ಹೂಡಿಕೆ ನಮ್ಮ ಜೀವನದಲ್ಲಿ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಾವು ಇಂದು ಹೂಡಿಕೆ ಮಾಡಿದರೆ ನಮ್ಮ ಭವಿಷ್ಯ ಸುರಕ್ಷಿತ. ಆದರೆ ಹೂಡಿಕೆ ಮಾಡುವಾಗ ನಮ್ಮ ಹಣದ ಸುರಕ್ಷತೆ ಕೂಡಾ ಮುಖ್ಯ ಅಲ್ವ?. ಹಾಗಿರುವಾಗ ನಮ್ಮ ಮುಂದೆ ಇರುವ ಸುರಕ್ಷಿತ ಆಯ್ಕೆ ಎಲ್‌ಐಸಿ ಆಗಿದೆ. ಆದರೆ ನೀವು ಎಲ್‌ಐಸಿ ಹೂಡಿಕೆಯಿಂದ ಮಿಲಿಯನೇರ್ ಆಗಬಹುದು ಎಂಬುವುದು ನಿಮಗೆ ತಿಳಿದಿದೆಯೇ?
ನೀವು ಸಣ್ಣ ಪ್ರಮಾಣದಲ್ಲಿ ಉಳಿತಾಯವನ್ನು ಮಾಡಿ ಕೊನೆಯಲ್ಲಿ ಲಕ್ಷಗಟ್ಟಲೆ ಹಣವನ್ನು ಗಳಿಸಬಹುದು ಎಂದರೆ ನೀವು ನಂಬುತ್ತೀರಾ?. ಇದಕ್ಕಾಗಿ ನಿಮಗೆ ಸರಿಯಾದ ವೇದಿಕೆ ಬೇಕಾಗುತ್ತದೆ. ಇದಕ್ಕೆ ಎಲ್‌ಐಸಿ ಹೂಡಿಕೆ ಒಂದು ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್ ಆಗಿದೆ. ಈ ಎಲ್‌ಐಸಿ ವಿಶೇಷ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ 40 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಬಹುದು.

ಎಲ್‌ಐಸಿಯ ಈ ಯೋಜನೆ ಮಾಹಿತಿ
ಎಲ್‌ಐಸಿಯ ಈ ಪಾಲಿಸಿಯ ಹೆಸರು ಜೀವನ್ ಲಾಭ್ ಪಾಲಿಸಿಯಾಗಿದೆ. ಇದನ್ನು 2020 ರಲ್ಲಿ ಪ್ರಾರಂಭಿಸಲಾಯಿತು. ಎಲ್‌ಐಸಿ ಜೀವನ್ ಲಾಭ್ ಯೋಜನೆಯು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಇದು 25 ವರ್ಷಗಳಲ್ಲಿ ಮೆಚ್ಯೂರ್ ಆಗುತ್ತದೆ. ಉತ್ತಮ ರಿಟರ್ನ್ಸ್ ಜೊತೆಗೆ ಈ ಪಾಲಿಸಿಯಿಂದ ವಿಮೆಯ ಪ್ರಯೋಜನವನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ.
ಪಾಲಿಸಿದಾರರು ಸೀಮಿತ ಅವಧಿಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಕನಿಷ್ಠ 2 ಲಕ್ಷ ರೂಪಾಯಿ ವಿಮಾ ಮೊತ್ತ ಲಭ್ಯವಿದೆ. ಆದರೆ ನೀವು 25 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನೀವು 15 ಲಕ್ಷ ರೂಪಾಯಿಗಳ ವಿಮಾ ಮೊತ್ತವನ್ನು ಪಡೆಯುತ್ತೀರಿ. ಇದಕ್ಕಾಗಿ ನೀವು 25 ವರ್ಷದವರಾಗಿರುವಾಗಲೇ ಹೂಡಿಕೆ ಮಾಡಬೇಕಾಗುತ್ತದೆ.
ಅವಧಿಗೂ ಮುನ್ನವೇ ಹೂಡಿಕೆದಾರರು ಮರಣಹೊಂದಿದರೆ, ಕುಟುಂಬಕ್ಕೆ ಹಣಕಾಸಿನ ನೆರವು ನೀಡಲಾಗುತ್ತದೆ. ಇದರ ಆಧಾರದ ಮೇಲೆ ಸಾಲ ಪಡೆಯುವ ಸೌಲಭ್ಯವೂ ಇದೆ. ಅಂದರೆ ಎಲ್‌ಐಸಿಯ ಈ ಯೋಜನೆಯಡಿ ನೀವು ಸಾಲ ಪಡೆಯಬಹುದು. 8 ವರ್ಷದಿಂದ 59 ವರ್ಷದೊಳಗಿನ ವ್ಯಕ್ತಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.
ಲೆಕ್ಕಾಚಾರ ಹೇಗಿದೆ ನೋಡಿ
ಒಬ್ಬ ವ್ಯಕ್ತಿಯು 25 ನೇ ವಯಸ್ಸಿನಲ್ಲಿ ಪಾಲಿಸಿಯನ್ನು ಖರೀದಿಸಿದರೆ, ಮೊದಲ ವರ್ಷದಲ್ಲಿ 70,188 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದರೆ ಎರಡನೇ ವರ್ಷದಿಂದ 68,677 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದರ ಪ್ರಕಾರ, ಪಾಲಿಸಿದಾರರು ಪ್ರತಿ ತಿಂಗಳು 5842 ರೂಪಾಯಿ ಪಾವತಿಸಬೇಕಾಗುತ್ತದೆ.
ಅಂದರೆ ಹೂಡಿಕೆದಾರರು ಪ್ರತಿದಿನ ಸುಮಾರು 195 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಇದರ ನಂತರ, ಮೆಚ್ಯೂರಿಟಿ ಸಮಯದಲ್ಲಿ ನೀವು 40,50,000 ರೂಪಾಯಿ ಪಾವತಿ ಮಾಡಬಹುದು. ಇದರಲ್ಲಿ 15 ಲಕ್ಷ ರೂಪಾಯಿ ವಿಮಾ ಮೊತ್ತವಿದೆ. 11,00,347 ರೂಪಾಯಿ ಡೆಪಾಸಿಟ್ ಮೊತ್ತ, 18,75,000 ರೂಪಾಯಿ ಬೋನಸ್ ಮೊತ್ತ ಆಗಿರುತ್ತದೆ.


Click it and Unblock the Notifications