ಫಿಕ್ಸೆಡ್ ಡಿಪಾಸಿಟ್ ಅಥವಾ ಸ್ಥಿರ ಠೇವಣಿ ಮಾಡುವುದು ಅತ್ಯಂತ ಜನಪ್ರಿಯ ಹೂಡಿಕೆ ವಿಧಾನಗಳಲ್ಲೊಂದಾಗಿದೆ. 7 ದಿನಗಳಿಂದ ಹಿಡಿದು 10 ವರ್ಷಗಳ ಅವಧಿಗೆ ನಿಮ್ಮ ಹಣವನ್ನು ಬ್ಯಾಂಕುಗಳಲ್ಲಿ ಎಫ್‌ಡಿ ಮಾಡಬಹುದು. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಹೀಗೆ ಯಾವುದೇ ರೀತಿಯ ಹೂಡಿಕೆಗಾಗಿ ಇದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಯಾವಾಗ ಬೇಕೆಂದಾಗ ಎಫ್‌ಡಿ ಕ್ಲೋಸ್ ಮಾಡಿ ಹಣ ಪಡೆಯಲು ಹಾಗೂ ಮತ್ತೆ ರಿನ್ಯೂ ಮಾಡಲು ಅಲ್ಪಾವಧಿಯ ಎಫ್‌ಡಿಗಳು ಸೂಕ್ತವಾಗಿವೆ.
ಮೊನ್ನೆ ಅಕ್ಟೋಬರ್ 8, 2021 ರಂದು ಆರ್‌ಬಿಐ ಪ್ರಕಟಿಸಿದ ದ್ವೈಮಾಸಿಕ ಆರ್ಥಿಕ ನೀತಿಯಲ್ಲಿ ರೆಪೊ ಹಾಗೂ ರಿವರ್ಸ್ ರೆಪೊ ದರಗಳನ್ನು ಹಿಂದಿನಂತೆಯೇ ಯಥಾವತ್ತಾಗಿ ಮುಂದುವರಿಸಲಾಗಿದೆ. ಹಣದುಬ್ಬರ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಹತ್ತಿರದ ದಿನಗಳಲ್ಲಿ ಆರ್‌ಬಿಐ ರೆಪೊ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಹಣಕಾಸು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ರೆಪೊ ರೇಟ್ ಹೆಚ್ಚಾದಾಗ ನಿಮ್ಮ ಠೇವಣಿಯ ಬಡ್ಡಿದರಗಳು ಕುಸಿಯುತ್ತವೆ. ಇಂಥ ಸಂದರ್ಭದಲ್ಲಿ ಕಡಿಮೆ ಬಡ್ಡಿದರಕ್ಕೆ ನಿಮ್ಮ ಸಂಪತ್ತನ್ನು ಲಾಕ್ ಮಾಡುವುದು ಜಾಣತನದ ಕ್ರಮವಾಗಲಾರದು. ಆದ್ದರಿಂದ ಸದ್ಯ ಅಲ್ಪಾವಧಿಯ ಎಫ್‌ಡಿಗಳೇ ಸೂಕ್ತವಾಗಿವೆ.
ಬ್ಯಾಂಕ್ ಎಫ್‌ಡಿಗಳ ಮೇಲೆ ಕಡಿಮೆ ಬಡ್ಡಿದರ ಸಿಗುತ್ತಿರುವ ಈಗಿನ ಕಾಲದಲ್ಲಿ ನಿಮ್ಮ ಎಫ್‌ಡಿಗಳನ್ನು ಅಲ್ಪಾವಧಿಯಾಗಿ ಇಡುವುದೇ ಸೂಕ್ತ. ಅಂದರೆ ಆರಂಭಿಕವಾಗಿ ಒಂದು ವರ್ಷದ ಎಫ್‌ಡಿ ಮಾಡಿಸಿ ನಂತರ ಬಡ್ಡಿದರ ಹೆಚ್ಚಾದಲ್ಲಿ ಹೆಚ್ಚಿನ ಬಡ್ಡಿದರಕ್ಕೆ ಎಫ್‌ಡಿಯನ್ನು ದೀರ್ಘಾವಧಿಗೆ ನವೀಕರಿಸಬಹುದು.
ಒಂದು ವರ್ಷದ ಅವಧಿಗೆ ಬ್ಯಾಂಕ್ ಎಫ್‌ಡಿ ಮಾಡಿಸಲು ಬಯಸುವವರಿಗಾಗಿ ಶೇ 6.75 ರಷ್ಟು ಬಡ್ಡಿದರ ನೀಡುತ್ತಿರುವ ಟಾಪ್ 5 ಬ್ಯಾಂಕುಗಳ ಪಟ್ಟಿಯನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ. ಅಲ್ಲದೆ ಈ ಬ್ಯಾಂಕುಗಳು ನಿಮ್ಮ ಎಫ್ಡಿಗೆ 5 ಲಕ್ಷ ರೂಪಾಯಿಗಳವರೆಗೆ DICGC ವಿಮಾ ಸುರಕ್ಷತೆಯನ್ನೂ ನೀಡುತ್ತವೆ.
ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Jana Small Finance Bank)
ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಸ್ತುತ ಒಂದು ವರ್ಷದ ಎಫ್‌ಡಿಗೆ ಸಾಮಾನ್ಯ ಗ್ರಾಹಕರಿಗೆ ಮತ್ತು ಹಿರಿಯ ನಾಗರಿಕರಿಗೆ ಕ್ರಮವಾಗಿ ಶೇ 6.25 ಮತ್ತು 6.75 ರಷ್ಟು ಬಡ್ಡಿಯನ್ನು ನೀಡುತ್ತಿದೆ. 07-05-2021 ರಂದು ಬ್ಯಾಂಕ್ ಎಫ್‌ಡಿ ಬಡ್ಡಿ ದರಗಳನ್ನು ಪರಿಷ್ಕರಿಸಿದ್ದು, ಅಧಿಕೃತವಾಗಿ ಪ್ರಕಟಿಸಿದ ಬಡ್ಡಿದರದ ಪಟ್ಟಿ ಹೀಗಿದೆ:
ಅವಧಿ
ಸಾಮಾನ್ಯ ಎಫ್ಡಿ ಬಡ್ಡಿದರ (ವರ್ಷಕ್ಕೆ)
ಹಿರಿಯ ನಾಗರಿಕರಿಗಾಗಿ ಎಫ್ಡಿ ಬಡ್ಡಿದರ (ವರ್ಷಕ್ಕೆ)
7-14 ದಿನಗಳು ಶೇ 2.50 ಶೇ 3.00
15-60 ದಿನಗಳು ಶೇ 3.00 ಶೇ 3.50
61-90 ದಿನಗಳು ಶೇ 3.75 ಶೇ 4.25
91-180 ದಿನಗಳು ಶೇ 4.50 ಶೇ 5.00
181-364 ದಿನಗಳು ಶೇ 5.50 ಶೇ 6.00
1 ವರ್ಷ (365 ದಿನಗಳು) ಶೇ 6.25 ಶೇ 6.75
(ಮೂಲ: ಬ್ಯಾಂಕಿನ ವೆಬ್‌ಸೈಟ್)
ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Utkarsh Small Finance Bank)
ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಸ್ತುತ, 365 ರಿಂದ 699 ದಿನಗಳ ಮಧ್ಯೆ ಪಕ್ವವಾಗುವ ಎಫ್‌ಡಿಗಳಿಗೆ ಸಾಮಾನ್ಯ ನಾಗರಿಕರಿಗೆ ಶೇ 6.25 ಹಾಗೂ ಹಿರಿಯ ನಾಗರಿಕರಿಗೆ ಶೇ 6.75 ರಷ್ಟು ಬಡ್ಡಿದರ ನೀಡುತ್ತಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಬಡ್ಡಿದರಗಳನ್ನು ಜುಲೈ 01, 2021 ರಂದು ಬ್ಯಾಂಕ್ ಪರಿಷ್ಕರಿಸಿದ್ದು, ಬಡ್ಡಿದರಗಳ ಪಟ್ಟಿ ಹೀಗಿದೆ:
