ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ ಅಥವಾ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಗೆ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ದೀರ್ಘಾವಧಿಯಲ್ಲಿ ನಿಮ್ಮ ಸಂಪತ್ತು ವೃದ್ಧಿಸಲು ಹಾಗೂ ಕಡಿಮೆ ಸಮಯದಲ್ಲಿ ಅಧಿಕ ಆದಾಯವನ್ನು ಪಡೆಯಲು ಸಹಕಾರಿಯಾಗಿದೆ.
ಈ ಫಂಡ್‌ಗಳು ಪ್ರಾಥಮಿಕವಾಗಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಪರಿಣಾಮವಾಗಿ, ಅತ್ಯುತ್ತಮ ಆದಾಯವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ತೆರಿಗೆ ಉಳಿಸಲು ಮತ್ತು ಸಂಪತ್ತನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಲು ಮ್ಯೂಚುವಲ್ ಫಂಡ್ ಉತ್ತಮವಾಗಿದೆ.
ನಾವಿಲ್ಲಿ ನಿಮಗೆ ಅಂತಹುದ್ದೆ ಒಂದು ಮ್ಯೂಚುವಲ್ ಫಂಡ್ ಬಗ್ಗೆ ವಿವರಣೆಯನ್ನು ನೀಡಿದ್ದೇವೆ. ಈ ಮ್ಯೂಚುವಲ್ ಫಂಡ್ ನಿಮ್ಮ ತೆರಿಗೆಯನ್ನು ಉಳಿಸಲಿದೆ. ಅಷ್ಟು ಮಾತ್ರವಲ್ಲದೇ ನಿಮಗೆ ಉತ್ತಮ ಆದಾಯವನ್ನು ನೀಡಲಿದೆ. ನೀವು ಹೂಡಿಕೆ ಮಾಡಿದ 3 ವರ್ಷಗಳಲ್ಲಿ ಶೇಕಡ 54.60ರಷ್ಟು ಆದಾಯವನ್ನು ಗಳಿಸಬಹುದಾಗಿದೆ. ಹಾಗಾದರೆ ಆ ಫಂಡ್ ಯಾವುದು, ನಿಮಗೆ ಎಷ್ಟು ರಿಟರ್ನ್ ದೊರೆಯಲಿದೆ, ಸಂಪೂರ್ಣ ಹಾಗೂ ವಾರ್ಷಿಕ ಆದಾಯ ಎಷ್ಟು ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ....
ಐಸಿಐಸಿಐ ಪ್ರುಡೆನ್ಶಿಯಲ್ ಲಾಂಗ್ ಟರ್ಮ್ ವೆಲ್ತ್ ಎನ್ಹಾನ್ಸ್ಮೆಂಟ್ ಫಂಡ್
ಈ ತೆರಿಗೆ ಉಳಿಸಲು ಸಹಕಾರಿಯಾದ ಫಂಡ್ ಅನ್ನು 22ನೇ ಮಾರ್ಚ್ 2018 ರಂದು ಆರಂಭ ಮಾಡಲಾಗಿದೆ. ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್‌ನಿಂದ ಇದನ್ನು ಆರಂಭ ಮಾಡಲಾಗಿದ್ದು, ಈ ಫಂಡ್ ನಾಲ್ಕು ವರ್ಷದಿಂದ ಕಾರ್ಯನಿರ್ವಹಣೆ ಮಾಡುತ್ತಿದೆ. ಈ ಫಂಡ್ ನಿರ್ವಹಣೆಯಲ್ಲಿ 33.71 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ. 8ನೇ ಏಪ್ರಿಲ್ 2022 ರಂದು ಘೋಷಿಸಲಾದ ಈ ಎನ್‌ಎವಿ ರೂ 16.79 ಆಗಿದೆ. ಈ ನಿಧಿಯ ವೆಚ್ಚದ ಅನುಪಾತವು 0.98% ಆಗಿದೆ. ಇದು ಅದರ ಸರಾಸರಿ ಆದಾಯಕ್ಕಿಂತ ಕಡಿಮೆಯಾಗಿದೆ.
ಹೂಡಿಕೆಗೆ ಅತೀ ಹೆಚ್ಚು ಅಪಾಯಕಾರಿ, ಆದರೆ ಲಾಭ ಅಧಿಕ
ಇದು ಇಕ್ವಿಟಿ-ಲಿಂಕ್ಡ್ ಯೋಜನೆಯಾಗಿದೆ. ಆದ್ದರಿಂದ ಇದು ಹೂಡಿಕೆಗೆ ಹೆಚ್ಚು ಅಪಾಯಕಾರಿ ನಿಧಿಯಾಗಿದೆ. ಆದಾಗ್ಯೂ, ಇದು ಉತ್ತಮ ಆದಾಯವನ್ನು ನೀಡುವ ತೆರಿಗೆ ಉಳಿಸಲು ಸಹಕಾರಿಯಾದ ಯೋಜನೆಯಾಗಿದೆ. ಇದು ಕ್ಲೋಸ್-ಎಂಡೆಡ್ ಫಂಡ್ ಆಗಿದೆ. ಈ ನಿಧಿಯು 3 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ನಿಫ್ಟಿಯ ಮಾನದಂಡ 500 ಟಿಆರ್ಐ ಆಗಿದೆ. ಆದರೆ ಮುಳುಗುತ್ತಿರುವ ಮಾರುಕಟ್ಟೆಯಲ್ಲಿ ನಷ್ಟವನ್ನು ನಿರ್ವಹಿಸುವ ಸಾಮರ್ಥ್ಯವು ಸರಾಸರಿಗಿಂತ ಕಡಿಮೆಯಾಗಿದೆ.
