ಹಣಕಾಸಿನ ಸ್ಥಿರತೆ ಮತ್ತು ಬೆಳವಣಿಗೆಗೆ ಹೂಡಿಕೆಯು ಅತೀ ಮುಖ್ಯವಾಗುತ್ತದೆ. ಮೆಟ್ರೋಪಾಲಿಟನ್ ಹೂಡಿಕೆದಾರರು ಡಿಜಿಟಲೀಕರಣದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ನಡುವೆ ಗ್ರಾಮೀಣ ಭಾರತದ ಜನರು ಮಾತ್ರ ಎಲ್ಲ ಪ್ರಯೋಜನಗಳಿಂದ ಹೊರಕ್ಕೆ ಉಳಿಯುವ ವರ್ಗವಾಗಿದೆ.
ಈ ನಡುವೆ ಸುಸ್ಥಿರ ಬೆಳವಣಿಗೆ ಮತ್ತು ಆರ್ಥಿಕ ಸಾಕ್ಷರತೆಯನ್ನು ಖಾತ್ರಿಪಡಿಸುವ, ಅವರ ಆರ್ಥಿಕ ಭವಿಷ್ಯವನ್ನು ಭದ್ರಪಡಿಸುವ ಗ್ರಾಮೀಣ ಜನತೆಗೆ ಬೇಕಾದ ಐದು ಹೂಡಿಕೆ ಆಯ್ಕೆಗಳನ್ನು ನಾವಿಲ್ಲಿ ವಿವರಿಸಿದ್ದೆವೆ. ಮುಂದೆ ಓದಿ....

ಹೂಡಿಕೆಯ ಪರಿಕಲ್ಪನೆ ಮತ್ತು ಅಗತ್ಯತೆ
ಉನ್ನತ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮುನ್ನ ಹೂಡಿಕೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳೋಣ. ಹೂಡಿಕೆಯು ನಿಮ್ಮ ಹಣವನ್ನು ನಿಮಗಾಗಿ ಉಳಿತಾಯ ಮಾಡುವುದರ ಮೇಲೆ ಗಮನ ಹರಿಸುವುದ ಒಂದು ತಂತ್ರವಾಗಿದೆ. ಇದು ಕಾಲಾನಂತರದಲ್ಲಿ ನಿಮ್ಮ ಆರ್ಥಿಕ ಬೆಳವಣಿಗೆಯನ್ನು ಶಕ್ತಗೊಳಿಸುತ್ತದೆ, ಭವಿಷ್ಯಕ್ಕಾಗಿ ಸುರಕ್ಷತಾ ಆದಾಯವನ್ನು ಕೂಡಾ ಒದಗಿಸುತ್ತದೆ. ವಿಶೇಷವಾಗಿ ಗ್ರಾಮೀಣ ಜನರಿಗೆ ಹೂಡಿಕೆಯು ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ.
1. ಉಳಿತಾಯ ಖಾತೆ
ಉಳಿತಾಯ ಖಾತೆಯು ಸರಳವಾದ ಮತ್ತು ಹೆಚ್ಚು ಸುಲಭವಾಗಿ ಮಾಡಬಹುದಾದ ಹೂಡಿಕೆಯ ಆಯ್ಕೆಯಾಗಿದೆ. ಆರಂಭಿಕರಿಗಾಗಿ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಹಣ ಉಳಿತಾಯಕ್ಕೆ ಪ್ರೋತ್ಸಾಹ ನೀಡುವ ಯೋಜನೆಯಾಗಿದೆ. ನಿಮ್ಮ ಗಳಿಕೆಯನ್ನು ಇರಿಸಿಕೊಳ್ಳಲು ಸುರಕ್ಷಿತ ಸ್ಥಳವಾಗಿದೆ.
2. ಫಿಕ್ಸಿಡ್ ಡೆಪಾಸಿಟ್
ಫಿಕ್ಸಿಡ್ ಡೆಪಾಸಿಟ್ ದೊಡ್ಡ ಆದಾಯವನ್ನು ನಿಮಗೆ ನೀಡದೆ ಇರಬಹುದು. ಆದರೆ ಅವು ಅಪಾಯ-ಮುಕ್ತ ಹೂಡಿಕೆಯ ಆಯ್ಕೆಯಾಗಿದೆ. ತಮ್ಮ ಹೂಡಿಕೆಗೆ ಯಾವುದೇ ತೊಂದರೆ ಉಂಟಾಗಬಾರದು ಎಂದು ಬಯಸುವ ಗ್ರಾಮೀಣ ವ್ಯಕ್ತಿಗಳಿಗೆ ಈ ಹೂಡಿಕೆ ಆಯ್ಕೆ ಉತ್ತಮವಾಗಿದೆ.
