ ಷೇರಿನ ಬೆಲೆ ಸುಮಾರು ಶೇಕಡ 49 ರಷ್ಟಿ ಏರಿಕೆಯಾಗಿದೆ. ಈ ನಡುವೆ ಸ್ಟಾಕ್ ಆರು ತಿಂಗಳ ಅವಧಿಯಲ್ಲಿ ಶೇಕಡ 90 ರಷ್ಟು ಏರಿಕೆಯಾಗಿದೆ. ಆಕ್ಸಿಸ್ ಡೈರೆಕ್ಟ್ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನಾವು ನೋಡಿದಾಗ, ಹೂಡಿಕೆದಾರರು 50 ಸಾವಿರ ರೂಪಾಯಿ ಷೇರುಗಳನ್ನು ಖರೀದಿಸಿದ್ದಾರೆ ಎಂದುಕೊಳ್ಳೋಣ. ಆರು ತಿಂಗಳಲ್ಲಿ ಹೂಡಿಕೆಯು 95,000 ರೂಪಾಯಿಗೆ ಬೆಳವಣಿಗೆ ಕಂಡಿದೆ.
ಖಾಸಗಿ ಟೆಲಿಕಾಂ ಕಂಪನಿಗಳ ವಿರುದ್ಧ ಮಾರುಕಟ್ಟೆ ಪಾಲನ್ನು ಮತ್ತು ಚಂದಾದಾರರನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಎಂಟಿಎನ್‌ಎಲ್ ಪ್ರಸ್ತುತ ನಷ್ಟದ ಹೊರೆ ಹೊತ್ತಿರುವ ಕಂಪನಿಯಾಗಿದೆ. ಜೂನ್ 2023 ರ ತ್ರೈಮಾಸಿಕದಲ್ಲಿ, ಎಂಟಿಎನ್‌ಎಲ್ ನಿವ್ವಳ ನಷ್ಟವು 653.07 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 851.93 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇನ್ನು ಕಾರ್ಯಾಚರಣೆಯ ಆದಾಯವು 199.48 ಕೋಟಿ ರೂಪಾಯಿಯಿಂದ 250.72 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.
ಇಲ್ಲಿ ಗಮನಿಸಿ: ಈ ಸ್ಟಾಕ್ ಲೇಖಕರು ಮತ್ತು ಗ್ರೇನಿಯಮ್ ನೀಡಿದ ಸಲಹೆಯಲ್ಲ. ಲೇಖನದ ಆಧಾರದ ಮೇಲೆ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಮತ್ತು ಸಂಬಂಧಿತ ಬ್ರೋಕರೇಜ್ ಹೌಸ್ ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications