ದಸರಾ ಹಬ್ಬ ಆರಂಭವಾಗಿದೆ. ಇದು ಹೊಸ ಆರಂಭದ ಸಮಯವಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪ್ರಯಾಣದ ಬಗ್ಗೆಯೂ ನೀವು ಆತ್ಮಾವಲೋಕನ ಮಾಡಲು ಸೂಕ್ತ ಕ್ಷಣವಾಗಿದೆ. ನವರಾತ್ರಿ, ದುರ್ಗಾ ಮಾತೆಯ ಹಬ್ಬವು ಆರ್ಥಿಕ ಚಟುವಟಿಕೆಗಳಿಗೆ ಪ್ರಮುಖ ಅವಧಿಯಾಗಿದೆ.
ಅನೇಕ ಜನರು ನವರಾತ್ರಿಯನ್ನು ಚಿನ್ನ, ರಿಯಲ್ ಎಸ್ಟೇಟ್, ಈಕ್ವಿಟಿ ಮತ್ತು ಮ್ಯೂಚುವಲ್ ಫಂಡ್‌ಗಳಂತಹ ವಿವಿಧ ಹಣಕಾಸು ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ಮಂಗಳಕರ ಸಮಯ ಎಂದು ಪರಿಗಣಿಸುತ್ತಾರೆ. ಆದರೆ ನವರಾತ್ರಿ ದಿನಗಳಲ್ಲಿ ನೀವು ಮಾಡಬಹುದಾದ ಉನ್ನತ ಹೂಡಿಕೆಗಳು ಯಾವುವು? ಇಲ್ಲಿದೆ ವಿವರ ಮುಂದೆ ಓದಿ...

ನವರಾತ್ರಿಯಲ್ಲಿ ಚಿನ್ನದ ಮೇಲೆ ಹೂಡಿಕೆ
ನವರಾತ್ರಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಚಿನ್ನದ ಬೇಡಿಕೆಯು ಹೆಚ್ಚಾಗುತ್ತದೆ. ಇದರಿಂದಾಗಿ ಹೂಡಿಕೆದಾರರಿಗೆ ಪ್ರಯೋಜನಕಾರಿಯಾಗಿದೆ. ಈ ಸಂದರ್ಭದಲ್ಲಿ ಚಿನ್ನದ ಬೆಲೆಯು ಕೂಡಾ ಅಧಿಕವಾಗಲಿದೆ.
ಚಿನ್ನದ ಇಟಿಎಫ್‌ಗಳು, ಚಿನ್ನದ ಮ್ಯೂಚುವಲ್ ಫಂಡ್‌ಗಳು ಮತ್ತು ಚಿನ್ನ ಆಭರಣ- ಫಿಸಿಕಲ್ ಚಿನ್ನದಂತಹ ವಿವಿಧ ರೂಪಗಳಲ್ಲಿ ಚಿನ್ನವನ್ನು ಖರೀದಿಸಬಹುದು. ಈ ಲೋಹವು ಹಣದುಬ್ಬರ ಮತ್ತು ಮಾರುಕಟ್ಟೆಯ ಚಂಚಲತೆಯ ಸಂದರ್ಭದಲ್ಲಿ ಎಂದಿಗೂ ಸಹಾಯಕವಾಗಲಿದೆ.
ನವರಾತ್ರಿ ಸಮಯದಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ
ನವರಾತ್ರಿಯ ಮತ್ತೊಂದು ಜನಪ್ರಿಯ ಹೂಡಿಕೆ ಆಯ್ಕೆ ಎಂದರೆ ರಿಯಲ್ ಎಸ್ಟೇಟ್ ಹೂಡಿಕೆಯಾಗಿದೆ. ನವರಾತ್ರಿಯಲ್ಲಿ ಆಸ್ತಿಯನ್ನು ಖರೀದಿಸುವುದು ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಹಬ್ಬದ ಸೀಸನ್‌ನಲ್ಲಿಯೇ ಸಾಮಾನ್ಯವಾಗಿ ಪ್ರಾಪರ್ಟಿ ಬುಕಿಂಗ್ ಮತ್ತು ಖರೀದಿ ಪ್ರಮಾಣ ಅಧಿಕವಾಗುತ್ತದೆ.