ಸಂಪೂರ್ಣ ಮತ್ತು ವಾರ್ಷಿಕ ಆದಾಯ
ಒಟ್ಟು ಮೊತ್ತದ ಹೂಡಿಕೆಯ ಆದಾಯ: ಕಳೆದ ವರ್ಷದಲ್ಲಿ, ಈ ಫಂಡ್ ಶೇಕಡ 25.21 ಆದಾಯವನ್ನು ನೀಡಿದೆ, ಆದರೆ, ಫಂಡ್‌ನ ಪ್ರಾರಂಭದಿಂದಲೂ, ಶೇಕಡ 13.65 ವಾರ್ಷಿಕ ಸರಾಸರಿ ಆದಾಯವನ್ನು ನೀಡಿದೆ. ಒಂದು ವರ್ಷಕ್ಕೆ ಶೇಕಡ 25.20 ಸಂಪೂರ್ಣ ರಿಟರ್ನ್ ಆಗಿದ್ದು, ಶೇಕಡ 25.21 ವಾರ್ಷಿಕ ಆದಾಯವಾಗಿದೆ. ಎರಡು ವರ್ಷಕ್ಕೆ ಶೇಕಡ 113.88 ಸಂಪೂರ್ಣ ರಿಟರ್ನ್ ಆಗಿದ್ದು, ಶೇಕಡ 46.25 ವಾರ್ಷಿಕ ಆದಾಯವಾಗಿದೆ. ಮೂರು ವರ್ಷಕ್ಕೆ ಶೇಕಡ 54.60 ಸಂಪೂರ್ಣ ರಿಟರ್ನ್ ಆಗಿದ್ದು, ಶೇಕಡ 15.62 ವಾರ್ಷಿಕ ಆದಾಯವಾಗಿದೆ. ಆರಂಭದಿಂದಲೂ ಶೇಕಡ 67.90 ರಿಟರ್ನ್ ಆಗಿದ್ದು, ಶೇಕಡ 13.65 ವಾರ್ಷಿಕ ಆದಾಯವಾಗಿದೆ.
ಹೂಡಿಕೆ ಯೋಜನೆ: ಒಂದು ವರ್ಷಕ್ಕೆ ಶೇಕಡ 9.56 ಸಂಪೂರ್ಣ ರಿಟರ್ನ್ ಆಗಿದ್ದು, ಶೇಕಡ 18.19 ವಾರ್ಷಿಕ ಆದಾಯವಾಗಿದೆ. ಎರಡು ವರ್ಷಕ್ಕೆ ಶೇಕಡ 34.77 ಸಂಪೂರ್ಣ ರಿಟರ್ನ್ ಆಗಿದ್ದು, ಶೇಕಡ 31.65 ವಾರ್ಷಿಕ ಆದಾಯವಾಗಿದೆ. ಮೂರು ವರ್ಷಕ್ಕೆ ಶೇಕಡ 40.71 ಸಂಪೂರ್ಣ ರಿಟರ್ನ್ ಆಗಿದ್ದು, ಶೇಕಡ 23.49 ವಾರ್ಷಿಕ ಆದಾಯವಾಗಿದೆ.
ಇಲ್ಲಿ ಗಮನಿಸಿ
ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಯೋಜನೆ-ಸಂಬಂಧಿತ ದಾಖಲೆಗಳು ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಮೇಲೆ ತಿಳಿಸಿದ ಮಾಹಿತಿಯು ಸಂಪೂರ್ಣವಾಗಿ ಒಂದು ಮಾಹಿತಿಯಷ್ಟೇ ಆಗಿದ್ದು, ನಾವು ಯಾವುದೇ ಲಾಭವನ್ನು ಖಾತರಿಪಡಿಸುವುದಿಲ್ಲ. ಈ ಲೇಖನದ ಆಧಾರದ ಮೇಲೆ ನೀವು ಯಾವುದೇ ಹೂಡಿಕೆಯನ್ನು ಮಾಡಿ ನಷ್ಟ ಉಂಟಾದರೆ ಅದಕ್ಕೆ ಈ ಲೇಖನ ಬರೆದವರು ಆಗಲಿ ಅಥವಾ ಗ್ರೇನಿಯಮ್ ಜವಾಬ್ದಾರಿಯಾಗುವುದಿಲ್ಲ.


Click it and Unblock the Notifications