3. ಪಬ್ಲಿಕ್ ಪ್ರಾವಿಡೆಂಟ್ ಫಂಡ್
ಪಿಪಿಎಫ್ ಅತ್ಯುತ್ತಮ ದೀರ್ಘಾವಧಿ ಹೂಡಿಕೆ ಆಯ್ಕೆಯಾಗಿದೆ. ಭಾರತೀಯ ಸರ್ಕಾರದ ಬೆಂಬಲಿತ ಹೂಡಿಕೆ ಆಯ್ಕೆಗಳು ಇದಾಗಿದೆ. ಆದ್ದರಿಂದಾಗಿ ಗ್ರಾಮೀಣ ಹೂಡಿಕೆದಾರರು ಹೆಚ್ಚಿನ ಆದಾಯ ಮತ್ತು ಭದ್ರತೆಯ ಪ್ರಯೋಜನಗಳನ್ನು ಪಡೆಯಬಹುದು.
4. ಜೀವ ವಿಮಾ ಪಾಲಿಸಿಗಳು
ಜೀವ ವಿಮೆಯು ಅನಿರೀಕ್ಷಿತ ಸಂದರ್ಭಗಳ ವಿರುದ್ಧ ರಕ್ಷಣೆಯನ್ನು ಒದಗಿಸುವುದತ್ತದೆ ಮಾತ್ರವಲ್ಲದೆ, ನಮಗೆ ಆದಾಯವನ್ನು ಕೂಡಾ ನೀಡುತ್ತದೆ. ಇದು ಒಂದು ನಿರ್ದಿಷ್ಟ ಅವಧಿಯ ನಂತರ ನಿಗದಿತ ಆದಾಯವನ್ನು ನೀಡುವ ಹೂಡಿಕೆ ಸಾಧನವಾಗಿದೆ.
5. ಮ್ಯೂಚುಯಲ್ ಫಂಡ್‌ಗಳು
ಮ್ಯೂಚುವಲ್ ಫಂಡ್‌ಗಳು ಸ್ಟಾಕ್‌ಗಳು ಅಥವಾ ಬಾಂಡ್‌ಗಳ ಸಂಗ್ರಹವಾಗಿದೆ. ಇದು ಗ್ರಾಮೀಣ ಹೂಡಿಕೆದಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಹೂಡಿಕೆ ಮಾಡುವ ಮೊದಲು ತಜ್ಞರ ಸಹಾಯವನ್ನು ಪಡೆದುಕೊಳ್ಳುವುದು, ಸಲಹೆ ಪಡೆಯುವುದು ಅತೀ ಮುಖ್ಯವಾಗಿದೆ.
ಈ ರೀತಿಯಾಗಿ ಬೇರೆ ಬೇರೆ ಹೂಡಿಕೆ ಮಾಡುವುದು ಗ್ರಾಮೀಣ ಜನತೆ ಸೇರಿದಂತೆ ಎಲ್ಲರಿಗೂ ಅಗತ್ಯವಾಗಿದೆ. ಮೇಲೆ ತಿಳಿಸಲಾದ ಹೂಡಿಕೆ ಆಯ್ಕೆಗಳು ಹೂಡಿಕೆಗೆ ಭದ್ರತೆ, ಬಂಡವಾಳ ಬೆಳವಣಿಗೆ ಅವಕಾಶವನ್ನು ನೀಡಬಹುದು. ಆದರೆ ನಮ್ಮ ಆದಾಯ ಎಷ್ಟಿದೆ, ಖರ್ಚು ಎಷ್ಟಿದೆ ಎಂದು ನೋಡಿಕೊಂಡು ನಾವು ಹೂಡಿಕೆ ಮಾಡುವುದು ಅತೀ ಅವಶ್ಯಕ. ಇಲ್ಲವಾದ್ದಲ್ಲಿ ಸಾಲದ ಹೊರೆಯಲ್ಲಿ ಬೀಳಬೇಕಾದೀತು.


Click it and Unblock the Notifications