ನಾವು ಜೀವ ವಿಮೆ ಖರೀದಿ ಮಾಡುವುದು ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಮುಖ್ಯವಾಗಿ ಈ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಹಲವಾರು ಮಂದಿ ತಮ್ಮ ಜೀವದ ಮೇಲೆ ಅಧಿಕ ಒತ್ತು ನೀಡುತ್ತಿದ್ದಾರೆ. ತಮಗೆ ಹಾಗೂ ತಮ್ಮ ಪ್ರೀತಿಪಾತ್ರರಿಗಾಗಿ ಜೀವ ವಿಮೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ನಾವು ನಮ್ಮ ಬಜೆಟ್‌ನ ಒಳಗೆ ಜೀವ ವಿಮೆಯನ್ನು ಮಾಡಿಕೊಳ್ಳುತ್ತೇವೆ. ಮುಖ್ಯವಾಗಿ ಈ ಜೀವ ವಿಮೆಯು ಜನರು ತಮ್ಮ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಲು ಸಹಾಯಕವಾದ ವಿಮೆಯಾಗಿದೆ. ಆರೋಗ್ಯ ವಿಮೆ, ಕಾರು ವಿಮೆ, ಹೀಗೆ ಮೊದಲಾದ ವಿಮೆಗಳು ಈಗ ಇದೆ. ಆದರೆ ಇದರಲ್ಲಿ ಜೀವ ವಿಮೆಯು ಅತೀ ಹೆಚ್ಚು ಪ್ರಮುಖವಾಗಿದೆ.
ಆದರೆ ನಾವು ಜೀವ ವಿಮೆಯನ್ನು ಖರೀದಿ ಮಾಡುವಾಗ ಹಲವಾರು ಗೊಂದಲಗಳು ನಮಗೆ ಎದುರಾಗುತ್ತದೆ. ನಾವು ಎಷ್ಟು ಮೊತ್ತವನ್ನು ಪಾವತಿ ಮಾಡಬೇಕು ಎನ್ನುವುದಕ್ಕಿಂತ ಯಾವ ವಯಸ್ಸಿನಲ್ಲಿ ಜೀವ ವಿಮೆ ಮಾಡಿಕೊಳ್ಳುವುದು ಸೂಕ್ತ ಎಂಬುವುದು ಹಲವಾರು ಮಂದಿಯ ಪ್ರಶ್ನೆಯಾಗಿದೆ. ನೀವು ಯಾವ ವಯಸ್ಸಲ್ಲಿ ಜೀವ ವಿಮೆ ಮಾಡಿಸಿಕೊಳ್ಳುವುದು ಸೂಕ್ತ ಎಂಬ ಬಗ್ಗೆ ನಾವು ಇಲ್ಲಿ ವಿವರಣೆ ನೀಡಿದ್ದೇವೆ. ಮುಂದೆ ಓದಿ...
ಸಣ್ಣ ವಯಸ್ಸಿನಲ್ಲಿ ಜೀವ ವಿಮೆ ಉತ್ತಮ
ನೀವು ಸಣ್ಣ ವಯಸ್ಸಿನಲ್ಲಿಯೇ ಜೀವ ವಿಮೆಯನ್ನು ಮಾಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ನೀವು ಸಣ್ಣ ವಯಸ್ಸಿನವರು ಆಗಿರುವ ಕಾರಣದಿಂದಾಗಿ ನೀವು ಕಡಿಮೆ ಪ್ರೀಮಿಯಂ ಅನ್ನು ಪಾವತಿ ಮಾಡಿಕೊಳ್ಳಬಹುದು. ನೀವು ಕೊಂಚ ವಯಸ್ಸಾದ ಬಳಿಕ ಜೀವ ವಿಮೆ ಮಾಡಿಸಿಕೊಳ್ಳಲು ಮುಂದಾದರೆ, ಆ ಸಂದರ್ಭದಲ್ಲಿ ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ, ನೀವು ಜೀವ ವಿಮೆ ಮಾಡಿಸಿಕೊಳ್ಳಲು ಅರ್ಹರಾಗದೆ ಇರಬಹುದು. ಆದ್ದರಿಂದ ಸಣ್ಣ ವಯಸ್ಸಿನಲ್ಲಿಯೇ ಜೀವ ವಿಮೆ ಮಾಡಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ನೀವು 20 ವರ್ಷ ವಯಸ್ಸಿನವರು ಆಗಿದ್ದರೆ, ನಿಮ್ಮಲ್ಲಿ ಆರೋಗ್ಯ ಸಮಸ್ಯೆ ಹಾಗೂ ನಿಮ್ಮ ಸಾವು ಸಾಧಾರಣವಾಗಿ ದೂರವೇ ಸರಿ. ಈ ವಯಸ್ಸಿನಲ್ಲಿ ವಿಮೆ ಖರೀದಿ ಮಾಡಿದರೆ ಕಡಿಮೆ ಮೊತ್ತದಲ್ಲಿ ವಿಮೆ ಲಭ್ಯವಾಗಲಿದೆ. ಸಾಮಾನ್ಯವಾಗಿ ಈ ವಯಸ್ಸಿನವರಿಗೆ ವಿಮೆ ಪ್ರೀಮಿಯಂ ರೂಪಾಯಿ 1,400 - ರೂಪಾಯಿ 1,750 ಆಗಿರುತ್ತದೆ. ಇದು ಬೇರೆ ವಯಸ್ಸಿವರಿಗೆ ಹೋಲಿಕೆ ಮಾಡಿದಾಗ ಅತೀ ಕಡಿಮೆಯಾಗಿದೆ.
ಜೀವ ವಿಮೆ ಖರೀದಿಗೆ ಉತ್ತಮ ವಯಸ್ಸು?
ನಾವು ಜೀವ ವಿಮೆ ಬಗ್ಗೆ ಚಿಂತನೆ ನಡೆಸುವಾಗ ವಯಸ್ಸು ಹಾಗೂ ವ್ಯಕ್ತಿಯ ಆರೋಗ್ಯ ಸ್ಥಿತಿ ಅತೀ ಮುಖ್ಯವಾಗಿರುತ್ತದೆ. ವ್ಯಕ್ತಿಯು ಸಣ್ಣ ವಯಸ್ಸಿನವರು ಆಗಿದ್ದಾಗ ಹಾಗೂ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಾಗ ನಿಮ್ಮ ಜೀವ ವಿಮೆಯ ಮೇಲೆ ಪ್ರಭಾವ ಬೀರಲಿದೆ. ನೀವು ಸಣ್ಣ ವಯಸ್ಸಿನವರಾಗಿರುವಾಗ, ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಾಗ ಜೀವ ವಿಮೆ ಮಾಡಿಸಿಕೊಂಡರೆ ಉತ್ತಮ. ಅದು ನಿಮ್ಮ ಜೀವ ವಿಮೆ ಪ್ರೀಮಿಯಂ ಮೊತ್ತ ಕಡಿಮೆ ಮಾಡಲು ಸಹಕಾರಿಯಾಗಿದೆ. ನಮಗೆ ಪೋಷಕರು, ಮಕ್ಕಳು, ಸಂಗಾತಿ ಇರುವಾಗ ನಾವು ಜೀವ ವಿಮೆ ಮಾಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ನೀವು ವಿಮೆ ಮಾಡಿಸಿಕೊಳ್ಳುವ ಮುನ್ನ ನಿಮ್ಮ ವಿಮಾ ಸಂಸ್ಥೆಯು ನಿಮ್ಮ ಆರೋಗ್ಯ ತಪಾಸಣೆ ವರದಿ ಕೇಳುತ್ತದೆ. ನಿಮಗೆ ಜೀವ ವಿಮೆಯು ತೆರಿಗೆ ವಿನಾಯಿತಿಯನ್ನು ಕೂಡಾ ನೀಡುತ್ತದೆ.
ಟರ್ಮ್ ಲೈಫ್ ಇನ್ಶೂರೆನ್ಸ್
ನೀವು ಟರ್ಮ್ ಲೈಫ್ ಇನ್ಶೂರೆನ್ಸ್ ಖರೀದಿ ಮಾಡಿದರೆ ನಿರ್ದಿಷ್ಟ ಅವಧಿಯಲ್ಲಿ ನಿಮಗೆ ಜೀವ ವಿಮೆ ಇರಲಿದೆ. ನೀವು ಒಂದು ಹತ್ತು-ಇಪ್ಪತ್ತು ವರ್ಷದ ಬಳಿಕ ಈ ಟರ್ಮ್ ಇನ್ಶೂರೆನ್ಸ್ ಅನ್ನು ರಿನಿವಲ್ ಮಾಡುವುದು ಭಾರೀ ದುಬಾರಿಯಾಗಬಹುದು. ಆದ್ದರಿಂದ ನೀವು ನಿರ್ದಿಷ್ಟ ಮೊತ್ತದ ಫಿಕ್ಸಿಡ್ ವಿಮೆಯನ್ನು ಮಾಡಿಕೊಳ್ಳುವುದು ಉತ್ತಮವಾಗಿದೆ. ಹಲವಾರು ವಿಮಾ ಸಂಸ್ಥೆಗಳು ನಿಮ್ಮ ಟರ್ಮ್ ಲೈಫ್ ಇನ್ಶೂರೆನ್ಸ್ ಅನ್ನು ಖಾಯಂ ಜೀವ ವಿಮೆಯನ್ನಾಗಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ನೀವು ಒಂದು ಬಾರಿಗೆ ಕೊಂಚ ಅಧಿಕ ಮೊತ್ತ ಪಾವತಿ ಮಾಡಿ ಈ ಬದಲಾವಣೆಯನ್ನು ಮಾಡಿಕೊಳ್ಳಲು ಸಾಧ್ಯವಾದರೆ ಮಾಡಿಸಿಕೊಳ್ಳಬಹುದು.
ಖಾಯಂ ಜೀವ ವಿಮೆ ಎಂದರೇನು?
ಈ ಖಾಯಂ ಜೀವ ವಿಮೆಯು ನಿಮ್ಮ ಜೀವನ ಪೂರ್ತಿ ವಿಮಾ ರಕ್ಷಣೆಯನ್ನು ನೀಡುತ್ತದೆ. ಆದರೆ ನೀವು ಪ್ರೀಮಿಯಂ ಪಾವತಿ ಮಾಡುವುದನ್ನು ನಿಲ್ಲಿಸಬಾರದು. ನೀವು ಪ್ರೀಮಿಯಂ ಪಾವತಿ ಮಾಡದಿದ್ದರೆ ವಿಮೆ ಕೊನೆಯಾಗಲಿದೆ. ಇದು ನಿಮಗೆ ಕಡಿಮೆ ಮೊತ್ತದ ವಿಮೆ ಆಗಿರುತ್ತದೆ ಹಾಗೂ ನಿಮಗೆ ದೀರ್ಘಾವಧಿಯ ಉಳಿತಾಯ ಕೂಡಾ ಹೌದು. ಈ ಹಿಂದೆಯೇ ಹೇಳಿದಂತೆ ನಿಮ್ಮ ಆರೋಗ್ಯ ಸ್ಥಿತಿ, ವಯಸ್ಸು, ಜೀವನ ಶೈಲಿ ಹಾಗೂ ಆದಾಯದ ಮೇಲೆ ನಿಮ್ಮ ಜೀವ ವಿಮೆ ಪ್ರೀಮಿಯಂ ನಿರ್ಧಾರವಾಗುತ್ತದೆ. ನೀವು ಸಣ್ಣ ವಯಸ್ಸಿನಲ್ಲಿಯೇ ವಿಮೆ ಖರೀದಿ ಮಾಡುವುದು ಸೂಕ್ತವಾಗಿದೆ.


Click it and Unblock the Notifications