ಪ್ರಾಪರ್ಟಿ ವಹಿವಾಟು ಅಧಿಕವಾಗಿರುವ ಸಂದರ್ಭದಲ್ಲಿ ಹೂಡಿಕೆದಾರರಿಗೆ ವ್ಯವಹಾರ ನಡೆಸಲು ಉತ್ತಮ ಸಮಯವಾಗಿದೆ. ಈ ಹಬ್ಬದ ಸೀಸನ್‌ನಲ್ಲಿ ಭಾರತ ಸರ್ಕಾರವು ಸಾಮಾನ್ಯವಾಗಿ ಅನುಕೂಲಕರ ನೀತಿಗಳನ್ನು ಪರಿಚಯಿಸುತ್ತದೆ. ಇದರ ಪರಿಣಾಮವಾಗಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಒಟ್ಟಾರೆ ಹೆಚ್ಚಳ ಕಂಡುಬರುತ್ತದೆ.
ಇಕ್ವಿಟಿ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆ
ನವರಾತ್ರಿಯ ಸಮಯದಲ್ಲಿ ಇಕ್ವಿಟಿ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳು ಇತರ ಪ್ರಮುಖ ಆಯ್ಕೆಗಳಾಗಿದೆ. ಅನೇಕ ಹೂಡಿಕೆದಾರರು ಈ ಮಂಗಳಕರ ದಿನಗಳಲ್ಲಿ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ತಮ್ಮ ಹೂಡಿಕೆಗಳನ್ನು ಪ್ರಾರಂಭಿಸಲು ಅಥವಾ ಹೆಚ್ಚಿಸಲು ಉತ್ತಮ ಸಮಯ ಎಂದು ನಂಬುತ್ತಾರೆ.
ಹಬ್ಬದ ಸೀಸನ್‌ನಲ್ಲಿ ಸ್ಟಾಕ್ ಮಾರುಕಟ್ಟೆ ಸೂಚ್ಯಂಕವು ಸಾಮಾನ್ಯವಾಗಿಯೇ ಏರಿಕೆಯಾಗುತ್ತದೆ. ಈ ಸಂದರ್ಭದಲ್ಲಿ ಹೂಡಿಕೆಯಿಂದ ಲಾಭ ಅಧಿಕವಾಗುವ ಸಾಧ್ಯತೆಯಿದೆ. ಅದೇ ರೀತಿ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯು ಡೈವರ್ಸಿಫಿಕೇಷನ್ ಇರುತ್ತದೆ. ಇದು ಹಬ್ಬದ ಸೀಸನ್‌ನಲ್ಲಿ ಇದು ಸುರಕ್ಷಿತ ಎಂಬ ನಂಬಿಕೆಯಿದೆ.
ನವರಾತ್ರಿಯು ಕೆಲವು ಬುದ್ಧಿವಂತ ಹಣಕಾಸಿನ ನಿರ್ಧಾರಗಳು ಮತ್ತು ಹೂಡಿಕೆಗಳನ್ನು ಮಾಡಲು ಉತ್ತಮ ಸಮಯವಾಗಿದೆ. ಚಿನ್ನ, ರಿಯಲ್ ಎಸ್ಟೇಟ್, ಇಕ್ವಿಟಿ ಅಥವಾ ಮ್ಯೂಚುಯಲ್ ಫಂಡ್ ಆಗಿರಲಿ ನವರಾತ್ರಿಯ ಸಮಯದಲ್ಲಿ ಪ್ರತಿಯೊಂದು ಹೂಡಿಕೆ ಮಾರ್ಗವು ಪ್ರಯೋಜನವನ್ನು ಹೊಂದಿದೆ. ಹೂಡಿಕೆಯ ಶುಭಾಶಯಗಳು ಮತ್ತು ನವರಾತ್ರಿಯ ಶುಭಾಶಯಗಳು!


Click it and Unblock the Notifications