ಅವಧಿ
ಸಾಮಾನ್ಯ ಎಫ್ಡಿ ಬಡ್ಡಿದರ (ವರ್ಷಕ್ಕೆ)
ಹಿರಿಯ ನಾಗರಿಕರಿಗಾಗಿ ಎಫ್ಡಿ ಬಡ್ಡಿದರ (ವರ್ಷಕ್ಕೆ)
7-45 ದಿನಗಳು ಶೇ 3.00 ಶೇ 3.50
46-90 ದಿನಗಳು ಶೇ 3.25 ಶೇ 3.75
91-180 ದಿನಗಳು ಶೇ 4.00 ಶೇ 4.50
181-364 ದಿನಗಳು ಶೇ 5.75 ಶೇ 6.25
365-699 ದಿನಗಳು ಶೇ 6.25 ಶೇ 6.75
(ಮೂಲ: ಬ್ಯಾಂಕಿನ ವೆಬ್‌ಸೈಟ್)
ಎಸ್ಯಾಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ESAF Small Finance Bank)
ಎಸ್ಯಾಫ್ ಎಸ್ಎಫ್‌ಬಿ ಬ್ಯಾಂಕ್ 365 ರಿಂದ 366 ದಿನಗಳ ಮಧ್ಯೆ ಪಕ್ವವಾಗುವ ಎಫ್‌ಡಿಗಳಿಗೆ ಸಾಮಾನ್ಯ ನಾಗರಿಕರಿಗೆ ಶೇ 6.25 ಹಾಗೂ ಹಿರಿಯ ನಾಗರಿಕರಿಗೆ ಶೇ 6.75 ರಷ್ಟು ಬಡ್ಡಿದರ ನೀಡುತ್ತಿದೆ. 200 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಮೊತ್ತದ ಎಫ್‌ಡಿಗಳಿಗೆ ಬ್ಯಾಂಕ್ ನೀಡುತ್ತಿರುವ ತೀರಾ ಇತ್ತೀಚಿನ ಬಡ್ಡಿದರದ ಪಟ್ಟಿ ಹೀಗಿದೆ:
ಅವಧಿ
ಸಾಮಾನ್ಯ ಎಫ್ಡಿ ಬಡ್ಡಿದರ (ವರ್ಷಕ್ಕೆ)
ಹಿರಿಯ ನಾಗರಿಕರಿಗಾಗಿ ಎಫ್ಡಿ ಬಡ್ಡಿದರ (ವರ್ಷಕ್ಕೆ)
7-14 ದಿನಗಳು ಶೇ 4.00 ಶೇ 4.50
15-59 ದಿನಗಳು ಶೇ 4.50 ಶೇ 5.00
60-90 ದಿನಗಳು ಶೇ 5.25 ಶೇ 5.75
91-181 ದಿನಗಳು ಶೇ 5.50 ಶೇ 6.00
182 ದಿನಗಳು ಶೇ 5.00 ಶೇ 5.50
183-363 ದಿನಗಳು ಶೇ 6.00 ಶೇ 6.50
364 ದಿನಗಳು ಶೇ 5.25 ಶೇ 5.75
365 ದಿನಗಳು & 366 ದಿನಗಳು ಶೇ 6.25 ಶೇ 6.75
(ಮೂಲ: ಬ್ಯಾಂಕಿನ ವೆಬ್‌ಸೈಟ್)
ಆರ್ ಬಿ ಎಲ್ ಬ್ಯಾಂಕ್ (RBL Bank)
ಆರ್ಬಿಎಲ್ ಬ್ಯಾಂಕ್ 12 ತಿಂಗಳಿಂದ 24 ತಿಂಗಳುಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ 6 ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ 6.50 ರಷ್ಟು ಬಡ್ಡಿದರ ನೀಡುತ್ತಿದೆ. ಬ್ಯಾಂಕಿನ ತೀರಾ ಇತ್ತೀಚಿನ ಸ್ಥಳೀಯ, ಎನ್ಆರ್‌ಒ. ಎನ್ಆರ್‌ಇ ಮತ್ತು ಫ್ಲೆಕ್ಸಿ ಫಿಕ್ಸೆಡ್ ಡಿಪಾಸಿಟ್‌ಗಳ ಮೇಲಿನ ಬಡ್ಡಿದರಗಳ ಪಟ್ಟಿ ಹೀಗಿದೆ:
7-14 ದಿನಗಳು ಶೇ 3.25 ಶೇ 3.75
15-45 ದಿನಗಳು ಶೇ 3.75 ಶೇ 4.25
46-90 ದಿನಗಳು ಶೇ 4.00 ಶೇ 4.50
91-180 ದಿನಗಳು ಶೇ 4.50 ಶೇ 5.00
181-240 ದಿನಗಳು ಶೇ 5.00 ಶೇ 5.50
241-364 ದಿನಗಳು ಶೇ 5.25 ಶೇ 5.75
12 ತಿಂಗಳುಗಳಿಂದ 24 ತಿಂಗಳುಗಳಿಗಿಂತ ಕಡಿಮೆ ಶೇ 6.00 ಶೇ 6.50
(ಮೂಲ: ಬ್ಯಾಂಕಿನ ವೆಬ್‌ಸೈಟ್)
ಇಂಡಸ್ ಇಂಡ್ ಬ್ಯಾಂಕ್ (IndusInd Bank)
ಇಂಡಸ್ ಇಂಡ್ ಬ್ಯಾಂಕ್ ಪ್ರಸ್ತುತ 1 ವರ್ಷದಿಂದ 1 ವರ್ಷ 6 ತಿಂಗಳುಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ ಸಾಮಾನ್ಯ ನಾಗರಿಕರಿಗೆ ಶೇ 6.00 ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಸ್ಥಳೀಯ, ಎನ್ಆರ್‌ಒ, ಎನ್ಆರ್‌ಇ, ಹಿರಿಯ ನಾಗರಿಕರ ಎಫ್ಡಿಗಳಿಗೆ ಶೇ 6.50 ರಷ್ಟು ಬಡ್ಡಿದರಗಳನ್ನು ನೀಡುತ್ತಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿಗಳಿಗೆ ಬ್ಯಾಂಕ್ ನೀಡುತ್ತಿರುವ ಇತ್ತೀಚಿನ ಬಡ್ಡಿದರಗಳ ಪಟ್ಟಿ ಹೀಗಿದೆ:
7-14 ದಿನಗಳು ಶೇ 2.5 ಶೇ 3
15-30 ದಿನಗಳು ಶೇ 2.75 ಶೇ 3.25
31-45 ದಿನಗಳು ಶೇ 3 ಶೇ 3.5
46-60 ದಿನಗಳು ಶೇ 3.25 ಶೇ 3.75
61-90 ದಿನಗಳು ಶೇ 3.4 ಶೇ 3.9
91-120 ದಿನಗಳು ಶೇ 3.75 ಶೇ 4.25
121-180 ದಿನಗಳು ಶೇ 4.25 ಶೇ 4.75
181-210 ದಿನಗಳು ಶೇ 4.6 ಶೇ 5.1
211-269 ದಿನಗಳು ಶೇ 4.75 ಶೇ 5.25
270-354 ದಿನಗಳು ಶೇ 5.5 ಶೇ 6
355-364 ದಿನಗಳು ಶೇ 5.5 ಶೇ 6
1 ವರ್ಷದಿಂದ 1 ವರ್ಷ 6 ತಿಂಗಳುಗಳಿಗಿಂತ ಕಡಿಮೆ ಶೇ 6 ಶೇ 6.5
(ಮೂಲ: ಬ್ಯಾಂಕಿನ ವೆಬ್‌ಸೈಟ್)
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications