Fixed Deposit:ಫಿಕ್ಸಡ್ ಡೆಪಾಸಿಟ್ ಎಂಬುವುದು ಎಂದೆಂದಿಗೂ ಸಹಾಯಕವಾಗುವ ಆರ್ಥಿಕ ನಿಧಿ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೋ ದರವನ್ನು ಕಡಿತದ ನಂತರ ಕೆಲವು ಬ್ಯಾಂಕ್‌ಗಳು ತಮ್ಮ ಫಿಕ್ಸಡ್ ಡೆಪಾಸಿಟ್‌ಗಳ ಬಡ್ಡಿದರದವನ್ನು ಇಳಿಕೆ ಮಾಡಿವೆ. ಹಣವನ್ನು ಒಂದು ನಿರ್ದಿಷ್ಟ ಕಾಲದವರೆಗೂ ಹೂಡಿಗೆ ಮಾಡುವ ವಿಧಾನವೇ ಸ್ಥಿರ ಠೇವಣಿ ಯೋಜನೆ. ಇದರ ದೊಡ್ಡ ಪ್ರಯೋಜನವೆಂದರೆ ಎಫ್ ಡಿ ರೂಪದಲ್ಲಿ ಇಟ್ಟ ಹಣ ಸುರಕ್ಷಿತವಾಗಿರುತ್ತದೆ ಮತ್ತು ಒಂದು ನಿರ್ದಿಷ್ಟ ಅವಧಿಯ ನಂತರ, ಹೂಡಿಕೆದಾರರು ತಮ್ಮ ಸಂಪೂರ್ಣ ಮೊತ್ತವನ್ನು ಹೆಚ್ಚಿನ ಬಡ್ಡಿಯೊಂದಿಗೆ ಪಡೆದುಕೊಳ್ಳಬಹುದು.
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಮೂರು ಬಾರಿಗೆ ಕಡಿತಗೊಳಿಸಿದ ನಂತರ, ಇತ್ತೀಚೆಗೆ ಅನೇಕ ಸರ್ಕಾರಿ ಬ್ಯಾಂಕುಗಳು ಎಫ್‌ಡಿಯ ಬಡ್ಡಿದರಗಳ ಮೇಲೆ ಬದಲಾವಣೆಯನ್ನು ಮಾಡಿದೆ.ಈ ಸರ್ಕಾರಿ ಬ್ಯಾಂಕುಗಳಲ್ಲಿ ಎಫ್‌ಡಿ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ, ಬ್ಯಾಂಕ್ ಆಫ್ ಮಹಾರಾಷ್ಟ್ರ ಸ್ಥಿರ ಠೇವಣಿಗಳ ಮೇಲೆ ಅತಿ ಹೆಚ್ಚು ಬಡ್ಡಿಯನ್ನು ನೀಡಲಾಗುತ್ತದೆ. ಸರ್ಕಾರಿ ಬ್ಯಾಂಕ್‌ಗಳು 366 ದಿನಗಳ ಅವಧಿಗೆ ಎಫ್‌ಡಿಗಳಿಗೆ ಶೇ. 7.15 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಇದಲ್ಲದೇ ಬ್ಯಾಂಕ್ ಒಂದು ವರ್ಷದ ಎಫ್‌ಡಿಗೆ ಶೇ. 6.25 ರಷ್ಟು,3 ವರ್ಷಗಳವರೆಗೆ ಶೇ. 6.3 ರಷ್ಟು ಮತ್ತು 5 ವರ್ಷಗಳವರೆಗೆ ಶೇ. 6.25 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಇಂಡಿಯನ್ ಓವರ್ಸೀಸ್ ಬ್ಯಾಂಕ್ 444 ದಿನಗಳ ಅವಧಿಗಳ ಎಫ್‌ಡಿಗಳ ಮೇಲೆ ಶೇಕಡಾ 7.10 ರಷ್ಟು ಬಡ್ಡಿದರವನ್ನು ನೀಡಲಾಗಿದೆ.ಇದಲ್ಲದೇ ಸರ್ಕಾರಿ ಬ್ಯಾಂಕ್‌ಗಳು ಒಂದು ವರ್ಷದ ಎಫ್‌ಡಿಗಳ ಮೇಲೆ ಶೇಕಡಾ 6.70 ರಷ್ಟು ಇದೆ. ಮೂರು ವರ್ಷಗಳ ಎಫ್‌ಡಿಗಳ ಮೇಲೆ ಶೇಕಡಾ 6.30 ರಷ್ಟು ಮತ್ತು ಐದು ವರ್ಷಗಳ ಎಫ್‌ಡಿಗಳ ಮೇಲೆ ಶೇಕಡಾ 6.30 ರಷ್ಟು ಬಡ್ಡಿದರವನ್ನು ನೀಡಲಾಗಿದೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 444 ದಿನಗಳ ಅವಧಿಗೆ ಎಫ್‌ಡಿಗಳ ಮೇಲೆ ಶೇಕಡಾ 7.05 ರಷ್ಟು ಬಡ್ಡಿದರವನ್ನು ನೀಡಲಾಗಿದೆ. ಒಂದು ವರ್ಷದ ಎಫ್‌ಡಿಗಳ ಮೇಲೆ ಶೇಕಡಾ 6.10 ರಷ್ಟು,ಮೂರು ವರ್ಷಗಳ ಎಫ್‌ಡಿಗಳ ಮೇಲೆ ಶೇಕಡಾ 6.00 ರಷ್ಟು ಮತ್ತು ಐದು ವರ್ಷಗಳ ಎಫ್‌ಡಿಗಳ ಮೇಲೆ ಶೇಕಡಾ 6.35 ರಷ್ಟು ಬಡ್ಡಿದರಗಳನ್ನು ಒಳಗೊಂಡಿದೆ.
ಸೇಂಟ್ ಬ್ಯಾಂಕ್ ಆಫ್ ಇಂಡಿಯಾ
ಸೇಂಟ್ ಬ್ಯಾಂಕ್ ಆಫ್ ಇಂಡಿಯಾ 999 ದಿನಗಳ ಗ್ರೀನ್ ಎಫ್‌ಡಿ ಮೇಲೆ ಶೇಕಡಾ 7.00 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಅದೇ ಸಮಯದಲ್ಲಿ, ಬ್ಯಾಂಕ್ ಒಂದು ವರ್ಷದ ಎಫ್‌ಡಿ ಮೇಲೆ ಶೇಕಡಾ 6.50 ರಷ್ಟು, ಎರಡು ವರ್ಷಗಳ ಎಫ್‌ಡಿ ಮೇಲೆ ಶೇಕಡಾ 6.25 ರಷ್ಟು ಮತ್ತು ಐದು ವರ್ಷಗಳ ಎಫ್‌ಡಿ ಮೇಲೆ ಶೇಕಡಾ 6.00 ರಷ್ಟು ಬಡ್ಡಿದರವನ್ನು ನೀಡಲಾಗಿದೆ.
ಸೆಂಟರಲ್ ಬ್ಯಾಂಕ್ ಆಫ್ ಇಂಡಿಯಾ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿಯನ್ನು ನೀಡಲಾಗುತ್ತದೆ. 2 ವರ್ಷಗಳಿಗಿಂತ ಹೆಚ್ಚು ಮತ್ತು 3 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ ಶೇ. 7 ರಷ್ಟು ಬಡ್ಡಿದರವನ್ನು ನೀಡಲಾಗಿದೆ. ಇದಲ್ಲದೇ ಸೆಂಟರಲ್ ಬ್ಯಾಂಕ್ ಆಫ್ ಇಂಡಿಯಾ 1111 ದಿನಗಳು, 2222 ದಿನಗಳು ಮತ್ತು 3333 ದಿನಗಳ ಎಫ್‌ಡಿಗಳಿಗೆ ಶೇ. 7 ರಷ್ಟು ಬಡ್ಡಿದರವನ್ನು ನೀಡಲಾಗಿದೆ.ಬ್ಯಾಂಕ್ ಒಂದು ವರ್ಷದ ಎಫ್‌ಡಿಗೆ ಶೇ. 6.70, ಮೂರು ವರ್ಷಗಳ ಎಫ್‌ಡಿಗೆ ಶೇ. 6.75 ಮತ್ತು ಐದು ವರ್ಷಗಳ ಎಫ್‌ಡಿಗೆ ಶೇ. 6.50 ರಷ್ಟು ಬಡ್ಡಿದರಗಳನ್ನು ನೀಡಲಾಗುತ್ತದೆ.


Click it and Unblock the Notifications