ಜಗತ್ತು ನಿರಂತರವಾಗಿ ಬದಲಾವಣೆಯಾಗುತ್ತಿರುತ್ತದೆ. ಕನಸುಗಳು ಕೂಡಾ ಬದಲಾವಣೆಯಾಗುತ್ತದೆ. ಅದರಲ್ಲೂ ಗೃಹಿಣಿಯರ ಮೇಲೆ ಎಲ್ಲವುದರ ಪ್ರಭಾವ ಉಂಟಾಗುತ್ತದೆ. ಗೃಹಿಣಿಯರು ಮನೆಯಲ್ಲೇ ಇದ್ದು ತಮ್ಮದೇ ಆದ ಸ್ವಾವಲಂಬನೆ ಜೀವನವನ್ನು ನಡೆಸಲು ಹಲವಾರು ದಾರಿಗಳಿದೆ.
ನೀವು ಗೃಹಿಣಿಯಾಗಿದ್ದರೆ ಮನೆಯಲ್ಲೇ ಇದ್ದು ನಿಮ್ಮ ಕನಸನ್ನು ನನಸು ಮಾಡಬಹುದಾಗಿದೆ. ಈ ಲೇಖನದಲ್ಲಿ ಮಹಿಳೆಯರಿಗೆ ಗೃಹಿಣಿಯಾಗಿದ್ದುಗೊಂಡು ಮಾಡಬಹುದಾದ ವ್ಯಾಪಾರಗಳ ಬಗ್ಗೆ ನಾವು ಮಾಹಿತಿಯನ್ನು ನೀಡಿದ್ದೇವೆ. ಮುಂದೆ ಓದಿ....

ಉಡುಗೊರೆ ವ್ಯಾಪಾರ
ಉಡುಗೊರೆ ಉದ್ಯಮವು ಪ್ರಸಕ್ತ ಅತ್ಯಂತ ಜನಪ್ರಿಯ ಪ್ರವೃತ್ತಿಯಾಗಿದೆ. ಬಟ್ಟೆ ಮತ್ತು ಆಭರಣಗಳಿಂದ ಹಿಡಿದು ದೈನಂದಿನ ಬಳಕೆಯ ವಸ್ತುಗಳವರೆಗೆ, ನೀವು ಎಲ್ಲವನ್ನು ಉಡುಗೊರೆಯಾಗಿ ನಿವೇ ತಯಾರಿಸಿಕೊಳ್ಳಬಹುದು. ನಿಮ್ಮಲ್ಲಿ ಕ್ರಿಯೇಟಿವಿಟಿ ಇದ್ದರೆ, ಈ ವ್ಯಾಪಾರ ನಿಮಗೆ ಹೇಳಿ ಮಾಡಿಸಿದ್ದು. ಜನ್ಮದಿನಗಳು, ವಾರ್ಷಿಕೋತ್ಸವಗಳು, ಸ್ನೇಹಿತರ ದಿನ, ಪ್ರೇಮಿಗಳ ದಿನ, ಹೀಗೆ ಹಲವಾರು ಕಾರ್ಯಕ್ರಮಗಳಿಗೆ ನೀವು ನೀವಾಗಿಯೇ ತಯಾರಿ ಮಾಡಿದ ಉಡುಗೊರೆಯನ್ನು ಮಾರಾಟ ಮಾಡುವ ವ್ಯಾಪಾರವನ್ನು ಮಾಡಬಹುದು.
ಯೂಟ್ಯೂಬ್ ಚಾನಲ್ ಆರಂಭ
ಪ್ರಸ್ತುತ ಯೂಟ್ಯೂಬ್ ಚಾನೆಲ್ ಅಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಯೂಟ್ಯೂಬ್‌ನ ಶಕ್ತಿ ಎಲ್ಲರಿಗೂ ತಿಳಿದಿದೆ. ಈ ಸಾಮಾಜಿಕ ಮಾಧ್ಯಮ ವೇದಿಕೆಯು ನಿಮ್ಮ ಕನಸಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ. ಆದರೆ ಅದಕ್ಕೆ ಅದರದ್ದೆ ಆದ ಸಮಯವೂ ಬೇಕಾಗುತ್ತದೆ. ನೀವು ಉತ್ತಮ ಅಡುಗೆ ಮಾಡುವುದಾದರೆ, ಮೇಕಪ್ ಕಲಾವಿದರಾದರೆ ಕಡಿಮೆ ಹೂಡಿಕೆಯೊಂದಿಗೆ ಈ ಯೂಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಬಹುದು.
ಯೋಗ ತರಬೇತುದಾರರಾಗಿ
ಹೆಚ್ಚುತ್ತಿರುವ ಆರೋಗ್ಯ ಜಾಗೃತಿಯೊಂದಿಗೆ, ಜನರು ತಮ್ಮ ಸಮಯ ಮತ್ತು ಹಣವನ್ನು ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ವ್ಯಯಿಸಲು ಸಿದ್ಧರಾಗಿರುತ್ತಾರೆ. ಹಾಗಿರುವಾಗ ಯೋಗ ತರಬೇತುದಾರರಿಗೂ ಅಧಿಕ ಬೇಡಿಕೆಯಿದೆ. ನೀವು ಗೃಹಿಣಿಯಾಗಿ ಪ್ರಾರಂಭಿಸಬಹುದಾದ ಅತ್ಯಧಿಕ ಸಂಬಳದ ಉದ್ಯೋಗಗಳಲ್ಲಿ ಇದು ಒಂದಾಗಿದೆ. ನಿಮಗೆ ಯೋಗದ ಬಗ್ಗೆ ಆಳವಾದ ಜ್ಞಾನವಿದ್ದರೆ ನೀವು ತರಬೇತುದಾರರಾಗಬಹುದು ಅಥವಾ ಯೋಗ ಕ್ಲಾಸ್ ಪಡೆದು ಬಳಿಕ ತರಬೇತುದಾರರು ಆಗಬಹುದು.
ನಿಮ್ಮ ಹೋಮ್ ಬೇಕರಿ ಪ್ರಾರಂಭಿಸಿ
ರುಚಿಕರವಾದ ಮನೆಯಲ್ಲಿ ಬೇಯಿಸಿದ ಆಹಾರಗಳಿಗೆ ಬೇಡಿಕೆ ಅಧಿಕವಾಗಿರುತ್ತದೆ. ನೀವು ಕೇಕ್, ಕುಕ್ಕಿಗಳು, ಬ್ರೌನಿಗಳನ್ನು ಉತ್ತಮವಾಗಿ ಮಾಡಲು ತಿಳಿದವರಾದರೆ ಮನೆಯಲ್ಲೇ ನೀವು ಇದ್ದು, ಹೋಮ್ ಬೇಕರಿಯನ್ನು ಆರಂಭಿಸಬಹುದು ಅದರಿಂದ ಸಂಪಾದನೆಯನ್ನು ಮಾಡಬಹುದು. ನಿಮ್ಮ ಈ ಬೇಕರಿಯ ಪ್ರಚಾರವನ್ನು ನೀವು ವಾಟ್ಸಾಪ್, ಇನ್‌ಸ್ಟಾಗ್ರಾಂ ಮೂಲಕ ಮಾಡಿಕೊಳ್ಳಬಹುದು. ವ್ಯಾಪಾರ ಹೆಚ್ಚಾದಂತೆ ಸ್ವಿಗ್ಗಿ, ಜೊಮ್ಯಾಟೊದಿಂದಿಗೆ ಜೊತೆಯಾಗಬಹುದು.
ನಿಮ್ಮ ಕೆಫೆಯನ್ನು ತೆರೆಯಿರಿ
ಗೃಹಿಣಿಯರಿಗೆ ಹಣ ಸಂಪಾದಿಸಲು ಇದು ಮತ್ತೊಂದು ಜನಪ್ರಿಯ ಉಪಾಯವಾಗಿದೆ. ನೀವು ಒಂದು ಹೆಜ್ಜೆ ಮುಂದೆ ಇಡಲು ಬಯಸಿದರೆ ಮತ್ತು ಉತ್ತಮ ಹೂಡಿಕೆ ಮಾಡಲು ಸಿದ್ಧವಾಗಿದ್ದರೆ, ನೀವು ನಿಮ್ಮ ಕೆಫೆಯನ್ನು ಪ್ರಾರಂಭಿಸಬಹುದು. ಈ ವ್ಯವಹಾರ ಮಾರುಕಟ್ಟೆಯಿಂದ ಪ್ರಭಾವಿತವಾಗುವುದಿಲ್ಲ.
ಹೋಮ್ ಟ್ಯೂಟರ್ ಆಗಿ
ಈಗ ಯಾರು ತಮ್ಮ ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸುವುದಿಲ್ಲ ಹೇಳಿ?. ಹೀಗಿರುವಾಗ ನೀವು ಮನೆಯಲ್ಲಿ ಇದ್ದೇ ಟ್ಯೂಷನ್ ಮಾಡಿದರೆ ನಿಮ್ಮ ಕೈ ಖರ್ಚಿಗಾಗುವಷ್ಟಾದರೂ ಸಂಪಾದನೆಯನ್ನು ಮಾಡಲು ಸಾಧ್ಯವಾಗುತ್ತದೆ. ಪೋಷಕರು ಎಂದಿಗೂ ತಮ್ಮ ಮಕ್ಕಳಿಗೆ ವಿಶ್ವಾಸಾರ್ಹವಾದ ಶಿಕ್ಷಕರನ್ನು ಹುಡುಕುತ್ತಾರೆ. ಹಾಗಿದ್ದಾಗ ನಿಮ್ಮ ಮೇಲೆ ವಿಶ್ವಾಸವಿರುವ ನೆರೆಹೊರೆಯವರು ಖಂಡಿತವಾಗಿಯೂ ನಿಮ್ಮ ಬಳಿ ಮಕ್ಕಳನ್ನು ಟ್ಯೂಷನ್‌ಗಾಗಿ ಕಳುಹಿಸುತ್ತಾರೆ.
ಬಾಟಿಕ್ ಅನ್ನು ಪ್ರಾರಂಭಿಸಿ (Boutique)
ನೀವು ಫ್ಯಾಷನ್ ಮತ್ತು ಸ್ಟೈಲಿಂಗ್ ಅನ್ನು ಪ್ರೀತಿಸುತ್ತಿದ್ದರೆ, ಇದು ನಿಮಗೆ ಪರಿಪೂರ್ಣ ವ್ಯಾಪಾರ ಅವಕಾಶವಾಗಿದೆ. ಭಾರತದ ಫ್ಯಾಷನ್ ಉದ್ಯಮವು ಈಗ ವೇಗವಾಗಿ ಬೆಳೆಯುತ್ತಿದೆ. ಹಾಗಿರುವಾಗ ಫ್ಯಾಷನ್ ವ್ಯವಹಾರವು ಉತ್ತಮವಾಗಿದೆ. ನೀವು ನಿಮ್ಮ ಈ ಬಾಟಿಕ್ ಅನ್ನು ಆನ್‌ಲೈನ್‌ನಲ್ಲಿ ತೆರೆಯಬಹುದು. ಅಂದರೆ ನೀವು ಮನೆಯಲ್ಲಿದ್ದೇ ಆನ್‌ಲೈನ್‌ನಲ್ಲಿ ಆರ್ಡರ್‌ಗಳನ್ನು ಪಡೆದು, ಅದನ್ನು ಸಿದ್ಧಪಡಿಸಿ ಆರ್ಡರ್‌ಗಳನ್ನು ಕೊರಿಯರ್ ಮಾಡಬಹುದು.
ಫ್ರೀಲ್ಯಾನ್ಸರ್ ಆಗಿ
ಗೃಹಿಣಿಯರಿಗಾಗಿ ನೀವು ಮನೆಯಿಂದ ಕೆಲಸ ಮಾಡಲು ಇನ್ನೊಂದು ಉತ್ತಮ ಅವಕಾಶ ಫ್ರೀಲ್ಯಾನ್ಸರ್ ಆಗುವುದು. ನೀವು ನಿಮ್ಮ ಮನೆಯಲ್ಲಿಯೇ ಕುಳಿತಯ ಯಾವುದೇ ಮಾಧ್ಯಮಗಳಿಗೆ, ಬ್ಲಾಗ್‌ಗಳಿಗೆ, ಸಂಸ್ಥೆಗಳಿಗೆ ಕಂಟೆಂಟ್ ಅನ್ನು ನೀಡಬಹುದು, ಲೇಖನಗಳನ್ನು ನೀಡಬಹುದು. ಇದರಿಂದಲೇ ಸಂಪಾದನೆಯನ್ನು ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಬಳಿ ಬರವಣಿಗೆ ಜ್ಞಾನ, ವಿಡಿಯೋ ಎಡಿಟಿಂಗ್ ಜ್ಞಾನ, ಗ್ರಾಫಿಕ್ಸ್ ಮಾಡಲು ತಿಳಿದಿರಬೇಕಾಗುತ್ತದೆ.
ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ
ಜಾಮ್, ಜೆಲ್ಲಿಗಳು ಮತ್ತು ಚಾಕೊಲೇಟ್‌ಗಳಿಂದ ಲಡ್ಡುಗಳು ಮತ್ತು ಉಪ್ಪಿನಕಾಯಿಗಳವರೆಗೆ, ನೀವು ಭಾರಿ ಲಾಭವನ್ನು ಗಳಿಸುವ ವ್ಯಾಪಾರ ಇದಾಗಿದೆ. ನೀವು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಬಹುದು, ನಿಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಂತೆ ಕ್ರಮೇಣ ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ಇದನ್ನು ನಂಬಿ ಅಥವಾ ಬಿಡಿ, ನಮಗೆ ತಿಳಿದಿರುವ ಜನಪ್ರಿಯ ಬ್ರ್ಯಾಂಡ್‌ಗಳು ಸಹ ಸಣ್ಣ ಅಡುಗೆಮನೆಯಿಂದ ಪ್ರಾರಂಭವಾಗಿವೆ.


Click it and Unblock the Notifications