ಆಟಮ್ ಇನ್ವೆಸ್ಟ್‌ಮೆಂಟ್ & ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಷೇರುಗಳು ಕಳೆದ ಮೂರು ವರ್ಷಗಳಲ್ಲಿ ಭಾರೀ ರಿಟರ್ನ್ ಅನ್ನು ನೀಡಿದೆ. ಸೆಪ್ಟೆಂಬರ್ 28, 2020 ರಂದು ಬರೀ 10.07 ರೂಪಾಯಿ ಆಗಿದ್ದ ಎನ್‌ಬಿಎಫ್‌ಸಿ ಸ್ಟಾಕ್ ಇಂದು (ಸೆಪ್ಟೆಂಬರ್ 29, 2023) ಮಲ್ಟಿಬ್ಯಾಗರ್ ಆಗಿ ಬೆಳವಣಿಗೆ ಕಂಡಿದೆ. ಬಿಎಸ್‌ಇಯಲ್ಲಿ ಸ್ಟಾಕ್ ಗರಿಷ್ಠಮಟ್ಟ 482.60 ರೂಪಾಯಿಗೆ ಏರಿದೆ. ಈ ಅವಧಿಯಲ್ಲಿ ಆದಾಯವು ಶೇಕಡ 4,692 ರಷ್ಟು ಏರಿಕೆಯಾಗಿದೆ.
ಮೂರು ವರ್ಷಗಳ ಹಿಂದೆ ಆಟಮ್ ಇನ್ವೆಸ್ಟ್‌ಮೆಂಟ್‌ನ ಷೇರುಗಳಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಇಂದು 47.92 ಲಕ್ಷ ರೂಪಾಯಿಗಳಿಗೆ ಬೆಳವಣಿಗೆ ಕಂಡಿದೆ. ಹೋಲಿಕೆ ಮಾಡಿದರೆ ಸೆನ್ಸೆಕ್ಸ್ ಈ ಅವಧಿಯಲ್ಲಿ ಶೇಕಡ 74.03 ರಷ್ಟು ಏರಿಕೆಯಾಗಿದೆ. ಇಂದಿನ ವಹಿವಾಟಿನ ಅವಧಿಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್ ಬಿಎಸ್‌ಇಯಲ್ಲಿ ಶೇಕಡ 20ರಷ್ಟು ಹೆಚ್ಚಾಗಿ 468.05 ರೂಪಾಯಿಗೆ ತಲುಪಿದೆ.

ಆಟಮ್ ಇನ್ವೆಸ್ಟ್‌ಮೆಂಟ್ ಸ್ಟಾಕ್ ಬಿಎಸ್‌ಇಯಲ್ಲಿ ಹಿಂದಿನ ಕೊನೆಯ ವಹಿವಾಟಿನಲ್ಲಿ 402.20 ರೂಪಾಯಿಯಿಂದ ಶುಕ್ರವಾರದ ವಹಿವಾಟಿನಲ್ಲಿ 439 ರೂಪಾಯಿಗೆ ಏರಿಕೆ ಕಂಡಿದೆ. ಇಂದಿನ ವಹಿವಾಟಿನ ಅಂತ್ಯದಲ್ಲಿ ಆಟಮ್ ಇನ್ವೆಸ್ಟ್‌ಮೆಂಟ್ ಸ್ಟಾಕ್ ಸುಮಾರು ಶೇಕಡ 19.99 ರಷ್ಟು ಏರಿಕೆಯಾಗಿ 482.60 ರೂಪಾಯಿಗೆ ತಲುಪಿದೆ.
ಆಗಸ್ಟ್ 8, 2023 ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, 580 ರೂಪಾಯಿಗೆ ತಲುಪಿದೆ. ಈ ವರ್ಷ ಫೆಬ್ರವರಿ 23, 2023 ರಂದು ಸ್ಟಾಕ್ 52 ವಾರದ ಕನಿಷ್ಠ ಮಟ್ಟ 154.50 ರೂಪಾಯಿಗೆ ತಲುಪಿದೆ. ಸಂಸ್ಥೆಯ ಒಟ್ಟು 7292 ಷೇರುಗಳು ಬಿಎಸ್‌ಇಯಲ್ಲಿ 34.07 ಲಕ್ಷ ರೂಪಾಯಿ ವಹಿವಾಟು ನಡೆಸಿವೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಬಿಎಸ್‌ಇಯಲ್ಲಿ 7949.60 ಕೋಟಿ ರೂಪಾಯಿ ಆಗಿದೆ.
ಎನ್‌ಬಿಎಫ್‌ಸಿ ಸ್ಟಾಕ್ ಒಂದು ವರ್ಷದಲ್ಲಿ ಶೇಕಡ 106 ರಷ್ಟು ಏರಿಕೆಯಾಗಿದೆ. ಈ ವರ್ಷದ ಆರಂಭದಿಂದ ಸ್ಟಾಕ್ ಶೇಕಡ 118.52 ರಷ್ಟು ಗಳಿಸಿದೆ. ಆರು ತಿಂಗಳ ಅವಧಿಯಲ್ಲಿ ಷೇರು ಸುಮಾರು ಶೇಕಡ 177.28 ರಷ್ಟು ಏರಿದೆ. ಇಬ್ಬರು ಪ್ರೊಮೋಟರ್‌ಗಳು ಸಂಸ್ಥೆಯಲ್ಲಿ ಶೇಕಡ 71.47 ರಷ್ಟು ಪಾಲನ್ನು ಹೊಂದಿದ್ದಾರೆ. 6135 ಸಾರ್ವಜನಿಕ ಷೇರುದಾರರು ಜೂನ್ 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡ 28.53 ಷೇರುಗಳನ್ನು ಹೊಂದಿದ್ದಾರೆ.
ಇನ್ನು ಈ ಪೈಕಿ 5965 ಸಾರ್ವಜನಿಕ ಷೇರುದಾರರು 27.25 ಲಕ್ಷ ಷೇರುಗಳನ್ನು ಅಥವಾ 2 ಲಕ್ಷ ರೂಪಾಯಿವರೆಗಿನ ಕ್ಯಾಪಿಟಲ್‌ನ ಶೇಕಡ 1.60 ರಷ್ಟು ಪಾಲನ್ನು ಹೊಂದಿದ್ದಾರೆ. ಜೂನ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕೇವಲ ಆರು ಷೇರುದಾರರು ಶೇಕಡ 4.96 ರಷ್ಟು ಪಾಲನ್ನು ಹೊಂದಿದ್ದು, ಅಂದರೆ 2 ಲಕ್ಷ ರೂಪಾಯಿಗಿಂತ ಅಧಿಕ ಬಂಡವಾಳವನ್ನು ಹೊಂದಿದ್ದಾರೆ.
ಇಲ್ಲಿ ಗಮನಿಸಿ: ಈ ಮೇಲಿನ ಲೇಖನವು ಮಾರುಕಟ್ಟೆ ಏರಿಳಿತ ಆಧಾರದಲ್ಲಿ ಪ್ರಕಟಿಸಲಾಗಿದೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications