For Quick Alerts
ALLOW NOTIFICATIONS  
For Daily Alerts

ಹಿರಿಯ ನಾಗರಿಕರಿಗೆ ತೆರಿಗೆ ಉಳಿತಾಯದ 10 ಎಫ್‌ಡಿ ಯೋಜನೆಗಳು

|

ಕಷ್ಟಪಟ್ಟು ಹಣ ಉಳಿತಾಯ ಮಾಡಿ, ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು ಎಂದು ಹಣವನ್ನು ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡುವುದು ಸಾಮಾನ್ಯ. ಅದರಲ್ಲೂ ಹಿರಿಯ ನಾಗರೀಕರು ತಮ್ಮ ಹಣವನ್ನು ಸುರಕ್ಷಿತವಾಗಿ ಆದಾಯ ಬರುವಂತೆ ಹೂಡಿಕೆ ಮಾಡುವುದು ನಿಶ್ಚಿತ ಠೇವಣಿಗಳಲ್ಲಿ.

ಭಾರತದ ಬಹುತೇಕ ಎಲ್ಲಾ ಬ್ಯಾಂಕುಗಳು ನಿಶ್ಚಿತ ಠೇವಣಿ ಮೇಲೆ ನೀಡುವ ಬಡ್ಡಿ ದರವು ಸಾಮಾನ್ಯ ಗ್ರಾಹಕರಿಗಿಂತ ಸ್ವಲ್ಪ ಹೆಚ್ಚು ಎಂಬಂತೆ ಹಿರಿಯ ನಾಗರೀಕರಿಗೆ ಹೆಚ್ಚುವರಿ 0.50 ಪರ್ಸೆಂಡ್ ಬಡ್ಡಿ ದರವನ್ನು ಹೊಂದಿವೆ. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇತರೆ ಬ್ಯಾಂಕುಗಳು ಹಿರಿಯ ನಾಗರೀಕರಿಗೆ 0.50 ಪರ್ಸೆಂಟ್ ಹೆಚ್ಚುವರಿ ಬಡ್ಡಿ ಕೊಡುವುದು ಸಾಮಾನ್ಯ.

ಹೀಗೆ ಹೆಚ್ಚಿನ ಬಡ್ಡಿ ದರ ಹುಡುಕುವವರ ಜೊತೆಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯನ್ನು ಮಾಸಿಕ ಅಥವಾ ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ ಮತ್ತು ಗಳಿಸಿದ ಬಡ್ಡಿ ಮೊತ್ತವನ್ನು ಖಾತೆದಾರರು ಮರುಹೂಡಿಕೆ ಮಾಡಬಹುದು.

ಹಿರಿಯ ನಾಗರಿಕರ ವಿಷಯಕ್ಕೆ ಬಂದರೆ, ಅಕಾಲಿಕ ವಾಪಸಾತಿಯಿಲ್ಲದೆ 5 ವರ್ಷಗಳವರೆಗೆ ಹೂಡಿಕೆ ಮಾಡಲು ಬಯಸುವ ಹಿರಿಯ ನಾಗರಿಕರಿಗೆ, ತೆರಿಗೆ ಉಳಿತಾಯ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚಿನ ಆದಾಯದ ಭರವಸೆ ನೀಡುವ ಟಾಪ್ 10 ಖಾಸಗಿ, ಸಾರ್ವಜನಿಕ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳ ಕುರಿತಾಗಿ ಮಾಹಿತಿ ಈ ಕೆಳಗಿದೆ.

ಟಾಪ್ 10 ಸರ್ಕಾರಿ ಬ್ಯಾಂಕುಗಳ ತೆರಿಗೆ ಉಳಿತಾಯದ ಎಫ್‌ಡಿ ಮೇಲಿನ ಬಡ್ಡಿ ದರಗಳು

ಟಾಪ್ 10 ಸರ್ಕಾರಿ ಬ್ಯಾಂಕುಗಳ ತೆರಿಗೆ ಉಳಿತಾಯದ ಎಫ್‌ಡಿ ಮೇಲಿನ ಬಡ್ಡಿ ದರಗಳು

2021ರ ತೆರಿಗೆ ಉಳಿಸುವ ಎಫ್‌ಡಿಗಳ ಮೇಲೆ ಅತ್ಯುತ್ತಮ ಬಡ್ಡಿದರಗಳನ್ನು ನೀಡುವ ಟಾಪ್ 10 ಸರ್ಕಾರಿ ಬ್ಯಾಂಕುಗಳ ಮಾಹಿತಿ ಈ ಕೆಳಗಿದೆ. ಹಿರಿಯ ನಾಗರಿಕರ ತೆರಿಗೆ ಉಳಿಸುವ ಎಫ್‌ಡಿಗಳ ಎರಡು ಕೋಟಿ ರೂಪಾಯಿ ಒಳಗಿನ ಠೇವಣಿಗಳಿಗೆ ಈ ಬಡ್ಡಿ ದರಗಳು ಅನ್ವಯಿಸುತ್ತವೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 6.00%
ಕೆನರಾ ಬ್ಯಾಂಕ್: 6.00%
ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ: 5.80%
ಪಂಜಾಬ್ & ಸಿಂಧ್ ಬ್ಯಾಂಕ್: 5.80%
ಬ್ಯಾಂಕ್ ಆಫ್ ಬರೋಡಾ: 5.75%
ಪಂಜಾಬ್ ನ್ಯಾಷನಲ್ ಬ್ಯಾಂಕ್: 5.75%
ಇಂಡಿಯನ್ ಓವರ್‌ಸೀಸ್ ಬ್ಯಾಂಕ್: 5.70%
ಇಂಡಿಯನ್ ಬ್ಯಾಂಕ್: 5.65 %
ಬ್ಯಾಂಕ್ ಆಫ್ ಇಂಡಿಯಾ: 5.55%
ಯುಕೋ ಬ್ಯಾಂಕ್: 5.50 %

 ಹಿರಿಯ ನಾಗರಿಕರಿಗೆ ತೆರಿಗೆ ಪ್ರಯೋಜನಗಳು: ಏನೆಲ್ಲಾ ವಿನಾಯಿತಿ ಸಿಗಲಿದೆ? ಹಿರಿಯ ನಾಗರಿಕರಿಗೆ ತೆರಿಗೆ ಪ್ರಯೋಜನಗಳು: ಏನೆಲ್ಲಾ ವಿನಾಯಿತಿ ಸಿಗಲಿದೆ?

ಟಾಪ್ 10 ಖಾಸಗಿ ಬ್ಯಾಂಕುಗಳ ತೆರಿಗೆ ಉಳಿತಾಯದ ಎಫ್‌ಡಿ ಮೇಲಿನ ಬಡ್ಡಿ ದರಗಳು

ಟಾಪ್ 10 ಖಾಸಗಿ ಬ್ಯಾಂಕುಗಳ ತೆರಿಗೆ ಉಳಿತಾಯದ ಎಫ್‌ಡಿ ಮೇಲಿನ ಬಡ್ಡಿ ದರಗಳು

ಡಿಸಿಬಿ ಬ್ಯಾಂಕ್: 7.00%
ಯೆಸ್ ಬ್ಯಾಂಕ್: 7.00%
ಆರ್‌ಬಿಎಲ್‌ ಬ್ಯಾಂಕ್ : 7.00%
ಇಂಡಸ್‌ಇಂಡ್ ಬ್ಯಾಂಕ್: 6.50%
ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್: 6.25%
ಸೌತ್ ಇಂಡಿಯನ್ ಬ್ಯಾಂಕ್: 6.15%
ಕರೂರ್ ವೈಶ್ಯ ಬ್ಯಾಂಕ್: 6.00%
ಬಂಧನ್ ಬ್ಯಾಂಕ್: 6.00%
ಆ್ಯಕ್ಸಿಸ್ ಬ್ಯಾಂಕ್: 5.90%
ಐಸಿಐಸಿಐ ಬ್ಯಾಂಕ್: 5.85%

5 ವರ್ಷದ ಅವಧಿಗೆ 10 ಅತ್ಯುತ್ತಮ ಬಡ್ಡಿ ಸಿಗುವ ಎಫ್‌ಡಿ ಯೋಜನೆಗಳು5 ವರ್ಷದ ಅವಧಿಗೆ 10 ಅತ್ಯುತ್ತಮ ಬಡ್ಡಿ ಸಿಗುವ ಎಫ್‌ಡಿ ಯೋಜನೆಗಳು

ಸಣ್ಣ ಹಣಕಾಸು ಬ್ಯಾಂಕುಗಳು

ಸಣ್ಣ ಹಣಕಾಸು ಬ್ಯಾಂಕುಗಳು

ಠೇವಣಿದಾರರು ಸಾಮಾನ್ಯವಾಗಿ ಸಾಮಾನ್ಯ ನಾಗರಿಕರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಎರಡು ವಿಧಗಳನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ, ದೊಡ್ಡ ಬ್ಯಾಂಕುಗಳಲ್ಲಿನ ಎಫ್‌ಡಿಗಳ ಮೇಲಿನ ಬಡ್ಡಿದರಗಳು ಉತ್ತಮವಾಗಿಲ್ಲ. ಆದರೆ ಕೆಲವು ಸಣ್ಣ ಬ್ಯಾಂಕುಗಳು ಇನ್ನೂ ಉತ್ತಮ ಬಡ್ಡಿದರಗಳನ್ನು ನೀಡುತ್ತಿವೆ.

ಸಣ್ಣ ಹಣಕಾಸು ಬ್ಯಾಂಕುಗಳ ತೆರಿಗೆ ಉಳಿತಾಯದ ಎಫ್‌ಡಿ ಮೇಲಿನ ಬಡ್ಡಿ ದರಗಳು

ಸಣ್ಣ ಹಣಕಾಸು ಬ್ಯಾಂಕುಗಳ ತೆರಿಗೆ ಉಳಿತಾಯದ ಎಫ್‌ಡಿ ಮೇಲಿನ ಬಡ್ಡಿ ದರಗಳು

ಉಜ್ಜೀವನ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್ : 7.25%
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.00%
ನಾರ್ತ್‌ ಈಸ್ಟ್‌ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.00%
ಫಿನ್‌ಕೇರ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 6.75%
ಇಕ್ವಿಟಾಸ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 6.75%
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.50%
ಉತ್ಕರ್ಷ್‌ ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.50%
ಎಯು ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 6.50%
ಕ್ಯಾಪಿಟಲ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 6.00%
ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 5.75%

English summary

Top 10 Banks Giving Best Interest Rates On Tax Saving FDs To Senior Citizens

Here the details of 10 best tax saving FD for senior citizens, check latest rates.
Story first published: Saturday, August 7, 2021, 16:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X